ಹೊಟ್ಟೆಯಲ್ಲಿನ ಕಲ್ಮಶವನ್ನು ಶುದ್ಧೀಕರಿಸಲು ಡಿಟಾಕ್ಸ್ ಜ್ಯೂಸ್ ಸಹಾಯ ಮಾಡುತ್ತದೆ. ಇದು ದೇಹದಲ್ಲಿನ ವಿಷವನ್ನು ಹೊರಹಾಕುವಲ್ಲಿ ಉಪಯುಕ್ತವಾಗಿದೆ. ಅನೇಕ ತರಕಾರಿಗಳಿಂದ ಮತ್ತು ಹಣ್ಣುಗಳಿಂದ ಡಿಟಾಕ್ಸ್ ಜ್ಯೂಸ್ ತಯಾರಿಸಲಾಗುತ್ತದೆ. ಅದರಲ್ಲೂ ಮುಖ್ಯವಾಗಿ ಬೀಟ್ರೂಟ್ನಿಂದ ಮಾಡಿದ ಡಿಟಾಕ್ಸ್ ಜ್ಯೂಸ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಉತ್ತಮ ಜೀವನಶೈಲಿಯ ಕೊರತೆಯು ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹೀಗಾಗಿ ಬೀಟ್ರೂಟ್ನಿಂದ ಮಾಡಿದ ಡಿಟಾಕ್ಸ್ ಜ್ಯೂಸ್ ತೆಗೆದುಕೊಳ್ಳುವ ಅಭ್ಯಾಸ ಮಾಡಿಕೊಳ್ಳಿ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ದೇಹವನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತದೆ. ಜತೆಗೆ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಇಚ್ಛಿಸುವವರಿಗೆ ಅನುಕೂಲಕರವಾಗಿದೆ. ಬೀಟ್ರೂಟ್ನಿಂದ ಮಾಡಿದ ಡಿಟಾಕ್ಸ್ ಜ್ಯೂಸ್ ಪೋಷಕಾಂಶಗಳಿಂದ ಕೂಡಿದ್ದು, ಇದನ್ನು ಮಾಡುವ ವಿಧಾನದ ಬಗ್ಗೆ ತಿಳಿದುಕೊಳ್ಳುವುದು ಸೂಕ್ತ.
ಬೀಟ್‌ರೂಟ್ ಡಿಟಾಕ್ಸ್ ಜ್ಯೂಸ್ ಮಾಡುವ ವಿಧಾನ
ನೀರು, ಪುದೀನಾ ಸೊಪ್ಪು, ಆ್ಯಪಲ್ ಸೈಡರ್ ವಿನೆಗರ್, ನಿಂಬೆ ರಸ ಮತ್ತು ಬೀಟ್‌ರೂಟ್ ರಸವನ್ನು ಮಿಶ್ರಣ ಮಾಡಿ 5-10 ನಿಮಿಷಗಳ ನಂತರ ಅದನ್ನು ಶೋಧಿಸಿ. ಬಳಿಕ ಅದನ್ನು ಸೇವಿಸಿ. ಖಾಲಿ ಹೊಟ್ಟೆಯಲ್ಲಿ ಬೀಟ್‌ರೂಟ್ ಡಿಟಾಕ್ಸ್ ಜ್ಯೂಸ್ ಕುಡಿಯುವಾಗ ನಿಯಮಿತವಾಗಿ ಸೇವಿಸಿ.
