Horoscope: ದಿನಭವಿಷ್ಯ: ಇಂದು ಯಾವುದನ್ನೂ ಅತಿರೇಕ ಮಾಡಿಕೊಳ್ಳುವುದು ಬೇಡ
ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದರೆ. ಜೂ.08 ರ ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಶುಕ್ರವಾರ (ಜೂನ್ 08) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ಮೃಗಶಿರಾ, ಮಾಸ: ಜ್ಯೇಷ್ಠಾ, ಪಕ್ಷ: ಶುಕ್ಲ, ವಾರ: ಶನಿ, ತಿಥಿ: ಪ್ರತಿಪತ್, ನಿತ್ಯನಕ್ಷತ್ರ: ಮೃಗಶಿರಾ, ಯೋಗ: ಶೂಲಿ, ಕರಣ: ಬವ , ಸೂರ್ಯೋದಯ ಬೆಳಗ್ಗೆ 06 ಗಂಟೆ 04 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 59 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 09:18 ರಿಂದ 10:55ರ ವರೆಗೆ, ಯಮಘಂಡ ಕಾಲ 14:09 ರಿಂದ ಸಂಜೆ 15:46ರ ವರೆಗೆ, ಗುಳಿಕ ಕಾಲ ಬೆಳಗ್ಗೆ 06:04 ರಿಂದ 07:41ರ ವರೆಗೆ.
ಸಿಂಹ ರಾಶಿ :ಇಂದು ಸಂಗಾತಿಯಿಲ್ಲದೇ ಚಟಪಡಿಸುವ ಸ್ಥಿತಿ ಬಂದೀತು. ಬಹಳ ದಿನಗಳ ಅನಂತರ ಮನೆಯ ಕಡೆ ಹೋಗುವಿರಿ. ಎಷ್ಟೋ ದಿನದ ಅನಂತರ ಇಂತಹ ಅಪರೂಪದ ಉಲ್ಲಾಸದ ಕ್ಷಣ ನಿಮ್ಮ ಪಾಲಿಗಿ ಇರಲಿದೆ. ಇದೆ ಎಂದ ಮಾತ್ರಕ್ಕೆ ಏನನ್ನೋ ಮಾಡುವುದು ಔಚಿತ್ಯವಲ್ಲ. ನಿಮ್ಮ ಅಹಂಕಾರವೇ ನಿಮ್ಮನ್ನು ಜನರಿಂದ ದೂರವಿರುವಂತೆ ಮಾಡುವುದು. ಹಾಲಿನ ಉತ್ಪನ್ನಗಳ ಮಾರಾಟದಿಂದ ಅಧಿಕ ಲಾಭವಿರಲಿದೆ. ಸರ್ಕಾರಿ ಕೆಲಸದಲ್ಲಿರುವವರಿಗೆ ಉನ್ನತ ಸ್ಥಾನ ಹಾಗೂ ಜವಾಬ್ದಾರಿಗಳು ಸಿಗಲಿವೆ. ಸಂಗಾತಿಯ ಆದಾಯದಲ್ಲಿ ನಿಮಗೆ ಹಣ ಸಿಗಲಿದೆ. ಕೃಷಿಯ ಉದ್ಯೋಗವು ನಿಮಗೆ ಉತ್ತಮವೆನಿಸಬಹುದು. ಕಳೆದುಕೊಂಡಿದ್ದರ ಬಗ್ಗೆ ಆಸೆ ಬೇಡ. ಋಣಾತ್ಮಕ ಚಿಂತನೆಯನ್ನು ಬಿಡುವುದು ಉತ್ತಮ. ವ್ಯವಹಾರದಲ್ಲಿ ನೀವು ತೆಗೆದುಕೊಳ್ಳುವ ತ್ವರಿತ ನಿರ್ಧಾರಗಳು ಸಕಾರಾತ್ಮಕವಾಗಿರುತ್ತವೆ. ಈ ಸಮಯದಲ್ಲಿ ಯಾವುದೇ ಹೊಸ ಕೆಲಸ ಅಥವಾ ಯೋಜನೆಯನ್ನು ಪ್ರಾರಂಭಿಸಬೇಡಿ.
