AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Cancer Yearly Horoscope 2024: ಕರ್ಕಾಟಕ ರಾಶಿ ವರ್ಷ ಭವಿಷ್ಯ; ಅರ್ಧವರ್ಷ ಬಹಳ ಉತ್ತಮ; ಅಂದುಕೊಂಡಿದ್ದನ್ನು ಸಾಧಿಸುವಿರಿ

ಕಟಕ ರಾಶಿ ವರ್ಷ ಭವಿಷ್ಯ 2024: ಕರ್ಕಾಟಕ ರಾಶಿಯು ರಾಶಿ ಚಕ್ರದ ನಾಲ್ಕನೆ ರಾಶಿ. ಚಂದ್ರ ಅಧಿಪತಿ ಕಟಕ ರಾಶ್ಯಾಧಿಪತಿ. ಕಟಕ ರಾಶಿಯವರಿಗೆ ಅರ್ಧವರ್ಷ ಬಹಳ ಉತ್ತಮ ವರ್ಷವಾಗಲಿದೆ. ಅಭೀಷ್ಟಸಿದ್ಧಿಯ ಜೊತೆಗೆ ನೆಮ್ಮದಿಯನ್ನೂ ಕಾಣಬಹುದಾಗಿದೆ. ಅರ್ಧಕ್ಕೇ ನಿಂತಿರುವ ನಿಮ್ಮ ಯೋಜನೆಗಳು ಪೂರ್ಣವಾಗಲಿದೆ.

Cancer Yearly Horoscope 2024: ಕರ್ಕಾಟಕ ರಾಶಿ ವರ್ಷ ಭವಿಷ್ಯ; ಅರ್ಧವರ್ಷ ಬಹಳ ಉತ್ತಮ; ಅಂದುಕೊಂಡಿದ್ದನ್ನು ಸಾಧಿಸುವಿರಿ
Cancer Yearly Horoscope 2024
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Dec 11, 2023 | 5:28 PM

Share

ಕರ್ಕಾಟಕ ರಾಶಿಯು ರಾಶಿ ಚಕ್ರದ ನಾಲ್ಕನೆ ರಾಶಿ. ಇದರ ಅಧಿಪತಿ ಚಂದ್ರ. ಇಲ್ಲಿ ಕುಜನು ನೀಚನೂ, ಗುರುವು ಬಲಿಷ್ಠನೂ ಆಗಿತ್ತಾನೆ. ಈ ರಾಶಿಯವರಿಗೆ ಅರ್ಧವರ್ಷ ಬಹಳ ಉತ್ತಮ ವರ್ಷವಾಗಲಿದೆ. ಅಭೀಷ್ಟಸಿದ್ಧಿಯ ಜೊತೆಗೆ ನೆಮ್ಮದಿಯನ್ನೂ ಕಾಣಬಹುದಾಗಿದೆ. ಎಲ್ಲ ಗ್ರಹಗಳೂ ನಿಮಗೆ ಹನ್ನೊಂದನೆಯ ಮನೆಯ ಶುಭಫಲವನ್ನೇ ದಯಪಾಲಿಸಲಿವೆ.

2024ರ ಕರ್ಕಾಟಕ ರಾಶಿಯ ಭವಿಷ್ಯ.

ಈ ವರ್ಷ ನಿಮಗೆ ಸುಗ್ಗಿಯ ಕಾಲ ಎನ್ನಬಹುದು. ದಶಮದಲ್ಲಿ ಇರುವ ಗುರು ಏಪ್ರಿಲ್ ನ ಕೊನೆಯಲ್ಲಿ ಏಕಾದಶಸ್ಥಾನಕ್ಕೆ ಬರಲಿದ್ದು ನಿಮ್ಮ ಅರ್ಧವಾಗಿರುವ ಯೋಜನೆಗಳು ಪೂರ್ಣವಾಗಲಿದೆ. ಗುರುವಿನ ಉಚ್ಚರಾಶಿಯೂ ಇದೇ ಆಗಿರುವ ಕಾರಣ ಗುರುಬಲವೂ ನಿಮಗೆ ಇದ್ದು ಅಂದುಕೊಂಡಿದ್ದನ್ನು ಸಾಧಿಸುವಿರಿ.

