AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope: ದಿನಭವಿಷ್ಯ: ಈ ರಾಶಿಯವರಿಗೆ ಇಂದು ಹಣದ ಚಿಂತೆ ದೂರವಾಗಬಹುದು

ರಾಶಿ ಭವಿಷ್ಯ ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದರೆ. ಇಂದಿನ (ಮಾರ್ಚ 10) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

Horoscope: ದಿನಭವಿಷ್ಯ: ಈ ರಾಶಿಯವರಿಗೆ ಇಂದು ಹಣದ ಚಿಂತೆ ದೂರವಾಗಬಹುದು
ದಿನಭವಿಷ್ಯImage Credit source: freepik
TV9 Web
| Edited By: |

Updated on: Mar 10, 2024 | 12:30 AM

Share

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಮಾರ್ಚ್​​​​​ 10) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಕುಂಭ ಮಾಸ, ಮಹಾನಕ್ಷತ್ರ : ಪೂರ್ವಾಭಾದ್ರ, ಮಾಸ : ಮಾಘ, ಪಕ್ಷ : ಕೃಷ್ಣ, ವಾರ : ಭಾನು, ತಿಥಿ : ಅಮಾವಾಸ್ಯಾ, ನಿತ್ಯನಕ್ಷತ್ರ : ಪೂರ್ವಾಭಾದ್ರ, ಯೋಗ : ಸಾಧ್ಯ, ಕರಣ : ನಾಗವಾನ್, ಸೂರ್ಯೋದಯ ಬೆಳಗ್ಗೆ 06 ಗಂಟೆ 44 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 41 ನಿಮಿಷಕ್ಕೆ, ರಾಹು ಕಾಲ ಸಂಜೆ 05:12 ರಿಂದ 06:41ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:43 ರಿಂದ 02:12ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:42 ರಿಂದ 05:12ರ ವರೆಗೆ.

ಸಿಂಹ ರಾಶಿ: ಇಂದು ಹಲವು ಒತ್ತಡಗಳ‌ ನಡುವೆಯೂ ಅಧ್ಯಾತ್ಮಕ್ಕೆ ಸಮಯವನ್ನು ಕೊಡುವಿರಿ. ಇನ್ಮೊಬ್ಬರನ್ನು ನಿಂದಿಸುವ ಬಗ್ಗೆ ಯೋಚಿಸುವುದು ಬೇಡ. ಸಾಲದ ಚಿಂತೆಯನ್ನು ಅನಾಮತ್ತಾಗಿ ತಳ್ಳಿಹಾಕುವಿರಿ. ನಿಮ್ಮ ಇಂದಿನ ವ್ಯವಹಾರ ಮತ್ತು ವ್ಯಾಪಾರಗಳನ್ನು ಶಾಂತಿಯಿಂದ ನಡೆಸಬೇಕು ಎಂಬ ತೀರ್ಮಾನವನ್ನು ತೆಗೆದುಕೊಳ್ಳುವಿರಿ. ಹಣದ ಬಗ್ಗೆ ನಿಮ್ಮ ಚಿಂತೆ ದೂರವಾಗಬಹುದು. ನೀವು ದೇಶದಿಂದ ಹೊರಗೆ ಹೋಗುವ ಬಗ್ಗೆ ಯೋಚಿಸಬಹುದು. ಸ್ಥಿರಾಸ್ತಿಯ ಆಧಾರದ ಮೇಲೆ‌ ಸಾಲವನ್ನು ಮಾಡಬೇಕಾಗಬಹುದು. ತಾಳ್ಮೆ ಮತ್ತು ಪ್ರತಿಭೆಯಿಂದ ಶತ್ರು ಗೆಲ್ಲುವಲ್ಲಿ ನೀವು ಯಶಸ್ಸನ್ನು ಗಳಿಸುವಿರಿ. ನಿಮ್ಮದಾದ ಚಿಂತನೆ, ಕಾರ್ಯದಿಂದ ಯಶಸ್ಸನ್ನು ಪಡೆಯಲು ನೀವು ಬಹಳ ಸಮಯ ಕಾಯಬೇಕಾಗಬಹುದು. ನಿಮ್ಮ ಅಹಂಕಾರಕ್ಕೆ ಪೆಟ್ಟುಬೀಳಬಹುದು.

