AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Horoscope: ಈ ರಾಶಿಯವರು ಹಿತಶತ್ರುಗಳಿಂದ ದೂರವಿರುವುದು ಉತ್ತಮ

ಅಕ್ಟೋಬರ್​ 13 2024:ರವಿವಾರದಂದು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ರಾಶಿ ಭವಿಷ್ಯ ಹೇಗಿದೆ? ಗ್ರಹಗಳ ಸಂಚಾರದಿಂದ ಪರಿಣಾಮ ಬೀರಲಿದೆಯೇ? ರವಿವಾರ ಇಡೀ ದಿನ ಶುಭವಾಗಿರಬೇಕೆಂದರೇ ಏನು ಮಾಡಬೇಕು ಎಂಬುವುದನ್ನು ತಿಳಿಯಿರಿ.

Daily Horoscope: ಈ ರಾಶಿಯವರು ಹಿತಶತ್ರುಗಳಿಂದ ದೂರವಿರುವುದು ಉತ್ತಮ
ದಿನ ಭವಿಷ್ಯ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Oct 13, 2024 | 6:49 AM

Share

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಹಸ್ತಾ, ಮಾಸ: ಆಶ್ವಯುಜ, ಪಕ್ಷ: ಶುಕ್ಲ, ವಾರ: ಭಾನು, ತಿಥಿ: ಏಕಾದಶೀ, ನಿತ್ಯನಕ್ಷತ್ರ: ಧನಿಷ್ಠಾ, ಯೋಗ: ಶೂಲಿ​, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 24 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 13 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 04:44 ರಿಂದ 06:13, ಯಮಘಂಡ ಕಾಲ ಮಧ್ಯಾಹ್ನ 12:19ರಿಂದ 01:47ರವರೆಗೆ, ಗುಳಿಕ ಕಾಲ ಮಧ್ಯಾಹ್ನ 03:16 ರಿಂದ 04:44 ರವರೆಗೆ.

ಸಿಂಹ ರಾಶಿ: ಉದ್ಯೋಗದ ಸ್ಥಾನದಲ್ಲಿ ಶತ್ರುಗಳ ಕಾಟವು ಗೊತ್ತಾಗುವುದು. ಆರ್ಥಿಕ ವಿಚಾರಕ್ಕೆ ದಾಂಪತ್ಯದಲ್ಲಿ ಇಂದು ಕಲಹವಾಗುವುದು. ನಿದ್ರೆಯು ಸರಿಯಾಗಿ‌ ಆಗದೇ ಕಿರಿಕಿರಿ ಎನಿಸಬಹುದು. ಎಲ್ಲರ ಮೇಲೂ ಕೋಪಗೊಳ್ಳುವಿರಿ. ಮಕ್ಕಳ ಕುರಿತು ನಿಮಗೆ ದೂರುಗಳು ಬರಬಹುದು. ಹಿತಶತ್ರುಗಳಿಂದ ದೂರವಿರುವುದು ಉತ್ತಮ. ಈ ದಿನವು ಉತ್ಸಾಹದಿಂದ ಕೆಲಸ ಮಾಡುತ್ತ ಕಳೆದುಹೋಗುವುದು. ಅತಿಯಾದ ಆಲೋಚನೆಯು ತಲೆನೋವು ತಂದೀತು. ಸಹೋದರರ ನಡುವೆ ಸಂಪತ್ತಿಗಾಗಿ ಕಲಹವಾದೀತು. ತಂದೆಯ ಸ್ವಭಾವವು ನಿಮಗೆ ಇಷ್ಟವಾಗದು. ಹೊಸ ಆದಾಯದ ಮೂಲವು ಸಿಕ್ಕಿ ಸಂತೋಷವಾಗಲಿದೆ. ಸಾಮಾಜಿಕ ವ್ಯವಸ್ಥೆಯಲ್ಲಿ ತೊಡಗಲು ಅವಕಾಶವು ಸಿಗುವುದು. ರಾಜಕಾರಣಿಗಳು ಸಮಾಜದಿಂದ ಗೌರವವನ್ನು ಪಡೆದು ಸಂತೋಷಿಸುವಿರಿ. ದುರಾಸೆಯಲ್ಲಿ ಸಿಕ್ಕಿಕೊಂಡು ನಷ್ಟವನ್ನು ಅನುಭವಿಸುವಿರಿ. ಬಂಧುಗಳ ಜೊತೆ ವಿನಾಕಾರಣ ಮನಸ್ತಾಪ ಆಗಬಹುದು. ಇನ್ನೊಬ್ಬರನ್ನು ಪ್ರಶಂಸಿಸುವ ಮನೋಭಾವ ನಿಮ್ಮಲ್ಲಿ ಇರದು. ಮೈ ಮರೆತು ತಪ್ಪು ಮಾಡುವಿರಿ.