ಕನ್ಯಾ ರಾಶಿ :ಇಂದು ನಿಮ್ಮ ಕಾರ್ಯದಲ್ಲಿನ ಬದ್ಧತೆಯಿಂದ ಎಲ್ಲರೂ ಅಚ್ಚರಿಪಡುತ್ತಾರೆ. ಹಣದ ಹೂಡಿಕೆಯ ಮಾರ್ಗಗಳನ್ನು ಅನ್ಯರ ಮೂಲಕ ಪಡೆದುಕೊಳ್ಳುವಿರಿ. ಯಾರಿಗೂ ಮಾತನ್ನು ಕೊಡಲು ಹೋಗಬೇಡಿ. ಹವಾಮಾನ ಬದಲಾವಣೆಯಿಂದ ನಿಮ್ಮ ದೇಹದ ಮೇಲೆ, ಮನಸ್ಸಿನ ಮೇಲೆ ಪ್ರಭಾವವನ್ನು ಬೀರುತ್ತವೆ. ನಿಮ್ಮ ಪ್ರಯಾಣವು ಸರಿಯಾದ ಯೋಜನೆಯಿಂದ ಕೂಡಿರಲಿ. ವಿದ್ಯಾರ್ಥಿಗಳಿಗೆ ಅಪೇಕ್ಷಿತ ಫಲಿತಾಂಶಗಳನ್ನು ಸಾಧಿಸಲು ತಾಳ್ಮೆಯೇ ಅತ್ಯವಶ್ಯ. ನಿಮ್ಮ ಕೆಲಸದ ಸಾಮರ್ಥ್ಯದ ಮೂಲಕ ಸಕಾರಾತ್ಮಕ ಫಲಿತಾಂಶಗಳನ್ನು ಸಾಧಿಸುವಿರಿ. ನಿಮ್ಮ ಆಲೋಚನೆಗಳ ಬಗ್ಗೆ ಯೋಚಿಸುವುದು ಕೆಲವು ಪರಿಣಾಮಗಳನ್ನು ಉಂಟುಮಾಡಬಹುದು. ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳು ಹೆಚ್ಚು ಸಮಯ ಕಳೆದು, ಅಧ್ಯಯನವನ್ನು ನಿರ್ಲಕ್ಷಿಸಬಹುದು. ನೌಕರರಿಂದ ಕೆಲವು ಅಡಚಣೆಗಳೂ ಇರಬಹುದು. ಉತ್ಪಾದನೆಯಿಂದ ಅಧಿಕ ಲಾಭವನ್ನು ನಿರೀಕ್ಷಿಸಬಹುದು.
ತುಲಾ ರಾಶಿ :ನೀವು ಇಂದು ಏನನ್ನೋ ಮಾಡಲು ಹೋಗಿ ಮತ್ತೇನೋ ಆಗಬಹುದು. ಮಕ್ಕಳಿಂದಾಗಿ ಆರ್ಥಿಕನಷ್ಟವನ್ನು ಕಾಣಬೇಕಾಗಬಹುದು. ಹಣವು ದೀರ್ಘಕಾಲದವರೆಗೆ ಬಾರದೇ ಇರುವುದರಿಂದ ಇದನ್ನು ಶಾಂತವಾಗಿ ಬಗೆಹರಿಸಲು ಪ್ರಯತ್ನಿಸಬೇಕು. ಕಡಿಮೆ ಸಮಯದಲ್ಲಿ ಹೆಚ್ಚು ಲಾಭ ಗಳಿಸಲು ಹೋಗಿ ಪರಿಸ್ಥಿತಿಯಲ್ಲಿ ನೀವು ಸಿಲುಕಿಕೊಳ್ಳುವಿರಿ. ಎಲ್ಲ ಅಂಶಗಳನ್ನು ಪರಿಶೀಲಿಸಿದ ಅನಂತರವೇ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಿ. ಪ್ರೀತಿಯ ವಿಷಯದಲ್ಲಿ ನೀವು