AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope: ರಾಶಿಭವಿಷ್ಯ, ಈ ರಾಶಿಯವರು ಆರೋಪದಲ್ಲಿ ಸಿಕ್ಕಿಹಾಕಿಕೊಳ್ಳುವ ಸನ್ನಿವೇಶ ಬರಬಹುದು, ಎಚ್ಚರ..

ಇಂದಿನ ದಿನಭವಿಷ್ಯ: ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಜನವರಿ 17, 2024ರ ನಿಮ್ಮ ರಾಶಿಭವಿಷ್ಯ ಹೇಗಿದೆ? ಇಂದಿನ ಭವಿಷ್ಯದಲ್ಲಿ ನಿವು ಲಾಭದ ನಿರೀಕ್ಷೆ ಮಾಡಬಹುದಾ? ಶುಭ-ಅಶುಭ ಇದೆಯಾ ಎಂಬಿತ್ಯಾದಿ ಮಾಹಿತಿಗಳು ಇಲ್ಲಿವೆ.

Horoscope: ರಾಶಿಭವಿಷ್ಯ, ಈ ರಾಶಿಯವರು ಆರೋಪದಲ್ಲಿ ಸಿಕ್ಕಿಹಾಕಿಕೊಳ್ಳುವ ಸನ್ನಿವೇಶ ಬರಬಹುದು, ಎಚ್ಚರ..
ದಿನಭವಿಷ್ಯImage Credit source: iStock Photo
TV9 Web
| Edited By: |

Updated on: Jan 17, 2024 | 12:30 AM

Share

ಒಂದಷ್ಟು ಮಂದಿ ಬೆಳಗ್ಗೆ ಎದ್ದ ನಂತರ ನಿತ್ಯ ಪಂಚಾಂಗ ಮತ್ತು ರಾಶಿಭವಿಷ್ಯ ನೋಡುತ್ತಾರೆ. ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಲಾಭ ಕಾದಿದೆಯಾ? ನಷ್ಟು ಉಂಟಾಗಬಹುದಾ? ಶುಭ, ಅಶುಭ ಇದೆಯಾ? ಸಂದಿಗ್ಧ ಪರಿಸ್ಥಿತಿ ಎದುರಾಗಲಿದೆ, ಏನು ಮಾಡಿದರೆ ಉತ್ತಮ ಎಂಬುದನ್ನು ತಿಳಿದುಕೊಳ್ಳುತ್ತಾರೆ. ಹಾಗಾದರೆ, ಮೇಷ, ವೃಷಭ, ಮಿಥುನ, ಕಟಕ ರಾಶಿಯವರ ಇಂದಿನ (ಜನವರಿ 17) ಭವಿಷ್ಯ (Horoscope) ಹೇಗಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಮಕರ ಮಾಸ, ಮಹಾನಕ್ಷತ್ರ: ಪೂರ್ವಾಷಾಢಾ, ಮಾಸ: ಪೌಷ, ಪಕ್ಷ: ಶುಕ್ಲ, ವಾರ: ಬುಧ, ತಿಥಿ: ಸಪ್ತಮೀ, ನಿತ್ಯನಕ್ಷತ್ರ: ರೇವತೀ, ಯೋಗ: ಶಿವ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 07 ಗಂಟೆ 02 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 22 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:43 ರಿಂದ 02:08ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 08:28 ರಿಂದ 09:53ರ ವರೆಗೆ, ಗುಳಿಕ ಕಾಲ ಬೆಳಗ್ಗೆ 11:18 ರಿಂದ ಮಧ್ಯಾಹ್ನ 12:43ರ ವರೆಗೆ.

