Taurus Yearly Horoscope 2024: ವೃಷಭ ರಾಶಿ ವರ್ಷ ಭವಿಷ್ಯ: ವರ್ಷದ ಮಧ್ಯಾವಧಿಯವರಿಗೆ ಸಂಕಷ್ಟ, ಜಾಗೃತೆ ಅವಶ್ಯ

ವೃಷಭ ರಾಶಿ ವರ್ಷ ಭವಿಷ್ಯ 2024: ರಾಶಿಚಕ್ರದಲ್ಲಿ ಎರಡನೇ ರಾಶಿ ವೃಷಭ. ವೃಷಭ ರಾಶಿಯ ಅಧಿಪತಿ ಶುಕ್ರ. ವೃಷಭ ರಾಶಿಯವರು ಮಧ್ಯಾವಧಿಯವರಿಗೆ ಸಂಕಷ್ಟವನ್ನು ಅನುಭವಿಸಬೇಕಾಗಬಹುದು. ಜಾಗರೂಕತೆಯಿಂದ ವ್ಯವಹಾರ, ವ್ಯಾಪಾರಗಳನ್ನು ಮಾಡಬೇಕು. ಹಾಗಿದ್ದರೂ ತೊಂದರೆಗೆ ಸಿಕ್ಕಿಕೊಳ್ಳುವ ಸಾಧ್ಯತೆ ಇದೆ.

Taurus Yearly Horoscope 2024: ವೃಷಭ ರಾಶಿ ವರ್ಷ ಭವಿಷ್ಯ: ವರ್ಷದ ಮಧ್ಯಾವಧಿಯವರಿಗೆ ಸಂಕಷ್ಟ, ಜಾಗೃತೆ ಅವಶ್ಯ
Taurus Yearly Horoscope 2024
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: Digi Tech Desk

Updated on:Dec 11, 2023 | 4:08 PM

ರಾಶಿಚಕ್ರದಲ್ಲಿ ಎರಡನೇ ರಾಶಿ ವೃಷಭ. ಈ ರಾಶಿಯ ಅಧಿಪತಿ ಶುಕ್ರ. ಇದು ಚಂದ್ರನ‌ ಉಚ್ವಸ್ಥಾನವೂ ಹೌದು. ಆದರೆ ಈ ರಾಶಿಯವರು ಮಧ್ಯಾವಧಿಯವರಿಗೆ ಸಂಕಷ್ಟವನ್ನು ಅನುಭವಿಸಬೇಕಾಗುವುದು. ಜಾಗರೂಕತೆಯಿಂದ ವ್ಯವಹಾರ, ವ್ಯಾಪಾರಗಳನ್ನು ಮಾಡಬೇಕು. ಹಾಗಿದ್ದರೂ ತೊಂದರೆಗೆ ಸಿಕ್ಕಿಕೊಳ್ಳುವ ಸಾಧ್ಯತೆ ಇದೆ. ರಾಶಿಯ ಅಧಿಪತಿಯನ್ನೂ ಜೊತೆಗೆ ಕುಲದ ಅಧಿದೇವತೆಯಾದ ದುರ್ಗಾಮಾತೆಯನ್ನೂ ಉಪಾಸನೆ ಮಾಡುವುದು ಸೂಕ್ತ.

2024ರಲ್ಲಿ ವೃಷಭರಾಶಿಯವರ ಫಲಾಫಲ:

2024ರಲ್ಲಿ ಈ ರಾಶಿಯವರು ಶುಭಾಶುಭ ಮಿಶ್ರಫಲವನ್ನು ಪಡೆಯುವರು. ಸೋಮವಾರದಂದು ವರ್ಷದ ಆರಂಭವಾಗಲಿದ್ದು ರಾಶ್ಯಧಿಪತಿಯಾದ ಶುಕ್ರನಿಗೆ ಚಂದ್ರನು ಶತ್ರುವಾಗಿದ್ದು, ಆದರೆ ಚಂದ್ರನಿಗೆ ಶುಕ್ರನು ಸಮಾನವಾದ ಕಾರಣ ಮಿಶ್ರಫಲವು ನಿಮಗೆ ಸಿಗುವುದು ನಿಶ್ಚಿತ. ರಾಶ್ಯಧಿಪತಿಯು ವರ್ಷಾರಂಭದಲ್ಲಿ ಸಪ್ತಮದಲ್ಲಿ ಬುಧನ ಜೊತೆಗಿರುವ ಕಾರಣ ಮಾನಸಿಕ ನೆಮ್ಮದಿ, ದಾಂಪತ್ಯದಲ್ಲಿ ಸುಖ, ಹಣಕಾಸಿನ ಹರಿವು ಚೆನ್ನಾಗಿರುವುದು.

