AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Horoscope 3rd November 2024: ನಿರುದ್ಯೋಗಿಗಳಿಗೆ ಉದ್ಯೋಗ ಸಿಗಲಿದೆ, ಆರ್ಥಿಕವಾಗಿ ಸಬಲರಾಗುವಿರಿ

Daily Horoscope 3nd November 2024: ನವೆಂಬರ್ 03,​ 2024ರ ನರಕ ಚತುರ್ದಶಿ​​ ದಿನ ನಿಮ್ಮ ಭವಿಷ್ಯ ಹೇಗಿದೆ? ಭಾನುವಾರ ಇಂದಿನ ಗ್ರಹಗಳ ಸಂಚಾರ ಹೇಗಿದೆ? ಯಾವ ರಾಶಿಯವರಿಗೆ ಶುಭವಾಗಲಿದೆ? ಯಾವ ರಾಶಿಯವರಿಗೆ ಅಶುಭವಾಗಲಿದೆ? ಸೇರಿದಂತೆ ರಾಹು ಕಾಲ, ಯಮಘಂಡ, ಗುಳಿಕ ಕಾಲ ಸಮಯವನ್ನೂ ಸಹ ತಿಳಿದುಕೊಳ್ಳಿ.

Daily Horoscope 3rd November 2024: ನಿರುದ್ಯೋಗಿಗಳಿಗೆ ಉದ್ಯೋಗ ಸಿಗಲಿದೆ, ಆರ್ಥಿಕವಾಗಿ ಸಬಲರಾಗುವಿರಿ
ನಿರುದ್ಯೋಗಿಗಳಿಗೆ ಉದ್ಯೋಗ ಸಿಗಲಿದೆ, ಆರ್ಥಿಕವಾಗಿ ಸಬಲರಾಗುವಿರಿ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on:Dec 13, 2024 | 11:15 AM

Share

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಶರದ್ ಋತು, ತುಲಾ ಮಾಸ, ಮಹಾನಕ್ಷತ್ರ: ಸ್ವಾತಿ, ಮಾಸ: ಆಶ್ವಯುಜ, ಪಕ್ಷ: ಶುಕ್ಲ, ವಾರ: ಭಾನು, ತಿಥಿ: ದ್ವಿತೀಯಾ, ನಿತ್ಯನಕ್ಷತ್ರ: ಅನುರಾಧಾ, ಯೋಗ: ಶೋಭನ​​, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 29 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 02 ನಿಮಿಷಕ್ಕೆ, ರಾಹು ಕಾಲ ಸಂಜೆ 04:36 ರಿಂದ 06:02 ರವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:16 ರಿಂದ 01:43ರವರೆಗೆ, ಗುಳಿಕ ಕಾಲ ಮಧ್ಯಾಹ್ನ 03:09 ರಿಂದ ಸಂಜೆ 04:36 ರವರೆಗೆ.

ಮೇಷ ರಾಶಿ: ಎಲ್ಲ ಒತ್ತಡಗಳನ್ನು ಮರೆತು ಕೆಲವು ಎಲ್ಲರ ಜೊತೆ ಬೆರೆಯುವಿರಿ. ಒಮ್ಮನಸ್ಸಿನಿಂದ ಇಂದು ಕಾರ್ಯ ಅಸಾಧ್ಯ. ಇಂದು ನಿಮ್ಮ ಅಮೂಲ್ಯ ಸಮಯವನ್ನು ಸ್ನೇಹಿತರ ಕೆಲಸಕ್ಕಾಗಿ ಕೊಡುವಿರಿ.‌ ಆದರೂ ಕೆಲಸವು ಸಾಧ್ಯವಾಗದು. ಬಯಕೆಗಳನ್ನು ಈಡೇರಿಸಿಕೊಳ್ಳಲು ಮಾರ್ಗಗಳನ್ನು ಹುಡುಕಿಕೊಳ್ಳುವಿರಿ. ಸಂಗಾತಿಗೆ ಏನಾದರೂ ಉಡುಗೊರೆ ಕೊಡುವ ಮನಸ್ಸಾಗುವುದು. ಇದರಿಂದ ನಿಮ್ಮನ್ನು ಅರ್ಥಮಾಡಿಕೊಳ್ಳುವ ಸಂಗಾತಿಗೆ ಕಷ್ಟವಾಗುವುದು. ಯಾರಿಂದಲೂ ಗೌರವ ಸಿಗುತ್ತಿಲ್ಲ ಎಂಬ ಕೊರಗು ಇರುವುದು. ಆರ್ಥಿಕವಾಗಿ ಸಬಲರಾಗುವಿರಿ. ನಿರುದ್ಯೋಗಿ ಮಿತ್ರನಿಗೆ ನಿಮ್ಮ ಸಹಾಯವು ಸಿಗಲಿದೆ. ಹೊಸತನ್ನು ವಿಚಾರಗಳತ್ತ ನಿಮ್ಮ ಬುದ್ಧಿಯು ಓಡುವುದು. ನಿಮ್ಮ ಚಿಂತನೆಗಳನ್ನು ಹಂಚಿಕೊಳ್ಳುವಿರಿ. ಉದ್ಯೋಗದ ಕಾರಣಕ್ಕೆ ನೀವು ಮನೆಯಿಂದ ದೂರ ಇರಬೇಕಾದೀತು. ಪ್ರತಿಭೆ ಪ್ರದರ್ಶನಕ್ಕೆ ಒಳ್ಳೆಯ ಅವಕಾಶ ಸಿಗಲಿದೆ. ದೂರಪ್ರಯಾಣ ಮಾಡಲು ಇಂದು ಇಷ್ಟಪಡುವಿರಿ.

