AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope: ರಾಶಿ ಭವಿಷ್ಯ; ನಿಮ್ಮ ಆಲಸ್ಯವನ್ನು ಹಿತಶತ್ರುಗಳು ಅವಕಾಶವಾಗಿ ತೆಗೆದುಕೊಳ್ಳುವರು

ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದರೆ. ಮೇ 10 ರ ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

Horoscope: ರಾಶಿ ಭವಿಷ್ಯ; ನಿಮ್ಮ ಆಲಸ್ಯವನ್ನು ಹಿತಶತ್ರುಗಳು ಅವಕಾಶವಾಗಿ ತೆಗೆದುಕೊಳ್ಳುವರು
ದಿನಭವಿಷ್ಯ
TV9 Web
| Updated By: ಕಿರಣ್ ಹನುಮಂತ್​ ಮಾದಾರ್|

Updated on: May 10, 2024 | 12:30 AM

Share

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಮೇ​​​​​ 10) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ: ಭರಣೀ, ಮಾಸ: ವೈಶಾಖ, ಪಕ್ಷ: ಶುಕ್ಲ, ವಾರ: ಶುಕ್ರ, ತಿಥಿ: ತೃತೀಯಾ, ನಿತ್ಯನಕ್ಷತ್ರ: ರೋಹಿಣೀ, ಯೋಗ: ಶೋಭನ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 07 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 50 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 10:54 ರಿಂದ 12:29ರ ವರೆಗೆ, ಯಮಘಂಡ ಕಾಲ 15:40 ರಿಂದ 17:15ರ ವರೆಗೆ, ಗುಳಿಕ ಕಾಲ ಬೆಳಗ್ಗೆ 07:43 ರಿಂದ 09:18ರ ವರೆಗೆ.

ಸಿಂಹ ರಾಶಿ :ಸಹೋದ್ಯೋಗಿಗಳ ಜೊತೆ ನೀವು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುವುದು. ವಿದೇಶದಲ್ಲಿ ಕೆಲಸಮಾಡಲು ನಿಮಗೆ ಅನೇಕ ಅವಕಾಶಗಳು ಸಿಗಬಹುದು. ಮುಂಗಡವಾಗಿ ಕೊಟ್ಟ ಹಣವು ನಿಮಗೆ ಬರದೇಹೋಗುವುದು. ಅನಿರೀಕ್ಷಿತ ಧನವ್ಯಯವು ಆಗಬಹುದು. ವಿದ್ಯಾರ್ಥಿಗಳು ನಿಮ್ಮ ಮುಂದಿನ ವಿಷಯಗಳ ಕುರಿತು ಚರ್ವೆಗಳನ್ನು ಮಾಡಿ ಮುಂದುವರಿಯಿರಿ. ಉದ್ಯೋಗಸ್ಥಾನದಲ್ಲಿ ಕೆಲವು ಮಾತುಗಳು ನಿಮ್ಮ ವಿರುದ್ಧವಾಗಿಯೂ ಇರಬಹುದು. ಅಪರಿಚಿತರ ಕರೆಯಿಂದ ಭಯಗೊಳ್ಳುವಿರಿ. ನೀವು ದೇಶದಿಂದ ಹೊರಗೆ ಹೋಗುವ ಬಗ್ಗೆ ಯೋಚಿಸಬಹುದು. ಸ್ಥಿರಾಸ್ತಿಯ ಆಧಾರದ ಮೇಲೆ‌ ಸಾಲವನ್ನು ಮಾಡಬೇಕಾಗಬಹುದು. ತಾಳ್ಮೆ ಮತ್ತು ಪ್ರತಿಭೆಯಿಂದ ಶತ್ರು ಗೆಲ್ಲುವಲ್ಲಿ ನೀವು ಯಶಸ್ಸನ್ನು ಗಳಿಸುವಿರಿ. ನಿಮ್ಮದಾದ ಚಿಂತನೆ, ಕಾರ್ಯದಿಂದ ಯಶಸ್ಸನ್ನು ಪಡೆಯಲು ನೀವು ಬಹಳ ಸಮಯ ಕಾಯಬೇಕಾಗಬಹುದು.

