Horoscope Today June 6, 2024: ಗುರುವಾರದ ದಿನಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ ನೋಡಿ

2024 ಜೂನ್ 6 ದಿನ ಭವಿಷ್ಯ: ಗುರುವಾರದಂದು 12 ರಾಶಿಗಳ ರಾಶಿಫಲ ಹೇಗಿದೆ ಎನ್ನುವುದು ತಿಳಿದುಕೊಳ್ಳಿ. ಈ ದಿನ ಯಾರಿಗೆ ಯೋಗ, ಶುಭ ಸಂಯೋಗ, ಗ್ರಹಗಳ ಸ್ಥಾನ ಬದಲಾವಣೆಗಳಿಂದ ಮೇಷದಿಂದ ಮೀನ ರಾಶಿವರೆಗಿನ ರಾಶಿ ಭವಿಷ್ಯ ಹೇಗಿರಲಿದೆ? ಶುಭಕಾಲ ಹೇಗಿದೆ? ಯಾವ ರಾಶಿಯವರಿಗೆ ಅದೃಷ್ಟ ಕಾದಿದೆ ಎಂಬಿತ್ಯಾದಿ ಮಾಹಿತಿಯನ್ನು ನಿತ್ಯ ಭವಿಷ್ಯದಿಂದ ತಿಳಿಯಿರಿ.

Horoscope Today June 6, 2024: ಗುರುವಾರದ ದಿನಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ ನೋಡಿ
ರಾಶಿ ಭವಿಷ್ಯ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ರಮೇಶ್ ಬಿ. ಜವಳಗೇರಾ

Updated on: Jun 05, 2024 | 7:49 PM

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಗುರುವಾರ (ಜೂನ್ 0​6) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ರೋಹಿಣೀ, ಮಾಸ: ವೈಶಾಖ, ಪಕ್ಷ: ಕೃಷ್ಣ, ವಾರ: ಗುರು, ತಿಥಿ: ಚತುರ್ದಶೀ, ನಿತ್ಯನಕ್ಷತ್ರ: ಕೃತ್ತಿಕಾ, ಯೋಗ: ಸುಕರ್ಮ, ಕರಣ: ಶಕುನಿ, ಸೂರ್ಯೋದಯ ಬೆಳಗ್ಗೆ 06 ಗಂಟೆ 03 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 59 ನಿಮಿಷಕ್ಕೆ, ರಾಹು ಕಾಲ 14:08ರಿಂದ 15:45ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 06:04ರಿಂದ ಬೆಳಗ್ಗೆ 07:41ರ ವರೆಗೆ, ಗುಳಿಕ ಕಾಲ ಬೆಳಗ್ಗೆ 09:18 ರಿಂದ 10:55ರ ವರೆಗೆ.

ಮೇಷ ರಾಶಿ :ಎಂದೋ ಭೂಮಿಯಲ್ಲಿ ಊರಿದ ಗಿಡಗಳು, ಬೆಳೆದು ಮರವಾಗಿ ಫಲವನ್ನು ಮತ್ತೆಂದೋ ಕೊಡುವಂತೆ, ಎಂದೋ ಮಾಡಿದ ಸತ್ಕಾರ್ಯ ಇಂದು ಫಲ ಕೊಡುವುದು ನಿಮಗೆ. ಮಕ್ಕಳಿಂದ ನಿರಾಸೆಯಾದರೂ ಲಘುವಾಗಿ ಪರಿಗಣಿಸುವಿರಿ. ಕುಟುಂಬದಲ್ಲಿ ಎಲ್ಲರ ಮನಸ್ಸನ್ನು ಗೆಲ್ಲುವಿರಿ. ಹಿರಿಯರ ಉತ್ತಮ ಆರೋಗ್ಯ ನಿಮ್ಮಆನಂದಕ್ಕೆ ಕಾರಣವಾಗುತ್ತದೆ. ಮನೆಗೆ ಬರುವ ಎಲ್ಲರನ್ನೂ ಪ್ರೀತಿಯಿಂದ ಸ್ವಾಗತಿಸಿ. ಹಣಕಾಸಿನ ಅನುಕೂಲತೆಯಿಂದ ನೆಮ್ಮದಿ ಗಳಿಸುವಿರಿ. ಉದ್ಯೋಗ ಸ್ಥಳದಲ್ಲಿ ನಿರಾಸೆಯ ಪ್ರತಿಕ್ರಿಯೆ ಕಂಡುಬರುತ್ತದೆ. ಪಾಲುದಾರಿಕೆ ವ್ಯಾಪಾರದಲ್ಲಿ ಎಚ್ಚರಿಕೆ ಇರಬೇಕು. ಸ್ವಭಾವವು ಬಹಳ ತೀವ್ರವಾಗಿ ಇರಲಿದೆ. ಯಾರ ಮಾತನ್ನೂ ಕೇಳವ ಸಹನೆ ಇರದು.‌ ಪ್ರತಿಸ್ಪರ್ಧಿಗಳಿಗೆ ಸರಿಯಾದ ಸ್ಪರ್ಧೆಯನ್ನು ಕೊಡುವಿರಿ. ನಿಮ್ಮ ನಿರ್ಧಾರಗಳೇ ಅಂತಿಮವಾಗಬೇಕು ಎನ್ನುವ ಮನಃಸ್ಥಿತಿ ಇರುವುದು. ಮಾನಸಿಕವಾಗಿ ಉತ್ಸಾಹವು ಕಡಿಮೆ ಇರುವುದು. ನಿಮಗೆ ಇಷ್ಟವಾಗದ್ದನ್ನು ನಿರ್ದಾಕ್ಷಿಣ್ಯವಾಗಿ ಅಲ್ಲಗಳೆಯುವಿರಿ.

