
ಇಂದಿನ ರಾಶಿ ಭವಿಷ್ಯ (Horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಇದರ ಜೊತೆಗೆ ಪಂಚಾಂಗ ಹೇಗಿದೆ? ಎಂಬುದನ್ನು ಒಂದಷ್ಟು ಮಂದಿ ನೋಡುತ್ತಾರೆ. ಹಾಗಾದರೆ ಇಂದಿನ (2023 ನವೆಂಬರ್ 29) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಶರತ್ ಋತು, ವೃಶ್ಚಿಕ ಮಾಸ, ಮಹಾನಕ್ಷತ್ರ: ಅನೂರಾಧಾ, ಮಾಸ: ಕಾರ್ತಿಕ, ಪಕ್ಷ: ಕೃಷ್ಣರಾಜ, ವಾರ: ಬುಧ, ತಿಥಿ: ದ್ವಿತೀಯಾ, ನಿತ್ಯನಕ್ಷತ್ರ: ಮೃಗಶಿರಾ, ಯೋಗ: ಸಾಧ್ಯ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 41 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 00 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:21 ರಿಂದ 01:46ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 08:06 ಗಂಟೆ 09:31 ನಿಮಿಷಕ್ಕೆ, ಗುಳಿಕ ಕಾಲ ಬೆಳಗ್ಗೆ 10:56 ರಿಂದ 12:21ರ ವರೆಗೆ.
ಧನು ರಾಶಿ : ನಿಮ್ಮ ನಂಬಿಕೆಗಳು ಹುಸಿಯಾಗಿ ಜೀವನವೇ ಸಾಕೆನಿಸಬಹುದು. ವಿವಾಹದ ಜೀವನವನ್ನು ಸಂತೋಷದಿಂದ ಅನುಭವಿಸುವಿರಿ. ಕೆಲಸದ ವಿಷಯದಲ್ಲಿ ಇಂದು ನಿಮಗೆ ಉತ್ತಮ ದಿನವಾಗಿದೆ. ಕೆಲಸದ ನಿಮಿತ್ತ ಪ್ರಯಾಣ ಮಾಡಬೇಕಾಗುವುದು. ನಿಮ್ಮ ಈ ಪ್ರಯಾಣವು ತುಂಬಾ ಪ್ರಯೋಜನಕಾರಿಯಾಗಲಿದೆ. ಬಾಂಧವರ ಜೊತೆ ಸ್ನೇಹದಿಂದ ಇರುವಿರಿ. ನಿಮಗೆ ಪ್ರೇಮ ವಿವಾಹವನ್ನು ಮಾಡಿಕೊಳ್ಳಲು ಮನಸ್ಸು ಇರುವುದು. ಭೂಮಿಯ ವ್ಯವಹಾರವನ್ನು ಮಾಡಲು ಬಹಳ ಉತ್ಸಾವಿರಲಿದೆ. ಕಛೇರಿಯಲ್ಲಿ ನಿಮ್ಮ ದಾಖಲೆಗಳು ಕಾಣಿಸದೇ ಹೋಗಬಹುದು. ಒರಟು ಮಾತುಗಳಿಂದ ಸಂಬಂಧವನ್ನು ಕಳೆದುಕೊಳ್ಳಬೇಕಾದೀತು. ನಿಮಗೆ ಬೇಡದ ವಸ್ತುವಾದರೂ ಇಂದು ಯಾರಿಗೂ ಕೊಡುವುದು ಬೇಡ. ಆರ್ಥಿಕ ಸ್ಥಿತಿಯನ್ನು ಬಲಪಡಿಸಿಕೊಳ್ಳುವ ಪ್ರಯತ್ನ ಮಾಡುವ ಅನಿವಾರ್ಯತೆ ಸೃಷ್ಟಿಯಾಗುವುದು.
