AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೃತಜ್ಞತೆ ಮುಖ್ಯ; ಸುದೀಪ್-ವಿಜಯಲಕ್ಷ್ಮೀ ಹಳೆ ಫೋಟೋ ವೈರಲ್ ಮಾಡಿದ ಫ್ಯಾನ್ಸ್

ಕಿಚ್ಚ ಸುದೀಪ್ ಹೇಳಿಕೆ ಹಾಗೂ ದರ್ಶನ್ ಪತ್ನಿ ವಿಜಯಲಕ್ಷ್ಮೀ ತಿರುಗೇಟು ದೊಡ್ಡ ಚರ್ಚೆಗೆ ಕಾರಣವಾಗಿದೆ. ಸುದೀಪ್ 'ಮಾರ್ಕ್' ಸಿನಿಮಾ ಪ್ರೀ-ರಿಲೀಸ್ ಈವೆಂಟ್‌ನಲ್ಲಿ ನೀಡಿದ ಹೇಳಿಕೆಯನ್ನು ದರ್ಶನ್ ಅಭಿಮಾನಿಗಳು ತಮ್ಮನ್ನು ಉದ್ದೇಶಿಸಿ ಅಂದುಕೊಂಡರು. ಇದಕ್ಕೆ ವಿಜಯಲಕ್ಷ್ಮೀ ಕೌಂಟರ್ ನೀಡಿದ್ದು, ಹಳೆಯ ಫೋಟೋಗಳು ಮತ್ತು ಸುದೀಪ್‌ನ ಹಿಂದಿನ ಹೇಳಿಕೆಗಳು ವೈರಲ್ ಆಗುತ್ತಿವೆ. ಈ ವಿವಾದದ ಸಂಪೂರ್ಣ ವಿವರ ಇಲ್ಲಿದೆ.

ಕೃತಜ್ಞತೆ ಮುಖ್ಯ; ಸುದೀಪ್-ವಿಜಯಲಕ್ಷ್ಮೀ ಹಳೆ ಫೋಟೋ ವೈರಲ್ ಮಾಡಿದ ಫ್ಯಾನ್ಸ್
ಸುದೀಪ್-ವಿಜಯಲಕ್ಷ್ಮೀ
ರಾಜೇಶ್ ದುಗ್ಗುಮನೆ
|

Updated on: Dec 22, 2025 | 3:21 PM

Share

ಕಿಚ್ಚ ಸುದೀಪ್ ಹೇಳಿಕೆ ಹಾಗೂ ದರ್ಶನ್ ಪತ್ನಿ ವಿಜಯಲಕ್ಷ್ಮೀ ತಿರುಗೇಟು ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ. ಸುದೀಪ್ ಅವರು ಯಾರ ಹೆಸರನ್ನು ಉಲ್ಲೇಖಿಸದೆ ಮಾತನಾಡಿದ್ದರು. ಇದು ದರ್ಶನ್ ಅಭಿಮಾನಿಗಳಿಗೆ ಹೇಳಿದ ಮಾತು ಎಂದು ಭಾವಿಸಿದ ಫ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ಹಲ್​​ಚಲ್​ ಸೃಷ್ಟಿಸಿದ್ದರು. ಇದಕ್ಕೆ ವಿಜಯಲಕ್ಷ್ಮೀ ಅವರು ತಿರುಗೇಟು ನೀಡಿದ್ದಾರೆ. ಈ ಬೆನ್ನಲ್ಲೇ ಸುದೀಪ್ ಹಾಗೂ ವಿಜಯಲಕ್ಷ್ಮೀ ಅವರ ಹಳೆಯ ಫೋಟೋ ಹಾಗೂ ಸುದೀಪ್ ಹಳೆಯ ಹೇಳಿಕೆ ವೈರಲ್ ಮಾಡಲಾಗಿದೆ. ಆ ಬಗ್ಗೆ ಇಲ್ಲಿದೆ ವಿವರ.

ಏನಿದು ವಾರ್?

‘ಮಾರ್ಕ್’ ಸಿನಿಮಾ ಡಿಸೆಂಬರ್ 25ರಂದು ರಿಲೀಸ್ ಆಗುತ್ತಿದೆ. ಈ ಚಿತ್ರದ ಪ್ರೀ ರಿಲೀಸ್ ಈವೆಂಟ್ ವೇಳೆ ಮಾತನಾಡಿದ್ದ ಸುದೀಪ್, ‘ನಮ್ಮ ಸಿನಿಮಾ ರಿಲೀಸ್ ಆಗುತ್ತಿದೆ. ಈ ವೇಳೆ ಒಂದು ಪಡೆ ಯುದ್ಧಕ್ಕೆ ಸಿದ್ಧವಾಗಿದೆ’ ಎಂದು ಹೇಳಿದ್ದರು. ‘ದರ್ಶನ್ ಫ್ಯಾನ್ಸ್ ಮಾರ್ಕ್ ಚಿತ್ರವನ್ನು ಹಾಳು ಮಾಡಲು ಸನ್ನದ್ಧರಾಗಿದ್ದಾರೆ’ ಎಂಬರ್ಥದಲ್ಲಿ ಇದನ್ನು ಕಲ್ಪಿಸಿಕೊಳ್ಳಲಾಯಿತು. ಇದಕ್ಕೆ ವಿಜಯಲಕ್ಷ್ಮೀ ಅವರು ಕೌಂಟರ್ ಕೊಟ್ಟಿದ್ದಾರೆ. ‘ದರ್ಶನ್ ಇಲ್ಲದ ಕಾರಣಕ್ಕೆ ಸುದೀಪ್ ಈ ರೀತಿ ಮಾತನಾಡುತ್ತಿದ್ದಾರೆ’ ಎಂಬರ್ಥದಲ್ಲಿ ಹೇಳಿಕೆ ನೀಡಿದ್ದರು.

