Horoscope Today June 8, 2024: ಶನಿವಾರದ ದಿನಭವಿಷ್ಯದಲ್ಲಿ ಯಾವ ರಾಶಿಗೆ ಏನು ಫಲ? ತಿಳಿದುಕೊಳ್ಳಿ

2024 ಜೂನ್ 8 ದಿನ ಭವಿಷ್ಯ: ಶನಿವಾರದಂದು 12 ರಾಶಿಗಳ ರಾಶಿಫಲ ಹೇಗಿದೆ ಎನ್ನುವುದು ತಿಳಿದುಕೊಳ್ಳಿ. ಈ ದಿನ ಯಾರಿಗೆ ಯೋಗ, ಶುಭ ಸಂಯೋಗ, ಗ್ರಹಗಳ ಸ್ಥಾನ ಬದಲಾವಣೆಗಳಿಂದ ಮೇಷದಿಂದ ಮೀನ ರಾಶಿವರೆಗಿನ ರಾಶಿ ಭವಿಷ್ಯ ಹೇಗಿರಲಿದೆ? ಶುಭಕಾಲ ಹೇಗಿದೆ? ಯಾವ ರಾಶಿಯವರಿಗೆ ಅದೃಷ್ಟ ಕಾದಿದೆ ಎಂಬಿತ್ಯಾದಿ ಮಾಹಿತಿಯನ್ನು ನಿತ್ಯ ಭವಿಷ್ಯದಿಂದ ತಿಳಿಯಿರಿ.

Horoscope Today June 8, 2024: ಶನಿವಾರದ ದಿನಭವಿಷ್ಯದಲ್ಲಿ ಯಾವ ರಾಶಿಗೆ ಏನು ಫಲ? ತಿಳಿದುಕೊಳ್ಳಿ
ರಾಶಿ ಭವಿಷ್ಯ
Follow us
| Updated By: ರಮೇಶ್ ಬಿ. ಜವಳಗೇರಾ

Updated on: Jun 07, 2024 | 9:13 PM

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಶನಿವಾರ (ಜೂನ್ 0​8) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ಮೃಗಶಿರಾ, ಮಾಸ: ಜ್ಯೇಷ್ಠಾ, ಪಕ್ಷ: ಶುಕ್ಲ, ವಾರ: ಶನಿ, ತಿಥಿ: ಪ್ರತಿಪತ್, ನಿತ್ಯನಕ್ಷತ್ರ: ಮೃಗಶಿರಾ, ಯೋಗ: ಶೂಲಿ, ಕರಣ: ಬವ , ಸೂರ್ಯೋದಯ ಬೆಳಗ್ಗೆ 06 ಗಂಟೆ 04 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 59 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 09:18 ರಿಂದ 10:55ರ ವರೆಗೆ, ಯಮಘಂಡ ಕಾಲ 14:09 ರಿಂದ ಸಂಜೆ 15:46ರ ವರೆಗೆ, ಗುಳಿಕ ಕಾಲ ಬೆಳಗ್ಗೆ 06:04 ರಿಂದ 07:41ರ ವರೆಗೆ.

ಮೇಷ ರಾಶಿ :ಇಂದು ನಿಮ್ಮ ಆತ್ಮವಿಶ್ವಾಸವೇ ಎಲ್ಲ ಕಾರ್ಯಗಳು ಮೂಲವಾಗುವುದು. ಹೊಸ ಸ್ನೇಹಿತರನ್ನು ಅನಿರೀಕ್ಷಿತವಾಗಿ ಪಡೆಯುವಿರಿ. ಪ್ರೀತಿಪಾತ್ರರ ಜೊತೆ ಇಂದು ವಿಹಾರ ಮಾಡುವಿರಿ. ವಿದ್ಯಾರ್ಥಿಗಳು ಯಂತ್ರೋಪಕರಣಗಳನ್ನು ಪಡೆದು ಆನಂದಿಸುವರು. ನಿಮ್ಮ ಸಂಕಷ್ಟಕ್ಕೆ ಇತರರ ಸಹಾಯವನ್ನು ಪಡೆದುಕೊಳ್ಳುವಿರಿ. ಸಮಾಜಮುಖೀ ಕಾರ್ಯಗಳ ಕಡೆ ಗಮನಹರಿಸುವಿರಿ. ಬಂಧುಗಳು ತಾವು ಮಾಡಿದ ತಪ್ಪನ್ನು ನಿಮ್ಮ ಮೇಲೆ ಹಾಕಲು ಯತ್ನಿಸುವರು ಎಚ್ಚರದಿಂದಿರಿ. ವೃತ್ತಿಯಲ್ಲಿ ಬರುವ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಬಹುದು. ಅದರಲ್ಲಿ ಉತ್ತಮ ಫಲಿತಾಂಶ ಬರುವ ಯೋಗವಿದೆ. ಕೊನೆಯ ಕ್ಷಣದವರೆಗೂ ನಿಮ್ಮ ಛಲವನ್ನು ಬಿಡಬೇಡಿ. ರಾಜಕಾರಣದ ಸ್ಪರ್ಶದಿಂದ ನಿಮ್ಮ ವ್ಯವಹಾರಕ್ಕೆ ಹೊಸ ದಿಕ್ಕನ್ನು ಸಿಗಬಹುದು. ಹಳೆಯ ಯಂತ್ರಗಳು ದುರಸ್ತಿಗೆ ಬರುವ ಸಾಧ್ಯತೆ ಇದೆ.