ವೃಷಭ ರಾಶಿ: ನಿಮ್ಮ ವಾಹನದಿಂದ ನಷ್ಟ ಸಂಭವಿಸುವುದು. ನಿಮ್ಮ ಮಾತುಗಳನ್ನು ನಂಬುವವರ ಸಂಖ್ಯೆ ಕಡಿಮೆ ಆದೀತು. ಕೃಷಿಯಿಂದ ಲಾಭ ಗಳಿಸಲು ನೀವು ಸಲಹೆಯನ್ನು ಪಡೆಯಿರಿ. ಓದಿನ ವಿಚಾರವಾಗಿ ವಿದ್ಯಾರ್ಥಿಗಳಲ್ಲಿ ಗೊಂದಲವಿರಬಹುದು. ನಿಮ್ಮ ಬೆಂಬಲವನ್ನು ಹಿಂಪಡೆಯಬಹುದು. ಸಿಕ್ಕ ಅವಕಾಶಗಳನ್ನು ಬಿಡದೇ ಸದುಪಯೋಗ ಮಾಡಿಕೊಳ್ಳುವತ್ತ ಗಮನವಿರಲಿ.‌ ಕುಟುಂಬದಲ್ಲಿ ಸಂತೋಷವನ್ನು ಹೆಚ್ಚಿಸುವಿರಿ. ಬಂಧುಗಳ ಪ್ರೀತಿಯೂ ಸಿಗಲಿದೆ. ಅತಿಥಿ ಸತ್ಕಾರವನ್ನು ಮಾಡಲಿದ್ದೀರಿ. ನಿಮ್ಮ ಚಿಂತನೆಯನ್ನು ನೀವು ಕಡಿಮೆ ಮಾಡಿಕೊಳ್ಳುವ ಮಾರ್ಗವನ್ನು ಕಂಡುಕೊಳ್ಳಿ. ಪುಣ್ಯ ಸ್ಥಳದ‌ ದರ್ಶನವಾಗಲಿದೆ. ದಾಂಪತ್ಯದಲ್ಲಿ ಸಾಮರಸ್ಯ ಉಂಟಾಗುವಂತೆ ನೋಡಿಕೊಳ್ಳಿ. ಮಕ್ಕಳಿಂದ ನೀವು ಸ್ವತಂತ್ರರಾಗಲು ಬಯಸುವಿರಿ. ಇಂದು ನಿಮ್ಮ ವೈಯಕ್ತಿಕ ಕೆಲಸಗಳಿಗೆ ತೊಂದರೆ ಬರುವುದು. ಇಲ್ಲದೆ ಸಮಸ್ಯೆಯನ್ನು ಸುಮ್ಮನೇ ಸೃಷ್ಟಿಸಿಕೊಳ್ಳುವಿರಿ. ನಿಮ್ಮ ವಿರುದ್ಧ ಯಾರಾದರೂ ಅನಿರೀಕ್ಷಿತವಾಗಿ ಮಾತನಾಡಬಹುದು.