ಮೇಷ ರಾಶಿ: ಅತಿಯಾದ ಉದ್ಯೋಗದ ಕಾರಣಕ್ಕೆ ನಿಮ್ಮ ಆರೋಗ್ಯವು ಹದ ತಪ್ಪಬಹುದು. ಇನ್ನೊಬ್ಬರ ಪ್ರಶಂಸೆಯಿಂದ ನೀವು ಸಂತೋಷಗೊಳ್ಳುವಿರಿ. ಇಂದು ನಿಮ್ಮ ಸಂಗಾತಿಯ ಜೊತೆ ತುಂಬಾ ಆಪ್ತವಾಗಿ ವ್ಯವಹರಿಸುವಿರಿ. ನಿಮ್ಮ ವೈವಾಹಿಕ ಜೀವನದ ಕೆಲವು ಹಳೆಯ ನೆನಪುಗಳು ಖುಷಿಯನ್ನು ಕೊಡುವುದು. ಹೊರಗಿನ ಆಹಾರವನ್ನು ತ್ಯಜಿಸಲು ಆರೋಗ್ಯವನ್ನು ಹೆಚ್ಚಿಸಿಕೊಳ್ಳಿ. ನಿಮ್ಮ ವಸ್ತುವನ್ನು ಇನ್ನೊಬ್ಬರಿಗೆ ಕೊಡಲು ಇಚ್ಛಿಸುವಿರಿ. ಮಕ್ಕಳ ಮೇಲೆ ಒಂದು ಕಣ್ಣಿರಲಿ. ನಿಮ್ಮನ್ನು ಅರ್ಥಮಾಡಿಕೊಳ್ಳುವವರ ಬಗ್ಗೆ ನಿಮಗೆ ಪ್ರೀತಿ ಹೆಚ್ಚಾಗುವುದು. ಅನಾಗರಿಕರಂತೆ ವರ್ತಿಸುವುದು ಬೇಡ. ಕಲೆಯ ಆಸಕ್ತಿಯು ನಿಮ್ಮನ್ನು ಇನ್ನೊಂದು ದಿಕ್ಕಿಗೆ ಕರೆದೊಯ್ಯಬಹುದು.

ವೃಷಭ ರಾಶಿ: ಕೃಷಿಯ ಬಗ್ಗೆ ಆಸಕ್ತಿಯು ಉಂಟಾಗಬಹುದು. ಅಸತ್ಯವಾದ ನಿಮ್ಮ ಮಾತನ್ನು ನಂಬುವವರಿದ್ದಾರೆ. ನಿಮ್ಮ ಉದ್ಯೋಗದ ಕನಸು ನನಸಾಗುವ ಹಂತಕ್ಕೆ ತಲುಪಬಹುದು. ಅಶಿಸ್ತಿನ ವ್ಯವಸ್ಥೆಯಿಂದ ಸಿಟ್ಟಾಗುವಿರಿ. ಸುಪ್ತವಾಗಿದ್ದ ವಿದೇಶದ ಕನಸು ಅಂಕುರಿಸಬಹುದು. ನಿಮ್ಮ ಮೂಗಿನ ನೇರಕ್ಕೆ ಎಲ್ಲವನ್ನೂ ನೀವು ಕಾಣುವುದು ಸಮಂಜಸವಲ್ಲ. ಗುರುವಿನ ದರ್ಶನವನ್ನು ಪಡೆದು ಖುಷಿಪಡುವಿರಿ. ನಿಮ್ಮ ಸಕಾರಾತ್ಮಕ ನಿಲುವು ಹಲವರಿಗೆ ಇಷ್ಟವಾಗುವುದು. ನೀವು ಕೆಲಸದಲ್ಲಿ ಪಾರದರ್ಶಕತೆಯನ್ನು ಹೆಚ್ಚು ಇಷ್ಟಪಡುವಿರಿ. ವ್ಯಾಪಾರವನ್ನು ನಮ್ರರಾಗಿ ಮಾಡಿ, ಆದಾಯವನ್ನು ಹೆಚ್ಚು ಮಾಡಿಕೊಳ್ಳುವಿರಿ. ಬೆಲೆ ಬಾಳುವ ವಸ್ತುಗಳನ್ನು ಖರೀದಿಸುವಿರಿ. ದೂರ ಎಲ್ಲಿಗಾದರೂ ಹೋಗಬೇಕು ಎನಿಸಬಹುದು.

