Horoscope: ರಾಶಿಭವಿಷ್ಯ: ಈ ರಾಶಿಯ ಕೆಲವರು ಪ್ರೀತಿಯಿಂದ ಸಂಕಟಪಡಬಹುದು

ನೀವು ಧನು, ಮಕರ, ಕುಂಭ, ಮೀನ ರಾಶಿಯವರಾಗಿದ್ದರೆ, ಇಂದಿನ (ಮಾರ್ಚ್​​​​​ 10) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

Horoscope: ರಾಶಿಭವಿಷ್ಯ: ಈ ರಾಶಿಯ ಕೆಲವರು ಪ್ರೀತಿಯಿಂದ ಸಂಕಟಪಡಬಹುದು
ರಾಶಿಭವಿಷ್ಯ
Image Credit source: freepik
Edited By:

Updated on: Mar 10, 2024 | 12:45 AM

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಮಾರ್ಚ್​​​​​ 10) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಕುಂಭ ಮಾಸ, ಮಹಾನಕ್ಷತ್ರ : ಪೂರ್ವಾಭಾದ್ರ, ಮಾಸ : ಮಾಘ, ಪಕ್ಷ : ಕೃಷ್ಣ, ವಾರ : ಭಾನು, ತಿಥಿ : ಅಮಾವಾಸ್ಯಾ, ನಿತ್ಯನಕ್ಷತ್ರ : ಪೂರ್ವಾಭಾದ್ರ, ಯೋಗ : ಸಾಧ್ಯ, ಕರಣ : ನಾಗವಾನ್, ಸೂರ್ಯೋದಯ ಬೆಳಗ್ಗೆ 06 ಗಂಟೆ 44 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 41 ನಿಮಿಷಕ್ಕೆ, ರಾಹು ಕಾಲ ಸಂಜೆ 05:12 ರಿಂದ 06:41ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:43 ರಿಂದ 02:12ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:42 ರಿಂದ 05:12ರ ವರೆಗೆ.

ಧನು ರಾಶಿ: ಇಂದು ಮಾಡುವ ಆರ್ಥಿಕ ವ್ಯವಹಾರದ ಜೊತೆ ಆಪ್ತರನ್ನು ಇಟ್ಟುಕೊಳ್ಳಿ. ಕೆಲವರು ಪ್ರೀತಿಯಿಂದ ಸಂಕಟಪಡಬಹುದು. ಭಾವನೆಗಳನ್ನು ಯಾರ ಬಳಿಯೂ ವ್ಯಕ್ತಪಡಿಸಲಾಗದೇ ಇರುವಿರಿ. ನಿಮ್ಮನ್ನು ದುರಭ್ಯಾಸಗಳಿಗೆ ಪ್ರಚೋದಿಸಬಹುದು. ಮಕ್ಕಳಿಂದ ಶುಭ ಸುದ್ದಿಯನ್ನು ನಿರೀಕ್ಷಿಸಬಹುದು. ನಿಮ್ಮ ಕಠಿಣ ಪರಿಶ್ರಮದಿಂದ ನೀವು ಉತ್ತಮ ಫಲಿತಾಂಶವನ್ನು ಪಡೆಯುವಿರಿ. ಇಂದು ತಾಯಿಯ ಕಡೆಯಿಂದ ಪ್ರೀತಿ ಮತ್ತು ವಿಶೇಷ ಬೆಂಬಲದ ಸಾಧ್ಯತೆಯಿದೆ. ಇದು ನಿಮ್ಮ ಶತ್ರುಗಳನ್ನು ಅಸಮಾಧಾನಗೊಳಿಸುತ್ತದೆ. ಇಂದು ಪೋಷಕರ ಬಗ್ಗೆ ವಿಶೇಷ ಕಾಳಜಿ ವಹಿಸಿ. ಅಪರಿಚಿತರ ಮಾತನ್ನು ನೀವು ನಂಬುವಿರಿ. ಪರೀಕ್ಷೆಯ ಸಿದ್ಧತೆಯಲ್ಲಿ ವಿದ್ಯಾರ್ಥಿಗಳಿಗೆ ಗೊಂದಲವಾಗಬಹುದು. ಆದಾಯದಲ್ಲಿ ಪೂರ್ಣತೃಪ್ತಿಯು ನಿಮಗೆ ಇರದು. ಅನಿರೀಕ್ಷಿತವಾಗಿ ಬಂಧುವಿನ ವಿಯೋಗವೂ ಆಗಬಹುದು.