ಮಿಥುನ ರಾಶಿ: ಇಂದು ನಿಮ್ಮ ಭಾವನೆಯ ಜೊತೆ ಆಟವಾಡುವರು. ವಿದ್ಯಾರ್ಥಿಗಳಿಗೆ ಮಾನಸಿಕವಾದ ಭಯವನ್ನು ತೆಗೆದರೆ ಮುನ್ನಡೆಗೆ ಅವಕಾಶವಿದೆ. ಸಾಲದಿಂದ ಮುಕ್ತಿ ಒಡೆದು ಮನಸ್ಸು ನಿರಾಳವಾಗುವುದು. ನಿಮ್ಮ ಯಶಸ್ಸಿಗೆ ಕಲ್ಲು ಹಾಕುವವರು ಗೊತ್ತಾಗಲಿದ್ದರೆ. ಹೊಸ ಉದ್ಯೋಗತ್ತ ನಿಮ್ಮ ಮನಸ್ಸು ಇರಲಿದೆ. ಮಕ್ಕಳಿಗೆ ಬೇಕಾದುದನ್ನು ನೀವು ಕೊಡಿಸುವಿರಿ. ಸಂಗಾತಿಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಸೋಲಾಗಬಹುದು. ಉಪಕಾರಕ್ಕೆ ಪ್ರತಿಯಾಗಿ ಉಪಕಾರವನ್ನು ಮಾಡುವಿರಿ. ನಿಮಗೆ ಸಂತೋಷವನ್ನು ಕೊಡುವ ಇಂದಿನ ಸಂದರ್ಭವಾಗಿದೆ. ಅಪರಿಚಿತರ ಜೊತೆ ವ್ಯರ್ಥವಾದ ಕಲಹವನ್ನು ಮಾಡಿಕೊಳ್ಳುವಿರಿ. ಸನ್ನಿವೇಶಕ್ಕೆ ತಕ್ಕಂತೆ ನಿಮ್ಮ‌ ಮಾತಿರಲಿ. ನಿಮ್ಮ ಯಾರದರೂ ದೂರು ಸಲ್ಲಿಸಬಹುದು. ಅನಿವಾರ್ಯ ಕಾರಣದಿಂದ ಮನೆಗೆ ಹೋಗಲು ಆಗದೇ ಇರಬಹುದು. ಸೂಕ್ತ ಕ್ರಮಗಳನ್ನು ಮಾಡಿಕೊಳ್ಳಿ. ಆಲಸ್ಯದ ಕಾರಣ ಎಲ್ಲರಿಂದ ದೂರುಬರಬಹುದು. ವಿವಾದದಿಂದ ನೀವೇ ಹಿಂದಕ್ಕೆ ಸರಿಯುವಿರಿ.

ಕರ್ಕಾಟಕ ರಾಶಿ: ಇಂದು ಪ್ರಾಮುಖ್ಯ ಕೊಡಬೇಕಾದಲ್ಲಿ ಅರಿತು ಪ್ರಯತ್ನಪೂರ್ವಕವಾಗಿ ಕೊಡಿ. ಬರಬೇಕಾದ ಹಣವು ನಿಮಗೆ ಸಿಗುಬುದು ಕಷ್ಡವಾಗುವುದು. ಧಾರ್ಮಿಕ ಸಂಭ್ರಮದಲ್ಲಿ ನೀವು ಇರುವಿರಿ. ಯಾರದೋ ಮಾತಿನಿಂದ ನೀವು ಕ್ಲೇಶಕ್ಕೆ ಒಳಗಾಗುವಿರಿ.‌ ಆಪ್ತರನ್ನು ಮನೆಗೆ ಕರೆದು ಸತ್ಕರಿಸಲಿದ್ದೀರಿ. ಪ್ರೇಮವು ನಿಮ್ಮ ಮನಸ್ಸನ್ನು ಕದಡಬಹುದು. ಸಂತಾನಯೋಗದಿಂದ ನಿಮಗೂ ಕುಟುಂಬದಲ್ಲಿಯೂ ಸಂತಸ. ಒಳ್ಳೆಯದಾಗಲು ಸಮಯವನ್ನು ನೀವು ಕಾಯಬೇಕಾಗುವುದು. ಮಾನಸಿಕವಾಗಿ ನೀವು ಬಲವಾಗಬೇಕಿದೆ. ಎಲ್ಲ ಸಂದರ್ಭದಲ್ಲಿಯೂ ದುಃಖಿಸಬೇಕಾಗುವುದು. ನಕಾರಾತ್ಮಕ ಆಲೋಚನೆಗಳು ನಿಮ್ಮನ್ನು ದುರ್ಬಲ‌ ಮಾಡಬಹುದು. ಮೊದಲೇ ನಿಶ್ಚಯವಾದ ವಿವಾಹವು ಕಾರಣಾಂತರಗಳಿಂದ ಮಂದೆ ಹೋಗಲಿದೆ. ಕಲಾಕೌಶಲವನ್ನು ಮೆರೆಯಬಹುದು. ಸಂಗಾತಿಯ ಮಾತು ನಿಮಗೆ ತಾಳ್ಮೆಯನ್ನು ಕಡಿಮೆ‌ ಮಾಡೀತು. ಅಪರಿಚಿತ ವ್ಯಕ್ತಿಗಳ ಜೊತೆ ಯಾವ ವ್ಯವಹಾರವನ್ನು ಕಡಮೆ‌ ಮಾಡಿ.