ವೃಷಭ ರಾಶಿ :ಅದೃಷ್ಟವನ್ನು ಹುಡುಕುತ್ತಿದ್ದರೆ ಅದಕ್ಕೆ ನಿಮ್ಮ ಅನುವರ್ತಿತ್ವವೂ ಇರಲಿ. ಅತಿಯಾದ ಪ್ರಯಾಣದಿಂದ ಆಯಾಸ ಮತ್ತು ಒತ್ತಡಗಳು ನಿರ್ಮಾಣವಾಗುವುದು. ಕಛೇರಿಯಲ್ಲಿ ನಿಮ್ಮ ಕೆಲಸಗಳನ್ನು ಕಂಡು ನಿಮ್ಮನ್ನು ಪ್ರಶಂಸಿಸುವರು‌. ಆತ್ಮೀಯರ ಜೊತೆಯಾತ ಮನದ ನೋವನ್ನು ಕಡಿಮೆ ಮಾಡಿರಿ. ಕೋಪವನ್ನು ಎಲ್ಲರೊಂದಿಗೆ ತೋರುವುದಿಲ್ಲ. ನಿಮ್ಮದಲ್ಲದ ತಪ್ಪಿಗೆ ದಂಡ ತೆರುವಿರಿ. ಕಾನೂನಿನ ಹೋರಾಟದಲ್ಲಿ ಜಯ ಗಳಿಸುವಿರಿ. ಪ್ರತಿಯೊಂದು ಕ್ಷಣದಲ್ಲೂ ನಿಮ್ಮ ಸಂಗಾತಿಯ ಸಹಕಾರ ದೊರೆಯುತ್ತದೆ. ಆಲಸ್ಯದಿಂದ ಎದ್ದಾಗ ಮಾತ್ರ ನೀವು ನಿಮ್ಮ ಅನೇಕ ಕಾರ್ಯಗಳನ್ನು ಸಮಯಕ್ಕೆ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಕುಟುಂಬ ಸದಸ್ಯರ ಅಗತ್ಯತೆಗಳ ಬಗ್ಗೆ ನೀವು ಗಮನ ಹರಿಸಬೇಕು. ನಿಮ್ಮ ಪ್ರತಿಭೆಗೆ ಯೋಗ್ಯವಾದ ಕಾರ್ಯವು ಸಿಗುವುದು. ಭೂಮಿಯ ವ್ಯವಹಾರವನ್ನು ಒಬ್ಬೊಂಟಿಯಾಗಿ ನಿರ್ವಹಿಸುವಿರಿ. ಬೇಕಾದಾಗ ಬಳಸಿಕೊಳ್ಳುವ ಪ್ರವೃತ್ತಿಯನ್ನು ಬಿಡುವುದು ಉತ್ತಮ. ಸಹೋದ್ಯೋಗಿಗಳಿಂದ ಅನಿವಾರ್ಯವಾಗಿ ಸಹಾಯವನ್ನು ಪಡೆಯುವಿರಿ.‌

