AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಶಿ ಚಕ್ರದ ಪ್ರಕಾರ ಈ ಮರಗಳನ್ನು ನಿಮ್ಮ ಮನೆಯ ಬಳಿ ನೆಡಿ, ಜಾತಕ ದೋಷಗಳಿಂದ ಮುಕ್ತಿ ಸಿಗುತ್ತದೆ

Astro Lucky Tree: ನಿಮ್ಮ ರಾಶಿಗೆ ಅನುಗುಣವಾಗಿ ಮನೆಯಲ್ಲಿ ಈ ಮರಗಳನ್ನು ಮತ್ತು ಗಿಡಗಳನ್ನು ನೆಡಿ.. ಜಾತಕ ದೋಷಗಳಿಂದ ಮುಕ್ತಿ ಸಿಗುತ್ತದೆ.. ಮನೆಯಲ್ಲಿ ಮರ, ಗಿಡಗಳನ್ನು ನೆಡುವುದರಿಂದ ಹಲವಾರು ಲಾಭಗಳಿವೆ. ಮರಗಳು ಸುತ್ತಮುತ್ತಲಿನ ಪರಿಸರವನ್ನು ಸಹ ಆರೋಗ್ಯಕರವಾಗಿರಿಸುತ್ತದೆ.

ರಾಶಿ ಚಕ್ರದ ಪ್ರಕಾರ ಈ ಮರಗಳನ್ನು ನಿಮ್ಮ ಮನೆಯ ಬಳಿ ನೆಡಿ, ಜಾತಕ ದೋಷಗಳಿಂದ ಮುಕ್ತಿ ಸಿಗುತ್ತದೆ
ರಾಶಿ ಚಕ್ರದ ಪ್ರಕಾರ ಈ ಮರಗಳನ್ನು ಮನೆಯ ಬಳಿ ನೆಡಿ
TV9 Web
| Updated By: ಸಾಧು ಶ್ರೀನಾಥ್​|

Updated on: Mar 20, 2023 | 10:19 AM

Share

Astro Lucky Tree: ನಿಮ್ಮ ರಾಶಿಗೆ ಅನುಗುಣವಾಗಿ ಮನೆಯಲ್ಲಿ ಈ ಮರಗಳನ್ನು ಮತ್ತು ಗಿಡಗಳನ್ನು ನೆಡಿ.. ಜಾತಕ ದೋಷಗಳಿಂದ ಮುಕ್ತಿ ಸಿಗುತ್ತದೆ.. ಮನೆಯಲ್ಲಿ ಮರ, ಗಿಡಗಳನ್ನು ನೆಡುವುದರಿಂದ ಹಲವಾರು ಪ್ರಯೋಜನಗಳು/ ಲಾಭಗಳಿವೆ. ಮರಗಳು ಸುತ್ತಮುತ್ತಲಿನ ಪರಿಸರವನ್ನು ಸಹ ಆರೋಗ್ಯಕರವಾಗಿರಿಸುತ್ತದೆ.

ಆಧ್ಯಾತ್ಮಿಕವಾಗಿ ಮತ್ತು ವಾಸ್ತುಶಾಸ್ತ್ರದ ಪ್ರಕಾರ, ಮರಗಳು ಮತ್ತು ಸಸಿಗಳನ್ನು ನೆಡುವುದರಿಂದ ಅನೇಕ ದುಷ್ಟರಿಂದ ಮುಕ್ತರಾಗುತ್ತಾರೆ ಎಂದು ನಂಬಲಾಗಿದೆ. ಮರಗಳು ಮತ್ತು ಸಸ್ಯಗಳು ವಾಸ್ತು ಪ್ರಕಾರ ನಿಮ್ಮ ಅದೃಷ್ಟವನ್ನು ಸುಧಾರಿಸುತ್ತದೆ. ರಾಶಿಚಕ್ರ ಚಿಹ್ನೆಗಳ ಪ್ರಕಾರ ಯಾವ ಮರಗಳು ಮತ್ತು ಸಸ್ಯಗಳನ್ನು ನೆಡಬೇಕು ಎಂದು ಕಂಡುಹಿಡಿಯೋಣ. ರಾಶಿಚಕ್ರ ಚಿಹ್ನೆಯ ಪ್ರಕಾರ ಮರಗಳು ಮತ್ತು ಗಿಡಗಳನ್ನು ನೆಡುವುದರಿಂದ ನಿಮ್ಮ ಜಾತಕದಲ್ಲಿನ ಸಂಬಂಧಿತ ದೋಷಗಳನ್ನು ನೀವು ತೊಡೆದುಹಾಕಬಹುದು.