ಸಿಂಹ ರಾಶಿ: ನಿಮ್ಮ ಉದ್ಯೋಗವನ್ನು ಇನ್ನೊಬ್ಬರ ಜೊತೆ‌ ತುಲನೆ‌ ಮಾಡುವಿರಿ. ಆಕಸ್ಮಿಕ ಅಪಘಾತಗಳಿಂದ ನೋವು ಹೆಚ್ಚಾಗುವುದು. ನಿಮ್ಮ ಎಲ್ಲ ಕಾರ್ಯಗಳೂ ವಿಳಂಬವಾಗಿ ಯಾರಿಂದಲಾದರೂ ಹೇಳಿಸಿಕೊಳ್ಳುವಿರಿ. ಸ್ತ್ರೀಯರು ಅಲಂಕಾರಕ್ಕೆ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುವರು. ಪಾಲಯದಾರಿಕೆಯಲ್ಲಿ ಸಂಶಯ ಕಾಣಿಸುವುದು.‌ ಮಾಡಿದ ತಪ್ಪಿಗೆ ನಿಮಗೆ ಬೇಸರವಾಗಬಹುದು. ಎಷ್ಟೇ ಪ್ರಯತ್ನಿಸಿದರೂ ನಿಮ್ಮ ಹಣವು ನಿಮಗೆ ಸಿಗದು. ನಿಮ್ಮವರ ಮೇಲೆ ನೀವು ಇಟ್ಟ ನಂಬಿಕೆಯು ಹುಸಿಯಾಗಬಹುದು. ಮಕ್ಕಳ ವಿವಾಹಕ್ಕೆ ಪ್ರಯತ್ನ ಅತಿಯಾಗುವುದು. ಯಂತ್ರಗಳ ವ್ಯಾಪಾರದಲ್ಲಿ ನಿಮಗೆ ಲಾಭವು ಸಿಗುವುದು. ಸ್ವಂತ ವಾಹನವನ್ನು ಖರೀದಿ‌ ಮಾಡಬೇಕಾಗುವುದು. ಅನಾರೋಗ್ಯವನ್ನು ಯಾರ ಬಳಿಯಾದರೂ ಹೇಳಿಕೊಂಡು ಸೂಕ್ತವಾದ ಸಲಹೆಯನ್ನು ಪಡೆಯುವಿರಿ. ಉದ್ಯೋಗದ ಅನುಭವವನ್ನು ಸರಿಯಾಗಿ ಪಡೆಯಿರಿ. ನೀವು ಹಾಕಿಕೊಂಡ ಗುರಿಯನ್ನು ಯಾರಾದರೂ ತಪ್ಪಿಸಬಹುದು.

ಕನ್ಯಾ ರಾಶಿ: ಸಂಗಾತಿಂದ ಆರ್ಥಿಕ ಸಹಾಯದ ನಿರೀಕ್ಷೆಯಲ್ಲಿ ಇರುವಿರಿ. ನೌಕರರಿಂದ ನಿರೀಕ್ಷಿಸಿದ್ದು ಸುಳ್ಳಾಗಬಹುದು. ಇಂದು ವಿದ್ಯಾರ್ಥಿಗಳಿಗೆ ಉನ್ನತ ವಿದ್ಯಾಭ್ಯಾಸದ ಆಸಕ್ತಿ ಹೆಚರಚಾಗುವುದು. ಸಂಗಾತಿಯ ಸಂಪತ್ತನ್ನು ಇಂದು ಖಾಲಿ‌ಮಾಡಲಿದ್ದೀರಿ. ನಿಮ್ಮ ಮನಸ್ಸು ಯಾವುದೋ ಆಲೋಚನೆಯಲ್ಲಿ ಇರಲಿದೆ. ಸಂಬಂಧಗಳಲ್ಲಿ ಅಭದ್ರತೆಯು ಕಾಡುವುದು. ತಂದೆಯ ಮಾತು ನಿಮಗೆ ಕಿರಿಕಿರಿ ನೀಡಬಹುದು. ನಿಮ್ಮ ಆದಾಯದ ಮೂಲವಾದ ವ್ಯಾಪಾರದಲ್ಲಿ ಲಾಭವಿರುವುದು. ವಾಸಿಯಾಗದ ರೋಗಕ್ಕೆ ಔಷಧವು ಸಿಗಬಹುದು.‌ ಇಂದು ನಿಮ್ಮ ಪ್ರೀತಿಪಾತ್ರರನ್ನು ಭೇಟಿಯಾಗುವಿರಿ. ಕೌಟುಂಬಿಕ ಸಮಾಧಾನವನ್ನು ತರುವುದು ನಿಮಗೆ ಸವಾಲಗಬಹುದು. ನಿಮ್ಮ‌ ಉದ್ಯೋಗದ ಬಗ್ಗೆ ಅಸೂಯೆ ಬರಬಹುದು. ಸಂಗಾತಿಯ ಬಗ್ಗೆ ಪ್ರೀತಿ ಹೆಚ್ಚಾಗುವುದು. ನಿಮ್ಮ ಇಂದಿನ ಅಸಹಾಯಕತೆಯನ್ನು ಯಾರ ಎದುರೂ ಹೇಳುವುದು ಬೇಡ. ನಿಮ್ಮ ಎಲ್ಲ‌ ಕಾರ್ಯಕ್ಕೂ ಯಶಸ್ಸು ಬೇಕು ಎಂಬ ಹಂಬಲ ಬೇಡ.