ಮಿಥುನ ರಾಶಿ :ಇಂದು ನೀವು ನಿಚ್ಚಲ ಮನಸ್ಸಿನಿಂದ ವಿಚಲಿತರಾಗುವುದು ಬೇಡ. ವಾಸ್ತವಕ್ಕೆ ಹತ್ತಿರದ ಕಲ್ಪನೆಯು ಇರಲಿ. ಶೈಕ್ಷಣಿಕವಾದ ಪ್ರಗತಿಯನ್ನು ಸಾಧಿಸಬೇಕಾಗಬಹಿದು. ನಿಮ್ಮ ಕಿವಿ ಮಾತುಗಳು ಅನೇಕರಿಗೆ ಸ್ಫೂರ್ತಿಯಾಗಬಹುದು. ಸಮಯಕ್ಕೆ ತಕ್ಕಂತೆ ವರ್ತಿಸುವ ಕಾರಣ ಸಂತೃಪ್ತಿಯ ಜೀವನ ನಡೆಸುವಿರಿ. ಸಂಗಾತಿಯ ಅವಶ್ಯಕತೆಗಳನ್ನು ಖುಷಿಯಿಂದ ಪೂರೈಸುವಿರಿ. ಮಕ್ಕಳ ಮೇಲಿನ ಪ್ರೀತಿಯಿಂದ ಮನದ ನೋವನ್ನು ಮರೆಯುವಿರಿ. ಯಾವುದನ್ನೂ ಗೊಂದಲ ಮಾಡಿಕೊಳ್ಳದೇ ತೀರ್ಮಾನಕ್ಕೆ ಬರುವುದು ಉಚಿತ. ಉದ್ಯೋಗಕ್ಕೆ ಸಂಬಂಧಿಸಿದ ಸಮಸ್ಯೆಗಳು ಶಾಶ್ವತ ಪರಿಹಾರದಿಂದ ಮರೆಯರಾಗುತ್ತದೆ. ಸಕಾರಾತ್ಮಕ ವಿಷಯಗಳು ವೇಗವನ್ನು ಪಡೆಯುತ್ತವೆ.‌ ಮಕ್ಕಳಿಗಾಗಿ ನೀವು ಹೊಸ ವಾಹನವನ್ನು ಖರೀದಿಸಬಹುದು. ನಿಮ್ಮ ವ್ಯವಹಾರದಲ್ಲಿ ಪಾಲುದಾರರನ್ನಾಗಿ ಮಾಡಲು ನೀವು ಯೋಚಿಸುತ್ತಿದ್ದರೆ, ಈಡೇರುತ್ತದೆ. ಹಳೆಯ ಯೋಜನೆಗಳಿಗೆ ಪುನಶ್ಚೇತನವನ್ನು ನೀಡುವಿರಿ.

ಕರ್ಕಾಟಕ ರಾಶಿ :ನಿಮ್ಮೊಳಗಿದ್ದ ಮೋಡಗಟ್ಟಿದ ವಾತಾವರಣ, ಕರಗಿ, ನೀರಾಗಿ ಪ್ರವಾಹವೂ ಆಗಬಹುದು. ಮಕ್ಕಳಿಂದ ಮಾನಸಿಕ ಹಿಂಸೆ ಎದುರಾದೀತು. ಖರ್ಚು ಹೆಚ್ಚಾಯಿತು ಎನ್ನುವ ಭಯವಿರುವುದು. ನಿಮ್ಮ ಆಚಾರ ವಿಚಾರಗಳು ಮಕ್ಕಳ ಮೇಲೆ ಪರಿಣಾಮ ಬೀರಲಿದೆ. ಕುಟುಂಬದ ಒಗ್ಗಟ್ಟಿಗೆ ಧಕ್ಕೆ ಉಂಟಾಗುವ ಘಟನೆಯೊಂದು ನಡೆಯಲಿದೆ. ಮುಂಗೋಪದಿಂದ ವರ್ತಿಸುವ ಕಾರಣ ಉದ್ಯೋಗಾವಕಾಶವೊಂದು ಕೈಜಾರಲಿದೆ. ಶುದ್ಧ ಮನಸ್ಸಿನಂತೆ ತೋರಿದರೂ ಅಂತರಂಗದಲ್ಲಿ ಕಲ್ಮಶವು ಹೆಚ್ಚಿರುವುದು. ವಿವಾಹದ ಮಾತುಕತೆಗಳನ್ನು ನಡೆಸಲು ದೂರದ ಊರಿಗೆ ಪ್ರಯಾಣ ಮಾಡುವಿರಿ. ಜಾಣ್ಮೆಯಿಂದ ನಿಮ್ಮ ಕೆಲಸವನ್ನು ಬೇಗ ಪೂರ್ಣ‌ಮಾಡುವಿರಿ. ವಿವಾದಕ್ಕಾಗಿಯೇ ಮಾತನಾಡುವುದು ಬೇಡ. ಉದ್ಯೋಗದಲ್ಲಿ ಹೊಸ ವಿಚಾರಗಳನ್ನು ನೀವು ಕಲಿಯಬೇಕಾಗುವುದು. ಕಳೆದುಕೊಂಡಷ್ಟು ವೇಗವಾಗಿ ಉಳಿಸಿಕೊಳ್ಳುವುದು ಕಷ್ಟ.