ನಿಮ್ಮ ರಾಶಿ ಚಕ್ರದ ಪ್ರಕಾರ ಈ ಮರಗಳನ್ನು ನೆಡಿ.

1. ಮೇಷ: ಈ ರಾಶಿಯವರು ತಮ್ಮ ಮನೆಯ ಮುಖ್ಯ ದ್ವಾರದಲ್ಲಿ ಮಾವಿನ ಮರ ಅಥವಾ ಪೇರಲ ಮರವನ್ನು ನೆಡಬೇಕು. ಇದರಿಂದ ನೀವು ಎಲ್ಲಾ ರೋಗಗಳಿಂದ ಮುಕ್ತರಾಗುತ್ತೀರಿ.

2. ವೃಷಭ: ವೃಷಭ ರಾಶಿಯವರು ಅಂಜೂರದ ಮರವನ್ನು ನೆಡಬೇಕು. ಇದು ನಕಾರಾತ್ಮಕ ಶಕ್ತಿಯನ್ನು ನಾಶಪಡಿಸುತ್ತದೆ.

3. ಮಿಥುನ ರಾಶಿ : ಮಿಥುನ ರಾಶಿಯವರು ಮನೆಯ ಹಿಂಬದಿಯಲ್ಲಿ ಬಿದಿರು ಅಥವಾ ಆಲದ ಮರವನ್ನು ನೆಟ್ಟರೆ ಶತ್ರುಗಳ ಭಯ ದೂರವಾಗುತ್ತದೆ.

4. ಕರ್ಕಾಟಕ: ಕರ್ಕ ರಾಶಿಯವರು ರಾಗಿ ಮರವನ್ನು ನೆಡಬೇಕು. ಇದರಿಂದ ಎಲ್ಲಾ ರೋಗಗಳು ದೂರವಾಗುತ್ತವೆ.

5. ಸಿಂಹ: ಸಿಂಹ ರಾಶಿಯವರು ನೇರಳೆ ಮರಗಳನ್ನು ನೆಡಬೇಕು. ಇದು ವ್ಯಕ್ತಿಯ ಬೌದ್ಧಿಕ ಪ್ರಗತಿಗೆ ಕಾರಣವಾಗುತ್ತದೆ.

6. ಕನ್ಯಾ ರಾಶಿ : ಕನ್ಯಾ ರಾಶಿಯವರು ಪೇರಲ (ಸೀಬೆ) ಮರವನ್ನು ನೆಡಬೇಕು. ಇದರಿಂದ ವಾತ ಸಂಬಂಧಿ ರೋಗಗಳಿಂದ ಮುಕ್ತಿ ಹೊಂದುವಿರಿ.

7. ತುಲಾ: ತುಲಾ ರಾಶಿಯವರು ಸಪೋಟ ಗಿಡವನ್ನು ನೆಡಬೇಕು. ಇದು ಗೌರವವನ್ನು ಹೆಚ್ಚಿಸುತ್ತದೆ.

8. ವೃಶ್ಚಿಕ: ವೃಶ್ಚಿಕ ರಾಶಿಯವರು ಬೇವಿನ ಮರವನ್ನು ನೆಡಬೇಕು. ಇದರಿಂದ ಹಿಂದಿನ ಜನ್ಮದ ದೋಷಗಳು ದೂರವಾಗುತ್ತವೆ.

