Horoscope: ದಿನ ಭವಿಷ್ಯ: ಸಾಲದ ವಿಚಾರದಲ್ಲಿ ಜಾಗರೂಕತೆ ಅತ್ಯವಶ್ಯಕ
ನಿಮ್ಮ ರಾಶಿ ಧನು, ಮಕರ, ಕುಂಭ, ಮೀನ ಆಗಿದ್ದರೆ, ಸೋಮವಾರ (ಜುಲೈ 07) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಸೋಮವಾರ (ಜುಲೈ 08) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಮಾಸ, ಮಹಾನಕ್ಷತ್ರ: ಪುನರ್ವಸು, ಮಾಸ: ಆಷಾಢ, ಪಕ್ಷ: ಶುಕ್ಲ, ವಾರ: ಸೋಮ, ತಿಥಿ: ತೃತೀಯಾ, ನಿತ್ಯನಕ್ಷತ್ರ: ಪುಷ್ಯಾ, ಯೋಗ: ವ್ಯಾಘಾತ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 10 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 04 ನಿಮಿಷಕ್ಕೆ, ರಾಹು ಕಾಲ ಸಂಜೆ 05:28 ರಿಂದ 07:05ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:38 ರಿಂದ 02:15ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:51 ರಿಂದ 05:28ರ ವರೆಗೆ.
ಧನು ರಾಶಿ: ಇಂದು ನಿಮ್ಮವರ ಮಾತೇ ನಿಮಗೆ ಕಷ್ಟವಾಗುವುದು. ವಿದೇಶಿ ವಸ್ತುಗಳ ವ್ಯವಹಾರ ಮಾಡುವವರಿಗೆ ಸ್ವಲ್ಪ ಹಿನ್ನಡೆ ಆಗಬಹುದು. ನಿಮಗಿಂತ ಹಿರಿಯರಿಗೆ ಗೌರವವನ್ನು ಕೊಡಿ. ಮಕ್ಕಳ ಜೊತೆ ಶಾಂತ ರೀತಿಯಿಂದ ವರ್ತಿಸಿ. ಹೊಸತನ್ನು ಕಲಿಯುವ ಹುಮ್ಮಸ್ಸು ಇರುವುದು. ನಿಮ್ಮ ಸಂಗಾತಿಯನ್ನು ಮತ್ತಷ್ಟು ಹತ್ತಿರದಿಂದ ಅರ್ಥಮಾಡಿಕೊಳ್ಳುವಿರಿ. ಸ್ತ್ರೀಯರು ಆಲಂಕಾರಿಕ ವಸ್ತುಗಳನ್ನು ಖರೀದಿಸಬಹುದು. ಕುಟುಂಬದಲ್ಲಿ ಹಳೆಯ ಘಟನೆಯನ್ನು ನೆನಪಿಸಿಕೊಂಡು ವಾದಗಳನ್ನು ಮಾಡಬಹುದು. ಪುಣ್ಯಸ್ಥಳಗಳ ದರ್ಶನವನ್ನು ಮಾಡಲಿದ್ದೀರಿ. ಬೆಳಗಿನ ಉತ್ಸಾಹವು ಸಂಜೆಯ ತನಕ ಇರಲಿದೆ. ಸ್ನೇಹಿತರಿಂದ ಅಮೂಲ್ಯವಾದ ಉಡುಗೊರೆ ಸಿಗಲಿದೆ. ಋಣವಿದ್ದರೆ ಸಿಗುತ್ತದೆ ಎಂಬ ಭಾವದಲ್ಲಿ ಇರುವಿರಿ. ನಿಮ್ಮದೇ ಶ್ರಮದಿಂದ ಭೂಲಾಭವನ್ನು ಮಾಡಿಕೊಂಡರೂ ನಿಮಗೆ ಸಲ್ಲದ ಮಾತುಗಳನ್ನು ಕೇಳಬೇಕಾದೀತು. ಚರಾಸ್ತಿಯ ಗಳಿಕೆಯಲ್ಲಿ ಗೊಂದಲವಿರವುದು.