ಕರ್ಕಾಟಕ ರಾಶಿಯವರ ಧನಾಗಮನ:

ದ್ವಿತೀಯ ಸ್ಥಾನದ ಅಧಿಪತಿಯಾದ ಸೂರ್ಯನು ವರ್ಷಾರಂಭದಲ್ಲಿ ಷಷ್ಠದಲ್ಲಿ ಇರುವ ಕಾರಣ ಆರೋಗ್ಯದ ಕಾರಣಕ್ಕೆ ಧನವ್ಯಯವಾದೀತು. ಅಥವಾ ಮನೆಯ ಹಿರಿಯರ ಆರೋಗ್ಯಕ್ಕೆ ಹಣವನ್ನು ಕೊಡುವ ಅನಿವಾರ್ಯತೆ ಬರಬಹುದು. ಅನಂತರದಲ್ಲಿ ನಿಮ್ಮ ನಿರೀಕ್ಷಿತ ಸಂಪಾದನೆಯ ಹಂತವನ್ನು ತಲುಪುವಿರಿ. ಕಲಾವಿದರು ಹೆಚ್ಚಿ ಖ್ಯಾತಿ, ಸಂಪಾದನೆಯನ್ನು ಮಾಡುವರು. ಕೃಷಿಯಲ್ಲಿ ಹೆಚ್ಚು ಆದಾಯವನ್ನು ಪಡೆಯುವರು.

ಕರ್ಕಾಟಕ ರಾಶಿಯವರ ಪ್ರೀತಿ ಮತ್ತು ವಿವಾಹ:

ಈ ವರ್ಷ ನಿಮಗೆ ಪ್ರೀತಿಯಲ್ಲಿ ಯಾವುದೋ ತೊಂದರೆ ಬರದು. ಇಷ್ಟಪಟ್ಟವರ ಜೊತೆ ಸುಖದಿಂದ ಇರುವಿರಿ.‌ ಅವಿವಾಹಿತರು ವಿವಾಹವನ್ನೂ ಆಗುವರು. ಸಂಗಾತಿಯ ಆಯ್ಕೆಯಲ್ಲಿ ಸ್ವಲ್ಪ ವಿಳಂಬವಾಗಬಹುದು. ಇಷ್ಟವಾಗದವರೂ ಇಷ್ಟವಾದಾರು.

ಕರ್ಕಾಟಕ ರಾಶಿಯವರ ವೃತ್ತಿ ಜೀವನ:

ತಂತ್ರಜ್ಞರಿಗೆ ಅಧಿಕಾರ, ಉನ್ನತ ಸ್ಥಾನಗಳು ಪ್ರಾಪ್ತವಾಗುವುದು. ಭಡ್ತಿಯನ್ನು ಅನಿರೀಕ್ಷಿತವಾಗಿ ಪಡೆದುಕೊಳ್ಳುವಿರಿ.‌ ಸರ್ಕಾರದ ಉದ್ಯೋಗಿಗಳಿಗೆ ಅವಕಾಶಗಳು ತಾನಾಗಿಯೇ ಬರುವುದು. ಏಪ್ರಿಲ್ ನ ವರೆಗೆ ಕುಂಟುತ್ತ ಸಾಗುವ ವೃತ್ತಿ ಜೀವನ ಅನಂತರ ವೇಗವನ್ನು ಪಡೆದುಕೊಳ್ಳುವುದು. ಯಂತ್ರೋದ್ಯಮಿಗಳಿಗೆ ಅಧಿಕಲಾಭವಾಗುವುದು.

ಕರ್ಕಾಟಕ ರಾಶಿಯವರ ಆರೋಗ್ಯದ ಸ್ಥಿತಿ:

ವರ್ಷಾರಂಭದಲ್ಲಿ ಆರೋಗ್ಯವು ದೃಢವಾಗಿದ್ದರೂ ಮಾರ್ಚ್‌ನಲ್ಲಿ ನಲ್ಲಿ ಪೆಟ್ಟುಗಳನ್ನು ತಿನ್ನಬೇಕಾದೀತು. ಯೋಗಾಭ್ಯಾಸದಿಂದ ಶರೀರ ಸೌಖ್ಯವನ್ನು ಕಾಪಾಡಿಕೊಳ್ಳಿ. ಸೂರ್ಯನ ನಮಸ್ಕಾರವು ದೇಹ ಹಾಗೂ ಮಾನಸಿಕ ಆರೋಗ್ಯವನ್ನು ದೃಢವಾಗಿ ಮಾಡುವುದು.

ಕರ್ಕಾಟಕ ರಾಶಿಯವರ ವಿದೇಶ ಪ್ರಯಾಣ:

ಈ ವರ್ಷ ವಿದೇಶ ಪ್ರಯಾಣದ ಅವಕಾಶಗಳು ಇರದು. ವೃತ್ತಿಗೆ ಸಂಧಿಸಿದಂತೆ ಕೆಲವು‌ ದಿನಗಳನ್ನು ಕಳೆದುಬರಬಹುದು. ವಿದ್ಯಾಭ್ಯಾಸ, ಉದ್ಯೋಗಕ್ಕೆ ಕಷ್ಟವಾದೀತು.‌

-ಲೋಹಿತ ಹೆಬ್ಬಾರ್