2024ರಲ್ಲಿ ವೃಷಭರಾಶಿಯವರ ಧನಾಗಮನ:

ಏಕಾದಶದಲ್ಲಿ ರಾಹುವಿರುವ ಕಾರಣ ನಿಮ್ಮ ಪರಿಶ್ರಮವು ಧನಾಗಮನಕ್ಕೆ ಹೆಚ್ಚು ಮಹತ್ತ್ವವನ್ನು ವಹಿಸುತ್ತದೆ. ನಿಮ್ಮ ಶ್ರಮಕ್ಕೆ ಪೂರ್ಣವಾದ ಫಲವು ಸಿಗುವುದು ಎನ್ನಲಾಗದು. ಅಧಿಕಾಂಶವನ್ನು ಗಳಿಸುವುದರಲ್ಲಿ ಸಂಶಯವಿಲ್ಲ. ಅನಿರೀಕ್ಷಿತವಾಗಿ ಅಲ್ಪ ಧನವು ನಿಮ್ಮ ಕೈ ಸೇರಬಹುದು. ಏಪ್ರಿಲ್ ನಲ್ಲಿ ನಿಮಗೆ ಅವಕಾಶಗಳು ಹೆಚ್ಚು ಸಿಗುವುದು.

2024ರಲ್ಲಿ ವೃಷಭರಾಶಿಯವರ ಪ್ರೀತಿ ಮತ್ತು ವಿವಾಹ:

ಸಪ್ತಮಾಧಿಪತಿಯ ವರ್ಷದ ಆರಂಭದಲ್ಲಿ ಅಷ್ಟಮ ಸ್ಥಾನದಲ್ಲಿ ಇರುವ ಕಾರಣ ವಿವಾಹಕ್ಕೆ ಅಡೆತಡೆಗಳು ಬರಬಹುದು. ನಿಶ್ಚಿತವಾದ ವಿವಾಹವು ಮುರಿದುಹೋಗುವ ಸಾಧ್ಯತೆ ಇದೆ. ಅನಂತರದಲ್ಲಿ ಕುಜನ ಹಾಗೂ ಶುಕ್ರ ಸಂಯೋಗವು ಆಗಲಿದ್ದು ಪ್ರೇಮವಿವಾಹವು ಸಂಭವಿಸುವುದು.

2024ರಲ್ಲಿ ವೃಷಭರಾಶಿಯವರ ವೃತ್ತಿ:

ವೃತ್ತಿಯಲ್ಲಿ ನಿಮಗೆ ಆಸಕ್ತಿಯು ಅಷ್ಟಾಗಿ ಇರದು. ಶನಿಯು ನಿಮ್ಮ ಆಸಕ್ತಿಯನ್ನು ಕಳೆಯುವನು.‌ ಆಲಸ್ಯದಿಂದ ಅವಕಾಶಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಶನಿಯು ತನ್ನ ಕ್ಷೇತ್ರಲ್ಲಿಯೇ ಇದ್ದು ಭವಿಷ್ಯದ ಬಗ್ಗೆ ಗಂಭೀರವಾದ ಚಿಂತನೆಯನ್ನು ಮಾಡಲಾರಿರಿ. ಕಾರ್ಯದಲ್ಲಿ ನಿಮಗೆ ಒತ್ತಡವೂ ಅಧಿಕಗುವುದು.

2024ರಲ್ಲಿ ವೃಷಭರಾಶಿಯವರ ಆರೋಗ್ಯ ಸ್ಥಿತಿ:

ಷಷ್ಠಾಧಿಪತಿಯು ಸಪ್ತಮದಲ್ಲಿ ಇರುವ ಕಾರಣ ವರ್ಷಾರಂಭದಲ್ಲಿ ನಿಮ್ಮ ಆರೋಗ್ಯವು ಚೆನ್ನಾಗಿ ಇರುವುದು. ಅನಂತರ ಹದಗೆಡುವ ಸಾಧ್ಯತೆ ಇದೆ. ಚಿಕಿತ್ಸೆಯನ್ನು ಪಡೆಯಬೇಕಾಗಬಹುದು. ಜ್ವರಾದಿಗಳನ್ನು ನಿರ್ಲಕ್ಷ್ಯ ಮಾಡುವುದು ಬೇಡ.

2024ರಲ್ಲಿ ವೃಷಭರಾಶಿಯವರ ವಿದೇಶ ಪ್ರಯಾಣ:

ವಿದೇಶ ಪ್ರಯಾಣವನ್ನು ಮಾಡು ಅವಕಾಶಗಳು ಮಾರ್ಚ್ ಸಂದರ್ಭದಲ್ಲಿ ಬರುವುದು. ಹೋದಾಗ ಎಚ್ಚರಿಕೆ ಅವಶ್ಯಕ.‌ ಸ್ತ್ರೀಯರು ಜಾಗರೂಕತೆಯಿಂದ ಇರಬೇಕಾಗುವುದು.

– ಲೋಹಿತ ಹೆಬ್ಬಾರ್​, ಇಡುವಾಣಿ

Published On - 4:05 pm, Mon, 11 December 23

ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