ತುಲಾ ರಾಶಿ: ಮಿತ್ರರ ಸಹಾಯಕ್ಕೆ ಇಂದು ಕಿರು ಪ್ರಯಾಣ ಮಾಡುವಿರಿ. ನಿಮ್ಮಿಂದ ಉಪಕಾರ ಪಡೆದವರೇ ನಿಮಗೆ ವಂಚಿಸುವ ಸಾಧ್ಯತೆ ಇದೆ.‌ ಕೆಲವು ಘಟನೆಗಳು ನಿಮ್ಮ ಮನಸ್ಸನ್ನು ವಿಚಲಿತಗೊಳಿಸುವುದು. ಸ್ಪರ್ಧೆಯಲ್ಲಿ ಜಯಗಳಿಸುವ ಬದಲು ಸೋಲಾಗಬಹುದು ಇದರಿಂದ. ತಪ್ಪಾಗಿ ಆಡಿದ ಮಾತಿನಿಂದ ಸಮಸ್ಯೆಯನ್ನು ಎದುರಿಸಬೇಕಾಗುವುದು. ಮಹಿಳೆಯರು ಸ್ವ ಉದ್ಯೋಗದಲ್ಲಿ ಲಾಭವನ್ನು ಮಾಡಿಕೊಳ್ಳುವಿರಿ ನಂಬಿಕೆಯ ಕೊರತೆಯಿಂದ ಪ್ರೇಮವು ಭಗ್ನವಾಗಬಹುದು. ಆಪ್ತರ ಸಹಕಾರದಿಂದ ನಿಮಗೆ ಉದ್ಯೋಗವು ಸಿಗುವುದು. ಭವಿಷ್ಯದ ಯೋಜನೆಯನ್ನು ಕುಟುಂಬದ ಜೊತೆ ಹಂಚಿಕೊಳ್ಳಿ. ಪಾರದರ್ಶಕ ಕಾರ್ಯವು ನಿಮ್ಮ ಮೇಲಿನ‌ ಅನುಮಾನವನ್ನು ದೂರಮಾಡುಬುದು. ನಿಮ್ಮ ಶುದ್ಧತೆಯನ್ನು ನೀವು ಅರಿತರೆ ಸಾಕು. ನಿಮ್ಮದಲ್ಲದ ತಪ್ಪನ್ನೂ ನೀವು ಒಪ್ಪಿಕೊಂಡು ಕಲಹವಾಗುವುದನ್ನು ನಿಲ್ಲಿಸುವಿರಿ. ಮಕ್ಕಳ ವಿವಾಹಕ್ಕಾಗಿ ಓಡಾಟ ಮಾಡಬೇಕಾಗುವುದು. ಸರ್ಕಾರಕ್ಕೆ ಸಲ್ಲಿಸಬೇಕಾದ ದಾಖಲೆಗಳನ್ನು ಸರಿಯಾಗಿರಿಸಿ.