ಕನ್ಯಾ ರಾಶಿ: ಕೃತಜ್ಞತೆಯನ್ನು ಬಿಡುಬುದು ಬೇಡ. ಇಂದು ನಿಮ್ಮ ಮೇಲೆ ಎಲ್ಲರಿಂದ ಆಕ್ರಮಣವಾಗಬಹುದು. ಸ್ಥಿರಾಸ್ತಿಯ ವಿಕ್ರಯದ ವಿಚಾರದಲ್ಲಿ ಏಕಮುಖವಾದ ಅಭಿಪ್ರಾಯವು ಒಳ್ಳೆಯದಲ್ಲ. ಸ್ನೇಹಿತರು ನಿಮ್ಮ ಮಾರ್ಗವನ್ನು ತಪ್ಪಿಸುವರು. ಶಿಕ್ಷಣ ಕ್ಷೇತ್ರದಲ್ಲಿ ನೀವು ಸಾಧನೆ ಮಾಡಲು, ನಿಮ್ಮ‌ ಕಾರ್ಯವನ್ನು ಗುರುತಿಸಲು ಸಕಾಲ. ನಿಮಗೆ ಬಂದ‌ ಅಪವಾದವನ್ನು ಜಾಣ್ಮೆಯಿಂದ ತಪ್ಪಿಸಿಕೊಳ್ಳುವಿರಿ.‌ ಕತ್ತಲಲ್ಲಿರುವ ನಿಮಗೆ ಬೆಳಕನ್ನು ತೋರುವವರು ಬರುವರು. ನಿಮ್ಮ ಹೊಸ ಉದ್ಯಮವು ಸತತ ಪರಿಶ್ರಮದಿಂದ ಅಭಿವೃದ್ಧಿಯನ್ನು ಕಾಣುವುದು. ಪ್ರಭಾವೀ ಜನರ‌ ಜೊತೆ ಅಂತರವನ್ನು ಇಟ್ಟುಕೊಳ್ಳಿ.‌ ಮನೆಯವರ ವರ್ತನೆಗೆ ನಿಮಗೆ ಸಿಟ್ಟು ಬರಬಹುದು. ಸಂಗಾತಿಯ ವಿಚಾರದಲ್ಲಿ ನಿಮಗೆ ಅಸಮಾಧವು ಆಗಬಹುದು. ಮನಸ್ಸಿಗೆ ಹಿಡಿಸದ್ದನ್ನು ಪ್ರಯತ್ನ ಪೂರ್ವಕವಾಗಿ ಮಾಡುವುದು ಬೇಡ. ಆಸ್ತಿಯನ್ನು ಸರಿಯಾಗಿ ವಿಭಾಗಿಸಿಕೊಳ್ಳಿ. ನಿಮ್ಮ ಯೋಜನೆಯನ್ನು ಪ್ರಯೋಗಕ್ಕೆ ತರಲು ಪೂರ್ಣ ಯಶಸ್ಸನ್ನು ಪಡೆಯಲಾರಿರಿ.

ತುಲಾ ರಾಶಿ: ಕಳೆದುಕೊಂಡಲ್ಲಿಯೇ ಹುಡುಕಿದರೆ ಸಿಗಬಹುದು. ನಿಮ್ಮನ್ನು ಗೌರವಿಸಿಲ್ಲ ಎಂಬ ಅಳುಕು ಕಾಣಿಸುಬಹುದು. ಮನಸ್ಸಿಗೆ ಹಿಡಿಸದ ಕೆಲಸವನ್ನು ಮಾಡಲು ಹಿಂಜರಿಯುವಿರಿ. ಕುಟುಂಬದ ಜೊತೆ ಪುಣ್ಯ ಸ್ಥಳಗಳಿಗೆ ಹೋಗುವಿರಿ. ಮನಸ್ಸಿನ ಚಾಂಚಲ್ಯಕ್ಕೆ ನೀವು ಯೋಗ್ಯವಾದ ಉಪಚಾರವನ್ನು ಮಾಡುವಿರಿ. ಗೃಹನಿರ್ಮಾಣದ ಬಗ್ಗೆ ಎಲ್ಲರ ಜೊತೆ ಕುಳಿತು ಚರ್ಚಿಸುವಿರಿ. ದಾನವು ನಿಮ್ಮ ದೋಷವನ್ನು ನಾಶ ಮಾಡುವುದು.‌ ಒಳ್ಳೆಯ ವಸ್ತುವನ್ನು ದಾನ ಮಾಡಿ. ಅಧ್ಯಾತ್ಮದಲ್ಲಿ ಆಸಕ್ತಿ ಇರಲಿದೆ. ಪ್ರೇಮಜೀವನವು ನಿಮಗೆ ಸಾಕಾಗಿ ಹೋಗುವುದು. ವಿವಾಹದ ಮಾತುಕತೆಯು ನಿಮಗೆ ಸಂತೋಷವನ್ನು ನೀಡದು. ನೆರೆ ಹೊರೆಯ ಜೊತೆ ಕಲಹವಾಗುವುದು. ಮಕ್ಕಳ‌ ಭವಿಷ್ಯದ ಬಗ್ಗೆ ಚಿಂತೆ ಇರುವುದು. ಬೇರೆಯವರ ಬಗ್ಗೆ ನಿಮಗೆ ಅಸೂಯೆ ಬರಬಹುದು. ವಿರುದ್ಧ ವಂಚನೆಯ ಆರೋಪವು ಬರಬಹುದು. ನಿಮಗೆ ಬರುವ ಯಾವುದನ್ನೂ ನಿಯಂತ್ರಣ ಮಾಡಲಾಗದು.

