Astrology Tips: ಈ 4 ರಾಶಿಯವರ ಜತೆಗೆ ರಹಸ್ಯ ವಿಚಾರವನ್ನು ಹಂಚಿಕೊಳ್ಳುವಾಗ ಎಚ್ಚರವಾಗಿರಿ
ಜ್ಯೋತಿಷ ಪ್ರಕಾರ ಕೆಲವು ರಾಶಿಗಳವರ ಬಳಿ ಗುಟ್ಟು ಉಳಿಯುವುದು ಬಹಳ ಕಷ್ಟ. ಅದಕ್ಕೆ ಕಾರಣ ಅವರ ರಾಶಿಯೇ ಹೊರತು ಬೇರೇನಲ್ಲ. ಅಂಥ 4 ರಾಶಿಗಳ ಬಗ್ಗೆ ವಿವರ ಇಲ್ಲಿದೆ.
“ಅವರ ಹೊಟ್ಟೆಯಲ್ಲಿ ಗುಟ್ಟು ಉಳಿಯಲ್ಲ,” ಎಂಬ ಮಾತನ್ನು ಎಷ್ಟೋ ಜನರ ಬಗ್ಗೆ ಬೇರೆಯವರು ಆಡಿದ ಮಾತನ್ನು ನೀವು ಕೇಳಿಸಿಕೊಂಡಿರಬಹುದು ಅಥವಾ ಆಡಿರಲೂಬಹುದು. ಇದು ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ನಿರ್ಧಾರ ಮಾಡುವ ಮಟ್ಟಿಗಿನ ದೊಡ್ಡ ವಿಚಾರ ಖಂಡಿತಾ ಅಲ್ಲ ಅಂತ ಕೆಲವರಿಗೆ ಅನಿಸುತ್ತದೆ. ಮತ್ತೆ ಕೆಲವರಿಗೆ ಅಂಥ ವ್ಯಕ್ತಿಗಳ ಜತೆಗೆ ಸ್ನೇಹ ಕೂಡ ಬೇಡ ಎಂದೆನಿಸುತ್ತದೆ. ಜ್ಯೋತಿಷದ ಪ್ರಕಾರ, ಇದು ಆ ವ್ಯಕ್ತಿಯ ತಪ್ಪಲ್ಲ. ಏಕೆಂದರೆ ಕೆಲವು ಅಭ್ಯಾಸಗಳನ್ನು ಹುಟ್ಟಿನಿಂದಲೇ ಪಡೆದುಕೊಳ್ಳುತ್ತಾನೆ. ವಾಸ್ತವವಾಗಿ ಕೆಲವು ರಾಶಿಚಕ್ರ ಚಿಹ್ನೆಗಳನ್ನು ಅಂಥವೆಂದು ಪರಿಗಣಿಸಲಾಗುತ್ತದೆ. ಇದನ್ನು ನಂಬುವುದಕ್ಕೆ ನಿಮಗೆ ಸ್ವಲ್ಪ ಕಷ್ಟ ಅನಿಸಬಹುದು. ಈ ರಾಶಿಚಕ್ರದ ಚಿಹ್ನೆಗಳವರು ಅದೆಷ್ಟೇ ಒಳ್ಳೆ ಸ್ನೇಹಿತರೆಂದು ಸಾಬೀತುಪಡಿಸಬಹುದು. ಆದರೂ ಅವರ ಬಳಿ ಗುಟ್ಟು ಉಳಿಯುವುದಿಲ್ಲ ಎಂಬ ಪಟ್ಟ ಸದಾ ಇರುತ್ತದೆ.
ಅಂದರೆ ಈ ಜನರು ಯಾವುದೇ ದೊಡ್ಡ ವಿಷಯವನ್ನು ರಹಸ್ಯವಾಗಿಡಲು ಸಾಧ್ಯ ಆಗುವುದಿಲ್ಲ. ಕನಿಷ್ಠ ಒಬ್ಬರಿಗಾದರೂ ಹೇಳಿದ ನಂತರವೇ ಅವರಿಗೆ ಸಮಾಧಾನ. ಅಂದ ಹಾಗೆ ಈ ಲೇಖನದ ಉದ್ದೇಶ ಯಾರನ್ನೂ ಅವಮಾನಕ್ಕೆ ಗುರಿ ಮಾಡುವುದಲ್ಲ. ಜ್ಯೋತಿಷಕ್ಕೆ ಸಂಬಂಧಿಸಿದಂತೆ ಇರುವ ನಂಬಿಕೆಯನ್ನು ಹೇಳುವುದಷ್ಟೇ. ಇದೇ ಅಂತಿಮ ಸತ್ಯ ಎಂದು ಅಪ್ಪಣೆ ಕೊಡುವುದು ಸಹ ಈ ಲೇಖನದ ಗುರಿ ಅಲ್ಲ. ಆದರೆ ಈ ರಾಶಿಚಕ್ರದ ಚಿಹ್ನೆಗಳು ತಮ್ಮ ಬಳಿ ಗುಟ್ಟನ್ನು ಇರಿಸಿಕೊಳ್ಳುವುದು ಕಷ್ಟ ಅನ್ನೋದು ನಿಮ್ಮ ಗಮನಕ್ಕೆ ಇರಲಿ.