ಕನ್ಯಾ ರಾಶಿ: ನಿಮ್ಮ ಮನೋನಿಗ್ರಹದ ಬಗ್ಗೆ ಯಾರಿಂದಲಾದರೂ ತಿಳಿವಳಿಕೆ ಬರಬಹುದು. ಸಂಗಾತಿಯ ಜೊತೆಗಿನ ಮನಸ್ತಾಪನ್ನು ಯಾವುದೋ ವಿಧಾನದಿಂದ‌ ಶಮನ ಮಾಡಿಕೊಳ್ಳುವಿರಿ. ನಿಮ್ಮ ಅದೃಷ್ಟವು ಕೈ ಹಿಡಿಯುವುದು ಕಷ್ಟ. ನಿಮ್ಮ ಗುರಿಯ ಬಗ್ಗೆ ನಿಮಗೆ ಇರಬೇಕಾದ ಬದ್ಧತೆಯ ಕೊರತೆ ಇರಲಿದೆ. ಆದಾಯ ಹೆಚ್ಚಿಸುವ ಪ್ರಯತ್ನಗಳು ಸಫಲವಾದಂತೆ ಕಾಣುತ್ತದೆ. ಅದನ್ನು ಸರಿಯಾಗಿ ಮುಂದುವರಿಸುವುದು ನಿಮ್ಮ ಕೈಯಲ್ಲಿದೆ. ಸಂತಾನ ಬಗ್ಗೆ ಕುಟುಂಬದಿಂದ ಒತ್ತಡ ಬರಬಹುದು. ನೀವು ಹೊಸ ಹೂಡಿಕೆ ಮಾಡಬೇಕಾದರೆ ಅದು ಶುಭವಾಗುತ್ತದೆ. ಕುಟುಂಬದಲ್ಲಿಯೂ ಶಾಂತಿ ಮತ್ತು ಸಂತೋಷ ಇರುತ್ತದೆ. ನಿಮಗಿಂತ ಭಿನ್ನವಾದ ವ್ಯಕ್ತಿಗಳ ಬಗ್ಗೆ ಯೋಚಿಸದೇ ನಿಮ್ಮ ನಿಲುವೇ ಸರಿ ಎಂಬಂತೆ ವರ್ತಿಸುವಿರಿ. ಹಿರಿಯರ ಸೇವೆಯಿಂದ‌ ಆತ್ಮಸಂತೋಷವಿರುವುದು.