ಕನ್ಯಾ ರಾಶಿ :ಇಂದು ನಿಮ್ಮ ಸಂಗಾತಿಯ ಜೊತೆಗಿನ ಭಿನ್ನಾಭಿಪ್ರಾಯು ದ್ವೇಷವಾಗಿ ಬದಲಾಗಬಹುದು. ಇಂದಿನ ನಿಮ್ಮ ಕೆಲಸವು ಶಿಸ್ತಿನಿಂದ ಇದ್ದರೂ ನಿಮ್ಮ ಜೊತೆಗಾರರು ಅದನ್ನು ಮೂದಲಿಸಲಿದ್ದಾರೆ. ವೈದ್ಯರನ್ನು ಬೇಟಿಯಾಗಿ ನಿಮಗೆ ಆಗುತ್ತಿರುವ ಶಾರೀರಿಕ ಸಮಸ್ಯೆಗಳನ್ನು ಅವರಲ್ಲಿ ಹೇಳಿಕೊಳ್ಳಿ. ನಿಮ್ಮವರ ಮೇಲೆ ತಪ್ಪು ತಿಳಿವಳಿಕೆಯನ್ನು ಹೊಂದಿ ಅವರ ತೇಜೋವಧೆಯನ್ನು ಮಾಡಿದ್ದೀರಿ. ಅದಕ್ಕೆ ಇಂದು ಪಶ್ಚಾತ್ತಾಪವನ್ನು ಅನುಭವಿಸುವಿರಿ. ದೂರದ ಪ್ರಯಾಣವನ್ನು ಮಾಡುವ ನಿರ್ಧಾರವನ್ನು ಮಾಡಲಿದ್ದೀರಿ. ಅದನ್ನು ಸರಿಯಾಗಿ ಮುಂದುವರಿಸುವುದು ನಿಮ್ಮ ಕೈಯಲ್ಲಿದೆ. ಯಾರ ಮೇಲೂ ಆಪಾದನೆ ಬೇಡ. ಸಂತಾನ ಬಗ್ಗೆ ಕುಟುಂಬದಿಂದ ಒತ್ತಡ ಬರಬಹುದು. ನೀವು ಹೊಸ ಹೂಡಿಕೆ ಮಾಡಬೇಕಾದರೆ ಅದು ಶುಭವಾಗುತ್ತದೆ. ಕುಟುಂಬದಲ್ಲಿಯೂ ಶಾಂತಿ ಮತ್ತು ಸಂತೋಷ ಇರುತ್ತದೆ. ನಿಮಗಿಂತ ಭಿನ್ನವಾದ ವ್ಯಕ್ತಿಗಳ ಬಗ್ಗೆ ಯೋಚಿಸದೇ ನಿಮ್ಮ ನಿಲುವೇ ಸರಿ ಎಂಬಂತೆ ವರ್ತಿಸುವಿರಿ.

ತುಲಾ ರಾಶಿ :ಭೂಮಿಯ ವ್ಯವಹಾರವನ್ನು ಸದ್ಯಕ್ಕೆ ನಿಲ್ಲಿಸಿ, ಕೆಲವು ದಿನಗಳ ಅನಂತರ ನಡೆಸುವುದು ಉತ್ತಮ. ಹೊಸತನವನ್ನು ಇಷ್ಟಪಟ್ಟು ನಿಮ್ಮ ಜೀವನಶೈಲಿಯನ್ನು ಬದಲಿಸಿಕೊಳ್ಳುವ ಪ್ರಯತ್ನವನ್ನು ಮಾಡುವಿರಿ. ಲಾಭಕ್ಕಾಗಿ ಕೆಲವು ಅತ್ಯುತ್ತಮ ಅವಕಾಶಗಳಿದ್ದರೂ, ಯಾವುದೇ ಹಣಕಾಸಿನ ಬದ್ಧತೆಗಳನ್ನು ಮಾಡುವುದನ್ನು ತಪ್ಪಿಸಿ. ಭವಿಷ್ಯದ ಕುರಿತು ನಿಮಗೆ ನಿಮ್ಮದೇ ಕಲ್ಪನೆಗಳಿದ್ದು ಅದು ಸಾಕಾರಗೊಳ್ಳುವುದೋ ಇಲ್ಲವೋ ಎನ್ನುವ ಭಯವು ಕಾಡಲಿದೆ. ಅಪಮಾನವನ್ನು ಎದುರಿಸಬೇಕಾಗಬಹುದು ಎಂಬ ಆತಂಕವೂ ಮನೆ ಮಾಡಿರುತ್ತದೆ. ಅಪರಿಚಿತರ ಮಾತು ನಿಮ್ಮನ್ನು ಕಾಡಬಹುದು. ಹಣಕಾಸು ನಿರ್ವಹಣೆ ಮತ್ತು ಸಕಾರಾತ್ಮಕ ಕ್ರಮಗಳು ಏಳಿಗೆಗೆ ದಾರಿ ಮಾಡಿಕೊಡುತ್ತದೆ. ನಿಮ್ಮ‌ ರಕ್ಷಣೆಯ ಬಗ್ಗೆ ಕಾಳಜಿ ಇರಲಿ. ಕೋಪವು ನಿಮ್ಮ ಇಂದಿನ ಕೆಲಸವನ್ನು ಕೆಡಿಸಬಹುದು. ನಿಮ್ಮ ಪ್ರಾಮಾಣಿಕತೆಯು ಇತರರಿಗೆ ಇಷ್ಟವಾಗುವುದು. ಪಡೆದುದನ್ನು ನಿಯತ್ತಿನಿಂದ‌ ರಕ್ಷಿಸಿಕೊಳ್ಳುವ ಪ್ರಯತ್ನದಲ್ಲಿ ಇರುವಿರಿ.