ಸಿಂಹ ರಾಶಿ :ಇಂದು ಇನ್ನೊಬ್ಬರ ಸುಖವನ್ನು ಕಸಿದುಕೊಂಡು ಯಾವ ಸುಖವನ್ನು ಪಡೆಯಬಹುದು? ನಿಮ್ಮ ಬಗೆಗಿನ ಸದ್ಭಾವಗಳು ಬದಲಾದಾವು. ಸಣ್ಣ ಪುಟ್ಟ ವಿಷಗಳಿಗೂ ಕೋಪಗೊಳ್ಳುವಿರಿ. ಪಾಲುದಾರಿಕೆಯ ವ್ಯಾಪಾರದಲ್ಲಿ ಹಣ ಹೂಡಿ ಉತ್ತಮ ಲಾಭ ಗಳಿಸುವಿರಿ. ನಿಮ್ಮ ಹಣಕಾಸಿನ ವ್ಯವಹಾರದಲ್ಲಿ ಬೇರೆಯವರ ಹಸ್ತಕ್ಷೇಪದಿಂದ ತೊಂದರೆ ಉಂಟಾಗಬಹುರು. ಆತ್ಮೀಯರೊಬ್ಬರ ಜೊತೆ ವಿವಾದ ಉಂಟಾಗಬಹುದು. ನಿಮ್ಮ ಕಾರ್ಯಕ್ಷೇತ್ರದಲ್ಲಿ ಅತಿಯಾದ ಕಾರ್ಯದಿಂದ ನಿಮಗೆ ತೊಂದರೆಯಾದೀತು. ನಿಮ್ಮ ದೊಡ್ಡಸ್ತಿಕೆಯನ್ನು ಬಿಟ್ಟು ವ್ಯವಹರಿಸಿ. ಮನೆಯಲ್ಲಿಯೇ ವಾಸಿಸುವವರು ಸಣ್ಣ ಆದಾಯದ ಬಗ್ಗೆ ಆಲೋಚಿಸುವರು. ಯಾರಾದರೂ ಮುಖಸ್ತುತಿಯನ್ನು ಮಾಡಬಹುದು. ಮುಜುಗರವೂ ನಿಮಗೆ ಆದೀತು. ಅತಿಯಾದ ನಂಬಿಕೆಯು ನಿಮ್ಮ ಮೌಲ್ಯಯುತ ವಸ್ತುಗಳನ್ನು ಕಳೆದುಕೊಳ್ಳುವಂತೆ ಮಾಡುವುದು.