ಮಕರ ರಾಶಿ: ಇಂದು ನಿಮ್ಮನ್ನು ವಿರೋಧಿಸುವವರು ನಿಮ್ಮ ಬಗ್ಗೆ ಬೇಡದ ಸಂಗತಿಗಳನ್ನು ಹರಿದುಬಿಡುವರು. ಸಂಗಾತಿಯೊಂದಿಗೆ ಸ್ನೇಹದಿಂದ ವರ್ತಿಸಿ. ಇಲ್ಲವಾದರೆ ಭಿನ್ನಾಭಿಪ್ರಾಯಗಳು ಸವಕಾಶ ಸಿಗುತ್ತದೆ. ಎಲ್ಲ ಸೃಜನಶೀಲತೆಯಿಂದ ದೂರವುಳಿಯುವಿರಿ. ಆಭರಣವನ್ನು ಖರೀದಿಸುವ ಮನಸ್ಸು ಉಂಟಾಗಬಹುದು. ಸದ್ಯಕ್ಕೆ ಅದು ಬೇಡ. ಉಳಿಸಿದ ಹಣವು ನಿಮ್ಮ ಆಪತ್ತಿಗೆ ನೆರವಾಗುವುದು. ಕಷ್ಟವಾದರೂ ಕಛೇರಿಯಲ್ಲಿ ಕೆಲಸವನ್ನು ಮಾಡಬೇಕಾದೀತು. ಸರ್ಕಾರಿ ನೌಕರರು ಬಡ್ತಿ ಪಡೆಯಬಹುದು. ಸಂದರ್ಭಕ್ಕೆ ಅನುಸಾರವಾಗಿ ನಿಮ್ಮ ಮಾತುಗಳಿರಲಿ. ಕುಟುಂಬ ಜೊತೆ ಆರೋಗ್ಯದ ಬಗ್ಗೆ ಹಂಚಿಕೊಳ್ಳಿ. ಎಲ್ಲದಕ್ಕೂ ಕಾರಣವನ್ನು ಹುಡುಕುತ್ತ ಕಾಲಹರಣ ಮಾಡಬೇಡಿ. ಸಾಲದಿಂದ ಬಿಡುಗಡೆ ಹೊಂದಲು ಆದಾಯದ ಮೂಲವನ್ನು ಹೆಚ್ಚಿಸಿಕೊಳ್ಳುವಿರಿ. ಕಷ್ಟವಾದರೂ ತಗ್ಗಿ ನಡೆಯುವುದು ಅನಿವಾರ್ಯ. ಸ್ಥಿರಾಸ್ತಿಯ ಸಂಪಾದನೆಗೆ ಆಪ್ತರ ಮಾರ್ಗದರ್ಶನವನ್ನು ಪಡೆದುಕೊಳ್ಳುವುದು ಉತ್ತಮ. ಕೊಡುಕೊಳ್ಳುವ ವ್ಯವಹಾರದಲ್ಲಿ ದಾಖಲೆಗಳು ಸರಿಯಾಗಿರಲಿ.
ಕುಂಭ ರಾಶಿ: ಇಂದು ವಿದ್ಯಾರ್ಥಿಗಳಿಗೆ ಎಲ್ಲರಿಂದ ಉತ್ತಮ ಪ್ರೋತ್ಸಾಹ ದೊರೆಯುತ್ತದೆ. ಸಹಕಾರವೂ ಸಿಗಲಿದೆ. ವ್ಯವಹಾರಗಳ ಬಗ್ಗೆ ಪಾಲುದಾರರ ಜೊತೆ ತಕ್ಷಣದಲ್ಲಿ ಮಾತನಾಡಬೇಕಾದ ಹಾಗೂ ತೀರ್ಮಾನ ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಕಛೇರಿಗೆ ನಿಯತ್ತಾಗಿ ಹೋಗಿ. ನಿಮ್ಮ ಯಾವ ವಿಚಾರವನ್ನು ಅವರು ಕೇಳರು. ಮನೆಯ ಕೆಲಸವನ್ನು ಎಲ್ಲರ ಸಹಾಯದಿಂದ ಬೇಗ ಮುಗಿಸುವಿರಿ. ಯೋಗ್ಯತೆ ಇದ್ದರು ಯೋಗದ ಬಲ ಅಲ್ಪವಿದೆ. ಹಾಗಾಗಿ ಹೆಚ್ಚು ಪ್ರಯತ್ನದ ಅವಶ್ಯಕತೆ ಇದೆ. ಫಲವನ್ನೂ ಅತಿಯಾಗಿ ನಿರೀಕ್ಷಿಸಬೇಡಿ. ಒತ್ತಾಯದಿಂದ ನೀವಿಂದು ಪ್ರಯಾಣ ಮಾಡಲಿದ್ದೀರಿ. ನಿಮಗಿಷ್ಟವಾಗಿದ್ದು, ಬೇಕಾದ ಸಮಯಕ್ಕೆ ಸಿಗದು. ಅತಿಯಾದ ನಿದ್ರೆಯಿಂದ ಜಾಡ್ಯ ಉಂಟಾಗಬಹುದು. ಸಮಾರಂಭಗಳಿಗೆ ಭೇಟಿ ನೀಡುವ ಸಾಧ್ಯತೆ ಇದೆ. ಇಷ್ಟರೊಳಗೆ ಆಗಬೇಕಾದ ಸರ್ಕಾರಿ ಕೆಲಸವು ಮತ್ತೂ ಮುಂದಕ್ಕೆ ಹೋಗುವುದು. ಯಂತ್ರಗಳಿಂದ ದೇಹಕ್ಕೆ ಆಕಸ್ಮಿಕವಾಗಿ ತೊಂದರೆ ಆಗಬಹುದು.
