Horoscope: ನಿಮ್ಮ ವಸ್ತುವು ಕಳ್ಳತನ ಆಗುವ ಭಯವು ಕಾಡಲಿದೆ

ಸೆಪ್ಟೆಂಬರ್​ 19,​ 2024ರ​​ ನಿಮ್ಮ ರಾಶಿಭವಿಷ್ಯ: ನಿಮ್ಮ ಮನಸ್ಸಿಗೆ ಯೋಗ್ಯರಾದವರ ಜೊತೆ ಮಾತ್ರ ಬಿಚ್ಚುಮನಸ್ಸಿನಿಂದ ಇರುವಿರಿ. ಇಂದು ಯಾರ ಜೊತೆಗೂ ವಿವಾದಕ್ಕೆ ಸಿಲುಕುವುದು ಬೇಡ. ಯಂತ್ರೋಪಕರಣವನ್ನು ಬಳಸಿಕೊಂಡು ಹೊಸ ಉದ್ಯೋಗವನ್ನು ನೀವು ಆರಂಭಿಸಲಿದ್ದೀರಿ. ಯಾರೂ ನಿಮಗೆ ಸುಮ್ಮನೇ ಸಹಾಯ ಮಾಡಲಾರರು. ಹಾಗಾದರೆ ಸೆಪ್ಟೆಂಬರ್​ 19ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Horoscope: ನಿಮ್ಮ ವಸ್ತುವು ಕಳ್ಳತನ ಆಗುವ ಭಯವು ಕಾಡಲಿದೆ
ದಿನಭವಿಷ್ಯ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 19, 2024 | 12:15 AM

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಉತ್ತರಾಫಲ್ಗುಣೀ, ಮಾಸ: ಭಾದ್ರಪದ, ಪಕ್ಷ: ಶುಕ್ಲ, ವಾರ: ಗುರು, ತಿಥಿ: ಪ್ರತಿಪತ್ / ದ್ವಿತೀಯಾ, ನಿತ್ಯನಕ್ಷತ್ರ: ಉತ್ತರಾಭಾದ್ರ / ರೇವತೀ, ಯೋಗ: ವೃದ್ಧಿ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 22 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:39 ಗಂಟೆ, ರಾಹು ಕಾಲ ಮಧ್ಯಾಹ್ನ 01:57 ರಿಂದ 03:28, ಯಮಘಂಡ ಕಾಲ ಬೆಳಿಗ್ಗೆ 06:23 ರಿಂದ 07:54ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 09:24 ರಿಂದ ಮಧ್ಯಾಹ್ನ 10:55ರ ವರೆಗೆ.

ಮೇಷ ರಾಶಿ : ಸ್ವಂತ ವಾಹನ ಸವಾರರಿಗೆ ಖರ್ಚು ಬರುವುದು. ಇಂದು ನಿಮ್ಮ‌ ಮಾತಿನ ಮೇಲೆ‌ ನಿಯಂತ್ರಣ ಅತ್ಯವಶ್ಯಕ. ನಿಮ್ಮ ವಸ್ತುವು ಕಳ್ಳತನ ಆಗುವ ಭಯವು ಕಾಡಲಿದೆ. ಇನ್ನೊಬ್ಬರ ಬಳಿ‌ ಇರುವ ನಿಮ್ಮ‌ ವಸ್ತುವನ್ನು ನೀವು ಪಡೆದುಕೊಳ್ಳುವಿರಿ. ಅಧಿಕ ವೆಚ್ಚವನ್ನು ಅಲ್ಪ ಪ್ರಮಾಣದಲ್ಲಿ ಕಡಿಮೆ ಮಾಡಬಹುದು. ನಿಮ್ಮ ಬಂಧುಗಳ ಸಹಕಾರದಿಂದ ನಿಮ್ಮ ಸಾಲಬಾಧೆಯು ಪರಿಹಾರವಾಗಲಿದೆ. ಅನಾರೋಗ್ಯವನ್ನು ಸರಿ ಮಾಡಿಕೊಳ್ಳುವಲ್ಲಿ ನಿಮ್ಮ ಪ್ರಯತ್ನವಿರುವುದು. ಇಂದು ವಿವಾಹದ ಮಾತುಕತೆಗಳನ್ನು ಆಡಲು ಹೋಗಲಿದ್ದೀರಿ. ನಿಮ್ಮ ಸಮಯವನ್ನು ಇತರರು ವ್ಯರ್ಥ ಮಾಡಬಹುದು. ಸರ್ಕಾರದಿಂದ ನಿಮಗೆ ಬರುವ ಸಂಪತ್ತು ವಿಳಂಬವಾಗಲಿದೆ. ನಿಮ್ಮ ಬಗ್ಗೆ ಕೆಲವು ಊಹಾಪೋಹಗಳು ಹರಡುವುವು. ಗೊತ್ತಿಲ್ಲದೇ ನಿಮ್ಮದಲ್ಲದ ವಸ್ತುವನ್ನು ತೆಗೆದುಕೊಳ್ಳುವಿರಿ. ದೂರ ಪ್ರಯಾಣವನ್ನು ಜಾಗರೂಕತೆಯಿಂದ ಮಾಡುವುದು ಅವಶ್ಯಕ. ನಿಮ್ಮ ದಾಖಲೆಗಳನ್ನು ಬಹಳ ಸುರಕ್ಷಿತವಾಗಿ ಇಟ್ಟುಕೊಳ್ಳಬೇಕಾಗುವುದು.

