ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಕಳೆದ 20 ವರ್ಷಗಳಿಂದ ಹೃದ್ರೋಗವು ಅನೇಕ ಜನರ ಸಾವಿಗೆ ಪ್ರಮುಖ ಕಾರಣವಾಗಿದೆ. ಹೃದಯದ ಸ್ನಾಯು ರಕ್ತವನ್ನು ಪಂಪ್ ಮಾಡಲು ಸಾಧ್ಯವಾಗದಿದ್ದಾಗ ಹೃದ್ರೋಗ ಪ್ರಾರಂಭವಾಗುತ್ತದೆ. ಇದರ ಹಿಂದೆ ಅನೇಕ ಕಾರಣಗಳಿವೆ. ರಕ್ತನಾಳಗಳ ಕಿರಿದಾಗುವಿಕೆ, ಅಧಿಕ ರಕ್ತದೊತ್ತಡ, ಕ್ರಮೇಣ ಹೃದಯ (Heart) ದುರ್ಬಲಗೊಳ್ಳುವುದು ಅಥವಾ ಹೃದಯ ಗಟ್ಟಿಯಾಗುವುದು ಇತ್ಯಾದಿ. ಹೃದ್ರೋಗಕ್ಕೆ ಸಂಬಂಧಿಸಿದ ಲಕ್ಷಣಗಳನ್ನು ಅರ್ಥಮಾಡಿಕೊಳ್ಳಲು ಅಮೆರಿಕದ ಹಾರ್ಟ್ ಫೇಲ್ಯೂರ್ ಸೊಸೈಟಿ ಎಫ್ಎಸಿಇಎಸ್ ಎಂಬ ಸೂತ್ರವನ್ನು ರಚಿಸಿದೆ. ಇಲ್ಲಿ ಎಫ್ ಅಂದರೆ ಆಯಾಸ, ಎ ಅಂದರೆ ಚಟುವಟಿಕೆಯ ಮಿತಿ ಅಥವಾ ದೈಹಿಕ ಚಟುವಟಿಕೆಯ ಕೊರತೆ, ಸಿ ಅಂದರೆ ರಕ್ತ ಹೆಪ್ಪುಗಟ್ಟುವಿಕೆ, ಇ ಅಂದರೆ ಎಡಿಮಾ, ಎಸ್ ಎಂದರೆ ಉಸಿರಾಟದ ತೊಂದರೆ ಎಂದರ್ಥ.
ಹಾರ್ವರ್ಡ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಪ್ರಕಾರ, ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಮೂಲಕ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಯ ಅಪಾಯವನ್ನು ಶೇ. 50 ವರೆಗೆ ಕಡಿಮೆ ಮಾಡಬಹುದು. ರೋಗದ ಲಕ್ಷಣಗಳನ್ನು ಸಮಯೋಚಿತವಾಗಿ ಅರ್ಥಮಾಡಿಕೊಳ್ಳುವುದರಿಂದ ಹೃದ್ರೋಗ ಅಥವಾ ಪಾರ್ಶ್ವವಾಯುವಿಗೆ ಸಂಬಂಧಿಸಿದ ತೊಂದರೆಗಳ ಅಪಾಯವನ್ನು ಕಡಿಮೆ ಮಾಡಬಹುದು. ಹಾಗಿದ್ದರೆ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಯಿಂದ ಮುಕ್ತರಾಗಿರಲು ನಾವು ಏನು ಮಾಡಬೇಕು ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.
