Horoscope Today: ಈ ರಾಶಿಯವರ ಆಸೆಗಳು ಕೈಗೂಡಬಹುದು, ಆತುರ ಬೇಡ

08 ಜುಲೈ​​ 2024ರ​​ ನಿಮ್ಮ ರಾಶಿ ಭವಿಷ್ಯ: ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಗಳ ಇಂದಿನ ಭವಿಷ್ಯ ಹೇಗಿದೆ ತಿಳಿಯಿರಿ. ಯಾವ ರಾಶಿಯವರಿಗೆ ಶುಭ ಅಥವಾ ಅಶುಭ ಕಾದಿದೆ ಎಂದು ತಿಳಿಯಿರಿ. ಸಾಕಷ್ಟು ಜನರು ಮನರಂಜನೆ, ಮಾರ್ಗದರ್ಶನ ಅಥವಾ ತಮ್ಮ ಜೀವನದಲ್ಲಿ ಘಟಿಸುವ ಬೆಳವಣಿಗೆಗಳನ್ನು ತಿಳಿದುಕೊಳ್ಳಲು ತಮ್ಮ ಜಾತಕವನ್ನು ಓದುತ್ತಾರೆ.

Horoscope Today: ಈ ರಾಶಿಯವರ ಆಸೆಗಳು ಕೈಗೂಡಬಹುದು, ಆತುರ ಬೇಡ
ಈ ರಾಶಿಯವರ ಆಸೆಗಳು ಕೈಗೂಡಬಹುದು, ಆತುರ ಬೇಡ
Follow us
|

Updated on: Jul 08, 2024 | 12:02 AM

ಜಾತಕವನ್ನು (Horoscope) ಸಾಮಾನ್ಯವಾಗಿ ಹನ್ನೆರಡು ಜ್ಯೋತಿಷ್ಯ ಚಿಹ್ನೆಗಳಾಗಿ ವಿಂಗಡಿಸಲಾಗಿದೆ. ಪ್ರತಿಯೊಂದೂ ವ್ಯಕ್ತಿಯ ಜೀವನ ಮತ್ತು ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುತ್ತದೆ. ಜಾತಕವು ಒಬ್ಬ ವ್ಯಕ್ತಿಯ ಹುಟ್ಟಿನ ಸಮಯದಲ್ಲಿ ಗ್ರಹಗಳು ಮತ್ತು ನಕ್ಷತ್ರಗಳ ಸ್ಥಾನಗಳ ಆಧಾರದ ಮೇಲೆ ಭವಿಷ್ಯದ ಮುನ್ಸೂಚನೆ ನೀಡಲಾಗುತ್ತದೆ. ಇದು ಸಾಮಾನ್ಯವಾಗಿ ಜ್ಯೋತಿಷ್ಯಶಾಸ್ತ್ರದೊಂದಿಗೆ ಸಂಬಂಧಿಸಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಮಾಸ, ಮಹಾನಕ್ಷತ್ರ: ಪುನರ್ವಸು, ಮಾಸ: ಆಷಾಢ, ಪಕ್ಷ: ಶುಕ್ಲ, ವಾರ: ಸೋಮ, ತಿಥಿ: ತೃತೀಯಾ, ನಿತ್ಯನಕ್ಷತ್ರ: ಪುಷ್ಯಾ, ಯೋಗ: ವ್ಯಾಘಾತ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 10 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 04 ನಿಮಿಷಕ್ಕೆ, ರಾಹು ಕಾಲ ಸಂಜೆ 05:28 ರಿಂದ 07:05ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:38 ರಿಂದ 02:15ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:51 ರಿಂದ 05:28ರ ವರೆಗೆ.