ಕನ್ಯಾ ರಾಶಿ :ಇಂದು ಮನೆಯ ಸಣ್ಣ ಖರ್ಚುಗಳೂ ದೊಡ್ಡದಾದ ಮೊತ್ತವನ್ನು ಕಳೆಯುವುದು. ಎಲ್ಲ ಕಾರ್ಯದಿಂದ ಹಣ ಬರುತ್ತದೆ ಎಂದೇನಿಲ್ಲ. ನಿಮ್ಮ ಜೀವನವನ್ನು ನೀವೇ ಲಘುವಾಗಿ ಕಾಣುವುದು ಬೇಡ. ನಿಮ್ಮ ಮಾನಸಿಕ ಸ್ಥಿತಿ ಬಲಾಢ್ಯವಾಗಿರಲಿ. ಬೇರೆಯವರ ತಪ್ಪನ್ನು ಎಲ್ಲರಿಗೂ ತಿಳಿಯುವಂತೆ ಮಾಡುವಿರಿ. ಸದಾಕಾಲ ಓಡಾಟದಲ್ಲಿ ಮಗ್ನರಾಗುವಿರಿ. ಮಾಡುವ ತಪ್ಪನ್ನು ಮರೆಮಾಚುವಿರಿ. ಹಣಕಾಸಿನ ವ್ಯವಹಾರದಲ್ಲಿ ಅಸಹಜ ನಿಲುವು ತಾಳುವಿರಿ. ನಿಮ್ಮ ನಡೆಯು ಎಲ್ಲರಿಗೂ ಒಪ್ಪಿಗೆಯಾಗುವಂತೆ ಇರಲಿ. ಹೊಗಳಿಕೆಯನ್ನು ನಂಬುವಿರಿ. ಅತಿಯಾದ ಖರ್ಚು ವೆಚ್ಚಗಳನ್ನು ಕಡಿತಗೊಳಿಸಿ. ನಿಮ್ಮ ಆದಾಯವು ಮೊದಲಿಗಿಂತ ಉತ್ತಮವಾಗಿದ್ದು ಅದನ್ನು ಒಂದು ಕಡೆ ಸ್ಥಿರವಾಗಿಸಿಕೊಳ್ಳಿ. ಹಿರಿಯರು ನಿಮ್ಮ‌ ಬಗ್ಗೆ ವ್ಯಂಗ್ಯವಾಗಿ ಮಾತನಾಡಬಹುದು. ಉದ್ಯೋಗದ ಕಾರಣ ದೂರ ಪ್ರಯಾಣ ಮಾಡಲು ಇಷ್ಟವಾಗದು. ರಾಜಕೀಯವಾಗಿ ಹಿನ್ನಡೆಯಾಗಬಹುದು. ನಿಮ್ಮದಾದ ದ್ವೀಪವನ್ನು ಮಾಡಿಕೊಂಡು ಇರುವುದು ಕಷ್ಟ.

ತುಲಾ ರಾಶಿ :ನೀವು ಅನುಮಾನ ಬರುವಂತಹ ವರ್ತನೆಯನ್ನು ತೋರಿಸುವಿರಿ. ಸ್ವಲ್ಪ ಕಾಲದ ಏನನ್ನೂ ಯೋಚಿಸದೇ ಇರಲು ಪ್ರಯತ್ನಿಸಿ. ಮನಸ್ಸಿನ ಶಕ್ತಿ ದ್ವಿಗಣವಾಗುವುದು. ನಕಾರಾತ್ಮಕತೆ ಆಲೋಚನೆಗಳೂ ದೂರವಾಗುವುದು. ಯಾವುದೋ ಉದ್ದೇಶಕ್ಕೆ ಇಟ್ಟ ಸಂಪತ್ತು ಮತ್ಯಾವುದಕ್ಕೋ ಖರ್ಚಾಗಲಿದೆ. ಆತುರದಿಂದ ಉದ್ಯೋಗ ಬದಲಾಯಿಸಿ ಒತ್ತಡಕ್ಕೆ ಒಳಗಾಗುವಿರಿ. ಕೆಲಸಕ್ಕೆ ಮೊದಲ ಆದ್ಯತೆ ನೀಡುವಿರಿ. ನಿಮ್ಮ ಬಗ್ಗೆ ಕುಟುಂಬದ ಸದಸ್ಯರಿಗೆ ಬೇಸರ ಇರುತ್ತದೆ. ವ್ಯಯುಕ್ತಿಕ ಜೀವನದ ಬಗ್ಗೆ ಯೋಚಿಸಬೇಕಾಗುತ್ತದೆ. ಬಿಡುವಿಲ್ಲದ ಕೆಲಸ ಕಾರ್ಯಗಳಿಂದ ದೈಹಿಕವಾಗಿ ಬಳಲುವಿರಿ. ಪ್ರಯಾಣದಲ್ಲಿ ಯಾವುದೇ ತೊಂದರೆಗಳು ಬಾರದು. ಕೆಲವು ಜನರ ಭೇಟಿಯು ನಿಮಗೆ ಖುಷಿ ಕೊಡುವುದು. ಹೂಡಿಕೆಯ ವಿಚಾರದಲ್ಲಿ ಸಮಸ್ಯೆಯಾಗಬಹುದು. ಕಾನೂನಿನ ತೀರ್ಮಾನಕ್ಕೆ ತಲೆಬಾಗುವುದು ಸೂಕ್ತ.