ಹೃದಯಕ್ಕೆ ಸಂಬಂಧಿಸಿದ ಕಾಯಿಲೆಯ ಲಕ್ಷಣವನ್ನು ಗುರುತಿಸಿ
ಆಯಾಸ
ಹೃದ್ರೋಗ ಹೊಂದಿರುವ ಅನೇಕ ಮಹಿಳೆಯರು ವಾರ ಪೂರ್ತಿ ಅಸಹಜ ಆಯಾಸ ಅಥವಾ ನಿದ್ರಾಹೀನತೆಯನ್ನು ಅನುಭವಿಸಬಹುದು. ಅರ್ಕಾನ್ಸಾಸ್ ವಿಶ್ವವಿದ್ಯಾಲಯದ ಸಂಶೋಧನೆಯು ರಕ್ತದಲ್ಲಿನ ಆಮ್ಲಜನಕದ ಕೊರತೆಯು ಆಯಾಸಕ್ಕೆ ಒಂದು ಕಾರಣವಾಗಿದೆ ಎಂದು ತಿಳಿಸಿದೆ. ಹೀಗಾಗಿ ಆಗಾಗ್ಗೆ ದಣಿವು ಉಂಟಾದರೆ ವೈದರನ್ನು ಸಂಪರ್ಕಿಸಿ.
ಚಟುವಟಿಕೆಯ ಕೊರತೆ
ವ್ಯಾಯಾಮ ಅಥವಾ ದೈಹಿಕ ಚಟುವಟಿಕೆಯ ಕೊರತೆಯು ಯಾವುದೇ ರಕ್ತನಾಳಗಳನ್ನು ಮುಚ್ಚಬಹುದು. ಇದು ರಕ್ತ ಪರಿಚಲನೆ ಸಹಜವಾಗಿ ಆಗದಿರುವಂತೆ ಮಾಡುತ್ತದೆ. ಇದು ಎದೆ ನೋವು ಅಥವಾ ಹೃದಯದ ಮೇಲೆ ಹೆಚ್ಚುವರಿ ಒತ್ತಡವನ್ನು ಉಂಟುಮಾಡುತ್ತದೆ.
ಅತಿಯಾದ ರಕ್ತದ ಹರಿವು
ಹೃದಯ ಬಡಿತದ ಜತೆಗೆ ತಲೆನೋವು ಅಥವಾ ಭಯದ ಭಾವನೆ ಇದ್ದರೆ, ಅದು ಹೃದ್ರೋಗ ಸಮಸ್ಯೆಯ ಸಂಕೇತವಾಗಿರಬಹುದು. ಉತ್ತರ ಕೆರೊಲಿನಾ ವಿಶ್ವವಿದ್ಯಾಲಯದ ಸಂಶೋಧನೆಯು ಇದು ರಕ್ತದೊತ್ತಡದ ಶೀಘ್ರ ಕುಸಿತದ ಸಂಕೇತವಾಗಿರಬಹುದು ಎಂದು ಸೂಚಿಸುತ್ತದೆ.
ಎಡಿಮಾ
ಹೃದಯವು ರಕ್ತವನ್ನು ಸರಿಯಾಗಿ ಪಂಪ್ ಮಾಡುತ್ತಿಲ್ಲ ಎಂಬ ಸಂಕೇತ ಇದಾಗಿದ್ದು, ಹೃದಯವು ಸಾಕಷ್ಟು ವೇಗವಾಗಿ ರಕ್ತವನ್ನು ಪಂಪ್ ಮಾಡಲು ಸಾಧ್ಯವಾಗದಿದ್ದಾಗ, ರಕ್ತವು ನಾಳಗಳಿಗೆ ಮರಳುತ್ತದೆ. ಆಗ ಎಡಿಮಾ ಅಥವಾ ಉರಿಯುತ ಉಂಟಾಗುತ್ತದೆ.
ಉಸಿರಾಟದ ತೊಂದರೆ
ಮಲಗುವ ಸಮಯದಲ್ಲಿ ಮತ್ತು ವಿಶ್ರಾಂತಿಯ ಕಾಲದಲ್ಲಿ ಉಸಿರಾಡಲು ತೊಂದರೆಯಾಗುತ್ತಿದ್ದರೆ, ಅದು ಹೃದಯದ ಸಮಸ್ಯೆಯಾಗಿರಬಹುದು. ಹೀಗಾಗಿ ಇದನ್ನು ನಿರ್ಲಕ್ಷಿಸಬಾರದು.
