Astrology: ಹುಟ್ಟಿದ ಸಮಯದ ಆಧಾರದಲ್ಲಿ ಗುಣ- ಸ್ವಭಾವ ಹೇಗಿರುತ್ತದೆ? ಯಾವ ವೃತ್ತಿ, ಉದ್ಯೋಗ ಸೂಕ್ತವಾಗುತ್ತದೆ?

ಹುಟ್ಟಿದ ಸಮಯದ ಆಧಾರದ ಮೇಲೆ ಜ್ಯೋತಿಷ ರೀತಿಯಾಗಿ ಮಕ್ಕಳ ಸ್ವಭಾವವನ್ನು ತಿಳಿಸುವಂಥ ಲೇಖನ ಇದು. ಜತೆಗೆ ವೃತ್ತಿ- ಉದದ್ಯೋಗ ಯಾವುದು ಆರಿಸಿಕೊಳ್ಳಬೇಕು ಎಂಬ ಮಾರ್ಗದರ್ಶನವೂ ಇದೆ.

Astrology: ಹುಟ್ಟಿದ ಸಮಯದ ಆಧಾರದಲ್ಲಿ ಗುಣ- ಸ್ವಭಾವ ಹೇಗಿರುತ್ತದೆ? ಯಾವ ವೃತ್ತಿ, ಉದ್ಯೋಗ ಸೂಕ್ತವಾಗುತ್ತದೆ?
ಸಾಂದರ್ಭಿಕ ಚಿತ್ರ
Follow us
TV9 Web
| Updated By: Skanda

Updated on: Jul 21, 2021 | 6:50 AM

ನಿಮ್ಮ ಮನೆಯಲ್ಲಿನ ಮಕ್ಕಳಿಗೆ ಸೂಕ್ತವಾದ ಉದ್ಯೋಗ ಯಾವುದು? ಅವರ ಬದುಕಿನಲ್ಲಿ ಎದುರಿಸುವ ಪ್ರಮುಖ ಘಟನೆ ಯಾವುದಾಗಬಹುದು ಎಂಬುದನ್ನು ಅವರು ಹುಟ್ಟಿದ ಸಮಯದ ಆಧಾರದಲ್ಲಿ ತಿಳಿಸುವಂಥ ಲೇಖನ ಇದು. ಇದಕ್ಕಾಗಿ ದಿನದ ಇಪ್ಪತ್ನಾಲ್ಕು ಗಂಟೆಗಳ ಅವಧಿಯಲ್ಲಿ ಯಾವ ಸಮಯದಲ್ಲಿ ಹುಟ್ಟಿದ ಮಕ್ಕಳ ಸ್ವಭಾವ ಹೇಗಿರುತ್ತದೆ ಎಂದು ಇಲ್ಲಿ ವಿವರಿಸಲಾಗಿದೆ. ಪ್ರತಿ ಎರಡು ಗಂಟೆಯಂತೆ ಹನ್ನೆರಡು ಭಾಗಗಳಾಗಿ ಮಾಡಲಾಗಿದೆ. ಇನ್ನೇಕೆ ತಡ ಮಾಡುತ್ತೀರಿ, ಯಾವ ಸಮಯದಲ್ಲಿ ಹುಟ್ಟಿದ ಮಕ್ಕಳ ಸ್ವಭಾದ ಹೇಗಿರುತ್ತದೆ ಎಂಬುದನ್ನು ತಿಳಿಯಿರಿ.

ಬೆಳಗಿನ ಜಾವ 4ರಿಂದ 6 ಈ ಸಮಯದಲ್ಲಿ ಹುಟ್ಟಿದವರಿಗೆ ಆಗಾಗ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಆತ್ಮವಿಶ್ವಾಸ ವಿಪರೀತ ಹೆಚ್ಚಾಗಿರುತ್ತದೆ. ಈ ಗುಣವೇ ಇವರ ಬಗ್ಗೆ ಇತರರಲ್ಲಿ ದ್ವೇಷ ಮೂಡಿಸುತ್ತದೆ. ಆತ್ಮವಿಶ್ವಾಸ ಅಪರಿಮಿತವಾಗಿ ಇರುತ್ತದೆ. ತಾವು ಜವಾಬ್ದಾರಿ ತೆಗೆದುಕೊಳ್ಳುವ ಯಾವುದೇ ವಿಷಯದಲ್ಲಿ ಆಸಕ್ತಿಯಿಂದ ತೊಡಗಿಕೊಳ್ಳುತ್ತಾರೆ. ಭವಿಷ್ಯ ಬಹಳ ಉಜ್ವಲವಾಗಿರುತ್ತದೆ. ಯಶಸ್ಸು ಸಿಗುವುದು ಸ್ವಲ್ಪ ಮಟ್ಟಿಗೆ ನಿಧಾನ ಆಗಬಹುದು. ಆದರೆ ಶ್ರಮ ಎಂದೂ ಹುಸಿ ಹೋಗುವುದಿಲ್ಲ. ಶ್ರಮಕ್ಕೆ ತಕ್ಕ ಯಶಸ್ಸು ಬರುತ್ತದೆ.

ಬೆಳಗ್ಗೆ 6ರಿಂದ 8 ಇವರ ಬದುಕಿನಲ್ಲಿ ತೀರಾ ನಿಗೂಢ ಎನಿಸುವಂಥ ಘಟನೆಗಳು ಸಂಭವಿಸುತ್ತವೆ. ನಿರೀಕ್ಷೆ ಕೂಡ ಮಾಡದ ಘಟನೆಗಳು ಏಕಾಏಕಿ ಕಕ್ಕಾಬಿಕ್ಕಿ ಆಗುವಂತೆ ಮಾಡುತ್ತವೆ. ಅದರ ಫಲಿತಾಂಶ ಭಿನ್ನವಾಗಿರುತ್ತದೆ. ಇವರು ಯಾವಾಗಲೂ ಮನಸ್ಸನ್ನು ಸಮಾಧಾನವಾಗಿ ಇರಿಸಿಕೊಳ್ಳಲು ಪ್ರಯತ್ನ ಮಾಡಬೇಕು. ಸದಾ ಚಟುವಟಿಕೆಯಿಂದ ಇರಲೇಬೇಕು. ಯಾವುದೇ ಕಾರಣಕ್ಕೂ ಸೋಮಾರಿತನ ಮಾಡಬಾರದು. ಬಿಂದಾಸ್ ಆಗಿ ಖರ್ಚು ಮಾಡದೆ ಉಳಿತಾಯದ ಕಡೆ ಗಮನ ನೀಡಬೇಕು.

ಬೆಳಗ್ಗೆ 8ರಿಂದ 10 ಇವರ ಸ್ನೇಹಿತರು, ಸಾಮಾಜಿಕ ಸಂಬಂಧಗಳನ್ನು ಆರ್ಥಿಕ ಸ್ಥಿತಿಯೇ ರೂಪಿಸುತ್ತದೆ. ಹಣವು ಇವರ ಜೀವನದಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತದೆ. ಇವರಿಗೆ ಸಿಗಬೇಕಾದ ಗೌರವ, ಸ್ಥಾನ-ಮಾನಗಳು ಸಿಗಲಿಲ್ಲ ಎಂದಾಗ ಒಂದಿಷ್ಟು ಬೇಸರ ಆಗುತ್ತದೆ. ಅದು ಸಹಜ. ಆದರೆ ಎಂಥ ಕಷ್ಟದ ದಿನಗಳನ್ನು ದಾಟಿಸುವ ಸಂಯಮವನ್ನು ಕಾಯ್ದುಕೊಂಡರೆ ಭವಿಷ್ಯ ಉತ್ತಮವಾಗಿ ಇರುತ್ತದೆ.

ಬೆಳಗ್ಗೆ 10ರಿಂದ ಮಧ್ಯಾಹ್ನ 12 ಇವರು ಯಾವುದೇ ಕ್ಷೇತ್ರದಲ್ಲಿ ಇದ್ದರೂ ಅದರಲ್ಲಿ ಯಶಸ್ಸು ಪಡೆಯುತ್ತಾರ. ಜೀವನದಲ್ಲಿ ತುಂಬ ದೊಡ್ಡ ಮಟ್ಟದ ಯಶಸ್ಸು ಕಾಣುತ್ತಾರೆ. ತಮ್ಮ ಸಾಧನೆಯ ಕಾರಣಕ್ಕೆ ಸನ್ಮಾನ ಪಡೆಯುತ್ತಾರೆ. ಆದರೆ ಇವರಿಗೆ ಸಿಗುವ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು, ಕಷ್ಟದಲ್ಲಿ ಸಿಲುಕಿಕೊಳ್ಳುತ್ತಾರೆ.

ಮಧ್ಯಾಹ್ನ 12ರಿಂದ 2 ಬಹಳ ಪ್ರಯಾಣಗಳನ್ನು ಮಾಡುತ್ತಾರೆ. ಅದು ತಮ್ಮ ಉದ್ಯೋಗ ಅಥವಾ ವೃತ್ತಿಗೆ ಸಂಬಂಧಿಸಿದಂತೆ ಆಗಿರಬಹುದು ಅಥವಾ ವೈಯಕ್ತಿಕವಾಗಿ ಇರಬಹುದು. ಬಹುತೇಕರು ಸುಂದರ ರೂಪು, ತೀಕ್ಷ್ಣ ಬುದ್ಧಿ, ಧಾರ್ಮಿಕ ಚಿಂತನೆ ಹೊಂದಿರುತ್ತಾರೆ. ತಮ್ಮ ಉದಾರತೆ ಕಾರಣಕ್ಕೆ ಜನರಿಂದ ಗೌರವ ಪಡೆಯುತ್ತಾರೆ. ವಯಸ್ಸು ಆದಂತೆ ಗೌರವ-ಮನ್ನಣೆ, ಸನ್ಮಾನ ದೊರೆಯುತ್ತದೆ. ಇವರ ಗುರಿ ದೊಡ್ಡ ಮಟ್ಟದ್ದಾಗಿರುತ್ತದೆ. ಜೀವನದುದ್ದಕ್ಕೂ ಹಲವರಿಂದ ಪ್ರೀತಿ-ಗೌರವ ಪಡೆಯುತ್ತಾರೆ.

ಮಧ್ಯಾಹ್ನ 2ರಿಂದ ಸಂಜೆ 4 ದುಡ್ಡು- ಕಾಸಿಗೆ ಸಂಬಂಧಿಸಿದ ವ್ಯವಹಾರಗಳನ್ನು ನೋಡಿಕೊಳ್ಳುವ ಹುದ್ದೆಯನ್ನು ವೃತ್ತಿಯಾಗಿ ಸ್ವೀಕರಿಸುವವರಲ್ಲಿ ಇವರೇ ಹೆಚ್ಚು. ಅಕೌಂಟಿಂಗ್, ಟ್ರಸ್ಟ್, ಸರ್ಕಾರಿ ಹಣಕಾಸು ಯೋಜನೆಗಳು, ಬ್ಯಾಂಕಿಂಗ್ ವಲಯ ಇತ್ಯಾದಿ ಹಣಕಾಸಿಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಇವರನ್ನು ಕಾಣಬಹುದು. ಇನ್ನು ನಿರ್ಧಾರ ಮಾಡುವಂಥ ಜವಾಬ್ದಾರಿಯುತ ಹುದ್ದೆ ಕೂಡ ನಿರ್ವಹಿಸುತ್ತಾರೆ. ಜೀವನದ ಒಂದು ಹಂತದಲ್ಲಿ ಗಂಭೀರವಾದ ಅಪಘಾತ ಅಥವಾ ಕಾನೂನು ವಿಚಾರಣೆಗಳನ್ನು ಎದುರಿಸಬೇಕಾಗುತ್ತದೆ.

ಸಂಜೆ 4ರಿಂದ 6 ಇವರ ಜೀವನದ ಉದ್ದಕ್ಕೂ ಬಹಳ ಜವಾಬ್ದಾರಿಗಳನ್ನು ಹೊರುತ್ತಾರೆ. ಮತ್ತು ಯಾವಾಗಲೂ ಇತರರಿಗಿಂತ ಪ್ರಾಶಸ್ತ್ಯ ಹೊಂದಿರುತ್ತಾರೆ. ಮದುವೆ ನಂತರದ ಜೀವನದಲ್ಲಿ ದೊಡ್ದ ಬದಲಾವಣೆ ಆಗುತ್ತದೆ. ದೊಡ್ಡ ಮಟ್ಟದಲ್ಲಿ ಗಟ್ಟಿಯಾದ ಪ್ರಯತ್ನ ಹಾಕದ ಹೊರತು ಸುಲಭವಾಗಿ ಏನನ್ನೂ ಬಿಟ್ಟುಕೊಡುವ ಪ್ರವೃತ್ತಿ ಇವರದಲ್ಲ. ಜನರ ಜತೆಗೆ ನಿರಂತರವಾಗಿ ಸಂಪರ್ಕದಲ್ಲಿ ಇರಬೇಕಾದ ವೃತ್ತಿಯನ್ನೇ ಬಹುತೇಕ ಇವರು ಆರಿಸಿಕೊಳ್ಳುತ್ತಾರೆ. ಎದುರಿನವರಿಗೆ ತಮ್ಮ ಅಭಿಪ್ರಾಯ ತಿಳಿಸಲು ಅವಕಾಶ ನೀಡುತ್ತಾರೆ.

ಸಂಜೆ 6ರಿಂದ ರಾತ್ರಿ 8 ಇವರ ಜೀವನದ ಬಹುತೇಕ ಘಟನೆಗಳು ಆಪ್ತರು, ಸ್ನೇಹಿತರ ಮೇಲೆ ಅವಲಂಬಿತ ಆಗಿರುತ್ತದೆ. ಮತ್ತು ಅವರ ಜತೆಗೆ ಹೇಗೆ ಸಂಬಂಧ, ಸ್ನೇಹ ನಿಭಾಯಿಸುತ್ತಾರೆ ಎಂಬುದು ಕೂಡ ಮುಖ್ಯವಾಗಿರುತ್ತದೆ. ಸಾಮಾಜಿಕ ಬದುಕಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿ, ಕೌಟುಂಬಿಕ ಬದುಕಿಗೆ ಎರಡನೇ ಪ್ರಾಮುಖ್ಯ ಕೊಡುತ್ತಾರೆ. ಜಾಗೃತ ಸ್ವಭಾವ ಹಾಗೂ ಕಠಿಣ ಪರಿಶ್ರಮದಿಂದ ದೀರ್ಘಾವಧಿಯಲ್ಲಿ ಅನುಕೂಲ ಪಡೆಯುತ್ತಾರೆ.

ರಾತ್ರಿ 8ರಿಂದ 10 ಇವರಿಗೆ ಕ್ರಿಯೇಟಿವ್ ಆಗಿ ಆಲೋಚಿಸುವ ಪ್ರತಿಭೆ ಹಾಗೂ ಕೌಶಲ ಇರುತ್ತದೆ. ಬಹಳ ಆಶಾವಾದಿಗಳಾಗಿರುತ್ತಾರೆ. ಎಂಥ ಸನ್ನಿವೇಶದಲ್ಲೂ ಭರವಸೆ ಕಳೆದುಕೊಳ್ಳುವುದಿಲ್ಲ. ಯಾವ ಕ್ಷೇತ್ರದಲ್ಲಿ ಬಹಳ ಆಸಕ್ತಿ ಇರುತ್ತದೋ ಅಂಥ ಕ್ಷೇತ್ರದಲ್ಲೇ ಕಾರ್ಯ ನಿರ್ವಹಿಸುವ ಅವಕಾಶ ದೊರೆಯುತ್ತದೆ. ಜೀವನದಲ್ಲಿ ದೊಡ್ಡ ಮಟ್ಟದ ಕೀರ್ತಿ ಹಾಗೂ ಯಶಸ್ಸು ಪಡೆಯುತ್ತಾರೆ. ಸಮಯಕ್ಕೆ ಸರಿಯಾಗಿ ಹಿತೈಷಿಗಳು ನೀಡುವ ಸಲಹೆಯನ್ನು ಪಾಲಿಸದೆ ಕೆಟ್ಟ ಪರಿಣಾಮಗಳನ್ನು ಎದುರಿಸುವಂತಾಗುತ್ತದೆ.