ವೃಷಭ ರಾಶಿ :ಇಂದು ನಿಮಗೆ ಅನ್ಯರ ಕಾರ್ಯದ ಸಹವಾಸ ಬೇಡ. ನೀವು ನಿಮ್ಮ ಅಂತರಂಗವನ್ನು ಮುಚ್ಚಿಡಲು ಪ್ರಯತ್ನಿಸಿದರೂ ಅದು ನಿಲ್ಲದು. ಬರಬೇಕಾದ ಹಳೆಯ ಬಾಕಿಗಳು ಇಂದು ಬಂದು ಸೇರಲಿದೆ. ನಿಮ್ಮ ಕೆಲಸಗಳಿಗೆ ಇಂದು ಹೆಚ್ಚು ಪ್ರಾಮುಖ್ಯ ನೀಡಿ. ಸಾಹಸ ಮಾಡಲು ಹೋಗಿ ಮುಖಭಂಗವಾದೀತು. ಆಪ್ತರಿಂದ ಏನಾನ್ನಾದರೂ ನಿರೀಕ್ಷಿಸಿ, ಪಡೆದುಕೊಳ್ಳುವಿರಿ. ವಿಸ್ಮೃತಿಯಿಂದ ಕಷ್ಟವಾಗುವುದು. ವಿದ್ಯಾಭ್ಯಾಸಕ್ಕಾಗಿ ಮನೆಯಿಂದ ದೂರವಿರಬೇಕಸದೀತು. ವ್ಯಾಪಾರದಲ್ಲಿ ಚೇತರಿಕೆ ಕಂಡು ಸಂತಸವಾದೀತು. ವೃತ್ತಿಯಲ್ಲಿ ಬಹಳ ಜಾಣ್ಮೆಯಿಂದ ಕೆಲಸವನ್ನು ನಿಭಾಯಿಸುವಿರಿ. ಹೊಸ ಯೋಜನೆಯನ್ನು ರೂಪಿಸುವಿರಿ. ಪತ್ನಿಯ ಸಹಾಯ ನಿಮಗೆ ಸಿಗಲಿದೆ. ವ್ಯಾಪಾರ ವಲಯದಲ್ಲಿ ಹೆಚ್ಚಿನ ಜಾಗರೂಕತೆ ಅಗತ್ಯ. ನೌಕರರ ನಿರ್ಲಕ್ಷ್ಯದಿಂದ ಆಗುವ ಹೊಣೆಯನ್ನೂ ಹೊರಬೇಕಾಗುವುದು. ಕೆಲವು ರೀತಿಯ ಹಾನಿಯ ಬಗ್ಗೆಯೂ ಚಿಂತಿಸುವುದು ಅಗತ್ಯ.

ಮಿಥುನ ರಾಶಿ :ಇಂದು ನಿಮ್ಮ ಸಂಗಾತಿಯ ಪ್ರಶ್ನೆಗಳಿಗೆ ಉತ್ತರಿಸಲಾಗದೇ ಸೋಲಬಹುದು. ಮನೆಯ ಕಾರ್ಯಗಳಲ್ಲಿ ಮಗ್ನರಾಗಿ ಆಯಾಸವನ್ನು ತರಿಸಿಕೊಳ್ಳುವಿರಿ. ಅಧಿಕಾರಿಗಳ ಭೇಟಿಯಿಂದ ನಿಮ್ಮ ಉದ್ಯೋಗದಲ್ಲಿ ಆದಾಯ, ಪ್ರಭಾವಗಳು ಹೆಚ್ಚಾಗಲಿದೆ‌. ಯಾರಾದರೂ ತಟಸ್ಥರಾದರೆ ಶಾಂತವಾಗಲಿದೆ. ದೇಹದ ಕೆಲವು ಭಾಗಗಳಲ್ಲಿ ನೋವುಗಳು ಕಾಣಿಸಬಹುದು. ಕೃಷಿಗೆ ಸಂಬಂಧಿಸಿದ ವ್ಯವಹಾರಗಳಲ್ಲಿ ಸ್ವಲ್ಪ ಹಿನ್ನಡೆ ಆಗಬಹುದು. ಸರ್ಕಾರಿ ಉದ್ಯೋಗದಲ್ಲಿ ಹೊಸ ಸ್ಥಾನ ದೊರೆಯುವ ಸಾಧ್ಯತೆ ಇದೆ. ಆಪ್ತ ಸ್ನೇಹಿತರ ಬೆಂಬಲವೂ ನಿಮ್ಮ ಮನಸ್ಥಿತಿಯನ್ನು ಹೆಚ್ಚಿಸುತ್ತದೆ. ನಿಮ್ಮ ಕೋಪವನ್ನು ನಿಯಂತ್ರಿಸಿ. ಕೆಲವೊಮ್ಮೆ ಸ್ವಭಾವದಲ್ಲಿ ಭ್ರಮೆಯಿಂದ ಕೋಪದ ಸ್ಥಿತಿ ಇರಬಹುದು. ನಿಮ್ಮಲ್ಲಿರುವ ನ್ಯೂನತೆಗಳನ್ನು ನೀವೇ ತಿಳಿದು ಸರಿಪಡಿಸಿಕೊಳ್ಳಿ. ಇನ್ನೊಬ್ಬರು ಹೇಳುವ ತನಕ ಕಾಯುವುದು ಬೇಡ‌.

