Horoscope: ರಾಶಿ ಭವಿಷ್ಯ; ಇಂದು ಆಲಸ್ಯದಿಂದ ನಿಮ್ಮ ಕಾರ್ಯಗಳು ನಿಧಾನವಾಗಲಿದೆ
ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದರೆ. ಏಪ್ರಿಲ್ 29 ರ ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಏಪ್ರಿಲ್ 29) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ: ಭರಣೀ, ಮಾಸ: ಚೈತ್ರ, ಪಕ್ಷ: ಕೃಷ್ಣ, ವಾರ: ಸೋಮ, ತಿಥಿ: ಪಂಚಮೀ, ನಿತ್ಯನಕ್ಷತ್ರ: ಪೂರ್ವಾಷಾಢಾ, ಯೋಗ: ಸಿದ್ಧ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 12 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 48 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 07:47 ರಿಂದ 09:21 ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 10:56 ರಿಂದ ಮಧ್ಯಾಹ್ನ 12:30 ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:05 ರಿಂದ 03:39 ರ ವರೆಗೆ
ಸಿಂಹ ರಾಶಿ: ನಿಮ್ಮ ಅನಾರೋಗ್ಯದಿಂದ ಅಭ್ಯಾಸಕ್ಕೆ ತೊಂದರೆಯಾಗಲಿದೆ. ಪೂರ್ಣವಿಶ್ರಾಂತಿಗೆ ನೀವು ಒಳಪಡಬೇಕಾದೀತು. ಅರ್ಥಿಕತೆಯು ಏರಿಕೆಯಾಗಲಿದೆ. ಸ್ನೇಹಿತರ ಜೊತೆ ಮೋಜಿನಲ್ಲಿ ಇರುವ ಮನಸ್ಸು ಮಾಡುವಿರಿ. ಅನಾಹುತಕ್ಕೆ ಎಡೆಮಾಡಿಕೊಡಬೇಡಿ. ಮಕ್ಕಳಿಂದ ನಿಮ್ಮ ಕೀರ್ತಿಯು ಹಾಳಾಗಬಹುದು. ನಿಮ್ಮ ಮಾತಿಗೆ ಬೆಲೆಯು ಬರುವಂತೆ ಮಾತನಾಡಿ. ಆದಾಯದಲ್ಲಿ ಇತರರಿಗೆ ಸಮಾನವಾಗಿದ್ದರೂ ಖರ್ಚು ಹಾಗಿರುವುದಿಲ್ಲ. ಏನಾದರೊಂದು ಹುಟ್ಟಿಕೊಳ್ಳುತ್ತದೆ. ಶಕ್ತಿ ಮೀರಿದ ಕೆಲಸವನ್ನು ಮಾಡಿ ಆಯಾಸ ಮಾಡಿಕೊಳ್ಳುವುದು ಬೇಡ. ಕುಟುಂಬಕ್ಕೆ ನಿಮ್ಮಿಂದ ಧನಸಹಾಯದ ಅಪೇಕ್ಷೆ ಇರುವುದು. ನಿಮ್ಮ ಕೈ ಮೀರಿದ ಕೆಲಸದಲ್ಲಿ ನಿಮಗೆ ಆತಂಕ ಬೇಡ. ಪ್ರೇಮವು ನಿಮಗೆ ಬಂಧನದಂತೆ ಕಾಣಿಸುವುದು. ನಿಮ್ಮ ಸೋಲನ್ನು ನೀವು ಒಪ್ಪಿಕೊಳ್ಳಲಾರಿರಿ.
ಕನ್ಯಾ ರಾಶಿ: ನೀವು ಕುಟುಂಬಕ್ಕೆ ಯೋಗ್ಯವಾದ ಹೆಸರನ್ನು ತಂದುಕೊಡಲಿದ್ದೀರಿ. ವಿದೇಶಕ್ಕೆ ಹೋಗಲು ನಿಮಗೆ ಕಛೇರಿಯಲ್ಲಿ ಅನುಮೋದನೆ ಸಿಗಬಹುದು. ಹೊರದೇಶದಲ್ಲಿ ಹೊಸದಾಗಿ ಕೆಲಸವನ್ನು ಹುಡುಕುತ್ತಿದ್ದರೆ ಅದನ್ನು ನಿಲ್ಲಿಸಿ. ಸದ್ಯ ವಿದೇಶದ ಕಡೆಗೆ ಗಮನವನ್ನು ಕೊಡಬೇಡಿ. ಇರುವ ಸ್ಥಳದಲ್ಲಿಯೇ ಸಿಕ್ಕ ಉತ್ತಮ ಕೆಲಸವನ್ನು ಮಾಡಿ. ನಿಮ್ಮನ್ನು ಆಡಿಕೊಳ್ಳುವ ಜನರು ನಿಮ್ಮ ಪಕ್ಕದಲ್ಲಿಯೇ ಇರುತ್ತಾರೆ. ಅವರಿಗೆ ಕಾಣಿಸುವಂತೆ ಏನನ್ನೂ ಮಾಡಬೇಡಿ. ಇಂದು ಆರಂಭಿಸಿದ ಕೆಲಸಗಳನ್ನು ಇಂದೇ ಮುಗಿಸುವಂತೆ ನೋಡಿಕೊಳ್ಳಿ. ಸಾಮಾಜಿಕ ಕೆಲಸಗಳು ನಿಮಗೆ ಇನ್ನಷ್ಟೂ ಉತ್ಸಾಹವನ್ನು ಕೊಡುವುದು. ವೈದ್ಯರು ಇಂದು ಒತ್ತಡದಿಂದ ಇರುವರು. ನೀವು ಕಷ್ಟವನ್ನು ಆನಂದದಿಂದ ಕಳೆಯುವಿರಿ. ಇಂದು ಕೆಲಸಕ್ಕಿಂತ ಪ್ರಯಾಣವೇ ಹೆಚ್ಚಾಗಿರುವುದು.