ವೃಶ್ಚಿಕ ರಾಶಿ :ಇಂದು ನಿಮ್ಮ ಕಲ್ಪನೆಯಂತೆ ಬದುಕು ನಡೆಯದು ಎಂಬ ಸತ್ಯ ತಿಳಿಯುವುದು. ದೂರಪ್ರಯಾಣ ಸುಖಕರವಾಗಿ ಇರುವಿದಾದರೂ ಅನಂತರ ಕಷ್ಟಪಡಬೇಕಾದೀತು. ಯಾರನ್ನೋ ಅವಮಾನಿಸಲು ಹೋಗಿ ಹಳ್ಳಕ್ಕೆ ಬೀಳಬೇಡಿ. ವಿದ್ಯಾರ್ಥಿಗಳು ಉನ್ನತ ಅಧ್ಯಯನದ ಬಗ್ಗೆ ಹೆಚ್ಚಿನ ಗಮನ ನೀಡುತ್ತಾರೆ. ಕಷ್ಟವೆನಿಸಿದರೂ ನಿಮ್ಮ ಮನದ ಆಶೋತ್ತರಗಳನ್ನು ಈಡೇರಿಸಿಕೊಳ್ಳುವಿರಿ. ಸಾಲದ ವ್ಯವಹಾರದಲ್ಲಿ ತೊಂದರೆ ಎದುರಾಗುತ್ತದೆ. ಸಂಗಾತಿ ಜೊತೆ ಪ್ರೀತಿ ವಿಶ್ವಾಸ ಹೆಚ್ಚುತ್ತದೆ. ನಿಮ್ಮ ಕಾರ್ಯಗಳಿಂದ ಪ್ರೀತಿಪಾತ್ರರ ಹೃದಯವನ್ನು ಗೆಲ್ಲಲು ಸಫಲರಾಗುವಿರಿ. ಬಹಳ‌ ದಿನಗಳ ಅನಂತರ ನಿಮ್ಮ ಸಂಗಾತಿಯ ಜೊತೆ ಸ್ವಲ್ಪ ಸಮಯ ಕುಳಿತು ಆಪ್ತವಾಗಿ ಮಾತನಾಡುವಿರಿ. ಯಾರನ್ನೂ ಅವಲಂಬಿಸುವುದು ನಿಮಗೆ ಕಷ್ಟವಾಗುವುದು. ಕಾದಾಟದಿಂದ ಸಮಯವು ವ್ಯರ್ಥವಾಗಲಿದೆ. ಮಾತಿನಿಂದ ಆಪ್ತರನ್ನು ದೂರ ಮಾಡಿಕೊಳ್ಳುವಿರಿ.

ಧನು ರಾಶಿ :ಆರ್ಥಿಕ ವಿಚಾರಕ್ಕೆ ಸಂಗಾತಿಯ ಜೊತೆ ವೈಮನಸ್ಯ ಉಂಟಾಗುವುದು. ಮನೆಯಲ್ಲಿ ನಿಮ್ಮ ಮಾತಿಗೆ ಬೆಲೆ ಸಿಗುತ್ತದೆ. ದಿನಚರಿಯ ವ್ಯತ್ಯಾಸದಿಂದ ಆರೋಗ್ಯ ಕೆಡಬಹುದು. ಅನಿರೀಕ್ಷಿತ ಸಂಪತ್ತು ಸಿಗುವ ಸಾಧ್ಯತೆ ಇದೆ. ನೀವು ಬಳಸುತ್ತಿರುವ ಹಳೆಯ ವಾಹನವನ್ನು ಮಾರಾಟ ಮಾಡುವಿರಿ. ಸಮಾರಂಭಗಳಲ್ಲಿ ಭಾಗವಹಿಸಲು ಆಸಕ್ತಿ ವಹಿಸುವಿರಿ. ಎಲ್ಲರ ಜೊತೆ ಪ್ರೀತಿ ದಿಂದ ನಡೆದುಕೊಳ್ಳುವಿರಿ. ಕುಟುಂಬಕ್ಕೆ ಸಂಬಂಧಪಟ್ಟಂತೆ ಅನೇಕ ಧಾರ್ಮಿಕ ಕಾರ್ಯಗಳನ್ನು ಮಾಡುವಿರಿ. ಸಂಗಾತಿಯ ಜೊತೆಯಿಂದ ಮನಸ್ತಾಪವು ದೂರವಾಗಲಿದೆ. ಸ್ಪರ್ಧೆಯ ವಿಷಯದಲ್ಲಿ ಮುನ್ನುಗ್ಗುವ ಸ್ವಭಾವವು ಇರಲಿದೆ. ದೂರ ಪ್ರಯಾಣವನ್ನು ನೋವು ಹೆಚ್ಚು ಇಷ್ಟಪಡುವಿರಿ. ತಂದೆಯಿಂದ ಸಹಕಾರವನ್ನು ಪಡೆಯುವಿರಿ. ನಿಮ್ಮ ನೇರ ಮಾತಿನಿಂದ ತೊಂದರೆ ಆಗಬಹುದು. ಪ್ರೇಮದಲ್ಲಿ ಯಾರನ್ನಾದರೂ ನಿಮ್ಮವರನ್ನಾಗಿ ಮಾಡಿಕೊಳ್ಳುವ ಕಲೆ ನಿಮಗೆ ತಿಳಿಯದು.