ಮೀನ ರಾಶಿ: ಇಂದು ನೀವು ಕೆಲವರ ವಿಚಾರದಲ್ಲಿ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ. ಬಹುದಿನದಿಂದ ಅಪೇಕ್ಷಿಸಿದ್ದ ಯಾತ್ರೆಗೆ ಸಿದ್ಧತೆ ಮಾಡಿಕೊಳ್ಳುವಿರಿ. ವೃತ್ತಿರಂಗದಲ್ಲಿ ನಿಮ್ಮ ಸ್ಥಾನವು ಹೆಚ್ಚಾಗುವುದಿಲ್ಲ. ಕೆಲಸಕ್ಕೂ ಇನ್ನೊಬ್ಬರ ಮೇಲೆ ಅವಲಂಬಿಸಬೇಡಿ. ನಿಮ್ಮ ದುಡಿಮೆಯ ದಾರಿಯನ್ನು ಬಹಿರಂಗವಾದರೆ, ಇತರರು ಅಸೂಯೆ ಪಟ್ಟಾರು. ಅದು ನಿಮಗೆ ನಕಾರಾತ್ಮಕ ಪ್ರಭಾವವನ್ನು ಬೀರಬಹುದು. ಕಾನೂನಿನ ಭಯವು ನಿಮ್ಮನ್ನು ಕಾಡಬಹುದು. ವ್ಯಾಪರವು ಅಲ್ಪ ಲಾಭವನ್ನು ತಂದೀತು. ಕಛೇರಿಯಲ್ಲಿ ನಿಮ್ಮ ಹಂತದಲ್ಲಿ ಬಗೆ ಹರಿಯುವ ಸಮಸ್ಯೆಗಳನ್ನು ಮೇಲಕ್ಕೆ ಒಯ್ಯವುದು ಬೇಡ. ಅದು ಇನ್ನೊಂದು ಮುಖವನ್ನೂ ತೋರಿಸೀತು. ಎಚ್ಚರಿಕೆಯಿಂದ ಇರಿ. ಉದ್ಯೋಗದಲ್ಲಿ ಭಡ್ತಿಗಾಗಿ ಪ್ರಯತ್ನಿಸುವಿರಿ. ಬೆರೆಯುವುದು ಕಷ್ಟವಾದೀತು. ಗೊಂದಲದಿಂದ ಇರುವ ಮನಸ್ಸು ಇಂದು ಪ್ರಶಾಂತವಾಗಲಿದೆ. ಸಾಲದ ವಿಚಾರದಲ್ಲಿ ಜಾಗರೂಕತೆ ಅತ್ಯವಶ್ಯಕ. ಸಹೋದ್ಯೋಗಿಗಳ ಜೊತೆ ಭಿನ್ನಾಭಿಪ್ರಾಯ ಬಂದು ಅದು ವೈಯಕ್ತಿಕ ಶತ್ರುತ್ವ ಬರಬಹುದು.
ಲೋಹಿತ ಹೆಬ್ಬಾರ್ – 8762924271 (what’s app only)