ಮಿಥುನ ರಾಶಿ: ಕನಸಿನಲ್ಲಿ ಕಳೆದುಹೋಗುವ ಸಾಧ್ಯತೆ ಇದೆ. ವಾಸ್ತವಕ್ಕೆ ಹತ್ತಿರವಾಗಿ. ಬಂಧುಗಳಿಂದ ಹೊಸ ವಸ್ತುಗಳು ಪ್ರಾಪ್ತವಾಗಬಹುದು. ವ್ಯಾಪಾರಸ್ಥರು ಸುಲಭದಲ್ಲಿ ಲಾಭವನ್ನು ಗಳಿಸುವುದು ಕಷ್ಟವಾದೀತು. ಮನೆಯ ವಾತಾವರಣ ಪ್ರಶಾಂತವಾಗಿರುವುದು. ನಿಮ್ಮ ಕಾರ್ಯದ ಪರಿಶೀಲನೆಗೆ ಅಧಿಕಾರಿಗಳು ಬರಬಹುದು. ಪ್ರಶಂಸೆ ಸಿಗುವ ಸಾಧ್ಯತೆಯೂ ಇದೆ. ನಿಮ್ಮ ಏಳ್ಗೆಯನ್ನು ಕಂಡು ದಾಯಾದಿಗಳು ಅಸೂಯೆ ಪಡುವರು. ಶುಭ ಕಾರ್ಯಗಳಿಗೆ ನೀವು ಪ್ರೇರಣೆ ಕೊಡುವಿರಿ. ಯಾವುದಾದರೂ ಒಂದು ಆರೋಪದಲ್ಲಿ ಸಿಕ್ಕಿಹಾಕಿಕೊಳ್ಳುವ ಸನ್ನಿವೇಶವು ಬರಬಹುದು. ನಿಮ್ಮ ಮೇಲೂ ನಿಮ್ಮವರ ಮೇಲೆ ನಂಬಿಕೆ ಇಟ್ಟುಕೊಳ್ಳಿ. ದೇಹದ ಅಸಮತೋಲನದಿಂದ ನಿಮಗೆ ತೊಂದರೆಯಾದೀತು.

ಕರ್ಕಾಟಕ ರಾಶಿ: ಆಯುಧಗಳ ಜೊತೆ ಜೋಪಾನವಾಗಿ ನೀವು ಇರಬೇಕಾಗುವುದು. ನಿಮ್ಮ ಮಾತು ಅರ್ಥಪೂರ್ಣವಾಗಿ ಇರಲಿ. ಉದ್ಯಮದಲ್ಲಿ ಶತ್ರುಗಳು ಹುಟ್ಟಿಕೊಳ್ಳಬಹುದು. ನಿಮ್ಮ ಸ್ಥಗಿತಗೊಂಡ ಕೆಲಸವು ಪೂರ್ಣವಾಗುವ ಹಂತಕ್ಕೆ ಹೋಗಬಹುದು. ಸ್ವಪ್ರತಿಷ್ಠೆಯನ್ನು ಬಿಡುವುದು ಉತ್ತಮ. ಧನವ್ಯಯವಾದರೂ ದೊಡ್ಡ ಸಮಸ್ಯೆ ಆಗುವುದಿಲ್ಲ. ಪ್ರೇಮದ ವಿಚಾರದಲ್ಲಿ ನೀವು ಎಚ್ಚರಿಕೆಯಿಂದ ಮುಂದುವರಿಯಿರಿ. ಶತ್ರುಗಳಿಂದ ಕೆಲಸಗಳಿಗೆ ತೊಂದರೆಯಾಗಬಹುದು. ಹೆಚ್ಚು ಪ್ರಯತ್ನವಿದ್ದರೂ ಸ್ವಲ್ಪ ಫಲವು ಇರಲಿದೆ. ಅವಕಾಶದ ಕೊರತೆಯು ನಿಮ್ಮ ಹತಾಶಗೊಳಿಸಬಹುದು.‌ ಅಂತರಂಗದ ಶುದ್ಧೀಕರಣ ಮಾಡಿಕೊಳ್ಳುವುದು ನಿಮಗೆ ಮುಖ್ಯವಾಗಲಿದೆ. ನಿಯೋಜಿತ ಕಾರ್ಯಕ್ಕೆ ಸಮಯ ಕೊಡಿ.

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