Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಏಪ್ರಿಲ್ 21ರ ದಿನಭವಿಷ್ಯ
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಏಪ್ರಿಲ್ 21ರ ಶುಕ್ರವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಏಪ್ರಿಲ್ 21ರ ಶುಕ್ರವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ನಿಮ್ಮ ಗುಣ- ಸ್ವಭಾವ, ಆಲೋಚನೆಯಲ್ಲಿ ಬದಲಾವಣೆ ಮಾಡಿಕೊಳ್ಳುವ ಕುರಿತು ಆಲೋಚನೆ ಮಾಡಲಿದ್ದೀರಿ. ನಿನ್ನೆ ತನಕ ಒಂದು ಲೆಕ್ಕ, ಇವತ್ತಿಂದ ಬೇರೆ ಲೆಕ್ಕ ಎನ್ನುವಂತೆ ಬದುಕುವುದಕ್ಕೆ ಆಲೋಚಿಸುತ್ತೀರಿ. ಖಂಡಿತಾ ಇದರಲ್ಲಿ ತಪ್ಪಿಲ್ಲ. ಆದರೆ ಇದನ್ನೇ ಮುಂದು ಮಾಡಿಕೊಂಡು ಯಾರನ್ನೂ ನೋಯಿಸಬೇಡಿ. ಚಿನ್ನ ಖರೀದಿ ಮಾಡಬೇಕು ಅಂದುಕೊಳ್ಳು ಸಾಧ್ಯತೆ ಇದೆ. ಇನ್ನು ಕುಟುಂಬದ ಖರ್ಚಿಗೆ ಸಂಬಂಧಿಸಿದಂತೆ ಮಹತ್ವದ ತೀರ್ಮಾನ ಮಾಡುತ್ತೀರಿ. ಸೂರ್ಯಾಸ್ತದ ಹೊತ್ತಿಗೆ ಪಶ್ಚಿಮ ದಿಕ್ಕಿಗೆ ತಿರುಗಿ ನಿಂತು ಒಂದೆರಡು ನಿಮಿಷ ಧ್ಯಾನ ಮಾಡಿ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ಪೋಷಕರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. ನಿಮ್ಮ ಸಾಲದ ಬಗ್ಗೆ ಒಂದಿಷ್ಟು ಕ್ಯಾಲ್ಕುಲೇಟರ್ ಹಿಡಿದು, ಲೆಕ್ಕ ಹಾಕಿಕೊಳ್ಳುವ ಸಮಯ. ಸಂಗಾತಿ ಏನಾದರೂ ಹೇಳುತ್ತಿದ್ದಾರೆ ಅಂದರೆ ಸ್ವಲ್ಪ ಕೇಳಿಸಿಕೊಳ್ಳಿ. ಇದರಿಂದ ತುಂಬ ದೊಡ್ಡ ಸಹಾಯ ಆಗುತ್ತದೆ ಅಂತಲ್ಲ, ಸಂಬಂಧ ಸುಧಾರಿಸುತ್ತದೆ. ನೆಮ್ಮದಿ ವಾತಾವರಣ ಸೃಷ್ಟಿ ಆಗುತ್ತದೆ. ನಿಮ್ಮಿಂದ ಸಾಧ್ಯವಾದಲ್ಲಿ, ಅನುಕೂಲ ಇದ್ದಲ್ಲಿ ಪಾರಿವಾಳಗಳಿಗೆ ಕೈಲಾದಷ್ಟು ಆಹಾರ ಹಾಕಿ.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ಉದ್ಯೋಗದಲ್ಲಿನ ನಿಮ್ಮ ಆಸಕ್ತಿ ಫಲ ನೀಡಲಿದೆ. ಕೃಷಿತೋ ನಾಸ್ತಿ ದುರ್ಭಿಕ್ಷಂ. ಎಲ್ಲ ಕೆಲಸಗಳನ್ನು ನನ್ನ ತಲೆ ಮೇಲೆ ಹಾಕುತ್ತಿದ್ದಾರೆ ಅಂತನ್ನಿಸಿದಲ್ಲಿ ಸಿಟ್ಟಾಗಬೇಡಿ. ಭವಿಷ್ಯದಲ್ಲಿ ನಿಮ್ಮ ಒಳತಿಗೆ ಏನೋ ಸಿದ್ಧತೆ ನಡೆಯುತ್ತಿದೆ. ಸ್ವಾನುಕಂಪವನ್ನು ಬಿಟ್ಟು, ಕೆಲಸಗಳನ್ನು ಮಾಡಿ. ಇನ್ವೆಸ್ಟ್‌ಮೆಂಟ್ ವಿಚಾರದಲ್ಲಿ ದಿಢೀರ್ ನಿರ್ಧಾರಗಳನ್ನು ಮಾಡಬೇಡಿ. ಮನೆಯಿಂದ ಹೊರಡುವ ಮುನ್ನ ಸ್ವಲ್ಪ ಮೊಸರು ಮತ್ತು ಅವಲಕ್ಕಿ ತಿನ್ನಿ.