ವೃಶ್ಚಿಕ ರಾಶಿ: ಕೊಟ್ಟ ಗೌರವ ನಿಮಗೆ ಸಾಲದು. ಮಕ್ಕಳಿಗಾಗಿ ಪಟ್ಟಶ್ರಮವು ಇಂದು ಸಾರ್ಥಕ ಎನಿಸುವುದು. ಅಹಂಕಾರದಿಂದ ನಿಮಗೆ ಮಿತ್ರರು ದೂರವಾಗಬಹುದು. ಸುಮ್ಮನೇ ಇದ್ದು ಹತ್ತಾರು ಯೋಚನೆಗಳು ಬರಲಿದೆ. ರಾಜಭೀತಿ ಕಾಡುವುದು. ಬಂಧುಗಳಿಂದ‌ ಉಡುಗೊರೆ ಸಿಗಲಿದೆ. ಮಾತಿನ‌ ಮೇಲೆ ನಂಬಿಕೆಯನ್ನು ಉಳಿಸಿಕೊಳ್ಳುವುದು ಕಷ್ಟವಾದೀತು. ಗುಂಪಿನಲ್ಲಿ ಕಳೆಯುವುದು ಇಷ್ಟವಾಗದು. ನೀರಿನಿಂದ ಭೀತಿಯು ಇರಲಿದೆ. ಕಲಾವಿದರಿಗೆ ಅವಕಾಶಗಳು ತಪ್ಪಿಹೋಗಬಹುದು. ಆರ್ಥಿಕ ವ್ಯವಹಾರದಲ್ಲಿ ಶುದ್ಧತೆ‌ ಮತ್ತು ನಿಖರತೆ ಇರಲಿ. ಮನೆಯ ಕಾರ್ಯದಲ್ಲಿ ಇಂದು ಹೆಚ್ಚು ತೊಡಗಬೇಕಾಗುವುದು. ಸಭೆ ಸಮಾರಂಭಗಳಿಗೆ ಹೋಗುವಿರಿ. ಸ್ನೇಹಿತರಿಗೆ ಸಹಾಯ ಮಾಡುವಿರಿ. ವ್ಯವಹಾರದಲ್ಲಿ ನಿಮ್ಮ ಮಾನಸಿಕ ಆನುಕೂಲ್ಯವೂ ಮುಖ್ಯವಾಗುವುದು. ನಿಮ್ಮ ಮೆಚ್ಚುಗೆಯಿಂದ ಅಪರಿಚಿತರಿಗೆ ಖುಷಿಯಾಗಬಹುದು. ಹೊಸ ವಸ್ತುಗಳ ಬಗ್ಗೆ ಅಸೆ ಬರುವುದು. ನಿಧಾನವಾಗಿ ವರ್ಧಿಸುತ್ತಿರುವ ಆದಾಯದಿಂದ ನಿಮ್ಮ ಆರ್ಥಿಕ ಪರಿಸ್ಥಿತಿಯು ಸುಧಾರಿಸುವುದು.

ಧನು ರಾಶಿ: ಸಿಗವ ನೆಮ್ಮದಿಯನ್ನು ದುಡುಕಿ ಹಾಳುಮಾಡಿಕೊಳ್ಳುವಿರಿ. ಸಣ್ಣದಾದರೂ ಸ್ವಂತ ಉದ್ಯೋಗವಿರಬೇಕು ಎನ್ನುವ ಧ್ಯೇಯ ನಿಮ್ಮದು.‌ ಹಣಕಾಸಿನ ವಿಚಾರದಲ್ಲಿ ನಿಮಗೆ ಮಿತ್ರರ ಜೊತೆ ಕಲಹವಾಗಲಿದೆ. ಸಂಗಾತಿಯಿಂದ ಬಲವಂತವಾಗಿ ಉಡುಗೊರೆ ಪಡೆಯುವ ಇರಿ. ಸ್ತ್ರೀಯರಿಗೆ ಸಂತೋಷದ ದಿನವಾಗುವುದು. ಹಿತಶತ್ರುಗಳು ನಿಮ್ಮ ಔದ್ಯೋಗಿಕ ಸಮೀಕ್ಷೆ‌ ಮಾಡುವರು. ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಪ್ರಗತಿಯನ್ನು ಪರಿಶೀಲಿಸುವುದು ಅಗತ್ಯ. ನಿಮ್ಮ ಪ್ರಾಮಾಣಿಕ ಮಾತುಗಳು ಹಣವನ್ನು ಸಾಲವಾಗಿ ಕೊಟ್ಟವರಿಗೆ ನಂಬಿಕೆ ತರಲಿದೆ. ಅಪರಿಚಿತರಿಂದ ಹಣವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ನೆರಮನೆಯರ ಜೊತೆ ಕಲಹವಾಗಲಿದೆ. ನಿಮ್ಮ ಮಾತುಗಳು ಸಂತೋಷವನ್ನು ಕೊಡದೇ ಇರಬಹುದು. ನೂತನ ವಸ್ತ್ರಗಳನ್ನು ಖರೀದಿಸುವಿರಿ. ನಿಮ್ಮ ಕಷ್ಟಕ್ಕೆ ಬಂದವರು ನಿಮ್ಮ ಆಪ್ತರಾಗಲಿದ್ದಾರೆ. ಆರ್ಥಿಕ ವ್ಯವಹಾರವನ್ನು ಬಿಟ್ಟುಕೊಡುವಿರಿ. ಕೊಟ್ಟ ಮಾತನ್ನು ಉಳಿಸಿಕೊಳ್ಳಲು ದೊಡ್ಡ ಪ್ರಯತ್ನ ನಡೆಯುವುದು.