ಅದೃಷ್ಟವಂತರು. ಸಂಗಾತಿಯ ಜೊತೆ ಭಿನ್ನಾಭಿಪ್ರಾಯಗಳು ಮುಂದುವರಿಯುವ ಸಾಧ್ಯತೆ ಇದೆ. ಮಾತುಕತೆಯಿಂದ ಇಂದೇ ಬಗೆಹರಿಸಿಕೊಳ್ಳಿ. ನಿಮಗೆ ಎದುರಾಗುವ ಸಂಕಟಗಳ ಬಗ್ಗೆ ಗಮನವಿರಲಿ. ಸೌಹಾರ್ದತೆಯ ಚರ್ಚೆಯಿಂದ ಒಳ್ಳೆಯದಾಗುವುದು. ವೈಯಕ್ತಿಕ ಸಮಸ್ಯೆಗಳನ್ನು ವ್ಯವಹಾರಕ್ಕೆ ತಂದುಕೊಳ್ಳುವುದು ಬೇಡ. ಇಂದು ನೀವು ಉದ್ಯೋಗದ ವ್ಯವಸ್ಥೆಯನ್ನು ಸುಧಾರಿಸಲು ಹೆಚ್ಚಿನ ಸಮಯವನ್ನು ನೀಡಬೇಕಾಗಿದೆ.
ವೃಶ್ಚಿಕ ರಾಶಿ :ಇಂದು ಯಾವುದನ್ನೂ ಅತಿರೇಕ ಮಾಡಿಕೊಳ್ಳುವುದು ಬೇಡ. ಭವಿಷ್ಯದಲ್ಲಿ ಭರವಸೆಯನ್ನು ಇಟ್ಟು ಮುಂದಡಿ ಇಡುವುದು ಅನಿವಾರ್ಯ. ನಿಮ್ಮ ಸಂಗಾತಿಯನ್ನು ತಪ್ಪಾಗಿ ಗ್ರಹಿಸುವಿರಿ. ಇದೇ ನಿಮ್ಮ ನಡುವಿನ ಅಂತರಕ್ಕೆ ಕಾರಣವಾಗಲಿದೆ. ನಿಮ್ಮ ಸಂಬಂಧವನ್ನು ಸುಧಾರಿಸಲು ಬಯಸಿದರೆ ಸಂಗಾತಿಯನ್ನು ಅನುಮಾನಿಸುವುದನ್ನು ತಪ್ಪಿಸಿ. ಅವರನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಕುಟುಂಬದಲ್ಲಿಯೂ ಪರಸ್ಪರ ಸಂಬಂಧಗಳು ಉತ್ತಮವಾಗಿರುತ್ತವೆ. ಇಂದು ನೀವು ಹೂಡಿಕೆ ಮಾಡಲು ಬಯಸಿದರೆ, ಸಮಯವು ಅನುಕೂಲಕರವಾಗಿರುತ್ತದೆ. ನೀವು ಅಮೂಲ್ಯ ವಸ್ತುವನ್ನು ಖರೀದಿಸಲು ಆಲೋಚಿಸಿದರೆ ಒಳ್ಳೆಯದೇ. ವಿದ್ಯಾರ್ಥಿಗಳು ಅಧ್ಯಯನದ ಮೇಲೆ ಕೇಂದ್ರೀಕರಿಸಲಾರು. ಖರೀದಿಸುವಾಗ ಅನುಭವಿಗಳ ಸಲಹೆಯನ್ನು ತೆಗೆದುಕೊಳ್ಳಲು ಮರೆಯದಿರಿ. ಸರ್ಕಾರಿ ನೌಕರರು ಹೆಚ್ಚಿನ ಕೆಲಸದ ಕಾರಣದಿಂದ ಇಂದು ಹೆಚ್ಚಿನ ಸಮಯವನ್ನು ಮಾಡಬೇಕಾಗುವುದು. ಪ್ರೇಮ ಸಂಬಂಧದ ಕೋಪದಿಂದ ನೀವು ಭಾವನಾತ್ಮಕ ದೂರವಾಗುವಿರಿ.