ತುಲಾ ರಾಶಿ: ನಿಮ್ಮ ಒಳ್ಳೆಯತನಕ್ಕೆ ಯಾವ ಫಲವಿಲ್ಲ ಎಂಬ ಬೇಸರವಿರಲಿದೆ. ಎಲ್ಲ ನಿರ್ಥಕ ಎನ್ನುವ ಭಾವನೆಯು ನಿಮ್ಮಲ್ಲಿ ಬರಬಹುದು. ಯಾವ ಸಸಿಯೂ ನೆಟ್ಟ ಮರುಕ್ಷಣವೇ ಫಲವನ್ನು ಕೊಡುವುದಿಲ್ಲ ಎಂಬ ವಿಚಾರವು ನಿಮ್ಮೊಳಗೆ ಸರಿಯಾಗಿ ಬೇರೂರಿರಲಿ. ಆಲಸ್ಯದಿಂದ ನಿಮ್ಮ ಕಾರ್ಯಗಳು ನಿಧಾನವಾಗಲಿದೆ. ವ್ಯಾಪರಸ್ಥರಿಗೆ ತಕ್ಕಮಟ್ಟಿನ ಲಾಭವು ಸಿಗಲಿದೆ. ಇಂದು ನಿಮ್ಮ ಭವಿಷ್ಯದ ಗುರಿಯನ್ನು ನಿರ್ಧಾರ ಮಾಡಿಕೊಳ್ಳುವುದು ಉತ್ತಮ. ಆಧ್ಯಾತ್ಮಿಕ ಚಿಂತನೆಯನ್ನು ಹೆಚ್ಚು ಮಾಡುವಿರಿ. ನಿಮ್ಮ ತುಮುಲವನ್ನು ಅರಿತುಕೊಳ್ಳಲಾರರು. ಹತ್ತಿರದ ಬಂಧುಗಳ ಒಡನಾಟವು ಹೆಚ್ಚಿರಲಿದೆ. ಹಣಕಾಸಿನ ವಿಚಾರಕ್ಕೆ ಸಂಗಾತಿಯ ಜೊತೆ ಮಾತಾಗಬಹುದು. ನೇರ ನುಡಿಯಿಂದ ಆಪ್ತರು ದೂರ ಸರಿಯಬಹುದು. ಮನೋರಂಜನೆಯಿಂದ ನಿಮಗೆ ಸಮಾಧಾನ ಸಿಗಲಿದೆ. ಕೆಲವು ವಿಚಾರಗಳಿಗೆ ಸುಮ್ಮನೇ ಪ್ರತಿಕ್ರಿಯೆ ನೀಡಬೇಕಿಲ್ಲ.
ವೃಶ್ಚಿಕ ರಾಶಿ: ಇಂದು ನಿಮ್ಮ ಉತ್ತಮ ನಡತೆಗೆ ಪ್ರಶಂಸೆ ಸಿಗಲಿದೆ. ಕೃಷಿ ಚಟುವಟಿಕೆಯಲ್ಲಿ ಆಸಕ್ತಿಯನ್ನು ತೋರಿಸುವಿರಿ. ವಾಹನಕ್ಕೋಸ್ಕರ ಸಾಲಮಾಡುವ ಸ್ಥಿತಿಯು ಬರಬಹುದು. ಸರ್ಕಾರಿ ಕೆಲಸಕ್ಕೆ ಅರ್ಜಿ ಹಾಕಿದ್ದರೆ ಸಂತೋಷಕರವಾದ ಸುದ್ದಿಯೊಂದು ನಿಮ್ಮ ಪಾಲಿಗೆ ಇರುತ್ತದೆ. ನಿರುತ್ಸಾಹಿಗಳಾಗಿ ಕುಳಿತುಕೊಳ್ಳದೇ ಏನನ್ನಾದರೂ ಸಾಧಿಸಬೇಕು ಎಂಬ ಮನಸ್ಸು ನಿಮಗೆ ಬರುತ್ತದೆ. ಒತ್ತಡದಿಂದ ಯಾವುದನ್ನೂ ಮಾಡಲು ಹೋಗಬೇಡಿ. ಕುಟುಂಬದ ಜೊತೆ ನಿಕಟ ಸಂಬಂಧವನ್ನು ಇಟ್ಟುಕೊಳ್ಳುವ ಮನಸ್ಸಾಗುವುದು. ಕಾರ್ಯಗಳಿಂದ ಹೆಚ್ಚಿನ ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ. ಉದ್ಯಮದಲ್ಲಿ ಜನರ ವಿಶ್ವಾಸವನ್ನು ಗಳಿಸುವುದು ಮುಖ್ಯವಾಗಿರುವುದು. ಪ್ರವಾಸ ಹೋಗುವ ಮನಸ್ಸಾದೀತು. ಅಧಿಕಾರಿಗಳು ನಿಮ್ಮ ಉದ್ಯಮವನ್ನು ಪರಿಶೀಲಿಸಬಹುದು. ನಿಮಗೆ ಬೇಡ ಎನಿಸಿದ ವಿಚಾರವೇ ಮತ್ತೆ ಮತ್ತೆ ಕೇಳಿ ಬಂದು ಮಾನಸಿಕ ಹಿಂಸೆಯಾದೀತು.