ವೃಶ್ಚಿಕ ರಾಶಿ: ಒಳ್ಳೆಯ ಆಚಾರದಿಂದ ನಿಮಗೇ ಸಂತೃಪ್ತಿ ಸಿಗುವುದು. ಇಂದು ನಿಮ್ಮ ವಿದೇಶ ಪ್ರಯಾಣವು ಸಫಲವಗುವುದುಬೆಂಬ ಭರವಸೆ ಬರಲಿದೆ. ಹಣವನ್ನು ಹೊಂದಿಸಲು ನಿಮಗೆ ಕಷ್ಟವಾದೀತು. ಸ್ಥಿರಾಸ್ತಿಗಳು ನಿಮಗೆ ಲಾಭವನ್ನು ಕೊಟ್ಟಾವು. ಇಂದಿನ ಆಯಾಸವು ವಿಶ್ರಾಂತಿಯನ್ನು ಕೊಟ್ಟೀತು. ಇನ್ನೊಬ್ಬರಿಂದ ಏನನ್ನಾದರೂ ನಿರೀಕ್ಷಿಸಿ ಅನಂತರ ಬೇಸರಗೊಳ್ಳುವಿರಿ. ಉದ್ಯೋಗಿಗಳಿಗೆ ಸಂತೋಷದ ಸಮಾಚಾರವು ಇರುವುದು. ನಿಮಗೆ ಸಂಬಂಧಿಸಿದ ಸಲಹೆಗಳು ಬಂದರೆ ಅದನ್ನು ಸ್ವೀಕರಿಸಿ. ಅವರನ್ನು ಗೌರವಿಸಿ. ಅನಿರೀಕ್ಷಿತ ಸಂಪತ್ತು ನಿಮಗೆ ಸಂತೋಷವನ್ನು ಕೊಡುವುದು.‌ ಅರಂಭಗಳಿಗೆ ಭೇಟಿ ನೀಡುವಿರಿ. ಮನೆಯಲ್ಲಿ ನಿಮ್ಮ ಸಹಕಾರವು ಪ್ರಶಂಸೆಗೆ ಪಾತ್ರವಾಗುವುದು. ಬಂಧುಗಳ‌ ಬಗ್ಗೆ ನಿಮಗೆ ಪ್ರೀತಿ ಇರುವುದು. ಅಪರಿಚಿತರು ನಿಮ್ಮ ಎಲ್ಲ‌ ವಿಚಾರಗಳನ್ನು ಚರ್ಚಿಸುವರು. ಅನಿವಾರ್ಯವಾಗಿ ಮನೆಯಿಂದ ದೂರ ಹೋಗುವಿರಿ. ಕೇವಲ‌ ನಗುವಿನಿಂದ ಇನ್ಮೊಬ್ಬರನ್ನು ನೀವು ಸೋಲಿಸಬಹುದು.

ರಣರೋಚಕ ಘಟ್ಟದಲ್ಲಿ ಆಸ್ಟ್ರೇಲಿಯಾ vs ಇಂಗ್ಲೆಂಡ್ ಟೆಸ್ಟ್ ಪಂದ್ಯ
ರಣರೋಚಕ ಘಟ್ಟದಲ್ಲಿ ಆಸ್ಟ್ರೇಲಿಯಾ vs ಇಂಗ್ಲೆಂಡ್ ಟೆಸ್ಟ್ ಪಂದ್ಯ
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು