Horoscope: ದಿನಭವಿಷ್ಯ: ನೀವೇ ನಿಮ್ಮ ಶತ್ರುಗಳನ್ನು ಹೆಚ್ಚು ಮಾಡಿಕೊಳ್ಳುವಿರಿ
ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದರೆ. ಜೂ.10 ರ ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಭಾನುವಾರ(ಜೂನ್ 10) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ವೃಷಭ ಮಾಸ, ಮಹಾನಕ್ಷತ್ರ: ಮೃಗಶಿರಾ, ಮಾಸ: ಜ್ಯೇಷ್ಠಾ, ಪಕ್ಷ: ಶುಕ್ಲ, ವಾರ: ಸೋಮ, ತಿಥಿ: ತೃತೀಯಾ, ನಿತ್ಯನಕ್ಷತ್ರ: ಪುನರ್ವಸು, ಯೋಗ:ವೃದ್ಧಿ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 04 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 00 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 09:41 ರಿಂದ 09:18ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 10:55 ರಿಂದ 12:32ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:09 ರಿಂದ 03:46ರ ವರೆಗೆ.
ಸಿಂಹ ರಾಶಿ: ಸಂಬಂಧದಿಂದ ಭೂಮಿಯ ಲಾಭವು ಆಗುವುದಾದರೂ ಅದನ್ನು ಪರಿಶೀಲಿಸಿ ಒಪ್ಪಿಕೊಳ್ಳಿ. ಹಿತಶತ್ರುಗಳಿಂದ ನೀವು ಹತಾಶರಾದಂತೆ ತೋರುವುದು. ನಿಮ್ಮ ಎಚ್ಚರಿಕೆಯಲ್ಲಿ ನೀವಿರಬೇಕು. ನೀವು ಇಷ್ಟ ಪಟ್ಟಿದ್ದು ಆಗಿಲ್ಲವೆಂಬ ಆಲೋಚನೆ ಬಲವಾಗಿರುವುದು. ಕಛೇರಿಯಲ್ಲಿ ಇಂದು ನಿಮ್ಮ ಜವಾಬ್ದಾರಿಗಳನ್ನು ಪೂರೈಸಿಕೊಂಡು ನಿಶ್ಚಿಂತರಾಗಿರುವಿರಿ. ಬಹಳ ದಿನದ ಭೂಮಿಯ ವ್ಯವಹಾರದ ಕಲಹದಿಂದ ನಿಮಗೆ ಜಯವಾಗುವ ಸಾಧ್ಯತೆ ಇದೆ. ನಿಮ್ಮ ಮಕ್ಕಳ ಮೇಲೆ ಗಮನವಿರಲಿ. ಅನಿರೀಕ್ಷಿತ ಹಣದ ವ್ಯಯದಿಂದ ಸ್ವಲ್ಪ ಚಂಚಲರಾಗುವಿರಿ. ಮೊದಲ ವೇತನವನ್ನು ಪಡೆದು ಖುಷಿ ಪಡುವಿರಿ. ಖರ್ಚನ್ನು ನೀವು ಸ್ನೇಹಿತರ ಜೊತೆ ಸಮವಾಗಿ ಹಂಚಿಕೊಳ್ಳುವಿರಿ. ಯಾರನ್ನೂ ಮಾನಸಿಕವಾಗಿ ಹಿಂಸಿಸುವುದು ಬೇಡ. ವ್ಯವಹಾರಗಳ ವಿಷಯದಲ್ಲಿ ಅದೃಷ್ಟವಂತರಾಗಿರುವಿರಿ. ನೀವು ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುವಿರಿ.
ಕನ್ಯಾ ರಾಶಿ: ಇಂದು ನಿಮಗೆ ಯಾರಿಂದಲಾದರೂ ಯೋಗ್ಯ ಸಂಗಾತಿಯ ಮಾಹಿತಿಗಳು ಸಿಗುವುದು. ಕುರುಡು ತನದಿಂದ ಎಲ್ಲಿಯೋ ಹೂಡಿಕೆ ಮಾಡುವುದನ್ನು ತಪ್ಪಿಸಿ. ನ್ಯಾಯಾಲಯದಲ್ಲಿ ನಿಮ್ಮ ಪರವಾಗಿ ಗೆಲುವನ್ನು ಕಾಣಲು ಸೂಕ್ತ ಮಾಹಿತಿಯ ಕೊರತೆ ಕಾಣಿಸುವುದು. ವಾಹನದಿಂದ ಭಯಗೊಂಡ ನೀವು ಸಂಚಾರವನ್ನು ನಿಲ್ಲಿಸುವಿರಿ. ಸ್ನೇಹಿತರ ಜೊತೆ ಪುಣ್ಯಕ್ಷೇತ್ರಗಳಿಗೆ ಹೋಗಬಹುದು. ಮನೆಯಲ್ಲಿ ಗೊತ್ತಿಲ್ಲ ಕೆಲಸವನ್ನು ಮಾಡಲು ಹೋಗಿ ಅಪಮಾನವಾಗಲಿದೆ. ಸಂಗಾತಿಯ ಮುನಿಸನ್ನು ತಣ್ಣಗಾಗಿಸಿ. ಕಾರಣವನ್ನು ತಿಳಿದು ಸಮಾಧಾನ ಮಾಡಿ. ಈ ಸಂದರ್ಭದಲ್ಲಿ ಮರುಮಾತನಾಡದೇ ಇರುವುದು ಒಳ್ಳೆಯದು. ವಿದೇಶದಲ್ಲಿರುವ ವಿದ್ಯಾರ್ಥಿಗಳಿಗೆ ಮನೆಯ ನೆನಪಾಗಬಹುದು. ಪಿತ್ತ ಮತ್ತು ಕಫಗಳ ಸಂಬಂಧದಿಂದ ರೋಗಗಳು ಬರಬಹುದು. ಆಹಾರವನ್ನು ಸರಿಯಾಗಿ ಸ್ವೀಕರಿಸಿ ಅದನ್ನು ಸರಿಮಾಡಿಕೊಳ್ಳಿ. ಹೊಸತನ್ನು ಏನನ್ನಾದರೂ ಮಾಡಬೇಕೆಂಬ ಬಯಕೆ ಬರುವುದು.
ತುಲಾ ರಾಶಿ: ಇಂದು ಮಾಡುವ ಕಾರ್ಯವನ್ನು ನೀವು ಬಹಳ ಅಲಕ್ಷ್ಯದಿಂದ ಮಾಡುವಿರಿ. ಎಲ್ಲದೂ ಗೊತ್ತು ಎಂಬ ಗತ್ತು ಎದ್ದು ಕಾಣಿಸುವುದು. ಆಲಂಕಾರಿಕ ವಸ್ತುಗಳನ್ನು ಹೆಚ್ಚು ಖರೀದಿಸುವಿರಿ. ಬಟ್ಟೆ ವ್ಯಾಪಾರಿಗಳಿಗೆ ಹೆಚ್ಚಿನ ಲಾಭವಾಗಲಿದೆ. ಔಷಧೋಪಚಾರಗಳು ನಿಮ್ಮ ಆರೋಗ್ಯವನ್ನು ಕಾಪಾಡದೇ ದೇವರ ಮೊರೆ ಹೋಗುವಿರಿ. ನಿಮ್ಮ ಸೌಂದರ್ಯದ ಬಗ್ಗೆ ನಿಮಗಿರುವ ಕಾಳಜಿಗೆ ಇಂದು ಹೆಚ್ಚು ಸಮಯವನ್ನು ಅದಕ್ಕಾಗಿ ಮೀಸಲಿಡುವಿರಿ. ಕಾಳಜಿ ಮಾಡಿದಷ್ಟೂ ಕಳೆದುಕೊಳ್ಳುವ ಸಾಧ್ಯತೆ ಇದೆ. ಸಂಗಾತಿಯನ್ನು ಸ್ವತಂತ್ರವಾಗಿ ಬಿಡಿ. ಅವರ ಭಾವನೆಗಳಿಗೆ ನೋವನ್ನು ತರಲಬೇಡಿ. ಹಣ ಸಂಪಾದನೆಗೆ ಉತ್ತಮವಾದ ಮಾರ್ಗವು ನಿಮಗೆ ಗೊತ್ತಾಗಲಿದೆ. ದೇವಾಲಯಕ್ಕೆ ಹೋಗಿ ಸ್ವಲ್ಪ ಸಕಾರಾತ್ಮಕ ಅಂಶಗಳನ್ನು ಪಡೆದುಕೊಳ್ಳಿ. ಭಾವನೆಗೆ ಪೆಟ್ಟುಬೀಳುವ ಸಾಧ್ಯತೆ ಇದೆ. ಎಲ್ಲರದ್ದೂ ಒಂದಾದರೆ ನಿಮ್ಮದೇ ಒಂದು ದಾರಿಯಾಗಲಿದೆ.
ವೃಶ್ಚಿಕ ರಾಶಿ: ನಿಮ್ಮ ಆದಾಯವನ್ನು ಹೆಚ್ಚು ಮಾಡಿಕೊಳ್ಳುವ ಬಗ್ಗೆ ಆಪ್ತರ ಸಲಹೆ ಅವಶ್ಯಕ. ಹೂಡಿಕೆಯ ಮೇಲೆ ನಿಮಗೆ ಪೂರ್ಣ ವಿಶ್ವಾಸ ಬರಬಹುದು. ಹೊಸ ವಿಚಾರಗಳನ್ನು ತಿಳಿದುಕೊಳ್ಳುವ ಹಂಬಲವಿರಲಿದೆ. ಆರೋಗ್ಯವು ಹದ ತಪ್ಪಿ ಬಹಳ ಹಿಂಸೆಯನ್ನು ಅನುಭವಿಸುವಿರಿ. ಆಪ್ತರಿಂದ ನೀವು ದೂರಾಗುವಿರಿ. ನಿಮ್ಮ ಮೇಲೆ ಆಪಾದನೆಗಳು ಬರಬಹುದು. ಅತಿಯಾದ ಹಠದ ಸ್ವಭಾವದಿಂದ ನೀವು ಒಂಟಿಯಾಗುವಿರಿ. ಸರ್ಕಾರಿ ಉದ್ಯೋಗಿಗಳಿಗೆ ಉನ್ನತ ಪದವಿಗೆ ಅವಕಾಶಗಳು ಸಿಗಲಿದೆ. ನಿಮ್ಮ ಯಶಸ್ಸಿನ ಗುಟ್ಟನ್ನು ಬಿಟ್ಟುಕೊಡಬೇಡಿ. ನಿಮ್ಮನ್ನು ನೋಡುವ ದೃಷ್ಟಿಯೇ ಬದಲಾದೀತು. ನೀವೇ ನಿಮ್ಮ ಶತ್ರುಗಳನ್ನು ಹೆಚ್ಚು ಮಾಡಿಕೊಳ್ಳುವಿರಿ. ನಿಮ್ಮವರನ್ನು ಸಂತೋಷಗೊಳಿಸುವಿರಿ. ಇಂದು ನಿಮಗೆ ಕಷ್ಟವಾದರೂ ತಾಳ್ಮೆಯಿಂದ ವ್ಯವಹರಿಸಿ. ಸ್ನೇಹಿತರ ಜೊತೆ ಹೆಚ್ಚು ಮೋಜಿನಲ್ಲಿ ಸಮಯವನ್ನು ಕಳೆಯುವಿರಿ. ನಿಮ್ಮ ಸಂಗಾತಿಯ ಬೆಂಬಲವು ಖುಷಿ ಕೊಡುವುದು.