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ನನ್ನ ಶ್ರಮಕ್ಕೆ ಬೆಲೆಯೇ ಸಿಕ್ಕುತ್ತಿಲ್ಲ, ಎಷ್ಟು ಪ್ರಯತ್ನ ಪಟ್ಟರೂ ನನ್ನ ಕೆಲಸ ತುದಿ ಮುಟ್ಟುತ್ತಿಲ್ಲ ಅಂದುಕೊಳ್ಳುತ್ತಿರುವವರಿಗೆ ಇವತ್ತು ಒಂದಿಷ್ಟು ಸಮಾಧಾನ ದೊರೆಯುತ್ತದೆ. ಕಣ್ಣು- ಕಿವಿಗೆ ಸಂಬಂಧಿಸಿದ ಸಮಸ್ಯೆಯಿಂದ ಬಳಲುತ್ತಿದ್ದಲ್ಲಿ ಆ ಬಗ್ಗೆ ನಿರ್ಲಕ್ಷ್ಯ ಮಾಡದೆ ತಕ್ಷಣ ವೈದ್ಯರಲ್ಲಿ ತೋರಿಸಿ. ಇನ್ನು ಸಾಧ್ಯವಾದಲ್ಲಿ ತುಳಸೀ ಗಿಡಕ್ಕೆ ಒಂದು ತಂಬಿಗೆಯಷ್ಟು ನೀರನ್ನು ಹಾಕಿ. ಯಾವುದಾದರೂ ಕಾರಣಕ್ಕೆ ನೀವು ಹಾಕುವಂತಿಲ್ಲ ಅಂತಾದರೆ ಬೇರೆಯವರಿಂದಲಾದರೂ ಹಾಕಿಸಿ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ನಿಮ್ಮ ಉದ್ಯೋಗ ಸ್ಥಳದಲ್ಲಿ ಬೆನ್ನಿಗೆ ಏನೋ ನಡೆಯುತ್ತಿದೆ ಎಂಬ ಗುಮಾನಿ ಮೂಡುತ್ತದೆ. ಅಥವಾ ಅದನ್ನು ಇನ್ನೊಬ್ಬರು ಹೇಳಬಹುದು. ಮನೆಯಲ್ಲಿ ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಬಳಸುವಾಗ ಎಚ್ಚರ ಇರಲಿ. ವಿದ್ಯಾರ್ಥಿಗಳು ಶಾಲೆ- ಕಾಲೇಜುಗಳಿಗೆ ಚಕ್ಕರ್ ಹಾಕುವ ಆಲೋಚನೆ ಇದ್ದರೆ ಈ ಬಗ್ಗೆ ಮನೆಯಲ್ಲಿ ತಿಳಿಸಿಬಿಡಿ. ಊಟ- ತಿಂಡಿ ವಿಚಾರದಲ್ಲಿ ವಿಪರೀತದ ಚಪಲ ಒಳ್ಳೆಯದಲ್ಲ. ಅಜೀರ್ಣದ ಸಮಸ್ಯೆಗಳು ಕಾಡಬಹುದು.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ಕೌಟುಂಬಿಕ ವಿಚಾರಗಳು ಈ ದಿನ ಪ್ರಾಶಸ್ತ್ಯ ಪಡೆದುಕೊಳ್ಳಲಿವೆ. ಮಕ್ಕಳ ಸಲುವಾಗಿಯೇ ಹೆಚ್ಚಿನ ಸಮಯ, ಹಣ ಮೀಸಲಿಡುವ ದಿನ ಇದಾಗಿರಲಿದೆ. ನಿಮ್ಮ ತ್ಯಾಗ ಹಾಗೂ ಶ್ರಮಕ್ಕೆ ಫಲ ದೊರೆಯಲಿದೆ. ನೀವು ಮಾಡಬೇಕಾದ್ದೇನೆಂದರೆ, ನೀವು ಯಾವುದೇ ದೇವರನ್ನು ಆರಾಧನೆ ಮಾಡಿದರೂ ಪರವಾಗಿಲ್ಲ, ಅದಕ್ಕೆ ಸಿಹಿ ನೈವೇದ್ಯ ಮಾಡಿ, ಮನೆಯ ಮಹಡಿಯೋ ಅಥವಾ ಎತ್ತರದ ಸ್ಥಳದಲ್ಲಿ ಇಟ್ಟುಬನ್ನಿ. ಸಿಹಿ ಅಂದರೆ, ಕನಿಷ್ಠ ಸಕ್ಕರೆ ಆದರೂ ಪರವಾಗಿಲ್ಲ.
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ಯಾವಾಗ ಮಾತನಾಡಬೇಕು, ಯಾವಾಗ ಸುಮ್ಮನಿರಬೇಕು ಎಂಬುದು ಈ ದಿನದ ಮಟ್ಟಿಗೆ ಬಹಳ ಮುಖ್ಯವಾಗುತ್ತದೆ. ನೀವು ಭಾವನಾತ್ಮಕವಾಗಿದ್ದ ಸಂದರ್ಭದಲ್ಲಿ ಕೊಟ್ಟ ಮಾತು ನಿಮ್ಮ ಪಾಲಿಗೆ ಮಗ್ಗುಲ ಮುಳ್ಳಾಗಿ ಚುಚ್ಚಲಿದೆ. ಇದು ಕನಿಷ್ಠ ಪಕ್ಷ ಇವತ್ತಿಗೆ ನಿಮಗೆ ಅನಿಸದಿರಬಹುದು. ಆದರೆ ಈ ಬಗ್ಗೆ ಮುಂದೊಂದು ದಿನ ಭಾರೀ ಬೇಜಾರು ಮಾಡಿಕೊಳ್ಳಲಿದ್ದೀರಿ. ವಾಹನದ ಪಾರ್ಕಿಂಗ್ ಬಗ್ಗೆ ಹೆಚ್ಚು ಲಕ್ಷ್ಯ ವಹಿಸಿ, ದಂಡ ಕಟ್ಟುವ ಪ್ರಸಂಗ ಎದುರಾದೀತು.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ನಿಮ್ಮ ಬಗ್ಗೆ ನೀವು ಮಾರ್ಕೆಟಿಂಗ್ ಮಾಡಿಕೊಳ್ಳಲೇಬೇಕು ಎಂಬುದನ್ನು ಅರಿತುಕೊಳ್ಳುವುದು ಮುಖ್ಯ. ನೀವು ಇಲ್ಲಿಯ ತನಕ ಎಷ್ಟೇ ಚೆನ್ನಾಗಿ ಕೆಲಸ ಮಾಡುತ್ತಿರಬಹುದು, ನಿಮ್ಮ ಕಾಳಜಿ ಬಗ್ಗೆ ಎಲ್ಲರಿಗೂ ಗೊತ್ತು ಅಂತ ನೀವು ಅಂದುಕೊಂಡರೂ ಇವತ್ತು ಮಾತ್ರ ಅವರಿವರ ಪಾಲಿಗೆ ನೀವೇ ಗುರಿ ಆಗಲಿದ್ದೀರಿ. ಇದರಲ್ಲಿ ಒಂದು ಸಂತೋಷ ಏನೆಂದರೆ, ಹಳೆಯ ಹಣದ ಬಾಕಿ, ಅದರಲ್ಲೂ ಸರ್ಕಾರದ ಸ್ಕೀಮ್‌ಗಳು, ಸೋಷಿಯಲ್ ಸೆಕ್ಯೂರಿಟಿ ಯೋಜನೆಗಳಿಂದ ಬರಬೇಕಿದ್ದ ಹಣ ಇದ್ದಲ್ಲಿ ಆ ಬಗ್ಗೆ ಮಾಹಿತಿ ಸಿಗುತ್ತದೆ.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ಉದ್ಯೋಗ ಸ್ಥಳದಲ್ಲಿ ದೊಡ್ಡ ದೊಡ್ಡ ಬದಲಾವಣೆಗಳನ್ನು ನಿರೀಕ್ಷೆ ಮಾಡಬಹುದು. ಇನ್ನು ಬಹಳ ಸಮಯದಿಂದ ನೀವು ಅಂದುಕೊಳ್ಳುತ್ತಿದ್ದ ವಿಚಾರ ಈ ದಿನ ಹೇಳೇ ಬಿಡುವ ಸಾಧ್ಯತೆಗಳು ಹೆಚ್ಚಿವೆ. ಆದರೆ ಇಲ್ಲೊಂದು ಟ್ರಿಕ್ ಇದೆ. ಇದರಿಂದ ನಿಮಗೆ ಶೇಕಡಾ ಐವತ್ತರಷ್ಟು ಒಳ್ಳೆಯದು, ಇನ್ನು ಐವತ್ತರಷ್ಟು ಕೆಟ್ಟದ್ದಿದೆ. ಇನ್ನು ನಿಮ್ಮ ಮರೆವಿನಿಂದ ದೊಡ್ಡ ಅನುಕೂಲವೊಂದರಿಂದ ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ.
ಲೇಖನ- ಎನ್.ಕೆ.ಸ್ವಾತಿ