ರಾತ್ರಿ 10ರಿಂದ 12 ಇವರಿಗೆ ಸಂಪತ್ತು ಹಾಗೂ ಆಸ್ತಿಗೆ ಸಂಬಂಧಿಸಿದಂತೆ ಯಾವುದೇ ಚಿಂತೆ ಇರುವುದಿಲ್ಲ. ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವ ಸಾಧ್ಯತೆ ಜಾಸ್ತಿ. ಈ ಉದ್ಯಮದ ಮೂಲಕ ಶ್ರೀಮಂತರಾಗುತ್ತಾರೆ. ಜೀವನದ ಯಶಸ್ಸು, ಏರಿಳಿತಗಳಿಗೆ ಇವರನ್ನು ಹೊರತುಪಡಿಸಿ ಬೇರೆ ಯಾರೂ ಕಾರಣರಾಗಿರುವುದಿಲ್ಲ. ಆದ್ದರಿಂದ ಕೆಲವು ತೀರ್ಮಾನಗಳನ್ನು ತೆಗೆದುಕೊಳ್ಳುವಾಗ ಬಹಳ ಎಚ್ಚರಿಕೆಯಿಂದ ಇರಬೇಕು. ಇವರ ಎಲ್ಲ ಸಂಪತ್ತು ಒಂದೇ ಕೂಡ ಹೂಡಿಕೆ ಮಾಡುವುದು ಅಪಾಯಕರ.

ರಾತ್ರಿ 12ರಿಂದ 2 ಇವರಿಗೆ ಆಲೋಚನಾ ಮಟ್ಟ, ಬುದ್ಧಿಮತ್ತೆ ಅಪಾರವಾಗಿರುತ್ತದೆ. ಸಾಹಸಪ್ರಿಯರು ಹಾಗೂ ಸದಾ ಪ್ರಯಾಣ ಬಯಸುವಂಥವರು. ಮಾಧ್ಯಮಕ್ಕೆ ಸಂಬಂಧಿಸಿದ ವೃತ್ತಿಗಳಲ್ಲಿ ತೊಡಗಿಕೊಳ್ಳುತ್ತಾರೆ. ಸೋದರ-ಸೋದರಿಯರು, ನೆರೆ ಮನೆಯವರ ಪ್ರಭಾವ ಇವರ ಮೇಲೆ ಅಪಾರವಾಗಿರುತ್ತದೆ. ಇವರ ವ್ಯಕ್ತಿತ್ವ ರೂಪಿಸುವುದರಲ್ಲಿ ಅವರ ಪಾತ್ರ ಇರುತ್ತದೆ. ಆದ್ದರಿಂದ ಬಹಳ ಎಚ್ಚರಿಕೆಯಿಂದ ಇರಬೇಕು.

ರಾತ್ರಿ 2ರಿಂದ 4 ಈ ಸಮಯದಲ್ಲಿ ಹುಟ್ಟಿದ ವ್ಯಕ್ತಿಗಳು ಅಡುಗೆಗೆ ಸಂಬಂಧಿಸಿದ ವೃತ್ತಿ ಆಯ್ದುಕೊಳ್ಳುವ ಸಾಧ್ಯತೆ ಹೆಚ್ಚು. ಹಾಗಂತ ಬಾಣಸಿಗರೇ ಆಗಬೇಕು ಅಂತಿಲ್ಲ. ಒಟ್ಟಾರೆ ಆಹಾರಕ್ಕೆ ಸಂಬಂಧಿಸಿದ ಉದ್ಯಮದಲ್ಲಿ ತೊಡಗಿಕೊಳ್ಳಬಹುದು. ಅಥವಾ ದೊಡ್ಡ ಕುಟುಂಬದಲ್ಲಿ ಅಡುಗೆ ಮನೆ ಜವಾಬ್ದಾರಿ ವಹಿಸಿಕೊಳ್ಳಬೇಕಾಗಬಹುದು.

ಇದನ್ನೂ ಓದಿ: Numerology: ಯಾವುದೇ ತಿಂಗಳ 3, 12, 21 ಅಥವಾ 30ನೇ ತಾರೀಕಿನಂದು ಹುಟ್ಟಿದವರ ಸ್ವಭಾವ ಹೇಗಿರುತ್ತದೆ?

ಇದನ್ನೂ ಓದಿ: Unfaithful Zodiac: ಪ್ರೀತಿಯಲ್ಲಿ ನಂಬಿಕೆಗೆ ಅರ್ಹರಲ್ಲದ 6 ರಾಶಿಗಳ ಪುರುಷರು ಇವರು

ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