ಮಕರ ರಾಶಿ: ಭೂಮಿಯ ವ್ಯವಹಾರದಲ್ಲಿ ಹಿನ್ನಡೆಯಾಗಲಿದ್ದು, ಕೆಲವು ಸಮಸ್ಯೆಯನ್ನು ಎದುರಿಸಬೇಕಾಗುವುದು. ಒಮ್ಮೆ ಮಾಡಿದ ತೀರ್ಮಾನವನ್ನು ಮತ್ತೆ ಮತ್ತೆ ಬದಲಿಸುತ್ತ ಇರುವುದು ಬೇಡ. ಹಿತಶತ್ರುಗಳು ನಿಮ್ಮ ದಿಕ್ಕನ್ನು ತಪ್ಪಿಸಬಹುದು. ರಾಜಕೀಯವು ನಿಮ್ಮನ್ನು ಪ್ರಭಾವಿಸುವ ಸಾಧ್ಯತೆಯೂ ಇದೆ. ಕಠಿಣ ಪರಿಶ್ರಮವು ನಿಷ್ಫಲವೆಂದು ಬೇಸರಿಸುವುದು ಬೇಡ.‌ ಯಾವುದೂ ನಿಷ್ಪ್ರಯೋನವಾಗದು. ಸಮಯ ಬೇಕಷ್ಟೇ. ಇಂದು ಅನಗತ್ಯ ವಸ್ತುಗಳಿಗಾಗಿ ವ್ಯರ್ಥವಾಗಿ ಖರ್ಚಾಗಬಹುದು. ಅದನ್ನು ತಪ್ಪಿಸಿಕೊಳ್ಳುವುದು ಉತ್ತಮ. ನೀವು ದೈಹಿಕಪೀಡೆಯಿಂದ ಬಳಲುತ್ತಿದ್ದರೆ ದುಃಖವು ಹೆಚ್ಚಾಗಬಹುದು. ಸಾಮಾಜಿಕ ಚಟುವಟಿಕೆಗಳಲ್ಲಿ ಅಡಚಣೆ ಇರುವುದು. ಹೆಣ್ಣು ಮಕ್ಕಳ ಕಡೆಯಿಂದ ಸಂತೋಷದ ಸುದ್ದಿ ಇರುತ್ತದೆ. ನಿಮ್ಮ ಸಾಮರ್ಥ್ಯದ ಬಗ್ಗೆ ನಿಮಗೇ ಸರಿಯಾಗಿ ಗೊತ್ತಿಲ್ಲದೇ ಹೋಗಬಹುದು.

