Weekly Horoscope ವಾರ ಭವಿಷ್ಯ: ಮುಂದಿನ ವಾರದ ಭವಿಷ್ಯದಲ್ಲಿ ಯಾರಿಗೆ ಒಳಿತು, ಯಾರಿಗೆ ಕೆಡುಕು?

Weekly Horoscope ವಾರ ಭವಿಷ್ಯ: ಮುಂದಿನ ವಾರದ ಭವಿಷ್ಯದಲ್ಲಿ ಯಾರಿಗೆ ಒಳಿತು, ಯಾರಿಗೆ ಕೆಡುಕು?
ಭವಿಷ್ಯ

ಈ ವಾರದಲ್ಲಿ ಯಾವ ರಾಶಿಗೆ ಏನು ಫಲ? ಒಂದಿಡೀ ವಾರದ ಶುಭಾಶುಭ ಫಲಗಳ ವಿವರ ಇಲ್ಲಿದೆ. ಈ ವಾರ ಭವಿಷ್ಯವು ಗೋಚಾರ ಫಲವನ್ನು ಅವಲಂಬಿಸಿದೆ. ಸಮಸ್ಯೆಗಳಿಗೆ ಪರಿಹಾರದ ವಿವರಗಳನ್ನೂ ನೀಡಲಾಗಿದೆ. ನೆಮ್ಮದಿಯ ಬಾಳು ನಿಮ್ಮದಾಗಲಿ.

TV9kannada Web Team

| Edited By: Ayesha Banu

Jun 06, 2021 | 7:00 AM

ಈ ವಾರದಲ್ಲಿ ಯಾವ ರಾಶಿಗೆ ಏನು ಫಲ? ಒಂದಿಡೀ ವಾರದ ಶುಭಾಶುಭ ಫಲಗಳ ವಿವರ ಇಲ್ಲಿದೆ. ಈ ವಾರ ಭವಿಷ್ಯವು ಗೋಚಾರ ಫಲವನ್ನು ಅವಲಂಬಿಸಿದೆ. ಸಮಸ್ಯೆಗಳಿಗೆ ಪರಿಹಾರದ ವಿವರಗಳನ್ನೂ ನೀಡಲಾಗಿದೆ. ನೆಮ್ಮದಿಯ ಬಾಳು ನಿಮ್ಮದಾಗಲಿ.

-:ವಾರ ಭವಿಷ್ಯ:- ತಾ.07-06-2021 ರಿಂದ ತಾ.13-06-2021 ರ ತನಕ ರಾಶಿಭವಿಷ್ಯ. **

ಮೇಷರಾಶಿ:- ಯಾವುದೇ ಹೊಸ ಕೆಲಸಗಳಿಗೆ ಕೈ ಹಾಕುವ ಮೊದಲು ಮುನ್ನಚ್ಚರಿಕೆ ವಹಿಸಬೇಕಾಗುತ್ತದೆ. ಸಂಗಾತಿಯ ಸಲಹೆಗೆ ಕಿವಿಗೊಡಬೇಕಾಗುತ್ತದೆ. ಉದ್ಯೋಗದಲ್ಲಿ ಸ್ಥಾನ ಪಲ್ಲಟವಾಗಬಹುದು. ಅಪರಿಚತರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆ ಅಗತ್ಯ. ಅದೃಷ್ಟ ಸಂಖ್ಯೆ: 9 ಅದೃಷ್ಟದ ಬಣ್ಣ: ಕೆಂಪು ಬಣ್ಣ

ವೃಷಭರಾಶಿ:- ಸ್ವ ಸಾಮರ್ಥ‍್ಯದಲ್ಲಿ ನಂಬಿಕೆಯಿಟ್ಟು ಕೆಲಸ ಮಾಡಬೇಕು. ಸಂಗಾತಿಯ ಮನೋಕಾಮನೆ ಪೂರೈಸಬೇಕಾಗುತ್ತದೆ. ಹಿರಿಯರೊಂದಿಗೆ ವಾಗ್ವಾದಕ್ಕಿಳಿಯಬೇಡಿ. ಈ ದಿನ ಸಾಲ ಕೊಡಲು ಹೋದರೆ ಮರಳಿ ಬಾರದು, ಎಚ್ಚರ. ದಿನದಂತ್ಯಕ್ಕೆ ಅಚ್ಚರಿಯ ವಾರ್ತೆಯಿದೆ. ಅದೃಷ್ಟ ಸಂಖ್ಯೆ: 5 ಅದೃಷ್ಟದ ಬಣ್ಣ: ಬಿಳಿಬಣ್ಣ

