
2026ರ ಏಪ್ರಿಲ್ ತಿಂಗಳಲ್ಲಿ ಗ್ರಹಗತಿಗಳ ಆಧಾರದ ಮೇಲೆ ಕರ್ಕಾಟಕ ರಾಶಿಯವರಿಗೆ ಅಂದರೆ ಪುನರ್ವಸು ನಾಲ್ಕನೇ ಪಾದ, ಪುಷ್ಯ, ಆಶ್ಲೇಷ ನಕ್ಷತ್ರಗಳ ನಾಲ್ಕೂ ಪಾದಗಳು ಇರಲಿದ್ದು ಅತಿ ಹೆಚ್ಚು ನಿಖರವಾದ ಮತ್ತು ವಿವರವಾದ ವಿಶ್ಲೇಷಣೆ ಇಲ್ಲಿದೆ. ಪ್ರಸ್ತುತ ಗ್ರಹಗಳ ಸ್ಥಿತಿ ಗಮನಿಸಿದರೆ, ನಿಮಗೆ ಸವಾಲುಗಳಿದ್ದರೂ ಕೆಲವು ಗ್ರಹಗಳು ರಕ್ಷಣಾತ್ಮಕವಾಗಿ ಕೆಲಸ ಮಾಡುತ್ತಿವೆ.
ಗುರು ದ್ವಾದಶ ಸ್ಥಾನದಲ್ಲಿ ಅಂದರೆ ವ್ಯಯ ಸ್ಥಾನ ಮಿಥುನ ರಾಶಿಯಲ್ಲಿದ್ದಾನೆ. ಇದು ಕರ್ಕಾಟಕಕ್ಕೆ 12ನೇ ಮನೆ. ಇದರಿಂದಾಗಿ ಶುಭ ಕಾರ್ಯಗಳಿಗಾಗಿ ಮದುವೆ, ಮನೆ ರಿಪೇರಿ, ಪ್ರವಾಹಗಳಿಗೆ ಹಣದ ವ್ಯಯ ಹೆಚ್ಚಾಗಲಿದೆ. ಆರೋಗ್ಯಕ್ಕಾಗಿ ಅನಿರೀಕ್ಷಿತ ಖರ್ಚುಗಳು ಬರಬಹುದು. ನಿದ್ರಾಹೀನತೆ ಉಂಟಾಗುವ ಸಂಭವವಿದೆ.
ಶನಿ ದಶೆ :
ಶನಿಯು ಮೀನ ರಾಶಿಯಲ್ಲಿ ಸಂಚರಿಸುತ್ತಿದ್ದು, ಇದು ನಿಮಗೆ ನವಮ ಸ್ಥಾನ. ಇದು ಈ ತಿಂಗಳ ಪ್ರಮುಖ ಸವಾಲು. ಕೆಲಸ ಕಾರ್ಯಗಳಲ್ಲಿ ಅಡೆತಡೆ, ಮಂದಗತಿ, ಮತ್ತು ಮಾನಸಿಕ ಅಶಾಂತಿ ನೀಡಬಹುದು. ಶನಿಯು ನಿಮ್ಮ ರಾಶಿಯ ಮೂರನೇ ರಾಶಿಯ ಮೇಲೆ ದೃಷ್ಟಿ ಬೀರುವುದರಿಂದ ಮಾತು ಕಠಿಣವಾಗಬಹುದು, ಇದರಿಂದ ಕುಟುಂಬದಲ್ಲಿ ಕಿರಿಕಿರಿ ಉಂಟಾಗದಂತೆ ನೋಡಿಕೊಳ್ಳಿ.
ರಾಹು ದಶೆ :
ಅಷ್ಟಮದ ಸ್ಥಾನದಲ್ಲಿರುವ ರಾಹು ಚಿಕಿತ್ಸೆ ಮತ್ತು ರೋಗಕ್ಕೆ ಸಂಬಂಧದಲ್ಲಿ ಸಣ್ಣಪುಟ್ಟ ವ್ಯತ್ಯಾಸ ಸೃಷ್ಟಿ ಆಗಲಿದೆ. ವಿದೇಶ ಪ್ರಯಾಣದ ಪ್ರಯತ್ನದಲ್ಲಿದ್ದರೆ ಅಡೆತಡೆಗಳು ಎದುರಾಗಬಹುದು.
