Astrology: ಈ ರಾಶಿಯವರು ಎಲ್ಲರ ಮೇಲೂ ವಿನಾಕಾರಣ ಕೋಪ‌ ಮಾಡಿಕೊಳ್ಳುವಿರಿ

| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 19, 2024 | 12:30 AM

ರಾಶಿ ಭವಿಷ್ಯ ಗುರುವಾರ(ಸೆ.19): ಕಛೇರಿಯ ಕಾರ್ಯಗಳಲ್ಲಿ ಆತುರತೆ ಬೇಡ. ಏಕೆಂದರೆ ಸಣ್ಣ ತಪ್ಪಾದರೂ ಪುನಃ ಮಾಡಬೇಕಾಗುವುದು. ನಿಮ್ಮ ಆಶಾವಾದಕ್ಕೆ ಸರಿಯಾದ ಉತ್ತರ ಸಿಗಲಿದೆ. ಸಮಸ್ಯೆಯ ಕುರಿತೇ ಹೆಚ್ಚು ಆಲೋಚನೆಯನ್ನು ಮಾಡುವಿರಿ. ಹಾಗಾದರೆ ಸೆಪ್ಟೆಂಬರ್​ 19ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Astrology: ಈ ರಾಶಿಯವರು ಎಲ್ಲರ ಮೇಲೂ ವಿನಾಕಾರಣ ಕೋಪ‌ ಮಾಡಿಕೊಳ್ಳುವಿರಿ
ದಿನಭವಿಷ್ಯ
Follow us on

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಉತ್ತರಾಫಲ್ಗುಣೀ, ಮಾಸ: ಭಾದ್ರಪದ, ಪಕ್ಷ: ಶುಕ್ಲ, ವಾರ: ಗುರು, ತಿಥಿ: ಪ್ರತಿಪತ್ / ದ್ವಿತೀಯಾ, ನಿತ್ಯನಕ್ಷತ್ರ: ಉತ್ತರಾಭಾದ್ರ / ರೇವತೀ, ಯೋಗ: ವೃದ್ಧಿ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 22 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:39 ಗಂಟೆ, ರಾಹು ಕಾಲ ಮಧ್ಯಾಹ್ನ 01:57 ರಿಂದ 03:28, ಯಮಘಂಡ ಕಾಲ ಬೆಳಿಗ್ಗೆ 06:23 ರಿಂದ 07:54ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 09:24 ರಿಂದ ಮಧ್ಯಾಹ್ನ 10:55ರ ವರೆಗೆ.

ಧನು ರಾಶಿ : ವ್ಯವಹಾರದಲ್ಲಿ ಆಗುವ ಮಂದಗತಿಯಿಂದ ಬೇಸರವಾಗಲಿದೆ. ಇಂದು ನೀವು ಕುಟುಂಬದ ಜೊತೆ ಕುಳಿತು ಕುಶಲೋಪರಿಗಳನ್ನು ಹಂಚಿಕೊಳ್ಳುವಿರಿ. ಇನ್ನೊಬ್ಬರ ವಿಷಯದಲ್ಲಿ ಮೂಗುತೂರಿಸುವ ಕೆಲಸವು ಅನವಶ್ಯಕ. ನಿಮ್ಮ ಶ್ರಮಕ್ಕೆ ಯೋಗ್ಯ ಆದಾಯವು ಇಲ್ಲ ಎನಿಸಬಹುದು. ಕುಟುಂಬವನ್ನು ಇಷ್ಟಪಡುವಿರಿ. ಕಾನೂನಿಗೆ ವಿರುದ್ಧ ಕಾರ್ಯಗಳಿಂದ ಸಂಕಟವಾಗಲಿದೆ. ಕಾರಣಾಂತರಗಳಿಂದ ನಿಮ್ಮ ಜೀವನದ ಮಾರ್ಗವು ಬದಲಾಗಬಹುದು. ನಿಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ಹೋಗಿ ಮುಗ್ಗರಿಸುವಿರಿ. ನೀವು ಮೋಸದ ಜಾಲಕ್ಕೆ ಸಿಕ್ಕಿಕೊಳ್ಳುವ ಸಂದರ್ಭವಿರಲಿದೆ. ನಿಮ್ಮ ಬೇಡಿಕೆಯನ್ನು ಮೇಲಧಿಕಾರಿಗಳು ಸ್ವೀಕರಿಸುವರು. ನಿಮ್ಮನ್ನು ಸಂಗಾತಿಯು ದೂರಬಹುದು. ಒತ್ತಡಗಳು ಸ್ವಲ್ಪ ಮಟ್ಟಿಗೆ ಕಡಿಮೆ ಆಗಲಿದೆ. ನಿಮ್ಮ ತಿಳುವಳಿಕೆಯ ಬಗ್ಗೆ ಅಹಂಕಾರ ಬೇಡ. ಪ್ರಶಂಸೆಯಿಂದ ಅಹಂಕಾರವು ಬರುವುದು. ‌ಮಿತ್ರರಿಗೆ ವಂಚಿಸುವ ಆಲೋಚನೆ ಬರಲಿದೆ.