ಮಕರ ರಾಶಿ :ನೀವು ಸಣ್ಣ ಬುದ್ಧಿಯನ್ನು ಬಿಟ್ಟು ವ್ಯವಹರಿಸಿದರೆ ವ್ಯಾಪರಕ್ಕೆ ಅನುಕೂಲವಿದೆ. ಅನೇಕ ಶುಭಸೂಚನೆಗಳು ನಿಮಗೆ ಕಾಣಿಸುವುದು. ನಿಮ್ಮನ್ನು ಗಮನಿಸುವವರು ಹತ್ತಾರು ಮಂದಿಯಿರುತ್ತಾರೆ. ಅವರೇನೇ ಹೇಳಿದರೂ ನಿಮ್ಮ ಸನ್ಮಾರ್ಗವನ್ನು ಬಿಡಬೇಡಿ. ಮನಸ್ಸಿಲ್ಲದಿದ್ದರೂ ಕುಟುಂಬದ ಜವಾಬ್ದಾರಿಗಳನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಕೆಲವು ಸಮಸ್ಯೆಗಳು ಮರುಕಳಿಸುತ್ತವೆ. ಆತ್ಮೀಯರ ಸಹಕಾರ ದೊರೆಯುವ ಕಾರಣ ನೆಮ್ಮದಿಗೆ ಕೊರತೆ ಇಲ್ಲ. ಇಷ್ಟವಿಲ್ಲದಿದ್ದರೂ ವಿವಾಹ ಮಾತುಕತೆ ನಡೆಯಲಿದೆ. ಕೆಲಸ ಕಾರ್ಯಗಳಲ್ಲಿ ನಿಮ್ಮಲ್ಲಿದ್ದ ಉತ್ಸಾಹ ಕಡಿಮೆಯಾಗಲಿದೆ. ಕೆಲವೊಂದು ಕೆಲಸ ಕಾರ್ಯಗಳು ಅಪೂರ್ಣಗೊಳ್ಳಲಿದೆ. ಪಾಲುದಾರಿಕೆಯಲ್ಲಿ ಸಣ್ಣ ವಿಷಯವನ್ನೂ ಗಂಭೀರವಾಗಿ ಪರಿಹಣಿಸುವಿರಿ. ಸಹೋದ್ಯೋಗಿಗಳ ಕಿರಿಕಿರಿಯಿಂದ ಉದ್ಯೋಗವನ್ನು ಬದಲಿಸುವಿರಿ. ಇಂದು ಸ್ತ್ರೀಯರಿಗೆ ಅನಿರೀಕ್ಷಿತ ತೊಂದರೆಗಳು ಬರಬಹುದು. ನೆರೆಹೊರೆಯರ ಜೊತೆ ವಾಗ್ವಾದ‌ ಬೇಡ.