ಹೃದಯದ ಕಾಯಿಲೆಯಿಂದ ದೂರವಿರಲು ಮುನ್ನೆಚ್ಚರಿಕೆ ವಹಿಸುವುದು ಹೇಗೆ?
ಉತ್ತಮ ಆಹಾರ
ತರಕಾರಿ ಮತ್ತು ಧಾನ್ಯಗಳನ್ನು ಸೇವಿಸುವುದಿಂದ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಬಹುದು. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮೆಡಿಸಿನ್ ಪ್ರಕಾರ, ತರಕಾರಿಗಳಲ್ಲಿ ಮತ್ತು ಸೊಪ್ಪಿನಲ್ಲಿ ವಿಟಮಿನ್ ಕೆ ಮತ್ತು ನೈಟ್ರೇಟ್ಗಳಿವೆ. ಇದು ರಕ್ತನಾಳಗಳನ್ನು ರಕ್ಷಿಸುತ್ತದೆ. ಅಲ್ಲದೆ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಆಹಾರದಲ್ಲಿ ತರಕಾರಿಗಳ ಪ್ರಮಾಣವನ್ನು ಹೆಚ್ಚಿಸುವುದರಿಂದ ಹೃದ್ರೋಗದ ಅಪಾಯವನ್ನು ಶೇ. 16 ಕಡಿಮೆ ಮಾಡಬಹುದು. ಅದೇ ಸಮಯದಲ್ಲಿ, ಫೈಬರ್ ಧಾನ್ಯಗಳನ್ನು ಸೇವಿಸಿ. ಇದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ದಿನಕ್ಕೆ 150 ಗ್ರಾಂ ಧಾನ್ಯಗಳನ್ನು ತೆಗೆದುಕೊಳ್ಳುವುದರಿಂದ ಶೇ. 22ರಷ್ಟು ಅಪಾಯವನ್ನು ಕಡಿಮೆ ಮಾಡಬಹುದು.
ವ್ಯಾಯಾಮ
ವ್ಯಾಯಾಮವು ರಕ್ತ ಪರಿಚಲನೆ ಹೆಚ್ಚಿಸುತ್ತದೆ ಮತ್ತು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ
ಏರೋಬಿಕ್
ಚುರುಕಾದ ವಾಕಿಂಗ್, ಓಟ, ಈಜು, ಸೈಕ್ಲಿಂಗ್ ಮತ್ತು ಹಗ್ಗ ಜಿಗಿತದಂತಹ ಏರೋಬಿಕ್ ವ್ಯಾಯಾಮವು ಹೃದಯದ ಪಂಪಿಂಗ್ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಪ್ರತಿದಿನ 30 ನಿಮಿಷ ಏರೋವಿಕ್ ಮಾಡಿ ಎಂದು ವ್ಯಾಯಾಮ ಶರೀರಶಾಸ್ತ್ರಜ್ಞ ಕೆರ್ರಿ ಜೆ. ಸ್ಟುವರ್ಟ್ ಹೇಳಿದ್ದಾರೆ. ಇದು ರಕ್ತಪರಿಚಲನೆಯನ್ನು ಸುಧಾರಿಸುತ್ತದೆ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಆ ಮೂಲಕ ಹೃದಯವು ಬಲಗೊಳ್ಳುತ್ತದೆ.
ಇದನ್ನೂ ಓದಿ:
Health Benefits: ಕಿಡ್ನಿ ಸಮಸ್ಯೆ ಉಂಟಾದ ಮೇಲೆ ಪರಿಹಾರ ಹುಡುಕುವ ಬದಲು, ಪ್ರತಿದಿನ ಡಿಟಾಕ್ಸ್ ಮಾಡಿ ಕುಡಿಯಿರಿ