ಮಕರ ರಾಶಿ : ಹಳೆಯ ವಸ್ತುಗಳನ್ನು ಕೊಟ್ಟು ಹೊಸ ವಸ್ತುಗಳನ್ನು ಖರೀದಿ ಮಾಡುವಿರಿ. ಇಂದು ಸಂಬಂಧವನ್ನು ಖುಷಿಪಡಿಸಲು ನಿಮಗೆ ಅವಕಾಶ ಸಿಗುವುದು. ಇಂದು ಒತ್ತಡವಿಲ್ಲದೇ ಕಾರ್ಯವನ್ನು ಮಾಡುವಿರಿ. ದುರಭ್ಯಾಸವನ್ನು ನೀವು ರೂಢಿಸಿಕೊಂಡಿರುವುದು ಅರಿವಿಗೆ ಬರಲಿದೆ. ಸಾರ್ವಜನಿಕವಾಗಿ ನಿಮ್ಮೊಳಗೆ ಅಳುಕು ಇರಲಿದ್ದು ಅದನ್ನು ಬಿಟ್ಟು ಮುನ್ನಡೆಯಬೇಕು. ಸಾಮಾಜಿಕ ಕಾರ್ಯಕ್ಕೆ ನಿಮಗೆ ಬೆಂಬಲವು ಸಿಗಲಿದೆ. ಸ್ನೇಹಿತರಿಂದ ನಿಮಗೆ ಉಡುಗೊರೆ ಸಿಗಲಿದೆ. ಖುಷಿಯಾಗಿರಲು ನಿಮಗೆ ಅನೇಕ ಕಾರಣಗಳು ಸಿಗಲಿದೆ. ಪ್ರಾಮಾಣಿಕತೆಯು ನಿಮಗೆ ಇಷ್ಟವಾಗಲಿದೆ. ಮಕ್ಕಳ ಜೊತೆ ಕಳೆಯಬೇಕು ಎನಿಸಬಹುದು. ತಾಳ್ಮೆಯ ಪರೀಕ್ಷೆಯೂ ಆಗಬಹುದು. ನಿಮ್ಮನ್ನು ಇಷ್ಟಪಡುವವರ ಸಂಖ್ಯೆ ಹೆಚ್ಚಾಗಲಿದೆ. ಕುಟುಂಬದ ಜೊತೆ ಇದ್ದರೂ ಅಲ್ಲಿಂದ ದೂರವಿರಲು ಪ್ರಯತ್ನಿಸುವಿರಿ. ಧಾರ್ಮಿಕ ಆಚರಣೆಗಳನ್ನು ಬಹಳ ಶ್ರದ್ಧೆ ಭಕ್ತಿಯಿಂದ ಮಾಡುಬಿರಿ. ತಾರತಮ್ಯ ಭಾವವನ್ನು ಬಿಡಬೇಕಾಗುವುದು.

ಕುಂಭ ರಾಶಿ : ನಿಮ್ಮ ಔಷಧದ ಸೇವೆಯಿಂದ ಅಡ್ಡಪರಿಣಾಮ ಉಂಟಾಗುವುದು. ಇಂದು ನಿಮ್ಮ ಮಾತು ಆಕರ್ಷಣೀಯವಾಗಿ ಇರುವುದು. ನಿಮ್ಮ ಆಲೋಚನೆಯಲ್ಲಿ ವ್ಯತ್ಯಾಸವಾಗಲಿದೆ. ವೃತ್ತಿಯಲ್ಲಿ ಬದಲಾವಣೆಯನ್ನು ಬಯಸುವಿರಿ. ಕಣ್ಣಿಗೆ ಕಾಣಿಸಿದ್ದನ್ನು ನೀವು ನಂಬಲಾರಿರಿ. ವಿದೇಶದವರ ಸ್ನೇಹವು ಉಂಟಾಗಬಹುದು. ಸ್ನೇಹಿತರಿಂದ ಹಣಕಾಸಿನ ಸಹಾಯವನ್ನು ಬಯಸುವಿರಿ. ಹೊಸ ರೀತಿಯ ಆಲೋಚನೆಯಲ್ಲಿ ಮಾನಸಿಕ ಹಿತವು ಸಿಗಲಿದೆ. ಯಾರನ್ನೂ ಮೆಚ್ಚುವ ನಿಮ್ಮ ಗುಣವು ಶ್ಲಾಘನೀಯವಾಗಲಿದೆ. ಮನೆಯಿಂದ ಹೊರಗೆ ಭೋಜನವನ್ನು ಮಾಡುವಿರಿ. ಪ್ರಾರಂಭಿಸಿದ ಕೆಲಸದಲ್ಲಿ ಉತ್ಸಾಹ ಹೆಚ್ಚಿರಲಿದೆ. ತಲೆ ನೋವು ಇಂದು ಪೀಡಿಸಬಹುದು. ಪ್ರತ್ಯೇಕತೆಯಲ್ಲಿ ನಿಮಗೆ ಸುಖವಿದೆ ಎನಿಸಬಹುದು. ಇಂದು ವೃತ್ತಿಯಲ್ಲಿ ಕೆಲಸ ಮಾಡುವ ಹುಮ್ಮಸ್ಸು ಇರದು. ಎಲ್ಲರ ಮೇಲೂ ವಿನಾ ಕಾರಣ ಕೋಪ‌ ಮಾಡಿಕೊಳ್ಳುವಿರಿ. ಹಸಿವು ಹೆಚ್ಚಾಗಿ ಸಂಕಟಪಡುವಿರಿ. ವಿದೇಶ ಪ್ರವಾಸಕ್ಕೆ ವಿಘ್ನಗಳು ಬರಬಹುದು. ಧೈರ್ಯದಿಂದ ಮುನ್ನಡೆಯುವಿರಿ. ಬಂಧುಗಳ ನಡುವೆಯೂ ರಾಜಕೀಯವನ್ನು ಮಾಡುವಿರಿ.

ಮೀನ ರಾಶಿ : ಕಛೇರಿಯ ಕಾರ್ಯಗಳಲ್ಲಿ ಆತುರತೆ ಬೇಡ. ಏಕೆಂದರೆ ಸಣ್ಣ ತಪ್ಪಾದರೂ ಪುನಃ ಮಾಡಬೇಕಾಗುವುದು. ನಿಮ್ಮ ಆಶಾವಾದಕ್ಕೆ ಸರಿಯಾದ ಉತ್ತರ ಸಿಗಲಿದೆ. ಸಮಸ್ಯೆಯ ಕುರಿತೇ ಹೆಚ್ಚು ಆಲೋಚನೆಯನ್ನು ಮಾಡುವಿರಿ. ಅಪ್ರಧಾನವಾದ ವಿಚಾರವು ನಿಮನ್ನು ಕಾಡಬಹುದು. ದೇಹದಲ್ಲಿ ಕೆಲವು ಕೆಲಸಗಳನ್ನು ಬಿಡುವಿರಿ. ನಾಯಕತ್ವವನ್ನು ನೀವು ನಿರಾಕರಿಸಬಹುದು. ಸಂಗಾತಿಯಿಂದ ನಿಮಗೆ ನಕಾರಾತ್ಮಕ ಆಲೋಚನೆ ಬರುವುದು. ಕೃಷಿಯಲ್ಲಿ ಆಸಕ್ತಿಯು ಹೆಚ್ಚಿದ್ದು ಮಾರ್ಗದರ್ಶನವನ್ನು ನೀವು ಬಯಸುವಿರಿ. ಅಪವ್ಯಯವನ್ನು ಕಡಿಮೆ ಮಾಡಿಕೊಳ್ಳಿ. ಉಳಿತಾಯಕ್ಕೆ ಬೇಕಾದ ಯೋಚನೆ ಇರಲಿ. ಮೌನವಾಗಿದ್ದು ನಿಮ್ಮ ಕಾರ್ಯವನ್ನು ಸಾಧಿಸುವಿರಿ. ಕುಟುಂಬದವರ ಜೊತೆ ಹೆಚ್ಚು ಕಾಲವನ್ನು ಕಳೆಯಲು ಆಗದು. ಸಂಗಾತಿಯ ಪ್ರೀತಿಯು ನಿಮಗೆ ಸಿಗಲಿದೆ. ನಿಮಗೆ ಸಿಕ್ಮಿದ್ದನ್ನು ಸದುಪಯೋಗ ಮಾಡಿಕೊಳ್ಳುವತ್ತ ಗಮನವಿರಲಿ. ನಿಮ್ಮ ವಸ್ತುವು ಕಳ್ಳರಿಂದ ಅಪಹರಣ ಆಗುವುದೆಂಬ ಭಯವು ಇರುವುದು.

-ಲೋಹಿತ ಹೆಬ್ಬಾರ್-8762924271 (what’s app only)