Horoscope: ರಾಶಿ ಭವಿಷ್ಯ: ಯಾರ ಮೇಲೂ ದ್ವೇಷವನ್ನು ಸಾಧಿಸುವುದು ಬೇಡ

ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಭಾನುವಾರ (ಜುಲೈ 07) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

Horoscope: ರಾಶಿ ಭವಿಷ್ಯ: ಯಾರ ಮೇಲೂ ದ್ವೇಷವನ್ನು ಸಾಧಿಸುವುದು ಬೇಡ
ದಿನಭವಿಷ್ಯ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 07, 2024 | 12:45 AM

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಭಾನುವಾರ (ಜುಲೈ 07) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಮಾಸ, ಮಹಾನಕ್ಷತ್ರ: ಆರ್ದ್ರಾ, ಮಾಸ: ಆಷಾಢ, ಪಕ್ಷ: ಶುಕ್ಲ, ವಾರ: ಭಾನು, ತಿಥಿ: ದ್ವಿತೀಯಾ, ನಿತ್ಯನಕ್ಷತ್ರ: ಪುನರ್ವಸು, ಯೋಗ: ಧ್ರುವ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 10 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 04 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 05:00ರಿಂದ 07:05ರ ವರೆಗೆ, ಯಮಘಂಡ ಕಾಲ 12:38 ರಿಂದ 02:15ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:51 ರಿಂದ 05:28ರ ವರೆಗೆ.

ಧನು ರಾಶಿ: ನಿಮಗಾದ ವಂಚನೆಯನ್ನು ಸರಿ ಮಾಡಿಕೊಳ್ಳಲು ಕಾನೂನಿಗೆ ವಿರುದ್ಧವಾಗಿ ಹೋಗುವಿರಿ. ಇದನ್ನು ತಡೆಯುವವರ ಮೇಲೆ ಸಿಟ್ಟಾಗುವಿರಿ. ವ್ಯಾಪಾರದಲ್ಲಿ ಅಧಿಕಲಾಭವನ್ನು ಗಳಿಸಲಿದ್ದೀರಿ. ಸರ್ಕಾರಿ ಅಧಿಕಾರಿಗಳು ಸಂಕಷ್ಟದಲ್ಲಿ ಸಿಲುಕಿಕೊಳ್ಳುವರು. ಇಂದು ಪರರ ವಿಚಾರದಲ್ಲಿ ಹೆಚ್ಚು ಮನಸ್ಸು ಇರಲಿದೆ. ನಿಮ್ಮ ಸುಳ್ಳು ಇತರರಿಗೆ ಗೊತ್ತಾಗಲಿದೆ. ಸಮಯಾಭಾವದಿಂದ ನೀವು ಒದ್ದಾಡುವ ಸಾಧ್ಯತೆ ಇದೆ. ಯಾವುದನ್ನೂ ಇಂದು ನಿಮ್ಮಿಂದ ಮುಚ್ಚಿಡಲಾಗದು. ಸಂಗಾತಿಯ ಮುನಿಸನ್ನು ನೀವು ಸಮಾಧಾನ ಮಾಡುವಿರಿ. ಮಾತಿನ‌ ಮೇಲೆ ಯಾರನ್ನೂ ಅಳೆಯಬೇಡಿ. ಜೀವನ ನಿರ್ವಹಣೆಗೆ ಮತ್ತೊಂದು ವೃತ್ತಿಯನ್ನು ಆಶ್ರಯಿಸುವ ಸಂಭವವೂ ಇದೆ. ನಿಮ್ಮನ್ನು ನೀವು ಹೊಗಳಿಕೊಳ್ಳುವಿರಿ. ಆಪ್ತರ ಬಗ್ಗೆ ಇರುವ ನಕಾರತ್ಮಕ ಭಾವವನ್ನು ನೀವು ಅವರಿಗೆ ಹೇಳುವಿರಿ. ಭೂಮಿಯ ಉತ್ಪನ್ನದಿಂದ ಲಾಭವು ಸಿಗುವುದು. ಆತುರದಲ್ಲಿ ಯಾವ ನಿರ್ಧಾರವನ್ನೂ ಮಾಡದೇ ಯೋಚಿಸಿ ಮುಂದುವರಿಯಬೇಕಾಗುವುದು.

ಮಕರ ರಾಶಿ: ಇಂದು ನೀವು ಮಾಡುವ ಪ್ರಯಾಣದಿಂದ ಸುಖವಿರದು. ಹತಾಶೆಯಿಂದ ಹೊರಬಂದು ಒಳ್ಳೆಯ ಕಾರ್ಯದವನ್ನು ಮಾಡುವತ್ತ ಗಮನಹರಿಸಿ. ನಕಾರಾತ್ಮಕ ಭಾವನೆಗಳಿಗೆ ದಾರಿ ಮಾಡಿ ಕೊಡಬೇಡಿ. ಚಂಚಲಸ್ವಭಾವವನ್ನು ನಿಯಂತ್ರಿಸಲು ಕಷ್ಟವಾದೀತು.‌ ಅಲಂಕಾರಿಕಕ್ಕೆ ಹೆಚ್ಚು ಒತ್ತನ್ನು ನೀಡುವಿರಿ. ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಮನಸ್ಸು ಮಾಡುವರು. ತಾಯಿಯ ಸಂಪತ್ತನ್ನು ಪಡೆಯುವ ಸಾಧ್ಯತೆ ಇದೆ. ನಿಮ್ಮ ಕಾರ್ಯಗಳಿಗೆ ಪ್ರಶಂಸೆಯು ಸಿಗಬಹುದು. ನಿಮಗೆ ಮಾರ್ಗದರ್ಶನದ ಅಗತ್ಯವು ಹೆಚ್ಚಿದೆ. ಸರಳವಾಗಿ ಜೀವನವನ್ನು ನಡೆಸಲು ಇಂದು ಇಷ್ಟಪಡುವಿರಿ. ನಿವೃತ್ತಿಯ ಅಂಚಿನಲ್ಲಿದ್ದು ನಡತೆಯನ್ನು ಸರಿಯಾಗಿ ಇಟ್ಟುಕೊಳ್ಳಿ. ಮನೆಮಂದಿಯವರ ಜೊತೆ ಸಿಟ್ಟಗೊಂಡರೆ ನಿಮಗೇ ತೊಂದರೆಯಾದೀತು. ನಿಮ್ಮ ಇಂದಿನ ಕಾರ್ಯದಿಂದ ಕಛೇರಿಯಲ್ಲಿ ನಿರೀಕ್ಷೆ ಮೀರಿ ಪ್ರಶಂಸೆ ಸಿಗುವುದು.

ಕುಂಭ ರಾಶಿ: ಇಂದು ನಿಮ್ಮ ಯೋಜನೆಗೆ ಇಂದು ಎಲ್ಲವೂ ವಿರುದ್ಧವಾಗಬಹುದು. ಯಾರ ಮೇಲೂ ದ್ವೇಷವನ್ನು ಸಾಧಿಸುವುದು ಬೇಡ. ಮನಸ್ಸು ಕೆಡುತ್ತದೆಯಷ್ಟೇ. ಇನ್ನೊಬ್ಬರು ಆಡುವ ಮಾತುಗಳು ಅಸತ್ಯವೆನಿಸುವುದು. ಕಾರ್ಯದಲ್ಲಿ ವಿಳಂಬಗತಿ ಇರುವುದು. ನಂಬಿಕೆಯನ್ನು ಉಳಿಸಿಕೊಳ್ಳಲು ಬೇಕಾದ ಪ್ರಯತ್ನ ಮಾಡುವಿರಿ. ಯಶಸ್ಸಿಗೆ ಅಡ್ಡದಾರಿಯನ್ನು ಹುಡುಕಬೇಡಿ. ಸಂಬಂಧಗಳಲ್ಲಿ ಹದವು ತಪ್ಪಬಹುದು. ಸಂಗಾತಿಯ ಸ್ವಭಾವವನ್ನು ಅರ್ಥಮಾಡಿಕೊಳ್ಳಲು ಬಯಸುವಿರಿ. ಆಪ್ತವಲಯನ್ನು ಕಟ್ಟಿಕೊಳ್ಳುವುದು ಸುಲಭದ್ದಲ್ಲ. ಹೊಸ ವಿಷಯಗಳತ್ತ ಉತ್ಸಾಹವೇ ಇರಲಿದ್ದು, ಇದು ತಾತ್ಕಾಲಿಕ ಅಷ್ಟೇ. ನೀವು ಖರೀದಿಸುವ ಭೂಮಿಯ ದಾಖಲೆಯನ್ನು ಸಮಾಧಾನಚಿತ್ತದಿಂದ ಕೂಲಂಕಷವಾಗಿ ಪರಿಶೀಲಿಸಿ. ದಾಂಪತ್ಯದಲ್ಲಿನ ವಿರಸದಿಂದ ಮಾನಸಿಕ ಆರೋಗ್ಯವನ್ನು ಕೆಡಿಸುವುದು.

ಮೀನ ರಾಶಿ: ನಿಮ್ಮ ಜೀವನಕ್ಕೆ ಇಂದು ಯಾರಾದರೂ ಆಸರೆ ಬೇಕೆನಿಸಬಹುದು. ನಿಮ್ಮ ಬುದ್ಧಿ, ಮನಸ್ಸುಗಳಿಗೆ ಕೆಲಸವನ್ನು ಕೊಡಿ. ಸಂಗಾತಿಯ ಜೊತೆ ವಿವಾದವಾಗುವುದು. ಯಾವುದೇ ವಿವಾದವನ್ನು ಎಳೆದುಕೊಳ್ಳಬೇಡಿ. ಆತ್ಮವಿಶ್ವಾಸವನ್ನು ಕಳೆದುಕೊಳ್ಳದೇ ಮುಂದೆ ಸಾಗಿರಿ. ಇಷ್ಟಪಟ್ಟವರ ಜೊತೆ ಸಮಯವನ್ನು ಕಳೆಯಬಯಸುವಿರಿ. ಮಕ್ಕಳ ವಿಚಾರದಲ್ಲಿ ನೀವು ಅಸ್ವಂತ್ರರು. ನಿಮ್ಮ ಮಾತು ಇತರರಿಗೆ ಇಷ್ಟವಾಗದೇ ಇದ್ದೀತು. ಒಳ್ಳೆಯದರ ನಿರೀಕ್ಷೆಯಲ್ಲಿ ನೀವು ಇದ್ದು, ದಿನಾಂತ್ಯದಲ್ಲಿ ಸಿಗುವ ಸಾಧ್ಯತೆ ಇದೆ. ಧಾರ್ಮಿಕ ಆಚರಣೆಗಳನ್ನು ಶ್ರದ್ಧೆಯಿಂದ ಮಾಡಲು ಇಷ್ಟಪಡುವಿರಿ. ಇಂದಿನ ಕಾರ್ಯವನ್ನು ಮುಂದೂಡುವುದು ಬೇಡ. ನಿಮ್ಮ ಗುಣಗಳನ್ನು ಇತರರು ಆಡಿಕೊಳ್ಳಬಹುದು. ಪೋಷಕರನ್ನು ಕಡೆಗಣಿಸಿದ್ದು ನಿಮಗೆ ಪಾಪಪ್ರಜ್ಞೆ ಕಾಡಬಹುದು.

-ಲೋಹಿತ ಹೆಬ್ಬಾರ್ – 8762924271 (what’s app only)

ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ
Video: ದಕ್ಷಿಣ ಕೊರಿಯಾದಲ್ಲಿ 170 ಪ್ರಯಾಣಿಕರಿದ್ದ ವಿಮಾನ ಪತನ
Video: ದಕ್ಷಿಣ ಕೊರಿಯಾದಲ್ಲಿ 170 ಪ್ರಯಾಣಿಕರಿದ್ದ ವಿಮಾನ ಪತನ