ಮಕರ ರಾಶಿ: ಪ್ರೀತಿಗಾಗಿ ತ್ಯಾಗ‌ಮಾಡಬೇಕಾದೀತು. ದುರಸ್ತಿ ಕಾರ್ಯವನ್ನು ಮಾಡುವವರಿಗೆ ಈ ದಿನ ಒತ್ತಡವಿರುವುದು. ಹೊಸ ಜವಾಬ್ದಾರಿಗಳನ್ನು ನೀವು ನಿರ್ವಹಿಸಬೇಕಾಗುವುದು. ಉನ್ನತ ವಿದ್ಯಾಭ್ಯಾಸದಲ್ಲಿ ಉತ್ತಮ‌ಫಲಿತಾಂಶವು ಸಿಗುವುದು. ಆಕಸ್ಮಿಕ ಧನಲಾಭದಿಂದ ನಿಮಗೆ ಸಂತೋಷವಾಗಲಿದೆ. ಆರ್ಥಿಕತೆಯನ್ನು ನಿಭಾಯಿಸುವ ಕಲೆ ಗೊತ್ತಿರಲಿ. ಅನ್ಯ ಆಲೋಚನೆಯಿಂದ ನಿದ್ರೆಗೆ ತೊಂದರೆ ಆಗಬಹುದು. ಅನ್ಯರ ಸ್ಥಿತಿಯನ್ನು ಕಂಡು ಮನಸ್ಸು ಕರಗುವುದು. ಅನವಶ್ಯಕ ಮಾತುಗಳು ವಿವಾದಕ್ಕೆ ಕಾರಣವಾಗುವುದು. ಹಂಚಿಕೊಂಡು ಮಾಡುವ ಕೆಲಸವು ಸಂತೋಷವನ್ನು ನೀಡುವುದು ಹಾಗೂ ವೇಗವಾಗಿ ಕಾರ್ಯವು ಆಗುವುದು. ಧಾರ್ಮಿಕವಾದ ಆಚರಣೆಗಳಲ್ಲಿ ತೊಡಗುವಿರಿ. ನಿಮ್ಮ ವಿಷಯವನ್ನು ಯಾರ ಬಳಿಯೂ ಹೇಳುವುದು ಬೇಡ. ಮಕ್ಕಳ‌ ಪ್ರಗತಿಯಿಂದ ಸಂತಸ. ಉದ್ಯೋಗದಲ್ಲಿ ಅಧಿಕ ವೇತನದ ನಿರೀಕ್ಷೆ ಇರುವುದು.