ಕರ್ಕ ರಾಶಿ :ಇಂದು ನಿಮ್ಮ ಇಷ್ಟದವರ ಜೊತೆ ಸಂತೋಷದಿಂದ ವ್ಯವಹರಿಸುವಿರಿ. ಕೆಲವು ಮಾತುಗಳಿಂದ ಅವರಿಗೆ ನೋವಾಗಬಹುದು.‌ ನ್ಯಾಯಾಲಯಕ್ಕೆ ಸಂಬಂಧಿಸಿದ್ದನ್ನು ತುರ್ತಾಗಿ ಮಾಡುವಿರಿ. ನಿಮ್ಮ ಬಂಧುಗಳು ಹಣಕಾಸಿನ ಸಹಾಯಕ್ಕಾಗಿ ನಿಮ್ಮಲ್ಲಿಗೆ ಬರುವರು. ಕಾರ್ಯದ ಒತ್ತಡದ ನಡುವೆಯೂ ಕುಟುಂಬದಲ್ಲಿನ ಆಗು ಹೋಗುಗಳತ್ತ ಗಮನಹರಿಸುವುದು ಒಳ್ಳೆಯದು. ಹೂಡಿಕೆಯ ವ್ಯವಹಾರಗಳಲ್ಲಿ ಏಳಿಗೆಯು ಅಷ್ಟಾಗಿ ಇರುವುದಿಲ್ಲ. ಸೂಕ್ತ ವೈವಾಹಿಕ ಸಂಬಂಧ ದೊರೆಯುವ ಸಾಧ್ಯತೆ ಇದೆ, ಪ್ರಯತ್ನಶೀಲರಾಗಿ. ಹಿರಿಯರಿಂದ ನಿಮ್ಮ ವಂಶದದವರ ಬಗ್ಗೆ ತಿಳಿದುಕೊಳ್ಳುವಿರಿ. ಭೂಮಿ ಅಥವಾ ವಾಹನಕ್ಕೆ ಸಂಬಂಧಿಸಿದಂತೆ ಕೆಲವು ಸಮಸ್ಯೆಗಳಿವೆ. ಯಾವುದೇ ರೀತಿಯ ವ್ಯವಹಾರಕ್ಕೆ ನಿಮ್ಮ ಕೆಲಸದ ಗುಣಮಟ್ಟಕ್ಕೆ ಹೆಚ್ಚಿನ ಗಮನ ಬೇಕಾಗುತ್ತದೆ. ಈ ಸಮಯದಲ್ಲಿ ಸಾಲದ ವ್ಯವಹಾರವನ್ನು ಮಾಡಬೇಡಿ.

ಸಿಂಹ ರಾಶಿ :ಇಂದು ಸಂಗಾತಿಯಿಲ್ಲದೇ ಚಟಪಡಿಸುವ ಸ್ಥಿತಿ ಬಂದೀತು. ಬಹಳ ದಿನಗಳ ಅನಂತರ ಮನೆಯ ಕಡೆ ಹೋಗುವಿರಿ. ಎಷ್ಟೋ ದಿನದ ಅನಂತರ ಇಂತಹ ಅಪರೂಪದ ಉಲ್ಲಾಸದ ಕ್ಷಣ ನಿಮ್ಮ ಪಾಲಿಗಿ ಇರಲಿದೆ. ಇದೆ ಎಂದ ಮಾತ್ರಕ್ಕೆ ಏನನ್ನೋ ಮಾಡುವುದು ಔಚಿತ್ಯವಲ್ಲ. ನಿಮ್ಮ ಅಹಂಕಾರವೇ ನಿಮ್ಮನ್ನು ಜನರಿಂದ ದೂರವಿರುವಂತೆ ಮಾಡುವುದು. ಹಾಲಿನ ಉತ್ಪನ್ನಗಳ ಮಾರಾಟದಿಂದ ಅಧಿಕ ಲಾಭವಿರಲಿದೆ. ಸರ್ಕಾರಿ ಕೆಲಸದಲ್ಲಿರುವವರಿಗೆ ಉನ್ನತ ಸ್ಥಾನ ಹಾಗೂ ಜವಾಬ್ದಾರಿಗಳು ಸಿಗಲಿವೆ. ಸಂಗಾತಿಯ ಆದಾಯದಲ್ಲಿ ನಿಮಗೆ ಹಣ ಸಿಗಲಿದೆ. ಕೃಷಿಯ ಉದ್ಯೋಗವು ನಿಮಗೆ ಉತ್ತಮವೆನಿಸಬಹುದು. ಕಳೆದುಕೊಂಡಿದ್ದರ ಬಗ್ಗೆ ಆಸೆ ಬೇಡ. ಋಣಾತ್ಮಕ ಚಿಂತನೆಯನ್ನು ಬಿಡುವುದು ಉತ್ತಮ. ವ್ಯವಹಾರದಲ್ಲಿ ನೀವು ತೆಗೆದುಕೊಳ್ಳುವ ತ್ವರಿತ ನಿರ್ಧಾರಗಳು ಸಕಾರಾತ್ಮಕವಾಗಿರುತ್ತವೆ. ಈ ಸಮಯದಲ್ಲಿ ಯಾವುದೇ ಹೊಸ ಕೆಲಸ ಅಥವಾ ಯೋಜನೆಯನ್ನು ಪ್ರಾರಂಭಿಸಬೇಡಿ.