ವೃಷಭ ರಾಶಿ : ಇಂದು ನೀವು ಗೌಪ್ಯವಾಗಿ ಸಮಾಲೋಚನೆ ನಡೆಸಿ ಮುಂದಿನ ಯೋಜನೆಯನ್ನು ಹೇಳುವಿರಿ. ಇಂದಿನ ನಿಮ್ಮ ವ್ಯವಹಾರವನ್ನು ಸರಿಯಾಗಿ ನಿರ್ವಹಿಸಿ. ನಿಮ್ಮ ವ್ಯವಹಾರದಲ್ಲಿ ನಿಮಗೆ ವಂಚನೆಯಾಗಲಿದೆ. ಪ್ರೇಮಪಾಶದಿಂದ ನಿಮಗೆ ತಪ್ಪಿಸಿಕೊಳ್ಳುವುದು ಕಷ್ಟ. ನಿಮ್ಮ ಕಳುವಾದ ವಸ್ತುವು ಸಿಗಲಿದೆ. ರಾಜಕೀಯದಿಂದ ಪ್ರೇರಿತವಾದ ಮಾತುಗಳು ನಿಮಗೆ ಶೋಭೆಯನ್ನು ತರದು. ಆಸಕ್ತಿ ಇಲ್ಲದೇ ಇದ್ದರೂ ಕೆಲವು ಕೆಲಸಗಳನ್ನು ಮಾಡಲೇಬೇಕಾದೀತು. ಮನಸ್ಸು ಚಂಚಲವಾಗಿವ ಯಾರ ಮಾತನ್ನೂ ಕೇಳುವ ಮನಃಸ್ಥಿತಿ ಇರದು. ದೂರದ ಬಂಧುಗಳು ಪರಿಚಿತರಾಗಿ ಹತ್ತಿರವಾಗಬಹುದು. ಚರಸ್ವತ್ತಿನಲ್ಲಿ ಒಂದಿಲ್ಲೊಂದು ನಷ್ಟಗಳು ಆಗುವುದು. ವಿದ್ಯಾರ್ಥಿಗಳು ಓದಿನತ್ತ ಗಮನಕೊಡುವುದು ಒಳ್ಳೆಯದು. ಕೃತಜ್ಞತೆ ಇರಲಿ. ಎಲ್ಲದರಲ್ಲಿಯೂ ಉತ್ತಮವಾದುದನ್ನೇ ಆರಿಸಿಕೊಳ್ಳುವಿರಿ. ಆಪ್ತರು ಕಾರಣಾಂತರಗಳಿಂದ ದೂರಾಗಬಹುದು. ಸಕಾರಾತ್ಮಕ ಆಲೋಚನೆಯನ್ನು ನೀವು ಹೆಚ್ಚು ಮಾಡಿ. ಕಲೆಗಾರಿಕೆಯನ್ನು ಸಿದ್ಧಿಸಿಕೊಳ್ಳುವ ಬಗೆಯನ್ನು ಚಿಂತಿಸುವಿರಿ.