ಮೇಷ ರಾಶಿ: ಕೆಲವು ಘಟನೆಗಳನ್ನು ನೀವು ಮರೆಯಲಾಗದು. ಸವಾಲುಗಳು ಬೇಡವೆಂದರೂ ಬರುತ್ತವೆ. ಕೆಲಸದ ಸ್ಥಳದಲ್ಲಿ ಭಿನ್ನಾಭಿಪ್ರಾಯ ಇರಲಿದೆ. ಸ್ನೇಹಿತರ ಮಾತು ನಿಮಗೆ ಸಿಟ್ಟನ್ನು ತರಿಸಬಹುದು. ಆತ್ಮೀಯರ ಸಲಹೆಯನ್ನು ಸ್ವೀಕರಿಸುವಿರಿ. ಕಳೆದುಹೋದ ಸಮಯವನ್ನು ಮತ್ತೆ ನೆನಪಿಸಿಕೊಳ್ಳಲು ಹೋಗುವುದಿಲ್ಲ. ವಾಹ‌ನದ ವಿಚಾರದಲ್ಲಿ ಸಂತೃಪ್ತಿ ಇರಲಿದೆ. ನಿಮ್ಮ ಹೆಸರು ಬರಬೇಕೆಂದು ಬಹಳ ಶ್ರಮವಹಿಸುವಿರಿ. ಆದರೆ ಅದೆಲ್ಲವೂ ವ್ಯರ್ಥವಾಗಬಹುದು. ಇರುವುದನ್ನು ಹಾಗೆಯೇ ಹೇಳಿದ್ದರಿಂದ ನೀವು ನಿಷ್ಠುರರಾಗುವಿರಿ. ದಾಂಪತ್ಯದಲ್ಲಿ ಹೆಚ್ಚು ಖುಷಿಯನ್ನು ಅನುಭವಿಸಲಿದ್ದೀರಿ. ಆರ್ಥಿಕತೆಯ ಹೊರೆಯನ್ನು ಕಡಿಮೆ ಮಾಡಿಕೊಳ್ಳಿ. ಜಲೋದ್ಯಮದಲ್ಲಿ ತೊಡಗಿದವರಿಗೆ ಅಲ್ಪ ಲಾಭ ಆಗಲಿದೆ. ಕುಟುಂಬದವರ ಬಗೆಗಿನ ನಿಂದನೆಯನ್ನು ಸಹಿಸಲಾರಿರಿ. ನಿಮ್ಮ ಆದಾಯ ಮೂಲವನ್ನು ಎಲ್ಲರ ಜೊತೆ ಹಂಚಿಕೊಳ್ಳುವ ಸಂದರ್ಭವು ಬರಬಹುದು. ಸಹವಾಸವು ಉತ್ತಮರ ಜೊತ ಇರಲಿ.

ವೃಷಭ ರಾಶಿ: ಅಕಾರಣವಾಗಿ ಉದ್ವೇಗ ಒಳಗಾಗುವುದು ನಿಮ್ಮವರಿಗೆ ಅಚ್ಚರಿಯಾದೀತು. ಸಂಪತ್ತು ಬರುವುದು ಮಾತ್ರ ಕಾಣಿಸುತ್ತದೆ. ನೋಡು ನೋಡುತ್ತಿದ್ದಂತೆ ಎಲ್ಲವೂ ಖಾಲಿಯಾಗುವುದು. ಕೂಡಿಟ್ಟ ಹಣವೆಲ್ಲವೂ ಕರಗುತ್ತಿದೆ ಎನ್ನುವ ಭಯವು ಉಂಟಾಗಲಿದೆ. ನಿಮ್ಮ ನೆಚ್ಚಿನವರ ಭೇಟಿಯಾಗಬಹುದು. ಅವರ ಜೊತೆ ಹೆಚ್ಚು ಸಮಯವನ್ನು ಕಳೆಯುವಿರಿ. ಅವಕಾಶಗಳಿದ್ದರೂ ಬಳಸಿಕೊಳ್ಳುವ ಮನಸ್ಸು ಇರದು. ಸಾಲದ ಭಯವೇ ನಿಮ್ಮನ್ನು ಕಾಡುವುದು. ರಾಜಕಾರಣಿಗಳು ಬಹಳ ಜಾಗರೂಕತೆಯಿಂದ ಜವಾಬ್ದಾರಿಯನ್ನು ನಿರ್ವಹಿಸಿ. ಸಂಗಾತಿಯ ಜೊತೆ ಹೆಚ್ಚು ಸಮಯವನ್ನು ಕಳೆಯಬಹುದು. ವಿದ್ಯಾರ್ಥಿಗಳು ಉತ್ತಮವಾದ ಲಕ್ಷ್ಯವನ್ನು ಇಟ್ಟುಕೊಂಡಿದ್ದರೂ ನಿಮಗೆ ತಲುಪಲು ಕಷ್ಟವಾದೀತು. ಕೃಷಿ ಕಾರ್ಯಗಳೇ ನಿಮಗೆ ಹಿತವೆನಿಸುವುದು. ವಿಶ್ವಾಸಘಾತದಿಂದ ನಿಮಗೆ ಬೇಸರವಾಗಬಹುದು.