ಕುಂಭ ರಾಶಿ :ಇಂದು ನಿಮ್ಮ ಕೆಲವು ಮಾತುಗಳು ಬೇರೆಯವರು ಆತುರದ ನಿರ್ಧಾರವನ್ನು ತೆಗದುಕೊಳ್ಳುವಂತೆ ಮಾಡಬಹುದು. ಕುಟುಂಬದ ಅಪರೂಪದ ವ್ಯಕ್ತಿಗಳನ್ನು ಭೇಟಿಯಾಗುವ ಸಂದರ್ಭ ಬರಬಹುದು. ಸಮಯಕ್ಕೆ ಸರಿಯಾಗಿ ದೊರೆಯುವ ಹಣವು ನಿಮ್ಮ ಸಮಸ್ಯೆಯನ್ನು ದೂರ ಮಾಡುತ್ತದೆ. ಆತ್ಮೀಯ ಸ್ನೇಹಿತರ ಒಡನಾಟ ಮನದ ಸಂತೋಷವನ್ನು ಹೆಚ್ಚಿಸುತ್ತದೆ. ಬೇರೆಯವರ ವಿಚಾರವಾಗಿ ಕುಟುಂಬದಲ್ಲಿ ಅಶಾಂತಿ ಮೂಡುತ್ತದೆ. ವ್ಯವಹಾರದಲ್ಲಿ ಉತ್ತಮ ಆದಾಯ ದೊರೆಯುತ್ತದೆ. ಅನವಶ್ಯಕ ಸಮಯವೂ ವ್ಯರ್ಥವಾಗಲಿದೆ. ಇದರಿಂದ ನೀವು ಯಾವುದೇ ಕೆಲಸ ಮಾಡಲು ಬಯಸುವುದಿಲ್ಲ. ವ್ಯಾಪಾರ ಮಾಡುವ ಜನರ ಜೊತೆ ಸೇರಿ ಕೆಲವು ಕೆಲಸಗಳನ್ನು ಮಾಡಲು ಅವಕಾಶವಿದೆ. ನೀವು ಎಣಿಸಿದ್ದನ್ನು ಬಂಧುಗಳು ಮಾಡಿಕೊಡುವರು. ನಿಮ್ಮ ವಿನಂತಿಯನ್ನು ಯಾರೂ ಪುರಸ್ಕರಿಸದೇ ಇರಬಹುದು.

ಮೀನ ರಾಶಿ :ನಿಮ್ಮ ಬಳಿ ಧಾರ್ಮಿಕ ಕಾರ್ಯಗಳಿಗೆ ಹಣವನ್ನು ಕೇಳಬಹುದು. ಇದನ್ನು ನೀವು ಪ್ರೀತಿಯಿಂದ ಕೊಡುವಿರಿ. ದಿಟ್ಟತನದ ನಡೆ ನುಡಿ ಕೆಲವರಲ್ಲಿ ಬೇಸರ ಮೂಡಿಸುತ್ತದೆ. ಪಾಲುಗಾರಿಕೆಯ ವ್ಯವಹಾರದಲ್ಲಿ ತೊಡಗಿಸಿದ್ದ ಹಣವನ್ನು ಮರಳಿ ಪಡೆಯುವಿರಿ. ಕುಟುಂಬದ ಸದಸ್ಯರ ಜೊತೆಯಲ್ಲಿ ಕಿರು ಪ್ರವಾಸ ಮಾಡುವಿರಿ. ಸಂಗಾತಿಯ ಜೊತೆಯಲ್ಲಿ ಉತ್ತಮ ಪ್ರೀತಿ ವಿಶ್ವಾಸ ಇರಲಿದೆ. ಸಂದೇಹ ಬಂದವರ ಜೊತೆ ಸಹವಾಸ ಇರದು. ಜೀವನದಲ್ಲಿ ಹೊಸ ರೀತಿಯ ಕೆಲಸವನ್ನು ಮಾಡುವ ಸಾಮರ್ಥ್ಯವಿರುತ್ತದೆ. ಬಂಧುಗಳು ಮನೆಗೆ ಬಂದ ಕಾರಣ ಖರ್ಚು ಹೆಚ್ಚಾದೀತು. ನಿಮ್ಮ ಸಣ್ಣ ಮನಸ್ಸನ್ನು ಅವರಿಗೆ ತೋರಿಸಬೇಡಿ. ಉನ್ನತ ಅಧ್ಯಯನವನ್ನು ಬಯಸಿ ಬೇರೆ ಕಡೆಗೆ ತೆರಳುವಿರಿ. ವ್ಯರ್ಥ ಸುತ್ತಾಟದಿಂದ ನೀವು ಸಿಟ್ಟಾಗುವಿರಿ.

-ಲೋಹಿತ ಹೆಬ್ಬಾರ್-8762924271 (what’s app only)

’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