ಬೀಟ್‌ರೂಟ್ ಡಿಟಾಕ್ಸ್ ಜ್ಯೂಸ್ ಪ್ರಯೋಜನಗಳು
ಇದರಲ್ಲಿ ಪ್ರೋಟೀನ್ ಮತ್ತು ಫೈಬರ್ ಸಮೃದ್ಧವಾಗಿದೆ. ಖಾಲಿ ಹೊಟ್ಟೆಯಲ್ಲಿ ಬೀಟ್‌ರೂಟ್ ಡಿಟಾಕ್ಸ್ ಜ್ಯೂಸ್ ಕುಡಿಯುವುದರಿಂದ ತೂಕ ಇಳಿಸಿಕೊಳ್ಳಲು ಸಹಾಯವಾಗುತ್ತದೆ. ಕೆಲವು ವರದಿಗಳ ಪ್ರಕಾರ, ಇದಕ್ಕೆ ಆ್ಯಪಲ್ ಸೈಡರ್ ವಿನೆಗರ್ ಸೇರಿಸುವುದರಿಂದ ತೂಕ ವೇಗವಾಗಿ ಕಡಿಮೆಯಾಗಲು ಸಹಾಯವಾಗುತ್ತದೆ. ಇದು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುತ್ತದೆ. ಪುದೀನಾವನ್ನು ಇದಕ್ಕೆ ಸೇವಿಸುವುದರಿಂದ ದೇಹಕ್ಕೆ ನವಚೈತನ್ಯ ಸಿಗುತ್ತದೆ. ನಿಂಬೆ ರಸದಲ್ಲಿ ಸಿಟ್ರಿಕ್ ಆಮ್ಲವಿದ್ದು, ಇದು ಚಯಾಪಚಯ ಕ್ರಿಯೆಯನ್ನು ಉತ್ತೇಜಿಸುತ್ತದೆ. ಕ್ಯಾಲೊರಿಗಳನ್ನು ಸುಡಲು ಬೀಟ್‌ರೂಟ್ ಡಿಟಾಕ್ಸ್ ಜ್ಯೂಸ್ ಸಹಾಯ ಮಾಡುತ್ತದೆ.
ಬೀಟ್ರೂಟ್ನ ಆರೋಗ್ಯಯುತ ಪ್ರಯೋಜನಗಳು
ಬೀಟ್‌ರೂಟ್ ದೇಹಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಸಾಕಷ್ಟು ಪೋಷಕಾಂಶಗಳಿವೆ. ಬೀಟ್‌ರೂಟ್‌ನಲ್ಲಿ ಜೀವಸತ್ವಗಳು, ಖನಿಜಗಳು, ಕಬ್ಬಿಣ ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿದೆ. ಇದು ದೇಹಕ್ಕೆ ಶಕ್ತಿ ನೀಡುತ್ತದೆ. ಇದು ಅನೇಕ ಆರೋಗ್ಯ ಸಮಸ್ಯೆಗಳನ್ನು ಹೋಗಲಾಡಿಸುವ ಕೆಲಸ ಮಾಡುತ್ತದೆ. ಬೀಟ್‌ರೂಟ್ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಇದು ದೇಹದಲ್ಲಿನ ಆಯಾಸದಂತಹ ಸಮಸ್ಯೆಗಳನ್ನು ನಿವಾರಿಸುತ್ತದೆ. ರಕ್ತಹೀನತೆಯಿಂದ ಬಳಲುತ್ತಿರುವವರು ಬೀಟ್‌ರೂಟ್ ಸೇವಿಸುವುದು ಉತ್ತಮ. ಇದರಲ್ಲಿ ಕಬ್ಬಿಣಾಂಶವಿದ್ದು, ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ. ಅಧ್ಯಯನಗಳ ಪ್ರಕಾರ ಬೀಟ್‌ರೂಟ್‌ನಲ್ಲಿ ಬೆಟ್‌ಲೈನ್‌ಗಳಿವೆ. ಈ ಕಾರಣಕ್ಕಾಗಿ ಇದರ ಬಣ್ಣ ಕೆಂಪು ಬಣ್ಣದ್ದಾಗಿದ್ದು, ಕ್ಯಾನ್ಸರ್ನಿಂದ ರಕ್ಷಣೆ ನಿಡುತ್ತದೆ.
ಇದನ್ನೂ ಓದಿ:
Clove Health Benefits: ಲವಂಗದ ಆರೋಗ್ಯಕರ ಪ್ರಯೋಜನದ ಬಗ್ಗೆ ನೀವು ತಿಳಿದರೆ ನಿತ್ಯವೂ ಇದನ್ನು ಸೇವಿಸುತ್ತಿರಾ
Health Tips: ನುಗ್ಗೆಕಾಯಿ ಮಾತ್ರವಲ್ಲ, ಸೊಪ್ಪಿನಲ್ಲೂ ಸಾಕಷ್ಟು ಔಷಧೀಯ ಗುಣಗಳು ಅಡಗಿವೆ