ಮಿಥುನ ರಾಶಿ : ಸಂಗಾತಿಯ ದುರಭ್ಯಾಸವನ್ನು ನಿಲ್ಲಿಸುವುದು ಸುಲಭವಲ್ಲ. ಆರ್ಥಿಕ ಲಾಭದಿಂದ ನೀವು ಸಂತೋಷವಾಗಿ ಇರಲಿದ್ದು ನಿಮ್ಮ ಮುಖದಲ್ಲಿ ನೆಮ್ಮದಿಯು ಕಾಣಲಿದೆ. ವಾಹನವನ್ನು ಖರೀದಿಸುವ ಮೊದಲು ಆಪ್ತರ ಸಲಹೆಯನ್ನು ಪಡೆಯಿರಿ. ಸಾಲ ಮಾಡುವಾಗ ನಿಮ್ಮ ಆದಾಯವನ್ನು ಗಮನದಲ್ಲಿ ಇಟ್ಟುಕೊಳ್ಳಿ. ಗೊತ್ತಾಗದೇ ಕೆಟ್ಟವರ ಸಹವಾಸವನ್ನು ಮಾಡುವಿರಿ. ತಾಯಿಯ ಆರೋಗ್ಯವನ್ನು ಸರಿಮಾಡಿಸಲು ಹಣಕಾಸಿನ ವ್ಯಯವಾಗಲಿದೆ. ಪ್ರಭಾವೀ ಜನರ ಭೇಟಿಯಿಂದ ನಿಮಗೆ ಅನೇಕ ಲಾಭಗಳು ಆಗಲಿದೆ. ಮಹತ್ಕಾರ್ಯಕ್ಕೆ ನಿಮ್ಮದೊಂದು ಸಣ್ಣ ಕೊಡುಗೆ ಇರಲಿದೆ. ನಿಮಗೆ ಕೊಟ್ಟ ಜವಾಬ್ದಾರಿಯಿಂದ ನೀವು ಹಿಮ್ಮುಖರಾಗುವಿರಿ. ಕೊಟ್ಟಿದ್ದಕ್ಕೆ ಕೃತಜ್ಞತೆ ಇರಲಿ. ನಿಮಗೆ ಪರೀಕ್ಷೆಯ ದಿನವಾಗಿರುವುದು. ಆತ್ಮವಿಶ್ವಾಸದ ಕೊರತೆಯನ್ನು ನೀಗಿಸಿಕೊಳ್ಳುವುದು ಮುಖ್ಯವಾಗುವುದು. ಮುಖ್ಯ ಕಾರ್ಯವು ನೆನಪಾಗದೇಹೋಗಬಹುದು.

ಕರ್ಕಾಟಕ ರಾಶಿ : ನಿಮ್ಮ ಮನಸ್ಸಿಗೆ ಯೋಗ್ಯರಾದವರ ಜೊತೆ ಮಾತ್ರ ಬಿಚ್ಚುಮನಸ್ಸಿನಿಂದ ಇರುವಿರಿ. ಇಂದು ಯಾರ ಜೊತೆಗೂ ವಿವಾದಕ್ಕೆ ಸಿಲುಕುವುದು ಬೇಡ. ಯಂತ್ರೋಪಕರಣವನ್ನು ಬಳಸಿಕೊಂಡು ಹೊಸ ಉದ್ಯೋಗವನ್ನು ನೀವು ಆರಂಭಿಸಲಿದ್ದೀರಿ. ಯಾರೂ ನಿಮಗೆ ಸುಮ್ಮನೇ ಸಹಾಯ ಮಾಡಲಾರರು. ವಿದೇಶದಲ್ಲಿ ಇರುವವರಿಗೆ ಸಂಕಟವಾಗಬಹುದು. ಪುರಾಣಪ್ರವಚನದಲ್ಲಿ ನೀವು ಭಾಗವಹಿಸುವಿರಿ. ನಿಮ್ಮ ದೌರ್ಬಲ್ಯವನ್ನು ನೀವು ವರವಾಗಿ ಪಡೆದು ಸಾಧಿಸಬೇಕೆನಿಸಬಹುದು. ವಿದೇಶದ ಬಂಧುಗಳು ನಿಮ್ಮ ಉದ್ಯಮಕ್ಕೆ ಬೇಕಾದ ಸಹಾಯವನ್ನು ಮಾಡುವರು. ದಿನನಿತ್ಯದ ವ್ಯಾಪಾರದಲ್ಲಿ ಗೊಂದಲವೇಳಬಹುದು. ಪೂರ್ವಯೋಜಿತ ಕಾರ್ಯಕ್ಕೆ ನೀವು ಸಮಯವನ್ನು ಹೊಂದಿಸಿಕೊಳ್ಳುವಿರಿ. ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ಗಮನಬೇಕು. ಕಾನೂನಿನ ಚೌಕಟ್ಟಿನಲ್ಲಿ ನಿಮ್ಮ ನಡೆವಳಿಕೆ ಇರಲಿ. ಕಾರಣಾಂತರಗಳಿಂದ ನಿಮ್ಮ ಜೀವನದ ಮಾರ್ಗವು ಬದಲಾಗುವುದು. ಇಂದು ನಿಮಗೆ ಏಕಾಂತದ ಅನುಭವವಾಗಲಿದೆ.

ಬೆಳಗಾವಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಸಚಿವೆ ಚೇತರಿಸಿಕೊಳ್ಳುತ್ತಿದ್ದಾರೆ
ಬೆಳಗಾವಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಸಚಿವೆ ಚೇತರಿಸಿಕೊಳ್ಳುತ್ತಿದ್ದಾರೆ
ಪ್ರಭಾಕರ್ ಜೊತೆ ಸರಿಗಮ ವಿಜಿಗೆ ಇತ್ತು ಒಳ್ಳೆಯ ಒಡನಾಟ
ಪ್ರಭಾಕರ್ ಜೊತೆ ಸರಿಗಮ ವಿಜಿಗೆ ಇತ್ತು ಒಳ್ಳೆಯ ಒಡನಾಟ
ಕಾಂಗ್ರೆಸ್​ನ ನೂತನ ಪ್ರಧಾನ​ ಕಚೇರಿ‘ಇಂದಿರಾ ಭವನ’ ಉದ್ಘಾಟಿಸಿದ ಸೋನಿಯಾ
ಕಾಂಗ್ರೆಸ್​ನ ನೂತನ ಪ್ರಧಾನ​ ಕಚೇರಿ‘ಇಂದಿರಾ ಭವನ’ ಉದ್ಘಾಟಿಸಿದ ಸೋನಿಯಾ
ಹೋಲಿ ಡಿಪ್ ಆಧ್ಯಾತ್ಮಿಕ ಅನುಭೂತಿಯನ್ನು ನೀಡುತ್ತದೆ: ರಷ್ಯನ್ ಮಹಿಳೆ
ಹೋಲಿ ಡಿಪ್ ಆಧ್ಯಾತ್ಮಿಕ ಅನುಭೂತಿಯನ್ನು ನೀಡುತ್ತದೆ: ರಷ್ಯನ್ ಮಹಿಳೆ
ನೂತನ ಎಐಸಿಸಿ ಕಟ್ಟಡಕ್ಕೆ ಇಂದಿರಾ ಗಾಂಧಿ ಭವನ್ ಎಂದು ಹೆಸರಿಡಲಾಗಿದೆ
ನೂತನ ಎಐಸಿಸಿ ಕಟ್ಟಡಕ್ಕೆ ಇಂದಿರಾ ಗಾಂಧಿ ಭವನ್ ಎಂದು ಹೆಸರಿಡಲಾಗಿದೆ
ತಾರಾ ಎದುರೇ ಮೋಕ್ಷಿತಾಗೆ ಕೈ ಮುಗಿದು ಕ್ಷಮೆ ಕೇಳಿದ ಮಂಜು
ತಾರಾ ಎದುರೇ ಮೋಕ್ಷಿತಾಗೆ ಕೈ ಮುಗಿದು ಕ್ಷಮೆ ಕೇಳಿದ ಮಂಜು
Daily Devotional: ಸಾಲ ಬಾಧೆ, ಮನೆಯಲ್ಲಿನ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ
Daily Devotional: ಸಾಲ ಬಾಧೆ, ಮನೆಯಲ್ಲಿನ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ
ಜಾತ್ರೆಗೆ ನುಗ್ಗಿದ ಕಾರು: ಯುವತಿ ಸಾವು, 8 ಜನರಿಗೆ ಗಂಭೀರ ಗಾಯ..!
ಜಾತ್ರೆಗೆ ನುಗ್ಗಿದ ಕಾರು: ಯುವತಿ ಸಾವು, 8 ಜನರಿಗೆ ಗಂಭೀರ ಗಾಯ..!
ಸರ್ಕಾರದ ಅಸ್ಥಿಪಂಜರ ಮಾತ್ರ ಉಳಿದಿದೆ, ಸುಟ್ಟುಹೋಗೋದು ನಿಶ್ಚಿತ: ಸೋಮಣ್ಣ
ಸರ್ಕಾರದ ಅಸ್ಥಿಪಂಜರ ಮಾತ್ರ ಉಳಿದಿದೆ, ಸುಟ್ಟುಹೋಗೋದು ನಿಶ್ಚಿತ: ಸೋಮಣ್ಣ
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನೆಗೆ ನುಗ್ಗಿದ ಚಿರತೆ, ವಿಡಿಯೋ ನೋಡಿ
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನೆಗೆ ನುಗ್ಗಿದ ಚಿರತೆ, ವಿಡಿಯೋ ನೋಡಿ