ವೃಶ್ಚಿಕ ರಾಶಿ :ಅತಿಯಾದ ಚಿಂತನೆಯು ನಿಮ್ಮ ಮಾನಸಿಕ ಸ್ಥಿತಿಯನ್ನು ದುರ್ಬಲ ಮಾಡುವುದು. ಜೋಪಾನವಾಗಿ ಇರಿಸಿಕೊಂಡಿರುವ ನಿಮ್ಮ ಅಮೂಲ್ಯವಾದ ವಸ್ತುಗಳು ಕಣ್ಮರೆಯಾಗಿದ್ದು ಇಂದು ತಿಳಿಯಲಿದೆ. ಏಕಾಂತವನ್ನು ಇಷ್ಟಪಡುವವರಿದ್ದೀರಿ. ನಿಮ್ಮ ಆಲೋಚನೆಗೆ ತಕ್ಕಂತೆ ಎಲ್ಲವೂ ನಡೆಯುತ್ತಿದೆ ಎಂದು ಅನ್ನಿಸಿದರೂ ಅದನ್ನು ಪರಿವರ್ತಿಸಲು ಅಸಾಧ್ಯವಾಗುವುದು. ಸಂಗಾತಿಯ ಮಾತುಗಳಿಂದ ಸಿಟ್ಟಾಗುವಿರಿ. ಗೊತ್ತಿರಬೇಕಾದ ಎಷ್ಟೋ ವಿಚಾರಗಳು ಗೊತ್ತಲ್ಲವೆಂದು ಬೇಸರ ಪಡಬೇಕಾಗಿಬರಬಹುದು. ನಿಮಗೆ ಯಾವುದೇ ಆರೋಗ್ಯ ಸಮಸ್ಯೆಗಳಿದ್ದರೆ, ಅದರಿಂದ ಸಂಪೂರ್ಣ ಹೊರಬರುವ ಮಾರ್ಗಗಳನ್ನು ಅನುಸರಿಸಿ. ಆತಂಕ ಮತ್ತು ನಿರಾಸಕ್ತಿಯಿಂದ ನಿಮ್ಮ ಮೇಲೆ ನಿಮಗೆ ಹಿಡಿತ ಸಾಲದು. ವ್ಯವಧಾನದ ಕೊರತೆಯನ್ನು ಎದುರಿಸುವಿರಿ. ನಿಮ್ಮ ಕೆಲಸವಾಗಲು ಯಾರನ್ನಾದರೂ ದೂರ ಮಾಡುವಿರಿ. ನಿಮ್ಮ ಆಲಸ್ಯವನ್ನು ಹಿತಶತ್ರುಗಳು ಅವಕಾಶವಾಗಿ ತೆಗೆದುಕೊಳ್ಳುವರು. ಭೂಮಿಯಿಂದ ಇಂದು ಸಂಪತ್ತು ಸಿಗಬಹುದು.