ಕುಂಭ ರಾಶಿ: ಇಂದು ಅನವಶ್ಯಕ‌ವಾದ ಪ್ರಯಾಣವಾಗುವುದು. ಇನ್ನೊಬ್ಬರಿಗೆ ಹೇಳುವಾಗ ನೀವು ಅದನ್ನು ಆಚರಿಸಬೇಕಾಗಬಹುದು. ನಿಮ್ಮ ಸಲಹೆಯನ್ನು ಪಡೆಯದೇ ಇರುವುದಕ್ಕೆ ನಿಮಗೆ ಬೇಸರವಾಗುವುದು. ನೌಕರರು ನಿಮ್ಮ ಮೇಲೆ‌ ಮುನಿಸಿಕೊಂಡಾರು. ನಿಮ್ಮ ಪ್ರತಿಜ್ಞೆ ಭಂಗವಾಗಬಹುದು. ಇಂದು ಜೀವನವು ಹೊಸ ತಿರುವನ್ನು ಪಡೆದುಕೊಳ್ಳುವುದು. ದೂರದ ಬಂಧುಗಳ ಆಗಮನವು ಅನಿರೀಕ್ಷಿತವಾಗಿ ಆಗಲಿದೆ. ಹೊಸ ವ್ಯಕ್ತಿಗಳ ಪರಿಚಯವು ನಿಮಗೆ ಆಗುವುದು. ಇಂದು ನಿಮ್ಮ ಸಂಗಾತಿಯಿಂದ ಕೆಲವು ವಿಚಾರಗಳಿಗೆ ಸಲಹೆಯನ್ನು ಪಡೆಯುವಿರಿ. ನಿಮ್ಮ ಮನೆ ಕೆಲಸವು ಇಂದು ಅರ್ಧಕ್ಕೆ ನಿಲ್ಲಬಹುದು. ಸಾಲವೇ ನಿಮಗೆ ದೊಡ್ಡ ಶತ್ರುವಾಗಬಹುದು. ಪ್ರಭಾವಿ ವ್ಯಕ್ತಿಗಳ ಜೊತೆ ಸಾಮಾಜಿಕ‌ ಕಾರ್ಯದಲ್ಲಿ ತೊಡಗಿಕೊಳ್ಳುವಿರಿ. ನಿಮ್ಮವರ ಮೇಲೆ ಅನುಕಂಪ ಇರಲಿದೆ. ಸಾಮಾಜಿಕ ಕಾರ್ಯದಲ್ಲಿ ಉತ್ಸಾಹದಿಂದ ಇರುವಿರಿ. ನಿಮ್ಮ ಬದುಕಿನ ಬದಲಾವಣೆಯನ್ನು ಅನಿವಾರ್ಯವಾಗಿ ಮಾಡಿಕೊಳ್ಳಬೇಕಾಗಬಹುದು.

ಮೀನ ರಾಶಿ: ವ್ಯಾಪಾರದ ಅನುಕೂಲತೆಯನ್ನು ನೋಡಿ ಮುಂದಡಿ ಇಡಬಹುದು.‌ ಧಾರ್ಮಿಕ ನಂಬಿಕೆಗಳು ನಿಮಗೆ ಸತ್ಯವೆನಿಸಿ, ಶ್ರದ್ಧೆಯು ಹೆಚ್ಚಾಗುವುದು. ಇಂದಿನ ಆಲಸ್ಯವು ನಿಮಗೆ ಯಾವ ಕೆಲಸಗಳಿಗೂ ಪ್ರೇರಣೆಯನ್ನು ನೀಡದು. ಪ್ರಗತಿಯನ್ನು ನಿಮ್ಮ ಒತ್ತಡಗಳನ್ನು ಎಲ್ಲವನ್ನು ಮರೆತು ನಿಶ್ಚಿಂತೆಯಿಂದ ಇಂದಿನ‌ ದಿನವನ್ನು ಕಳೆಯುವಿರಿ. ನಿಮ್ಮ ನೌಕರರಿಂದ ತೊಂದರೆಯಾಗಬಹುದು. ‌ನಿಮ್ಮ‌ ಮಾತಿನಿಂದ ದಾಂಪತ್ಯದಲ್ಲಿ ವೈಮನಸ್ಯ ಕಾಣಿಸುವುದು. ಧಾರ್ಮಿಕ ಸ್ಥಳಗಳಿಗೆ ಹೋಗಿ ಬರುವಿರಿ. ತಾಯಿಯ ಮಾತನ್ನು ಉಳಿಸಿಕೊಳ್ಳಲು ಕಷ್ಟವಾದೀತು. ಭೂಮಿಯ ವ್ಯವಹಾರಕ್ಕೆ ಸಂಬಂಧಿಸಿದಂತೆ ನಿಮ್ಮ ವಿಚಾರಗಳು ತಪ್ಪಾಗಿ ಇರಬಹುದು. ಸಿಕ್ಕ ಅಧಿಕಾರವನ್ನು ಸದುಪಯೋಗ ಮಾಡಿಕೊಳ್ಳಲು ಆಲೋಚಿಸುವಿರಿ. ನಿಮ್ಮ ಚಿಂತೆಯೂ ದೂರಾಗಬಹುದು. ಭೂಮಿಯನ್ನು ಖರೀದಿಸುವ ಆಲೋಚನೆ ಇರಲಿದೆ. ನಿಮ್ಮನ್ನು ಕೆಲವರು ಅನಾದರ ಮಾಡಿದಂತೆ ಕಾಣಿಸೀತು. ವಿದ್ಯಾಭ್ಯಾಸದಲ್ಲಿ ಪ್ರಗತಿಯ ಕಷ್ಟವಾಗಬಹುದು.

ಲೋಹಿತ ಹೆಬ್ಬಾರ್ – 8762924271 (what’s app only)

Published On - 12:02 am, Sun, 3 November 24

ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