ಮಿಥುನರಾಶಿ:- ಪ್ರೀತಿ ಪಾತ್ರರ ಭೇಟಿಯಿಂದ ಮನಸ್ಸಿಗೆ ಸಂತಸವಾಗುವುದು. ಹಾಗಿದ್ದರೂ ಸಂಗಾತಿಯ ಕಿರಿ ಕಿರಿ ತಪ್ಪದು. ಆರ್ಥಿಕವಾಗಿ ಆದಾಯವಿದ್ದಷ್ಟೇ ಖರ್ಚೂ ಇರಲಿದೆ. ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚಿನ ಉತ್ಸಾಹದಿಂದ ಕಾರ್ಯನಿರ್ವಹಿಸುವಿರಿ. ಆರೋಗ್ಯದ ಬಗ್ಗೆ ಕಾಳಜಿಯಿರಲಿ. ಅದೃಷ್ಟ ಸಂಖ್ಯೆ: 8 ಅದೃಷ್ಟದ ಬಣ್ಣ: ಹಸಿರು

ಕರ್ಕರಾಶಿ:- ಉದ್ಯೋಗ ಕ್ಷೇತ್ರದಲ್ಲಿ ವಿರೋಧಿಗಳಿಂದ ತೊಂದರೆಗಳು ಎದುರಾದೀತು. ಆದರೆ ಸಹನೆಯಿಂದ ಎದುರಿಸುವಿರಿ. ಮಾತಿನಲ್ಲಿ ಸಂಯಮವಿದ್ದರೆ ನಿಮ್ಮನ್ನು ಯಾರೂ ಸೋಲಿಸಲಾಗದು. ವ್ಯಾಪಾರ ವ್ಯವಹಾರಗಳಲ್ಲಿ ಅಭಿವೃದ್ಧಿ ಕಂಡುಬರುವುದು. ಅದೃಷ್ಟ ಸಂಖ್ಯೆ: 4 ಅದೃಷ್ಟದ ಬಣ್ಣ: ಹಳದಿ

ಸಿಂಹರಾಶಿ:- ಮಾನಸಿಕವಾಗಿ ಸಂತಸವಿದ್ದರೂ ದೇಹಾರೋಗ್ಯದ ಬಗ್ಗೆ ಉಪೇಕ್ಷೆ ಬೇಡ. ನಾಲಿಗೆ ಚಪಲಕ್ಕೆ ಕಡಿವಾಣ ಹಾಕಬೇಕಿದೆ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಆಲಸ್ಯತನ ಕಂಡುಬಂದೀತು. ಆರ್ಥಿಕವಾಗಿ ಹಣಕಾಸಿನ ಮುಗ್ಗಟ್ಟು ಎದುರಾಗಬಹುದು. ದೇವತಾ ಪ್ರಾರ್ಥನೆ ಮಾಡಿ. ಅದೃಷ್ಟ ಸಂಖ್ಯೆ: 1 ಅದೃಷ್ಟದ ಬಣ್ಣ: ಕೇಸರಿ

ಕನ್ಯಾರಾಶಿ:- ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಬಗ್ಗೆ ಹೆಚ್ಚಿನ ಗಮನಹರಿಸಬೇಕು. ಏಕಾಗ್ರತೆಗೆ ಭಂಗ ತರುವ ವಿಚಾರಗಳು ಎದುರಾಗಲಿವೆ. ವೃತ್ತಿರಂಗದಲ್ಲಿ ಕ್ರಿಯಾತ್ಮಕ ವಿಚಾರಗಳಿಗೆ ಮನ್ನಣೆ ಸಿಗಲಿದೆ. ಸರಕಾರಿ ಕೆಲಸಗಳಲ್ಲಿ ಜಯ ಸಿಗಲಿದೆ. ದೇವತಾ ಪ್ರಾರ್ಥನೆ ಮಾಡಿ. ಅದೃಷ್ಟ ಸಂಖ್ಯೆ: 7 ಅದೃಷ್ಟದ ಬಣ್ಣ: ಕಂದು

ತುಲಾರಾಶಿ:- ಆರ್ಥಿಕವಾಗಿ ಚೇತರಿಕೆ ಕಂಡುಬಂದು ಮುನ್ನಡೆ ಅನುಭವಕ್ಕೆ ಬರುವುದು. ವೃತ್ತಿರಂಗದಲ್ಲಿ ಕಷ್ಟದ ಸಮಯದಲ್ಲಿ ಸಹೋದ್ಯೋಗಿಗಳ ಸಹಕಾರ ಸಿಗಲಿದೆ. ಚಾಡಿ ಮಾತುಗಳಿಗೆ ಕಿವಿಗೊಡಬೇಕಾಗಿಲ್ಲ. ಸಂಗಾತಿಯ ಮಾತಿಗೆ ಕಿವಿಗೊಡಬೇಕಾಗುತ್ತದೆ. ಅದೃಷ್ಟ ಸಂಖ್ಯೆ: 4 ಅದೃಷ್ಟದ ಬಣ್ಣ: ನೀಲಿ

