Horoscope: ದಿನಭವಿಷ್ಯ; ವ್ಯಾವಹಾರಿಕವಾಗಿ ಬರಬೇಕಾದ ಹಣವು ಬಾರದೆ ಇದ್ದೀತು

ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ನೀವು ಧನು, ಮಕರ, ಕುಂಭ, ಮೀನ ರಾಶಿಯವರಾಗಿದ್ದರೆ, ಇಂದಿನ (ಫೆಬ್ರವರಿ​​​​ 27) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

Horoscope: ದಿನಭವಿಷ್ಯ; ವ್ಯಾವಹಾರಿಕವಾಗಿ ಬರಬೇಕಾದ ಹಣವು ಬಾರದೆ ಇದ್ದೀತು
ದಿನ ಭವಿಷ್ಯ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ವಿವೇಕ ಬಿರಾದಾರ

Updated on:Feb 27, 2024 | 7:00 AM

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಫೆಬ್ರವರಿ​​​​ 27) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಕುಂಭ ಮಾಸ, ಮಹಾನಕ್ಷತ್ರ: ಶತಭಿಷಾ, ಮಾಸ: ಮಾಘ, ಪಕ್ಷ: ಕೃಷ್ಣ, ವಾರ: ಮಂಗಳ , ತಿಥಿ: ತೃತೀಯಾ, ನಿತ್ಯನಕ್ಷತ್ರ: ಹಸ್ತಾ, ಯೋಗ: ಶೂಲಿ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 52 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 39 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:42 ರಿಂದ 05:11ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 09:49 ರಿಂದ 11:17ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:46 ರಿಂದ 03:14ರ ವರೆಗೆ.

ಧನು ರಾಶಿ: ಇಂದು ನಿಮ್ಮ ಪರಿಣಿತಿ ಕ್ಷೇತ್ರದಲ್ಲಿ ಸ್ವಲ್ಪ ಕಾರ್ಯ ಮಾಡುವ ಅವಕಾಶ ಸಿಗಬಹುದು. ವ್ಯಾವಹಾರಿಕವಾಗಿ ಬರಬೇಕಾದ ಹಣವು ಬಾರದೇ ಇದ್ದೀತು. ಅದಕ್ಕಾಗಿ ಕಲಹ ಬೇಡ. ಸಮಸ್ಯೆಗಳನ್ನು ಸರಿ ಮಾಡಿಕೊಳ್ಳುವ ದಾರಿಯನ್ನು ಹುಡುಕಿಕೊಳ್ಳಿ. ಸಾಲವು ನಿಮ್ಮನ್ನು ಹಿಂದೇಟು ಹಾಕುವಂತೆ ಮಾಡುತ್ತದೆ. ಯಾರ ಮಾತನ್ನೂ ಸಾವಧಾನವಾಗಿ ಕೇಳುವ ಮನಸ್ಸು ಇರದು. ಶುಭ ಸಮಾಚಾರದಿಂದ ಮನಸ್ಸು ಅರಳುವುದು. ಪ್ರೀತಿಯನ್ನು ಹೇಳಿಕೊಳ್ಳಲು ನಿಮಗೆ ಮುಜುಗರವಾಗಬಹುದು. ತುರ್ತು ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ಥಿತಿಯು ಬಂದರೂ ಸಮಯೋಚಿತವಾಗಿರಲಿ. ಯಾರನ್ನೂ ತಾರತಮ್ಯ ಭಾವದಿಂದ ನೋಡುವುದು ಬೇಡ. ಕಛೇರಿಯ ಕೆಲಸದಿಂದ ಸ್ವಲ್ಪ ವಿಶ್ರಾಂತಿಯನ್ನು ಪಡೆಯುವಿರಿ. ಮನೆಯಿಂದ ಹೊರ ಹೋಗುವುದು ನಿಮಗೆ ಇಷ್ಟವಾಗದು. ನಿಮ್ಮವರಿಗೆ ನಿಮ್ಮ ನಡತೆಯಲ್ಲಿ ಬದಲಾವಣೆ ಕಂಡೀತು. ಪಾಲುದಾರಿಕೆಯಲ್ಲಿ ನಿಮ್ಮ ಶ್ರಮವೇ ಹೆಚ್ಚಿರಲಿದೆ. ಪ್ರೇಮದ ವಿಚಾರಕ್ಕೆ ನೀವು ಕರಗುವಿರಿ.