ಕುಂಭ ರಾಶಿ : ಇಂದು ನಿಮ್ಮ ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸವು ಕಾಣಿಸಿಕೊಳ್ಳಬಹುದು. ಪಾಲುದಾರಿಕೆಯಲ್ಲಿ ವೈಷಮ್ಯ ಉಂಟಾಗುವ ಸಾಧ್ಯತೆ ಇದೆ. ಆದಾಯವನ್ನು ಖರ್ಚು ಮೀರಿಸಬಹುದು. ಕೌಟುಂಬಿಕ ವಿಚಾರದಲ್ಲಿ ಪೂರ್ಣವಾಗಿ ತೊಡಗಿಕೊಳ್ಳುವುದು ಆಗದೇ ಇರಬಹುದು. ನಿಮ್ಮೊಳಗೆ ಅಡಗಿರುವ ಶಕ್ತಿಯನ್ನು ಹೊರತಂದು ಪೂರ್ಣವಾಗಿ ಸದ್ಬಳಕೆಯಾಗುವಂತೆ ನೋಡಿಕೊಳ್ಳಬೇಕು. ಒಂದು ಯೋಜನೆಯನ್ನು ಬೇರೆ ಬೇರೆ ದೃಷ್ಟಿಯಿಂದ ನೋಡುವ ಅವಶ್ಯಕತೆ ಇದೆ. ಯಾರೂ ಇರದ ಪ್ರದೇಶದಲ್ಲಿ ನೀವೇ ದೊಡ್ಡವರಾಗುವಿರಿ. ಎಂದೋ ಸ್ಥಗಿತಗೊಂಡ ಕೆಲಸವನ್ನು ಪೂರ್ಣ ಮಾಡುವಿರಿ. ಇಂದು ನಿಮ್ಮ ಕೆಲಸವನ್ನು ಬದಲು ಮಾಡಿಕೊಳ್ಳಲಿದ್ದೀರಿ. ಶುಭ ಸಮಾರಂಭದಲ್ಲಿ ಭಾಗವಹಿಸಲು ನಿಮಗೆ ಅವಕಾಶ ಸಿಗುತ್ತದೆ. ಅಧಿಕಾರಕ್ಕೆ ಸಂಬಂಧಿಸಿದಂತೆ ಮಿತ್ರನಿಂದ ನಿಮಗೆ ವಂಚನೆಯಾಗಿರುವುದು ಗೊತ್ತಾಗುವುದು. ಕಳೆದುದ್ದು ಸಣ್ಣ ವಸ್ತುವೇ ಆದರೂ ಬಹಳ ಬೇಸರಗೊಳ್ಳುವಿರಿ.

ಮೀನ ರಾಶಿ : ಇಂದು ನೀವು ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚು ಕಡೆ ಗಮನವನ್ನು ಕೊಡಬೇಕಾದೀತು. ನಿಮ್ಮ ನಿರಾಸಕ್ತಿಯನ್ನು ಹೋಗಲಾಡಿಸಲು ಯಾವುದಾದರೂ ಚಟುವಟಿಕೆಗಳನ್ನು ಮಾಡಿ. ಭವಿಷ್ಯದ ಬಗ್ಗೆ ಅತಿಯಾದ ಚಿಂತೆ‌ ಬೇಡ. ನಿಮ್ಮಿಂದ‌ ಅದನ್ನು ಬದಲಿಸಲಾಗದು. ಅದನ್ನು ಅನುಸರಿಸುವುದು ಒಳ್ಳೆಯದು. ನಿಮಗೆ ಅರಿವಿಲ್ಲದೇ ಪರರಿಗೆ ಹಿತವನ್ನು ಬಯಸುತ್ತಿರುತ್ತೀರಿ. ಇಂದು ನೀವು ಸರ್ಕಾರದಿಂದ ಬರುವ ಹಣವನ್ನು ಪಡೆದುಕೊಳ್ಳಬಹುದು. ಅನಪೇಕ್ಷಿತ ಮಾತುಗಳನ್ನು ನೀವು ಯಾರ ಜೊತೆಯೂ ಆಡುವುದು ಬೇಡ. ಇಂದಿನ ಕಾರ್ಯವನ್ನು ಸಾಧನೆ ಮಾಡಲು ಹೆಚ್ಚಿನ ಓಡಾಟವು ಬರಬಹುದು. ಧಾರ್ಮಿಕ ಆಚರಣೆಯಿಂದ ಸಂಕಷ್ಟಗಳು ದೂರಾಗುವ ನಂಬಿಕೆ ಇರಲಿದೆ. ರಾಜಕಾರಣಿಗಳು ಸಮಾರಂಭಗಳಿಗೆ ಭಾಗವಹಿಸುವರು. ಸರ್ಕಾರದ ಕಡೆಯಿಂದ ಆಗುವ ನಿಮ್ಮ ಕೆಲಸವನ್ನು ಪ್ರಭಾವಿ ವ್ಯಕ್ತಿಗಳ ಮೂಲಕ ಮುನ್ನಡೆಸುವಿರಿ.

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