ಮಕರ ರಾಶಿ : ಸ್ಥಿರಾಸ್ತಿಯ ಬಗ್ಗೆ ಸರಿಯಾದ ಮಾಹಿತಿಯನ್ನು ಇಟ್ಟುಕೊಳ್ಳಿ. ಆದಾಯವು ಇಂದಿನ ಖರ್ಚನ್ನು ಸರಿದೂಗಿಸುವುದು. ಇಂದು ಕಛೇರಿಯಲ್ಲಿ ಕೊಡುವ ಕೆಲಸವನ್ನು ಬಹಳ ಜವಾಬ್ದಾರಿಯಿಂದ ಮಾಡಬೇಕಾದೀತು. ಆರೋಗ್ಯ ಸಮಸ್ಯೆಗಳು ನಿಮ್ಮ ಸರಿಯಿಲ್ಲದ ದಿನಚರಿಯಿಂದ ಬರಲಿದೆ. ಅಮೂಲ್ಯ ವಸ್ತುವಿನ ಬಗ್ಗೆ ನಿಷ್ಕಾಳಜಿ ಸರಿಯಲ್ಲ. ಇದರಿಂದ ನೀವು ಸರಿಯಾದ ಫಲಿತಾಂಶವನ್ನು ಪಡೆಯುವಿರಿ. ವ್ಯಾಪಾರಸ್ಥರು ಅಧಿಕ ಲಾಭವನ್ನು ಗಳಿಸುವರು. ಮನೆಯಲ್ಲಿ ವಾತಾವರಣ ಚೆನ್ನಾಗಿರುವುದಿಲ್ಲ. ಆರ್ಥಿಕತೆಯನ್ನು ಸರಿದೂಗಿಸುವ ಮಾರ್ಗೋಪಾಯವನ್ನು ಕಂಡುಕೊಳ್ಳಿ. ಸರ್ಕಾರದ ಕೆಲಸಕ್ಕೆ ತೊಂದರೆಯಾಗುವುದು. ಯಾರದೋ ಒತ್ತಾಯಕ್ಕಾಗಿ ಪ್ರಯಾಣ ಮಾಡಬೇಕಾದೀತು. ಮಿತಿ ಮೀರಿದ ಕಾರ್ಯದಿಂದ ಆಯಾಸವಾಗಲಿದೆ. ಪತ್ನಿಯು ನಿಮ್ಮನ್ನು ದೂಷಿಸಬಹುದು. ನಿಮ್ಮ ಪ್ರಾಮಾಣಿಕತೆಗೆ ಫಲವು ಲಭಿಸಿ, ಸಂತಸವಾಗುವುದು. ಖಾಸಗಿಯ ಸಮಾರಂಭದಲ್ಲಿ ಭಾಗವಹಿಸುವಿರಿ.
ಕುಂಭ ರಾಶಿ : ಪ್ರವಾಸ ವಿಚಾರದಲ್ಲಿ ಬಹಳ ಗೊಂದಲವಿರುವುದು. ಮಕ್ಕಳ ಆರೋಗ್ಯದ ಸುಧಾರಣೆಗೆ ನೀವು ಓಡಾಟ ಮಾಡಬೇಕಾಗುವುದು. ಇಂದು ನಿಮ್ಮ ನಿರ್ಧಾರಗಳನ್ನು ನೀವು ಸಾವಧಾನವಾಗಿ ಆಲೋಚಿಸಿ ತೆಗೆದುಕೊಂಡರೆ ಉತ್ತಮ. ಕೆಲಸದ ವಿಷಯದಲ್ಲಿ ನೀವು ಯಾರ ಮಾತನ್ನೂ ನೀವು ಕೇಳುವುದಿಲ್ಲ. ನಿಮ್ಮ ಕುಟುಂಬದ ಜೊತೆ ಇಂದು ಸಮಯವನ್ನು ಕಳೆಯಲು ಸಾಧ್ಯವಾಗುವುದು. ನಿಮ್ಮ ಇಂದಿನ ಆದಾಯವು