ಮೇಷ: 12 ರಾಶಿಚಕ್ರ ಚಿಹ್ನೆಗಳಲ್ಲಿ ಮೊದಲನೆಯದು ಮೇಷ. ಇದರ ಅಧಿಪತಿ ಮಂಗಳ ಗ್ರಹ (ಕುಜ). ಮೇಷ ರಾಶಿಯ ಜನರು ಹೃದಯದಿಂದ ಬಹಳ ಸ್ವಚ್ಛವಾಗಿರುತ್ತಾರೆ. ಯಾವುದೇ ಮಾತನ್ನು ಆಡಬೇಕಾದರೂ ಸ್ನೇಹ ಭಾವದಿಂದ ಹಾಗೂ ಸಂಬಂಧವನ್ನು ಉಳಿಸಿಕೊಳ್ಳಬೇಕು ಎಂಬ ಉದ್ದೇಶದಲ್ಲಿ ಪೂರ್ಣ ಹೃದಯದಿಂದ ಆಡುತ್ತಾರೆ. ಆದರೆ ಇವರಿಗೆ ತಮ್ಮ ಬಳಿ ಇರುವ ರಹಸ್ಯವನ್ನು ಕಾಪಾಡಿಕೊಳ್ಳುವುದು ಬಹಳ ಕಷ್ಟ. ಮಾತಿನ ಭರದಲ್ಲಿ ಯಾರಿಗಾದರೂ ಹೇಳಿಬಿಟ್ಟಿರುತ್ತಾರೆ. ಇನ್ನೂ ತಮಾಷೆ ಏನೆಂದರೆ, ಯಾವ ವ್ಯಕ್ತಿ ಬಳಿ ತಾನು ಆ ವಿಷಯವನ್ನು ಹೇಳಿದೆ ಎಂಬ ಸಂಗತಿ ಕೂಡ ಇವರು ಮರೆತು ಬಿಟ್ಟಿರುತ್ತಾರೆ.
ಮಿಥುನ: ಈ ರಾಶಿಯ ಅಧಿಪತಿ ಬುಧ. ಇವರು ಸಂಬಂಧದ ಬಗ್ಗೆ ಪ್ರಾಮಾಣಿಕರಾಗಿದ್ದರೂ ಗೊತ್ತಿದ್ದೋ ಅಥವಾ ಗೊತ್ತಿಲ್ಲದೆಯೋ ಬೇರೆಯವರ ಬಗ್ಗೆ ಗಾಸಿಪ್ ಮಾತನಾಡಿ ಬಿಡುತ್ತಾರೆ. ಇನ್ನೂ ಕೆಲವರಿಗೆ ಆ ಗಾಸಿಪ್ಗಳನ್ನು ಕೇಳುವುದೇ ಬಲು ಇಷ್ಟವಾಗಿ ಬಿಡುತ್ತದೆ. ಇವರಿಗೆ ಮಾತನಾಡಿದ ಮೇಲೆ ತಮ್ಮಿಂದಾದ ಅನಾಹುತ ಏನು ಎಂಬುದು ಅರಿವಿಗೆ ಬರುತ್ತದೆ. ಅದನ್ನು ಸರಿಪಡಿಸುವ ಪ್ರಯತ್ನದಲ್ಲಿ ಇನ್ನಷ್ಟು ರಂಕಲು ಮಾಡುತ್ತಾರೆ. ಆದ್ದರಿಂದ ಯಾವುದಾದರೂ ಸೂಕ್ಷ್ಮ ಸಂಗತಿಯನ್ನು ಮಾತನಾಡುವ ಮೊದಲೇ ಇವರು ಆಲೋಚಿಸುವುದು ಬಹಳ ಉತ್ತಮ.