ಹಳೆಯ ಫೋಟೋ ವೈರಲ್

ವಿಜಯಲಕ್ಷ್ಮೀ ಹೇಳಿಕೆ ಬೆನ್ನಲ್ಲೇ, ಸುದೀಪ್ ಹಾಗೂ ವಿಜಯಲಕ್ಷ್ಮೀ ಅವರು ಸುದ್ದಿಗೋಷ್ಠಿಯಲ್ಲಿ ಒಟ್ಟಾಗಿ ಕುಳಿತಿರೋ ಫೋಟೋನ ಫ್ಯಾನ್ಸ್ ವೈರಲ್ ಮಾಡುತ್ತಿದ್ದಾರೆ. ಕೃತಜ್ಞತೆ ಮುಖ್ಯ ಎಂಬರ್ಥದಲ್ಲಿ ಪೋಸ್ಟ್​​ಗಳನ್ನು ಹಾಕಲಾಗುತ್ತಿದೆ. ದರ್ಶನ್​ ಅವರಿಗೆ 2013ರಲ್ಲ ‘ಬೃಂದಾವನ’ ಚಿತ್ರದ ಶೂಟಿಂಗ್ ವೇಳೆ ಗಾಯವಾಗಿತ್ತು. ಆಗ ಆಸ್ಪತ್ರೆಯಲ್ಲಿದ್ದಾಗ ಸುದೀಪ್ ಅವರು ಈ ಕುಟುಂಬದ ಬೆಂಬಲಕ್ಕೆ ನಿಂತಿದ್ದರು ಎನ್ನಲಾಗಿದೆ. ದರ್ಶನ್ ಆರಾಮಾಗಿದ್ದಾರೆ ಎಂದು ಹೇಳಲು ಕರೆದ ಸುದ್ದಿಗೋಷ್ಠಿಯಲ್ಲಿ ಅವರು ವಿಜಯಲಕ್ಷ್ಮೀ ಜೊತೆ ಭಾಗಿ ಆಗಿದ್ದರು ಎನ್ನಲಾಗಿದೆ. ಆ ಸಂದರ್ಭದ ಫೋಟೋ ಇದು ಎನ್ನಲಾಗಿದೆ.

ವಿಜಯಲಕ್ಷ್ಮೀಗೆ ಸಹಾಯ ಮಾಡಿದ್ರಾ?

ದರ್ಶನ್ ಅವರು ವಿಜಯಲಕ್ಷ್ಮೀ ಮೇಲೆ ಹಲ್ಲೆ ಮಾಡಿದ್ದರು. ಈ ಹಲ್ಲೆ ಬಳಿಕ ವಿಜಯಲಕ್​ಷ್ಮೀ ದರ್ಶನ್ ವಿರುದ್ಧ ಕೇಸ್ ಹಾಕಿದ್ದರು. ಈ ವೇಳೆ ವಿಜಯಲಕ್ಷ್ಮೀ ಅವರು ಸುದೀಪ್ ಅವರಿಂದ ಬೆಂಬಲ ಕೇಳಿದ್ದರೆ ಎಂಬ ಪ್ರಶ್ನೆ ಮೂಡಿತ್ತು. ಈ ಮೊದಲು ಮಾಧ್ಯಮದ ಜೊತೆ ಮಾತನಾಡಿದ್ದ ಸುದೀಪ್, ‘ಯಾರೋ ಒಬ್ಬರು ಬಂದು ಅವರು ನಂಗೆ ಹೊಡೀತಾ ಇದಾರೆ ಎಂದು ಸಪೋರ್ಟ್ ಕೇಳ್ತಾರೆ. ಆ ವ್ಯಕ್ತಿ ಸಪೋರ್ಟ್ ಮಾಡ್ತಾನೆ. ಆದರೆ, ಹೊಡೆದಾಡಿಕೊಂಡವರು ಒಂದಾಗ್ತಾರೆ. ಸಪೋರ್ಟ್ ಮಾಡಿದವನು ಗೂಬೆ ತರ ಕಾಣ್ತಾರೆ’ ಎಂದು ಹೇಳಿದ್ದರು. ಇದು ವಿಜಯಲಕ್ಷ್ಮೀ-ದರ್ಶನ್ ಬಗ್ಗೆ ಹೇಳಿದ ಮಾತು ಎಂದು ಊಹಿಸಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.