ಮಧ್ಯಮಕ್ಕಿಂತ ಚೆನ್ನಾಗಿ ಇರುವುದು. ಚಂಚಲ ಮನಸ್ಸು ಸಹಜವಾದುದನ್ನು ಗುರುತಿಸಲಾರದು. ಶತ್ರುಗಳ ಚಿಂತೆಯಿಂದ ಮಾನಸಿಕವಾಗಿ ಕುಗ್ಗುವಿರಿ. ನಿಮ್ಮಷ್ಟಕ್ಕೆ ನೀವಿರಲು ಸಾಧ್ಯವಾಗದು. ಎಲ್ಲ ವಿಚಾರಕ್ಕೂ ಕಾರಣವನ್ನು ಕೇಳುವಿರಿ. ಹಿಂದಿನಿಂದ ಮಾತನಾಡಿಕೊಳ್ಳುವರಿಗೆ ಬೆಲೆಯನ್ನು ಕೊಡುವುದಿಲ್ಲ. ಇಂದು ನಿಮಗಾದ ವಿಶ್ವಾಸದ್ರೋಹದಿಂದ ಎಲ್ಲರ ಮೇಲೆ ಅಸಮಾಧಾನ ತೋರುವಿರಿ. ನಿಮ್ಮದಲ್ಲದ ವಸ್ತುವಿನ ಮೇಲೇ ಮೋಹವು ನಿಮಗೆ ಗೊತ್ತಿಲ್ಲದೇ ಬರುವುದು.
ಮೀನ ರಾಶಿ : ವಿದ್ಯಾಭ್ಯಾಸದಲ್ಲಿ ಚುರುಕುತನ ಅವಶ್ಯಕ. ಆಲಸ್ಯದಿಂದ ಎಲ್ಲವನ್ನೂ ಹಾಳುಮಾಡಿಕೊಳ್ಳುವ ಸಾಧ್ಯತೆ ಇದೆ. ಇಂದು ದಾಂಪತ್ಯದಲ್ಲಿ ಮನಸ್ತಾಪಗಳು ದೂರವಾಗಿ ಪರಸ್ಪರ ಸಂಬಂಧವು ಸರಿಯಾಗುವುದು. ನಿಮ್ಮ ವರ್ತನೆಯನ್ನು ಬೇರೆಯವರ ಮೂಲಕದಿಂದ ತಿದ್ದಿಕೊಳ್ಳುವಿರಿ. ಕಛೇರಿಯ ಕೆಲಸದಲ್ಲಿ ನಿಮ್ಮ ಗುಂಪಿನಿಂದ ತಪ್ಪಾಗದಂತೆ ಪರೀಕ್ಷಿಸಿ. ನಿಮಗೆ ಗೊತ್ತಾಗದಂತೆ ಖರ್ಚು ಅಧಿಕವಾಗುವುದು. ಸ್ತ್ರೀಯರಿಗೆ ಕೆಲವು ಲಾಭಗಳು ಆಗಬಹುದು. ವಾಹನ ಖರೀದಿಗೆ ದಾಖಲೆಗಳನ್ನು ತಯಾರಿಸಿಕೊಳ್ಳುವಿರಿ. ಇಂದು ನಿಮ್ಮ ತಲೆಯಲ್ಲಿ ಅಪೂರ್ಣ ಕಾರ್ಯಗಳೇ ತುಂಬಿರುವುದು. ಉತ್ತಮ ಕೆಲಸದ ಅನ್ವೇಷಣೆಯನ್ನು ಮಾಡುವಿರಿ. ನಿಮ್ಮ ಮಗನ ಮೇಲೆ ಸಂಪತ್ತಿನ ದೂರುವಿರಿ. ತುರ್ತು ಕಾರ್ಯಕ್ಕಾಗಿ ಮನೆಯಿಂದ ಬೇಗ ಹೊರಡಬೇಕಾಗುವುದು.
-ಲೋಹಿತಶರ್ಮಾ – 8762924271 (what’s app only)