ಮಕರ ರಾಶಿ: ಇಂದು ನಿಮಗೆ ಕಛೇರಿಯ ವಿಷಯದಲ್ಲಿ ಸಮಾಧಾನವಿರದು. ಅಭದ್ರತೆಯು ನಿಮಗೆ ಕಾಡಬಹುದು. ನಿಮ್ಮ ದುರರ್ಭ್ಯಾಸದ ಬಗ್ಗೆ ನಿಮಗೆ ಅಸಮಾಧಾನವಾಗಬಹುದು. ಸಂಬಂಧಿಕರಿಂದ ಅನಿರೀಕ್ಷಿತ ಆನಂದವು ಸಿಗುವುದು. ಸರ್ಕಾರದ ಕೆಲಸದಲ್ಲಿ ಪೂರ್ಣವಾದ ಸಹಕಾರ ಸಿಗದು. ಮಕ್ಕಳಿಗೆ ಸಿಕ್ಕ ಕೀರ್ತಿಯಿಂದ ನಿಮಗೆ ಸಂತೋಷವಾಗಲಿದೆ. ನಿಮ್ಮ ಊಹೆಗಳು ಎಲ್ಲವೂ ವಾಸ್ತವಕ್ಕೆ ದೂರವಾದುದಾಗಿದೆ. ಸಂಗಾತಿಯ ಮಾತುಗಳು ನಿಮಗೆ ಖುಷಿ ಕೊಟ್ಟೀತು. ಬಂಧುಗಳ ಆಗಮನದಿಂದ ಮನೆಯಲ್ಲಿ ಸಂಭ್ರಮದ ವಾತಾವರಣ ಇರಲಿದೆ. ನಿಮಗೆ ಅರ್ಥವಾಗದ ವಿಚಾರವನ್ನು ಬೇರೆಯವರ ಕಡೆಯಿಂದ ಪಡೆಕೊಳ್ಳುವಿರಿ. ಒಂಟಿತನವನ್ನು ಹೋಗಲಾಡಿಸಲು ಏನಾದರೂ ಮಾಡುವಿರಿ. ಉತ್ತಮ ಭೂಮಿಯನ್ನು ಖರೀದಿಸಲು ನಿಮಗೆ ಅವಕಾಶಗಳು ಸಿಗಬಹುದು. ನಿಮ್ಮ ಪ್ರಯಾಣದಲ್ಲಿ ಅಡೆತಡೆಗಳು ಉಂಟಾಗಬಹುದು.