9. ಧನು ರಾಶಿ : ಧನು ರಾಶಿಯವರು ಕದಂಬ ಮರವನ್ನು ನೆಡಬೇಕು. ಇದರಿಂದ ಜ್ಞಾನ ವೃದ್ಧಿಯಾಗುತ್ತದೆ.

10. ಮಕರ: ಈ ರಾಶಿಯವರು ತಮ್ಮ ಮನೆಯ ತೋಟದಲ್ಲಿ ಹಲಸಿನ ಮರವನ್ನು ನೆಡಬೇಕು. ಇದರಿಂದ ಆರ್ಥಿಕ ಬಿಕ್ಕಟ್ಟಿನಿಂದ ಮುಕ್ತಿ ದೊರೆಯಲಿದೆ.

11. ಕುಂಭ ರಾಶಿ : ಕುಂಭ ರಾಶಿಯವರ ಮನೆಯ ಆವರಣದಲ್ಲಿ ಮುಟ್ಟಿದರೆ ಮುನಿ ಗಿಡವನ್ನು ನೆಡಬೇಕು. ಇದರಿಂದ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ.

12. ಮೀನ: ಮೀನ ರಾಶಿಯವರು ಮನೆಯ ಮುಂದೆ ಬೇವಿನ ಮರವನ್ನು ನೆಡಬೇಕು. ಇದನ್ನು ನೆಡುವುದರಿಂದ ರೋಗಗಳು ದೂರವಾಗುತ್ತವೆ ಮತ್ತು ಸಂಪತ್ತು ಹೆಚ್ಚಾಗುತ್ತದೆ.

ಮರಗಳನ್ನು ನೆಡುವಾಗ ಈ ನಿಯಮಗಳನ್ನು ನೆನಪಿಡಿ:

ಮನೆಯ ಮುಖ್ಯ ದ್ವಾರದ ಮುಂದೆ ಯಾವತ್ತೂ ಮರ ಅಥವಾ ಗಿಡಗಳನ್ನು ನೆಡಬಾರದು. ಮರ, ಗಿಡಗಳನ್ನು ನೆಟ್ಟರೆ ಬ್ರಹ್ಮ ಮುಹೂರ್ತದಲ್ಲಿ ಮಾತ್ರ ನೆಡಬೇಕು. ಆಕಸ್ಮಿಕವಾಗಿಯೂ ಮುಳ್ಳು ಗಿಡಗಳನ್ನು ನೆಡಬೇಡಿ. ದಿನಕ್ಕನುಗುಣವಾಗಿ ಮರ-ಗಿಡಗಳನ್ನು ಪೂಜಿಸಬೇಕು.