ತುಲಾ ರಾಶಿ: ಇಂದು ತಿಳಿದೂ ಹಳ್ಳಕ್ಕೆ ಬೀಳುವ ಸಾಧ್ಯತೆ ಇದೆ.‌ ಸಣ್ಣ ವಿಚಾರವನ್ನು ದೊಡ್ಡ ಮಾಡುವಿರಿ. ಹಳೆಯ ಅಸಂಬದ್ಧ ವಿಚಾರಗಳು ಬಯಲಿಗೆ ಬರಬಹುದು. ಯಾರ ಜೊತೆಗಾರರೂ‌ ಸ್ಪರ್ಧಿಸುವ ಮನೋಭಾವವಿರುವುದು. ಸಂಗಾತಿಯ ಈಡೇರಿಕೆಯನ್ನು ನೀವು ಪೂರ್ಣ ಮಾಡುವಿರಿ. ಸಮಾಜವು ನಿಮ್ಮನ್ನು ಸ್ವಾರ್ಥಿಯಂತೆ ನೋಡಬಹುದು. ಮನೆಯ ಕೆಲಸವು ಆಗಿಲ್ಲವೆಂದು ಕೋಪವು ಇರಲಿದ್ದು ಅದನ್ನು ಪ್ರಕಟಿಸುವಿರಿ. ನಿಮ್ಮ‌ ರಕ್ಷಣೆಯ ಬಗ್ಗೆ ಕಾಳಜಿ ಇರಲಿ. ಕೋಪವು ನಿಮ್ಮ ಇಂದಿನ ಕೆಲಸವನ್ನು ಕೆಡಿಸಬಹುದು. ನಿಮ್ಮ ಪ್ರಾಮಾಣಿಕತೆಯು ಇತರರಿಗೆ ಇಷ್ಟವಾಗುವುದು. ಪಡೆದುದನ್ನು ನಿಯತ್ತಿನಿಂದ‌ ರಕ್ಷಿಸಿಕೊಳ್ಳುವ ಪ್ರಯತ್ನದಲ್ಲಿ ಇರುವಿರಿ. ಉದ್ಯೋಗವನ್ನು ಕೊಡಿಸಲು ನಿಮಗೆ ಹಣವನ್ನು ಕೇಳಬಹುದು. ಸತ್ಯವನ್ನು ಹೇಳುವ ಮನಸ್ಸಿದ್ದರೂ ಬೇರೆಯವರ ಒತ್ತಡದಿಂದಾಗಿ ಅದನ್ನು ಮುಚ್ಚಿಡಬೇಕಾದೀತು.

ವೃಶ್ಚಿಕ ರಾಶಿ: ಇಂದು ಭವಿಷ್ಯದ ಯೋಜನೆಯ ಬಗ್ಗೆ ಆಪ್ತವಲಯದಲ್ಲಿ ಕುಳಿತು ಚರ್ಚೆ ಮಾಡುವಿರಿ. ಸಂಗಾತಿಯನ್ನು ಮೆಚ್ಚಿಸಲು ಏನಾದರೂ ಮಾಡುವ ಮನಸ್ಸಾಗುವುದು. ಸಾಮಾಜಿಕ ವಲಯದಿಂದ ನಿಮಗೆ ಉತ್ತಮ ಸ್ಪಂದನೆ ಸಿಗಬಹುದು. ನಿಮ್ಮ ವ್ಯಾಪಾರವು ಗುಣಮಟ್ಟದಿಂದ ಕೂಡಿರಲಿದೆ. ನಿರ್ಮಾಣದ ಕಾರ್ಯಗಳನ್ನು ನೀವು ವಹಿಸಿಕೊಳ್ಳುವ ಸಾಧ್ಯತೆ ಇದೆ. ಆತಂಕ ಮತ್ತು ನಿರಾಸಕ್ತಿಯಿಂದ ನಿಮ್ಮ ಮೇಲೆ ನಿಮಗೆ ಹಿಡಿತ ಸಾಲದು. ವಿವಿಧ ಮೂಲಗಳಿಂದ ನಿಮಗೆ ಆದಾಯವು ಬರಲಿದ್ದು ಹೂಡಿಕೆಯ ಕಡೆ ನಿಮ್ಮ ಗಮನ ಇರುವುದು. ನಿಮ್ಮ ಕೆಲಸವಾಗಲು ಯಾರನ್ನಾದರೂ ದೂರ ಮಾಡುವಿರಿ. ನಿಮ್ಮ ಆಲಸ್ಯವನ್ನು ಹಿತಶತ್ರುಗಳು ಅವಕಾಶವಾಗಿ ತೆಗೆದುಕೊಳ್ಳುವರು. ಭೂಮಿಯಿಂದ ಇಂದು ಸಂಪತ್ತು ಸಿಗಬಹುದು. ಹಿರಿಯರ ಮಾತುಗಳು ಪೂರ್ಣವಾಗಿ ಇಷ್ಟವಾಗದು. ಬೇಡವೆಂದು ಬಿಟ್ಟ ವ್ಯಕ್ತಿಯನ್ನು ಮತ್ತೆ ಸ್ವೀಕರಿಸುವುದು ಯೋಗ್ಯವಾಗದು.

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