Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಫೆಬ್ರವರಿ 7ರ ದಿನಭವಿಷ್ಯ

ದೂರ ಪ್ರಯಾಣ ಮಾಡುತ್ತಾ ಇದ್ದೀರಿ ಅಂತಾದಲ್ಲಿ, ನೀವೇ ವಾಹನ ಚಾಲನೆ ಸಹ ಮಾಡುವಂಥವರು ಎಂದಾದಲ್ಲಿ ಕಡ್ಡಾಯವಾಗಿ ರಾಮ ರಕ್ಷಾ ಸ್ತೋತ್ರೀವನ್ನು ಕೇಳಿಸಿಕೊಳ್ಳಿ. ಅಥವಾ ನಿಮ್ಮಿಂದಲೇ ಹೇಳಲು ಸಾಧ್ಯವಾದಲ್ಲಿ ಪಠಣ ಮಾಡುವುದು ಉತ್ತಮ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಫೆಬ್ರವರಿ 7ರ ದಿನಭವಿಷ್ಯ
Daily Horoscope
Edited By:

Updated on: Feb 07, 2026 | 1:45 AM

ಜನ್ಮಸಂಖ್ಯೆಗೆ 1, 2, 3ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಫೆಬ್ರವರಿ 7ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ಭವಿಷ್ಯದ ಬಗ್ಗೆ ಆಲೋಚಿಸಿ, ಅದರ ಕಡೆಗೆ ನೀವು ಮಾಡಿದ ಕೆಲಸದ ಫಲವಾಗಿ ಈ ಹಿಂದಿನ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ತಾಂತ್ರಿಕ ಕ್ಷೇತ್ರ, ರಾಜಕೀಯ ಅಥವಾ ರಿಯಲ್ ಎಸ್ಟೇಟ್‌ನಲ್ಲಿ ಕಾರ್ಯ ನಿರ್ವಹಿಸುವವರು ಉತ್ತಮ ಯಶಸ್ಸು ಕಾಣುವಿರಿ. ಆದರೆ ಹಣಕಾಸಿನ ನಿರ್ವಹಣೆಯಲ್ಲಿ ಸ್ಪಷ್ಟತೆ ಇರಿಸಿಕೊಳ್ಳಿ. ನಿಮ್ಮಲ್ಲಿ ಕೆಲವರಿಗೆ ಅನಿರೀಕ್ಷಿತವಾಗಿ ಅಡೆತಡೆಗಳು ಎದುರಾಗಬಹುದು.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ಸರ್ಕಾರದಿಂದ ನೋಟಿಸ್ ನೀಡುವ ಸಾಧ್ಯತೆ ಇದೆ. ಇನ್ನು ನಿಮ್ಮ ಆಪ್ತ ಸ್ನೇಹಿತರೊಂದಿಗೆ ಸಣ್ಣ ಮಟ್ಟದಲ್ಲಾದರೂ ವಿವಾದಗಳು ಉಂಟಾಗಬಹುದು. ಯಾವುದೇ ಕಾರಣಕ್ಕೂ ಆರೋಗ್ಯ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ. ಏಕೆಂದರೆ ಇದೇ ವಿಚಾರಕ್ಕೆ ನಿಮ್ಮ ಮನಸ್ಸಿನ ಆತಂಕ ಹೆಚ್ಚಾಗಬಹುದು. ಅನಗತ್ಯವಾದ ಆತಂಕ ಮತ್ತು ಅಸುರಕ್ಷತೆ ಭಾವ ಕಾಡಬಹುದು.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ನಿಮ್ಮ ಆಲೋಚನೆಗಳು ವಾಸ್ತವಕ್ಕೆ ಹತ್ತಿರವಾಗಿವೆಯೇ ಅಥವಾ ಕೇವಲ ಊಹೆಯೇ ಎಂಬುದನ್ನು ವಿಶ್ಲೇಷಣೆ ಮಾಡಿ. ಕುಟುಂಬದಲ್ಲಿ ಸೌಹಾರ್ದ ವಾತಾವರಣ ಇರುತ್ತದೆ. ನೀವು ಸಾಮಾನ್ಯವಾಗಿಯೇ ಇತರರಿಗೆ ಸಲಹೆಗಳನ್ನು ನೀಡಲು ಬಯಸುತ್ತೀರಿ. ಈ ದಿನ ಅವರಾಗಿಯೇ ಕೇಳಿದಾಗ ಮಾತ್ರ ಸಲಹೆ ನೀಡಿ ಮತ್ತು ಇತರರ ಪರ್ಸನಲ್ ಸ್ಪೇಸ್ ಅನ್ನು ಗೌರವಿಸಿ.

ಲೇಖನ- ಸ್ವಾತಿ ಎನ್.ಕೆ.