ಪರಿಸ್ಥಿತಿಯ ಲಾಭ ಪಡೆಯಲು ಸುಲಿಗೆಗಿಳಿದ ಖಾಸಗಿ ಸಾರಿಗೆ ಸಂಸ್ಥೆಗಳು
ಪರಿಸ್ಥಿತಿಯ ಲಾಭ ಪಡೆಯಲು ಸುಲಿಗೆಗಿಳಿದ ಖಾಸಗಿ ಸಾರಿಗೆ ಸಂಸ್ಥೆಗಳು
ಅಪ್ಪು ಹೋದಮೇಲೆ ಏರಿಯಾನಲ್ಲಿ ಗಣೇಶ ಇಡುತ್ತಿಲ್ಲ: ವಿನಯ್ ರಾಜ್​ಕುಮಾರ್
ಅಪ್ಪು ಹೋದಮೇಲೆ ಏರಿಯಾನಲ್ಲಿ ಗಣೇಶ ಇಡುತ್ತಿಲ್ಲ: ವಿನಯ್ ರಾಜ್​ಕುಮಾರ್
ನನ್ನಷ್ಟು ಕನ್ನಡ ಬಳಸಿ ಸಾಧನೆ ಮಾಡಿದವರು ಮಾತ್ರ ನನ್ನ ಟೀಕಿಸಬಹುದು: ಬಾನು
ನನ್ನಷ್ಟು ಕನ್ನಡ ಬಳಸಿ ಸಾಧನೆ ಮಾಡಿದವರು ಮಾತ್ರ ನನ್ನ ಟೀಕಿಸಬಹುದು: ಬಾನು
ಚಾಮುಂಡೇಶ್ವರಿ ತಾಯಿಯೇ ಕರೆಸಿಕೊಳ್ಳುತ್ತಿದ್ದಾಳೆ: ಟೀಕೆಗಳಿಗೆ ಬಾನು ಟಾಂಗ್
ಚಾಮುಂಡೇಶ್ವರಿ ತಾಯಿಯೇ ಕರೆಸಿಕೊಳ್ಳುತ್ತಿದ್ದಾಳೆ: ಟೀಕೆಗಳಿಗೆ ಬಾನು ಟಾಂಗ್
ಪ್ರವಾಹದಿಂದ ಕೊಚ್ಚಿ ಹೋದ ಮನಾಲಿ ರಸ್ತೆ; ನದಿಯಲ್ಲಿ ಉರುಳಿ ಬಿದ್ದ ಕಾರು
ಪ್ರವಾಹದಿಂದ ಕೊಚ್ಚಿ ಹೋದ ಮನಾಲಿ ರಸ್ತೆ; ನದಿಯಲ್ಲಿ ಉರುಳಿ ಬಿದ್ದ ಕಾರು
ಮಟ್ಟಣ್ಣನವರ್ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸಬೇಕು: ದೂರುದಾರ
ಮಟ್ಟಣ್ಣನವರ್ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸಬೇಕು: ದೂರುದಾರ
ಕಳ್ಳರ ಕೈಯಲ್ಲಿ ಪಿಸ್ಟಲ್ ಕಂಡ ಮಾಲೀಕ ಪ್ಯಾನಿಕ್ ಆಗದೆ ಕಿರುಚಿದರು
ಕಳ್ಳರ ಕೈಯಲ್ಲಿ ಪಿಸ್ಟಲ್ ಕಂಡ ಮಾಲೀಕ ಪ್ಯಾನಿಕ್ ಆಗದೆ ಕಿರುಚಿದರು
ಬಾನು ಮುಷ್ತಾಕ್ ಕನ್ನಡದ ಬಗ್ಗೆ ಯಾವತ್ತೂ ಕೆಟ್ಟದ್ದಾಗಿ ಮಾತಾಡಿಲ್ಲ: ಸಚಿವ
ಬಾನು ಮುಷ್ತಾಕ್ ಕನ್ನಡದ ಬಗ್ಗೆ ಯಾವತ್ತೂ ಕೆಟ್ಟದ್ದಾಗಿ ಮಾತಾಡಿಲ್ಲ: ಸಚಿವ
ನಸುಕಿನ ಜಾವ 5 ಗಂಟೆಗೆ SIT ಕಚೇರಿಗೆ ಬಂದು ಕುಳಿತ ಸುಜಾತಾ ಭಟ್
ನಸುಕಿನ ಜಾವ 5 ಗಂಟೆಗೆ SIT ಕಚೇರಿಗೆ ಬಂದು ಕುಳಿತ ಸುಜಾತಾ ಭಟ್
ದಶಕಗಳಿಂದ ಕಾಂಗ್ರೆಸ್​ನಲ್ಲಿರುವ ನನ್ನ ಮೇಲೆ ಜವಾಬ್ದಾರಿ ಹೆಚ್ಚು: ಪ್ರಸಾದ್
ದಶಕಗಳಿಂದ ಕಾಂಗ್ರೆಸ್​ನಲ್ಲಿರುವ ನನ್ನ ಮೇಲೆ ಜವಾಬ್ದಾರಿ ಹೆಚ್ಚು: ಪ್ರಸಾದ್