ಮಿಥುನ ರಾಶಿ: ಇಂದು ನಿಮ್ಮ ಮುಂದಿನ ಒಳ್ಳೆಯ ಕಾಲವನ್ನು ಎದುರುನೋಡುತ್ತ ಕುಳಿತಿರುವಿರಿ. ನಿಮ್ಮ ತೊಂದರೆಗಳೇ ಸಾವಿರವಿದ್ದರೂ ಇನ್ನೊಬ್ಬರಿಗೆ ಸಹಾಯವನ್ನು ಮಾಡುವಿರಿ. ವಿದ್ಯಾರ್ಥಿಗಳು ಅಧಿಕ ಅಧ್ಯಯನವನ್ನು ಮಾಡಬೇಕಿದೆ. ಸಾಹಿತ್ಯ ಕ್ಷೇತ್ರದಲ್ಲಿ ಬೆಳೆಯುವ ತವಕವಿರುವುದು. ತಂದೆಯವರಿಗೆ ಎದುರು ಮಾತನಾಡುವ ಸ್ವಭಾವವನ್ನು ಬಿಡುವುದು ಒಳ್ಳೆಯದು. ನಿಮ್ಮ ಅಂತರಂಗದಲ್ಲಿ ನಿಮ್ಮ ಕೆಲಸಕ್ಕೆ ಪಶ್ಚಾತ್ತಾಪಭಾವವು ಮೂಡಬಹುದು. ಯಾರ ಸಹಾಯವನ್ನೂ ಒಡೆಯದೇ ಸ್ವತಂತ್ರವಾಗಿ ಇಂದಿನ ಕೆಲಸವನ್ನು ಮಾಡಿ ಮುಗಿಸುವಿರಿ. ಯಾರಿಗೋ ಸಮಾನವಾಗಿ ನಿಲ್ಲುವ ದುಸ್ಸಾಹಸ ಬೇಡ. ಸಂಗಾತಿಗೆ ಸಮಯವನ್ನು ಕೊಡುತ್ತೇನೆಂದರೂ ಆಗದು. ಇಂದು ನಿಮ್ಮ ಅಗತ್ಯ ಕಾರ್ಯಗಳಿಗೆ ಸಮಯವನ್ನು ಕೊಡುವುದು ಕಷ್ಟವಾದೀತು. ನಾಚಿಕೆಯ ಸ್ವಭಾವವು ನಿಮ್ಮ ಕಾರ್ಯಗಳಿಗೆ ಅಡ್ಡಿಯಾಗುವುದು.

ಕಟಕ ರಾಶಿ: ನಿಮ್ಮ ಆಸೆಗಳು ಕೈಗೂಡುವಾಗ ಅದನ್ನು ಅನುಭವಿಸುವ ಮಾನಸಿಕತೆಯೂ ಬೇಕಾಗುವುದು. ಪ್ರವಾಸಕ್ಕೆ ಮನಸ್ಸು ಮಾಡುವಿರಿ. ಮನಸ್ಸಿಗೆ ಹಿತವಾದ ಸಂಗತಿಗಳು ನಡೆಯಲಿದೆ. ಎಲ್ಲದಕ್ಕೂ ಸಿಟ್ಟುಗೊಳ್ಳುವ ಅಗತ್ಯವಿಲ್ಲ. ಕೆಲವೊಂದನ್ನು ಹಾಗಯೇ ಬಿಡುವುದು ಒಳ್ಳೆಯದು. ನಿಮ್ಮ ಆರೋಗ್ಯವೂ ಚೆನ್ನಾಗಿರಲಿದೆ. ಹಣವನ್ನು ಹೊಂದಿಸಲು ಹೆಚ್ಚು ಕಷ್ಟವಾದೀತು. ಏಕಕಾಲದಲ್ಲಿ ಎಲ್ಲವನ್ನೂ ಮಾಡಲಾಗದು. ಧಾರ್ಮಿಕವಾಗಿ ಶ್ರದ್ಧೆ ಉಳ್ಳವರಾದರೂ ಅದನ್ನು ತೋರಿಸಿಕೊಳ್ಳುವುದಿಲ್ಲ. ಹಾಗಾಗಿ ನಿಮ್ಮನ್ನು ನಾಸ್ತಿಕರು ಎಂದುಕೊಂಡಾರು. ವಿವಾದಕ್ಕೆ ಆದಷ್ಟು ಆಸ್ಪದ ಕೊಡದಿದ್ದರೇ ಉತ್ತಮ. ಕೆಲಸದಿಂದ ನೀವು ನಿರೀಕ್ಷಿಸಿರುವುದು ಸಾಕಾರಗೊಳ್ಳಬಹುದು. ಉದ್ಯೋಗಿಗಳಿಗೆ ವೇತನ ಸಿಗುವುದು. ಸಾಲವನ್ನು ತೀರಿಸುವ ಭರದಲ್ಲಿ ಖರ್ಚಿಗೂ ಹಣವನ್ನು ಇಟ್ಟುಕೊಳ್ಳುವುದನ್ನು ಮರೆಯಬಹುದು. ಆಸ್ತಿಯ‌ ಖರೀದಿಗೆ ಬೇಕಾದ ಹಣವನ್ನು ನೀವು ಇನ್ನೊಬ್ಬರಿಂದ ಸಾಲವಾಗಿ ಪಡೆಯುವಿರಿ. ಭೌತಿಕ ವಸ್ತುಗಳು ನಿಮಗೆ ಅಲ್ಪಸಂತೋಷವನ್ನು ಕೊಟ್ಟೀತು.

ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