ಕನ್ಯಾ ರಾಶಿ :ಇಂದು ನಿಮ್ಮ ಕಾರ್ಯದಲ್ಲಿನ ಬದ್ಧತೆಯಿಂದ ಎಲ್ಲರೂ ಅಚ್ಚರಿಪಡುತ್ತಾರೆ. ಹಣದ ಹೂಡಿಕೆಯ ಮಾರ್ಗಗಳನ್ನು ಅನ್ಯರ ಮೂಲಕ ಪಡೆದುಕೊಳ್ಳುವಿರಿ. ಯಾರಿಗೂ ಮಾತನ್ನು ಕೊಡಲು ಹೋಗಬೇಡಿ. ಹವಾಮಾನ ಬದಲಾವಣೆಯಿಂದ ನಿಮ್ಮ ದೇಹದ ಮೇಲೆ, ಮನಸ್ಸಿನ ಮೇಲೆ ಪ್ರಭಾವವನ್ನು ಬೀರುತ್ತವೆ. ನಿಮ್ಮ ಪ್ರಯಾಣವು ಸರಿಯಾದ ಯೋಜನೆಯಿಂದ ಕೂಡಿರಲಿ. ವಿದ್ಯಾರ್ಥಿಗಳಿಗೆ ಅಪೇಕ್ಷಿತ ಫಲಿತಾಂಶಗಳನ್ನು ಸಾಧಿಸಲು ತಾಳ್ಮೆಯೇ ಅತ್ಯವಶ್ಯ. ನಿಮ್ಮ ಕೆಲಸದ ಸಾಮರ್ಥ್ಯದ ಮೂಲಕ ಸಕಾರಾತ್ಮಕ ಫಲಿತಾಂಶಗಳನ್ನು ಸಾಧಿಸುವಿರಿ. ನಿಮ್ಮ ಆಲೋಚನೆಗಳ ಬಗ್ಗೆ ಯೋಚಿಸುವುದು ಕೆಲವು ಪರಿಣಾಮಗಳನ್ನು ಉಂಟುಮಾಡಬಹುದು. ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳು ಹೆಚ್ಚು ಸಮಯ ಕಳೆದು, ಅಧ್ಯಯನವನ್ನು ನಿರ್ಲಕ್ಷಿಸಬಹುದು. ನೌಕರರಿಂದ ಕೆಲವು ಅಡಚಣೆಗಳೂ ಇರಬಹುದು. ಉತ್ಪಾದನೆಯಿಂದ ಅಧಿಕ ಲಾಭವನ್ನು ನಿರೀಕ್ಷಿಸಬಹುದು.

ತುಲಾ ರಾಶಿ :ನೀವು ಇಂದು ಏನನ್ನೋ ಮಾಡಲು ಹೋಗಿ ಮತ್ತೇನೋ ಆಗಬಹುದು. ಮಕ್ಕಳಿಂದಾಗಿ ಆರ್ಥಿಕನಷ್ಟವನ್ನು ಕಾಣಬೇಕಾಗಬಹುದು. ಹಣವು ದೀರ್ಘಕಾಲದವರೆಗೆ ಬಾರದೇ ಇರುವುದರಿಂದ ಇದನ್ನು ಶಾಂತವಾಗಿ ಬಗೆಹರಿಸಲು ಪ್ರಯತ್ನಿಸಬೇಕು. ಕಡಿಮೆ ಸಮಯದಲ್ಲಿ ಹೆಚ್ಚು ಲಾಭ ಗಳಿಸಲು ಹೋಗಿ ಪರಿಸ್ಥಿತಿಯಲ್ಲಿ ನೀವು ಸಿಲುಕಿಕೊಳ್ಳುವಿರಿ. ಎಲ್ಲ ಅಂಶಗಳನ್ನು ಪರಿಶೀಲಿಸಿದ ಅನಂತರವೇ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಿ. ಪ್ರೀತಿಯ ವಿಷಯದಲ್ಲಿ ನೀವು ಅದೃಷ್ಟವಂತರು. ಸಂಗಾತಿಯ ಜೊತೆ ಭಿನ್ನಾಭಿಪ್ರಾಯಗಳು ಮುಂದುವರಿಯುವ ಸಾಧ್ಯತೆ ಇದೆ. ಮಾತುಕತೆಯಿಂದ ಇಂದೇ ಬಗೆಹರಿಸಿಕೊಳ್ಳಿ. ನಿಮಗೆ ಎದುರಾಗುವ ಸಂಕಟಗಳ ಬಗ್ಗೆ ಗಮನವಿರಲಿ. ಸೌಹಾರ್ದತೆಯ ಚರ್ಚೆಯಿಂದ ಒಳ್ಳೆಯದಾಗುವುದು. ವೈಯಕ್ತಿಕ ಸಮಸ್ಯೆಗಳನ್ನು ವ್ಯವಹಾರಕ್ಕೆ ತಂದುಕೊಳ್ಳುವುದು ಬೇಡ.‌ ಇಂದು ನೀವು ಉದ್ಯೋಗದ ವ್ಯವಸ್ಥೆಯನ್ನು ಸುಧಾರಿಸಲು ಹೆಚ್ಚಿನ ಸಮಯವನ್ನು ನೀಡಬೇಕಾಗಿದೆ.

ವೃಶ್ಚಿಕ ರಾಶಿ :ಇಂದು ಯಾವುದನ್ನೂ ಅತಿರೇಕ ಮಾಡಿಕೊಳ್ಳುವುದು ಬೇಡ. ಭವಿಷ್ಯದಲ್ಲಿ ಭರವಸೆಯನ್ನು ಇಟ್ಟು ಮುಂದಡಿ ಇಡುವುದು ಅನಿವಾರ್ಯ.‌ ನಿಮ್ಮ ಸಂಗಾತಿಯನ್ನು ತಪ್ಪಾಗಿ ಗ್ರಹಿಸುವಿರಿ. ಇದೇ ನಿಮ್ಮ ನಡುವಿನ ಅಂತರಕ್ಕೆ ಕಾರಣವಾಗಲಿದೆ. ನಿಮ್ಮ ಸಂಬಂಧವನ್ನು ಸುಧಾರಿಸಲು ಬಯಸಿದರೆ ಸಂಗಾತಿಯನ್ನು ಅನುಮಾನಿಸುವುದನ್ನು ತಪ್ಪಿಸಿ. ಅವರನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಕುಟುಂಬದಲ್ಲಿಯೂ ಪರಸ್ಪರ ಸಂಬಂಧಗಳು ಉತ್ತಮವಾಗಿರುತ್ತವೆ. ಇಂದು ನೀವು ಹೂಡಿಕೆ ಮಾಡಲು ಬಯಸಿದರೆ, ಸಮಯವು ಅನುಕೂಲಕರವಾಗಿರುತ್ತದೆ. ನೀವು ಅಮೂಲ್ಯ ವಸ್ತುವನ್ನು ಖರೀದಿಸಲು ಆಲೋಚಿಸಿದರೆ ಒಳ್ಳೆಯದೇ. ವಿದ್ಯಾರ್ಥಿಗಳು ಅಧ್ಯಯನದ ಮೇಲೆ ಕೇಂದ್ರೀಕರಿಸಲಾರು. ಖರೀದಿಸುವಾಗ ಅನುಭವಿಗಳ ಸಲಹೆಯನ್ನು ತೆಗೆದುಕೊಳ್ಳಲು ಮರೆಯದಿರಿ. ಸರ್ಕಾರಿ ನೌಕರರು ಹೆಚ್ಚಿನ ಕೆಲಸದ ಕಾರಣದಿಂದ ಇಂದು ಹೆಚ್ಚಿನ ಸಮಯವನ್ನು ಮಾಡಬೇಕಾಗುವುದು. ಪ್ರೇಮ ಸಂಬಂಧದ ಕೋಪದಿಂದ ನೀವು ಭಾವನಾತ್ಮಕ ದೂರವಾಗುವಿರಿ.

ಧನು ರಾಶಿ :ಇಂದು ನಿಮ್ಮ ಮನೆಯ ಒತ್ತಡದದ ಕಾರಣ ಯಾವ ಕಾರ್ಯವನ್ನೂ ಪೂರ್ಣಗೊಳಿಸಲಾಗದು. ಹಣವನ್ನು ಸಂಪೂರ್ಣವಾಗಿ ಇತರೇತರ ಕಾರ್ಯಗಳಿಗೆ ಖರ್ಚು ಮಾಡಿ ತುರ್ತಿಗೆ ಹಣವಿಲ್ಲದಂತೆ ಮಾಡಿಕೊಳ್ಳುವಿರಿ. ಅತಿಯಾದ ಸಂತೋಷದಿಂದ ನಿರ್ಧಾರ ತೆಗೆದುಕೊಳ್ಳಬೇಡಿ. ಇಲ್ಲವಾದರೆ ನೀವು ನಷ್ಟವನ್ನು ಅನುಭವಿಸುವಿರಿ. ಮನೆಯ ವಾತಾವರಣವು ಪ್ರಿಯವಾಗುವುದು. ಹೆತ್ತವರ ಜೊತೆ ನೀವು ಸಂತೋಷದಿಂದ ಸಮಯವನ್ನು ಕಳೆಯಬೇಕಾಗಬಹುದು. ಮನಸ್ಸಿನಲ್ಲಿ ಸ್ವಲ್ಪ ಗೊಂದಲಗಳು ಉಂಟಾಗಬಹುದು. ಅದು ನಿಮ್ಮನ್ನು ತುಂಬಾ ಉದ್ವೇಗಕ್ಕೆ ಒಳಗೊಳಿಸುವುದು. ಆರೋಗ್ಯದ ವಿಷಯದಲ್ಲಿ ಸ್ವಲ್ಪ ನೀವು ಕಾಳಜಿವಹಿಸಿ. ಸಂಬಂಧಿಕರಿಂದ ನಿಮ್ಮ ಬಗ್ಗೆ ದೂರುಗಳು ಬರಬಹುದು. ಆದರೆ ಉತ್ತಮ ಸಂಬಂಧಗಳನ್ನು ಕಾಪಾಡಿಕೊಳ್ಳಲು ಪ್ರಯತ್ನವೂ ಅಗತ್ಯ. ವಿದ್ಯಾರ್ಥಿಗಳು ಅಧ್ಯಯನದಿಂದ ದೂರವಾಗುತ್ತಾರೆ. ವ್ಯಾಪಾರವನ್ನು ಹೆಚ್ಚಿಸಲು ಸೂಕ್ತ ವಿಧಾನಗಳನ್ನು ಅಳವಡಿಸಿಕೊಳ್ಳಿ. ನಿಮ್ಮ ಕೆಲಸದಲ್ಲಿ ಗೌಪ್ಯತೆ ಇರಲಿ.

ಮಕರ ರಾಶಿ :ಇಂದು ನೀವು ಯಾರ ಮಾತನ್ನೂ ಗಂಭೀರವಾಗಿ ತೆಗೆದುಕೊಳ್ಳಲಾರಿರಿ. ಬೇಡದ್ದನ್ನೂ ಮನಸ್ಸಿನಲ್ಲಿ ಹಾಕಿಕೊಂಡು ಸಂಕಟಪಡುವಿರಿ. ತೊಂದರೆಗಳು ನಿಮ್ಮ ಮೇಲೆ ಪ್ರಾಬಲ್ಯವನ್ನು ಸಾಧಿಸವಹುದು. ಅದಕ್ಕೆ ಅವಕಾಶವನ್ನು ಕೊಡಬೇಡಿ. ನಿಮ್ಮ ಸಂಗಾತಿಯ ಜೊತೆ ಹೆಚ್ಚು ಸಮಯ ಕಳೆಯಲು ಸಾಧ್ಯವಾಗದು ಕಚೇರಿಯಲ್ಲಿ ನಿಮ್ಮ ಸಾಧನೆಗೆ ಮೆಚ್ಚುಗೆ ಸಿಗಲಿದೆ. ನಿಮ್ಮ ಕೆಲಸವನ್ನು ನೀವು ಪ್ರಾಮಾಣಿಕವಾಗಿ ಪೂರ್ಣಗೊಳಿಸುವಿರಿ. ಈ ಸಮಯದಲ್ಲಿ ಖರ್ಚುಗಳು ಅಧಿಕವಾಗಬಹುದು. ಕಛೇರಿಯಲ್ಲಿ ನೀವು ಬಹಳ ಚಿಂತನಶೀಲವಾಗಿ ಕೆಲಸ ಮಾಡುವಿರಿ. ನಿಮ್ಮ ಮೇಲೆ ಯಾರಾದರೂ ಪಿತೂರಿ ಮಾಡಬಹುದು. ಇಂದಿನ ನಿಮ್ಮ ಪ್ರಯಾಣದಿಂದ ಕಷ್ಟವಾಗಬಹುದು. ಕಠಿಣ ಪರಿಶ್ರಮದ ಹೊರತಾಗಿ ಸರಿಯಾದ ಫಲಿತಾಂಶವನ್ನು ಸಾಧಿಸಲಾಗುವುದಿಲ್ಲ. ಸಂಶೋಧನೆಯ ಚಟುವಟಿಕೆಗಳಲ್ಲಿ ಯಶಸ್ಸಿದೆ. ವ್ಯಾಪಾರದ ಏರುಪೇರುಗಳಿಂದ ಅಸಮಾಧಾನ ಇರುವುದು.

ಕುಂಭ ರಾಶಿ :ಇಂದು ನೀವು ಭವಿಷ್ಯಕ್ಕಾಗಿ ಆರ್ಥಿಕತೆಯ ಬಗ್ಗೆ ಅಧಿಕ ಆಲೋಚನೆ ಮಾಡುವ ಸನ್ನಿವೇಶ ಬರಲಿದೆ. ನಿಮ್ಮ ಅಂತಸ್ಸತ್ತ್ವವೇ ಎಲ್ಲ ಕಾರ್ಯಗಳನ್ನು ಖುಷಿಯಿಂದ ಮಾಡಲು ಸಹಕಾರಿಯಾಗುವುದು. ಅದು ನಿಮ್ಮ ಆತಂಕವನ್ನು ಹೆಚ್ಚಿಸುತ್ತದೆ. ಎಲ್ಲವನ್ನೂ ನಿರ್ವಹಿಸುವ ಸಾಮರ್ಥ್ಯ ನಿಮ್ಮಲ್ಲಿ ಇದೆ. ಆದರೆ ಅದನ್ನು ನಿಮಗೆ ಪರಿಚಯಿಸುವ ಕೆಲಸವಾಗಬೇಕು. ಕೆಲಸದ ಸ್ಥಳದಲ್ಲಿ ಪರಿಸ್ಥಿತಿ ಅನುಕೂಲವಾಗಿರುವುದು. ಕಷ್ಟಪಟ್ಟು ಬಹಳ ಪ್ರೀತಿಯಿಂದ ಕೆಲಸವನ್ನು ಮಾಡುತ್ತೀರಿ ಮತ್ತು ನಿಮ್ಮ ಉತ್ಸಾಹವನ್ನು ಪರಿಗಣಿಸಿ ಹಿರಿಯರು ನಿಮ್ಮನ್ನು ಪ್ರೋತ್ಸಾಹಿಸಬಹುದು. ಅದು ನಿಮ್ಮ ಕೆಲಸದ ಹೊರೆಯನ್ನು ತಗ್ಗಿಸುತ್ತದೆ. ವ್ಯವಹಾರಕ್ಕೆ ಸಂಬಂಧಿಸಿದಂತೆ ಯಾವುದಾದರೂ ನಿರ್ಧಾರವನ್ನು ತೆಗೆದುಕೊಳ್ಳುವಾಗ, ಉತ್ತಮ ಅನುಭವಿ ವ್ಯಕ್ತಿಯನ್ನು ಸಂಪರ್ಕಿಸಿ. ಇಂದು ಹಣಕಾಸಿನ ವಿಚಾರದಲ್ಲಿ ಯಾರನ್ನೂ ಅತಿಯಾಗಿ ನಂಬಬೇಡಿ. ಕುಟುಂಬದ ಎಲ್ಲ ಸದಸ್ಯರಿಗೆ ಸಂತೋಷವನ್ನು ನೀವು ಕೊಡುವಿರಿ.

ಮೀನ ರಾಶಿ :ಇಂದು ನಿಮ್ಮ ಮಾನಸಿಕ ಸ್ಥಿತಿಯು ಸ್ತಿಮಿತದಲ್ಲಿ ಇರದು. ನಿಮ್ಮ ಆಸಕ್ತಿಗೆ ಯೋಗ್ಯವಾದ ಕಾರ್ಯವು ಸಿಗುವತನಕ ಕಾಯಬೇಕಾಗುವುದು. ವಿದ್ಯಾರ್ಥಿಯಾಗಿದ್ದರೆ ಶಿಕ್ಷಣದಲ್ಲಿನ ಅಡೆತಡೆಗಳು ಸರಿಯಾಗಬಹುದು. ದಾಂಪತ್ಯಜೀವನದಲ್ಲಿ ನೀವು ಪ್ರೀತಿಯನ್ನು ಅನುಭವಿಸುವಿರಿ. ಕೆಲವು ದಿನಗಳ ಕಾಲ ಮನೆಯಿಂದ ಹೊರಗೆ ಸುತ್ತಾಡಲು ಯೋಜಿಸಬಹುದು. ಉದ್ಯೋಗಿಗಳಿಗೆ ಇಂದು ಶುಭ ಸೂಚನೆಗಳು ಸಿಗಲಿದೆ. ಮಕ್ಕಳಿಂದ ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ಅದು ನಿಮಗೆ ತುಂಬಾ ಹೆಮ್ಮೆ ತರುತ್ತದೆ. ಕಷ್ಟಪಟ್ಟು ಕೆಲಸ ಮಾಡುತ್ತೀರಿ ಮತ್ತು ನಿಮ್ಮ ವಿರೋಧಿಗಳಿಗೆ ಕಠಿಣ ಸ್ಪರ್ಧೆಯನ್ನು ನೀಡುತ್ತೀರಿ. ತುರ್ತು ನಿರ್ಧಾರಗಳನ್ನು ತೆಗೆದುಕೊಳ್ಳುವುದು ಬೇಡ. ಹಣಕಾಸಿನ ವಹಿವಾಟಿನ ಜೊತೆ ವ್ಯವಹರಿಸುವಾಗ ಜಾಗರೂಕತೆ ಇರಲಿ. ದೂರಪ್ರಯಾಣಕ್ಕೆ ಬೇಕಾದ ಸಿದ್ಧತೆಯನ್ನು ಮಾಡಿಕೊಳ್ಳಿ. ನಿಮ್ಮ ವಿವಾಹವು ಮುಂದೆ ಹೋಗಲು ಅನ್ಯಾನ್ಯ ಕಾರಣಗಳು ಇರಬಹುದು.

-ಲೋಹಿತ ಹೆಬ್ಬಾರ್-8762924271 (what’s app only)

ತಾಜಾ ಸುದ್ದಿ
ಮೃತ ರೇಣುಕಾ ತಾಯಿ, ಪತ್ನಿ ಕಣ್ಣೀರು: ಸಾಂತ್ವನ ಹೇಳಿದ ರಂಭಾಪುರಿ ಶ್ರೀಗಳು
ಮೃತ ರೇಣುಕಾ ತಾಯಿ, ಪತ್ನಿ ಕಣ್ಣೀರು: ಸಾಂತ್ವನ ಹೇಳಿದ ರಂಭಾಪುರಿ ಶ್ರೀಗಳು
ರೇಣುಕಾ ಸ್ವಾಮಿ ಕೊಲೆ ಕೇಸ್​ನ ಆರೋಪಿ ದರ್ಶನ್​ ಬಗ್ಗೆ ಸುದೀಪ್​ ಮೊದಲ ಮಾತು
ರೇಣುಕಾ ಸ್ವಾಮಿ ಕೊಲೆ ಕೇಸ್​ನ ಆರೋಪಿ ದರ್ಶನ್​ ಬಗ್ಗೆ ಸುದೀಪ್​ ಮೊದಲ ಮಾತು
ಪವಿತ್ರಾ ಮನೆಯಲ್ಲಿ ಸ್ಥಳ ಮಹಜರು ವೇಳೆ ನಗ್ತಾ ಸಾಗಿದ ಆರೋಪಿ ಪವನ್
ಪವಿತ್ರಾ ಮನೆಯಲ್ಲಿ ಸ್ಥಳ ಮಹಜರು ವೇಳೆ ನಗ್ತಾ ಸಾಗಿದ ಆರೋಪಿ ಪವನ್
ರೇಣುಕಾ ಸ್ವಾಮಿ ಪ್ರಕರಣ: ಕಾರು ಚಾಲಕನ ಕುಟುಂಬದ ಗೋಳು ಕೇಳೋರ್ಯಾರು?
ರೇಣುಕಾ ಸ್ವಾಮಿ ಪ್ರಕರಣ: ಕಾರು ಚಾಲಕನ ಕುಟುಂಬದ ಗೋಳು ಕೇಳೋರ್ಯಾರು?
ಪೆಟ್ರೋಲ್ -ಡೀಸೆಲ್ ದರ ಏರಿಕೆ ವಿರುದ್ಧ ನಾರಿಯರು ಕಿಡಿ
ಪೆಟ್ರೋಲ್ -ಡೀಸೆಲ್ ದರ ಏರಿಕೆ ವಿರುದ್ಧ ನಾರಿಯರು ಕಿಡಿ
ರೇಣುಕಾ ಸ್ವಾಮಿ ಅಪಹರಣಕ್ಕೆ ಬಳಕೆ ಆಗಿದ್ದ ಕಾರು ಜಪ್ತಿ; ಇಲ್ಲಿದೆ ವಿಡಿಯೋ..
ರೇಣುಕಾ ಸ್ವಾಮಿ ಅಪಹರಣಕ್ಕೆ ಬಳಕೆ ಆಗಿದ್ದ ಕಾರು ಜಪ್ತಿ; ಇಲ್ಲಿದೆ ವಿಡಿಯೋ..
ಬಳ್ಳಾರಿ: ನೋಬಲ್ ಬುಕ್ ಆಫ್ ರೆಕಾರ್ಡ್ಸ್​​​ಗೆ ಸೇರಿದ 4 ತಿಂಗಳ ಮಗು ಸಾಯಿರಾ
ಬಳ್ಳಾರಿ: ನೋಬಲ್ ಬುಕ್ ಆಫ್ ರೆಕಾರ್ಡ್ಸ್​​​ಗೆ ಸೇರಿದ 4 ತಿಂಗಳ ಮಗು ಸಾಯಿರಾ
ಶ್ವಾಸಕೋಶದ ಸಾಮರ್ಥ್ಯ ಹೆಚ್ಚಿಸುವ ಆಸನ ಅರ್ಧ ಚಕ್ರಾಸನ
ಶ್ವಾಸಕೋಶದ ಸಾಮರ್ಥ್ಯ ಹೆಚ್ಚಿಸುವ ಆಸನ ಅರ್ಧ ಚಕ್ರಾಸನ
ಪವಿತ್ರಾ ಗೌಡ ಮನೆಯಲ್ಲಿ ಮಹಜರು; ಹೇಗಿದೆ ಕೊಲೆ ಆರೋಪಿಯ ಬಂಗಲೆ?
ಪವಿತ್ರಾ ಗೌಡ ಮನೆಯಲ್ಲಿ ಮಹಜರು; ಹೇಗಿದೆ ಕೊಲೆ ಆರೋಪಿಯ ಬಂಗಲೆ?
ವಿಡಿಯೋ: ಆದಿಚುಂಚನಗಿರಿಗೆ ಸೆಂಟ್ರಲ್ ಮಿನಿಸ್ಟರ್ ಕುಮಾರಣ್ಣ ಖಡಕ್​ ಎಂಟ್ರಿ
ವಿಡಿಯೋ: ಆದಿಚುಂಚನಗಿರಿಗೆ ಸೆಂಟ್ರಲ್ ಮಿನಿಸ್ಟರ್ ಕುಮಾರಣ್ಣ ಖಡಕ್​ ಎಂಟ್ರಿ