ಕೇತು :
ಸಿಂಹ ರಾಶಿಯಲ್ಲಿರುವ ಕೇತು ನಿಮಗೆ ಅತ್ಯಂತ ಶುಭ ಫಲ ನೀಡುತ್ತಿದ್ದಾನೆ. ಇದು ನಿಮಗೆ ಧೈರ್ಯ, ಸ್ಥಿರತೆ ಮತ್ತು ಶತ್ರುಗಳ ಮೇಲೆ ಜಯ ನೀಡುತ್ತದೆ. ಕಿರಿಯ ಸಹೋದರರಿಂದ ಅಥವಾ ಮಿತ್ರರಿಂದ ಸಹಕಾರ ದೊರೆಯಲಿದೆ.
ಕುಜ ದಶೆ :
ಮಂಗಳನು ನಿಮ್ಮ ರಾಶಿಯ ಹತ್ತನೇ ಅಥವಾ ಹನ್ನೊಂದನೇ ಮನೆಯ ಸ್ಥಿತಿಗತಿಗಳನ್ನು ಅವಲಂಬಿಸಿ ವೃತ್ತಿಯಲ್ಲಿ ಅಧಿಕಾರ ನೀಡುತ್ತಾನೆ. ಭೂಮಿ ಅಥವಾ ಕೃಷಿ ಸಂಬಂಧಿತ ಕೆಲಸಗಳಲ್ಲಿ ತೊಡಗಿಕೊಂಡವರಿಗೆ ಲಾಭದ ಸೂಚನೆ ಇದೆ.
ಸೂರ್ಯ ದಶೆ :
ಸೂರ್ಯನು ಉಚ್ಚ ಮೇಷ ರಾಶಿಯಲ್ಲಿ ಇರುವುದರಿಂದ ಸರ್ಕಾರಿ ಕೆಲಸಗಳು ಅಥವಾ ಗೌರವ ಪ್ರಾಪ್ತಿಯಾಗುವ ಸಾಧ್ಯತೆ ಇದೆ. ಸಮಾಜದಲ್ಲಿ ನಿಮ್ಮ ಮೌಲ್ಯ ಹೆಚ್ಚಲಿದೆ.
ಆರ್ಥಿಕತೆ ಸಾಧಾರಣ ಹಣ ಬರುತ್ತದೆ, ಆದರೆ ಬಂದಷ್ಟೇ ವೇಗವಾಗಿ ವ್ಯಯವಾಗುತ್ತದೆ. ಹೂಡಿಕೆ ಮಾಡುವಾಗ ಎಚ್ಚರ.
ಆರೋಗ್ಯ ಗಮನ ಅಗತ್ಯ ನವಮ ಶನಿಯ ಪ್ರಭಾವವಿರುವುದರಿಂದ ಕಾಲು ಅಥವಾ ಬೆನ್ನು ನೋವು ಕಾಣಿಸಿಕೊಳ್ಳಬಹುದು. ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಿ. ಕೆಲಸದ ಸ್ಥಳದಲ್ಲಿ ಹೊಸ ಜವಾಬ್ದಾರಿ ಸಿಗಬಹುದು. ನಿಮ್ಮ ಶ್ರಮಕ್ಕೆ ಅಧಿಕಾರಿಗಳಿಂದ ಮನ್ನಣೆ ಸಿಗಲಿದೆ.
ಕುಟುಂಬದ ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ದಾಂಪತ್ಯದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಬಂದು ಹೋಗುತ್ತವೆ.
ಗುರುವು ವ್ಯಯದಲ್ಲಿರುವುದರಿಂದ ಅಶಕ್ತರಿಗೆ ಪುಸ್ತಕ ಅಥವಾ ಲೇಖನಿ ದಾನ ಮಾಡಿ. ಇದು ವ್ಯಯ ಸ್ಥಾನದ ದೋಷ ಕಡಿಮೆ ಮಾಡುತ್ತದೆ. ಗಣಪತಿಯ ಆರಾಧನೆ ಮಾಡುವುದರಿಂದ ಕೆಲಸದಲ್ಲಿನ ಅಡೆತಡೆಗಳು ನಿವಾರಣೆಯಾಗುತ್ತವೆ.
– ಲೋಹಿತ ಹೆಬ್ಬಾರ್