ಕುಂಭ ರಾಶಿ: ಇಂದು ವಿದ್ಯಾಕ್ಷೇತ್ರದಲ್ಲಿ ತೊಡಗಿದವರಿಗೆ ಆತಂಕವು ಇರುವುದು. ಅಧಿಕಾರಿಗಳಿಂದ ಕಿರಿಕಿರಿ ಆದೀತು.‌ ಆಹಾರಕ್ಕಾಗಿ ಹೆಚ್ಚು ಖರ್ಚು ಮಾಡುವಿರಿ. ದೂರದ ಊರಿಗೆ ಪ್ರಯಾಣ ಮಾಡುವ ಸಂದರ್ಭವು ಬರಲಿದ್ದು, ಅಲ್ಲಿ ಇಷ್ಟಮಿತ್ರರ ಸಹವಾಸವು ದೊರೆಯುವುದು. ನಿಮ್ಮವರನ್ನು ಕಳೆದುಕೊಳ್ಳುವ ಭೀತಿಯು ಬರಬಹುದು. ರಾಜಕೀಯದ ಒತ್ತಡವು ಅಧಿಕಾರದಲ್ಲಿ ಇದ್ದವರಿಗೆ ಬರಲಿದೆ. ಆದಷ್ಟು ಸ್ವಂತಿಕೆಯನ್ನು ಇಟ್ಟುಕೊಂಡು ಕೆಲಸ ಮಾಡಿ. ಕಾರ್ಯದಲ್ಲಿ ಆಗುವ ತೊಂದರೆಗಳಿಗೆ ಹಿರಿಯರ ಮಾರ್ಗದರ್ಶನವನ್ನು ಪಡೆಯಿರಿ. ಹೂಡಿಕೆಯನ್ನು ಒತ್ತಾಯದ ಕಾರಣಕ್ಕೆ ಮಾಡುವಿರಿ. ಎಲ್ಲದರಲ್ಲಿಯೂ ತಪ್ಪನ್ನು ಹುಡುಕುತ್ತ ಕಾಲಹರಣ ಮಾಡುವುದು ಬೇಡ. ಮನೆ ಹುಡುಕಾಟಕ್ಕೆ ತಿರುಗಾಟ ಮಾಡಲಿದ್ದೀರಿ. ವಿದ್ಯಾರ್ಥಿಗಳು ಗಂಭೀರವಾಗಿ ಅಧ್ಯಯನದ ಕಡೆ ಗಮನಕೊಡಬೇಕಸದೀತು. ಬೇರೆಯವರು ನಿಮ್ಮನ್ನು ಹೀಗಳೆಯಬಹುದು.

ಮೀನ ರಾಶಿ: ಇಂದು ನೀವು ಭೂಮಿಗೆ ಸಂಬಂಧಿಸಿದ ವಿಚಾರ, ವಸ್ತುಗಳಿಂದ ಆದಾಯವನ್ನು ಪಡೆಯುವಿರಿ. ಇಂದು ಉತ್ತಮ ಸಮಯವು ದೊರೆಯಲಿದ್ದು ಅದನ್ನು ಸದುಪಯೋಗ ಮಾಡಿಕೊಳ್ಳುವಿರಿ. ಕುಟುಂಬದಲ್ಲಿ ಶಾಂತಿಯು ನೆಲೆಸಲು ನಿಮ್ಮ ಶ್ರಮದ ಅಗತ್ಯ ಹೆಚ್ಚಿರುವುದು. ಆದಾಯಕ್ಕೆ ತಕ್ಕಂತೆ ಖರ್ಚನ್ನು ನಿಭಾಯಿಸಿ‌. ನಿಮ್ಮ ಬಳಿ ಸಂಘರ್ಷದ ಪರಿಹಾರಕ್ಕೆ ಬರಬಹುದು. ಜಾಣ್ಮೆಯಿಂದ ಅದನ್ನು ಬಗೆಹರಿಸಬೇಕಾಗುವುದು. ಮಕ್ಕಳ ವಿದ್ಯಾಭ್ಯಾಸಕ್ಕೆ ಸ್ಥಳವನ್ನು ಬದಲಿಸುವಿರಿ. ಭೂಮಿಯ ಮಾರಾಟದಿಂದ ಕಲಹವಾಗುವುದು. ಸಂಸಾರದ ಕಲಹಕ್ಕೆ ಮನಸ್ಸು ಕೊಡದೇ ಪ್ರಸನ್ನ ಮನಸ್ಸಿನಿಂದ ಇರುವಿರಿ. ಬೇರೆಯಾದ ಮನಸ್ಸನ್ನು ಒಟ್ಟು ಸೇರಿಸಲಿದ್ದೀರಿ. ಆರೋಗ್ಯದ ರಹಸ್ಯವನ್ನು ಇತರರಿಗೂ ತಿಳಿಸುವಿರಿ. ಸಹೋದರರ ಜೊತೆ ಮನೆಯ ಆಸ್ತಿಯ ಬಗ್ಗೆ ಮಾತನಾಡುವಿರಿ. ನಿಮ್ಮ ದಿನಚರಿಯನ್ನು ವ್ಯವಸ್ಥಿತವಾಗಿಸಿಕೊಳ್ಳಿ.

Published On - 6:59 am, Tue, 27 February 24

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್