ವೃಶ್ಚಿಕ ರಾಶಿ:- ನಿಮ್ಮ ಕ್ರಿಯಾಶೀಲತೆಗೆ ತಕ್ಕ ಪ್ರತಿಫಲ ಸಿಗಲಿದೆ. ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳಿಂದ ಪ್ರಶಂಸೆ ಸಿಗಲಿದೆ. ದಾಂಪತ್ಯ ಜೀವನದಲ್ಲಿ ನೆಮ್ಮದಿ ಇರುವುದು. ಸಂಗಾತಿಯ ಪ್ರೀತಿ ಸಿಗಲಿದೆ. ದಾಯಾದಿಗಳೊಂದಿಗೆ ಆಸ್ತಿ ವಿಚಾರವಾಗಿ ವಿವಾದಗಳನ್ನು ಹಿರಿಯರ ಮಧ್ಯಸ್ಥಿಕೆಯಲ್ಲಿ ಬಗೆಹರಿಸಿ. ಅದೃಷ್ಟ ಸಂಖ್ಯೆ: 6 ಅದೃಷ್ಟದ ಬಣ್ಣ: ಆರೆಂಜ್

ಧನಸ್ಸುರಾಶಿ:- ತೀರ್ಥಕ್ಷೇತ್ರಗಳ ಸಂದರ್ಶನ ನಡೆಸುವಿರಿ. ಮಕ್ಕಳಿಂದ ಸಂತಸದ ವಾರ್ತೆ ನಿರೀಕ್ಷಿಸಬಹುದು. ವಿದ್ಯಾರ್ಥಿಗಳಲ್ಲಿ ಕಠಿಣ ಪರಿಶ್ರಮದ ಅಗತ್ಯವಿದೆ. ವಾಸ ಸ್ಥಳದ ಬದಲಾವಣೆಗೆ ಸಿದ್ಧತೆ ನಡೆಸುತ್ತೀರಿ. ಕಾರ್ಯಕ್ಷೇತ್ರದಲ್ಲಿ ತಾಳ್ಮೆ ಸಮಾಧಾನದಿಂದ ಮುನ್ನಡೆಯಿರಿ. ಅದೃಷ್ಟ ಸಂಖ್ಯೆ: 3 ಅದೃಷ್ಟದ ಬಣ್ಣ: ಹಳದಿ

ಮಕರ ರಾಶಿ: ಮಕ್ಕಳಿಂದ ಶುಭ ಫಲ ನಿರೀಕ್ಷಿಸಬಹುದು. ಆರ್ಥಿಕವಾಗಿ ಹಂತ ಹಂತವಾಗಿ ಅಭಿವೃದ್ಧಿ ಗೋಚರಕ್ಕೆ ಬರುವುದು. ಕೈ ಹಿಡಿದ ಕೆಲಸಗಳು ಫಲಗೂಡುವುದು. ಧಾರ್ಮಿಕ ಕ್ಷೇತ್ರಗಳ ಸಂದರ್ಶನ ಯೋಗವಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಸಂದರ್ಶನ ಕರೆ ಬರುವುದು. ಅದೃಷ್ಟ ಸಂಖ್ಯೆ: 8 ಅದೃಷ್ಟದ ಬಣ್ಣ: ಕಪ್ಪು

ಕುಂಭರಾಶಿ:- ಶುಭ ಮಂಗಲ ಕೆಲಸಗಳಿಗಾಗಿ ಓಡಾಟ ನಡೆಸಬೇಕಾಗುತ್ತದೆ. ಮಾನಸಿಕವಾಗಿ ಗೊಂದಲಗಳು, ಖಿನ್ನತೆ ಕಾಡಲಿದೆ. ತಾಳ್ಮೆ, ಸಮಾಧಾನ ಅಗತ್ಯ. ಸಂಗಾತಿಯ ಸಲಹೆಗೆ ಕಿವಿಗೊಡಿ. ಕೌಟುಂಬಿಕವಾಗಿ ಜವಾಬ್ಧಾರಿ ಹೆಚ್ಚುವುದು. ಆರ್ಥಿಕ ಪರಿಸ್ಥಿತಿ ಬಗ್ಗೆ ಎಚ್ಚರ. ಅದೃಷ್ಟ ಸಂಖ್ಯೆ: 2 ಅದೃಷ್ಟದ ಬಣ್ಣ: ತಿಳಿನೀಲಿ

ಮೀನರಾಶಿ:- ನೂತನ ದಂಪತಿಗಳಿಗೆ ಮಧುಚಂದ್ರ ಭಾಗ್ಯವಿದೆ. ಸಂತಾನ ಸೂಚಕ ಫಲ ಸಿಗಲಿದೆ. ಮನೆಯಲ್ಲಿ ಸಂತಸದ ವಾತಾವರಣವಿರುವುದು. ವೃತ್ತಿರಂಗದಲ್ಲಿ ಅಧಿಕ ಕಾರ್ಯದೊತ್ತಡವಿರಲಿದ್ದು, ಪರಿಶ್ರಮಕ್ಕೆ ತಕ್ಕ ಫಲ ಸಿಗದೇ ಬೇಸರವಾಗಬಹುದು. ಅದೃಷ್ಟ ಸಂಖ್ಯೆ: 6

ಡಾ.ಬಸವರಾಜ ಗುರೂಜಿ ವೈದಿಕ ಜ್ಯೋತಿಷಿ. ಸಂಪರ್ಕ ಸಂಖ್ಯೆ: 9972848937

Follow us on

Related Stories

Most Read Stories

Click on your DTH Provider to Add TV9 Kannada