ತುಲಾ: ಈ ರಾಶಿಯ ಅಧಿಪತಿ ಶುಕ್ರ. ಅಮದ ಹಾಗೆ ತುಲಾ ರಾಶಿಯ ಜನರಿಗೆ ಮಾತನಾಡುವಾಗ ಯಾರಿಗಾದರೂ ಕೇಡು ಬಗೆಯಬೇಕು ಎಂಬ ಉದ್ದೇಶ ಇರುವುದಿಲ್ಲ. ಆದರೆ ಸಿಕ್ಕಾಪಟ್ಟೆ ಕೋಪ ಇರುತ್ತದೆ. ಇವರ ಬಗ್ಗೆ ಯಾವಾಗಲೋ ಮಾತನಾಡಿದ್ದರೂ ಆ ಸಿಟ್ಟು ವರ್ಷಗಟ್ಟಲೆ ಹಾಗೇ ಉಳಿದುಹೋಗುತ್ತದೆ. ಇವರ ಇನ್ನೊಂದು ಸಮಸ್ಯೆ ಏನೆಂದರೆ ಅತಿ ಉತ್ಸಾಹ. ಅದೆಷ್ಟೋ ಬಾರಿ ಆ ಉತ್ಸಾಹದಿಂದಲೂ ರಹಸ್ಯ ಸಂಗತಿಗಳನ್ನು ಹೇಳಿಬಿಟ್ಟಿರುತ್ತಾರೆ. ಈ ಪೈಕಿ ಕೆಲವರಿಗೆ ಇತರರು ಕಷ್ಟಕ್ಕೆ ಸಿಕ್ಕಿಕೊಂಡಾಗ ತಾವು ಅದರಿಂದ ಮಜಾ ತೆಗೆದುಕೊಳ್ಳುವುದು ಸಹ ಇಷ್ಟ. ಆದ್ದರಿಂದ ಸುಮ್ಮನೆ ಸಿಕ್ಕಿಹಾಕಿಸಿರುತ್ತಾರೆ. ಅದರ ಪರಿಣಾಮ ಆಲೋಚನೆ ಮಾಡಿರಲ್ಲ.
ಕರ್ಕಾಟಕ: ಈ ರಾಶಿಯ ಅಧಿಪತಿ ಚಂದ್ರ. ಇವರ ಮನಸ್ಸು ಸದಾ ಹೊಯ್ದಾಡುತ್ತಾ ಇರುತ್ತದೆ. ಚಂಚಲಚಿತ್ತರಾಗಿರುತ್ತಾರೆ. ತುಂಬ ದೊಡ್ಡ ವಿಷಯಗಳನ್ನು ನಿರ್ವಹಿಸುವುದೇ ಇವರಿಗೆ ಕಷ್ಟದ ಸಂಗತಿ. ರಾಜೀ- ಸಂಧಾನಕ್ಕೆ ಸೂಕ್ತ ವ್ಯಕ್ತಿಗಳಂತೆ ಕಾಣುವ ಇವರು, ಭಾವುಕ ಜೀವಿಗಳು. ಯಾರ ಸ್ಥಿತಿ ಕರುಣಾಜನಕವಾಗಿ ಇರುತ್ತದೆ ಆ ಕಡೆಗೆ ಸ್ವಲ್ಪ ಮಟ್ಟಿಗೆ ವಾಲಿಬಿಡುವ ಸಾಧ್ಯತೆಯೂ ಇದೆ. ಬೇರೆಯವರ ದುಃಖವನ್ನು ತಮ್ಮದೇ ದುಃಖ ಎಂಬಂತೆ ಪರಿಭಾವಿಸುವ ಇವರು, ಅದನ್ನು ಇನ್ನೊಬ್ಬರ ಜತೆಗೆ ಹೇಳಿಕೊಳ್ಳುವ ಸಾಧ್ಯತೆ ಹೆಚ್ಚು. ಇದಕ್ಕೆ ಕೂಡ ಕಾರಣ ಏನೆಂದರೆ, ಇವರ ಮನಸ್ಸು.
ಇದನ್ನೂ ಓದಿ: Lucky colour: ಜನ್ಮರಾಶಿಗೆ ಅನುಗುಣವಾಗಿ ಯಾರಿಗೆ ಯಾವುದು ಅದೃಷ್ಟದ ಬಣ್ಣ?
ಇದನ್ನೂ ಓದಿ: Gemstones: ರಾಶಿಗೆ ಅನುಗುಣವಾಗಿ ಅದೃಷ್ಟರತ್ನ; ಜನ್ಮರಾಶಿಗೆ ಅನುಗುಣವಾಗಿ ಯಾವ ರತ್ನ ದಾರಣೆ ಉತ್ತಮ?
(Aries, Gemini, Cancer and Libra natives cannot keep secrecy with them according to astrology. Here is the reason know why?)
Published On - 7:58 am, Sat, 5 June 21