Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಮಾರ್ಚ್ 21ರ ದಿನಭವಿಷ್ಯ

|

Updated on: Mar 21, 2023 | 5:32 AM

ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಮಾರ್ಚ್ 21ರ ಮಂಗಳವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಮಾರ್ಚ್ 21ರ ದಿನಭವಿಷ್ಯ
ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಮಾರ್ಚ್ 21ರ ದಿನಭವಿಷ್ಯ
Image Credit source: stock.adobe
Follow us on

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಮಾರ್ಚ್ 21ರ ಮಂಗಳವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ತುಂಬ ಹೆಚ್ಚಿನ ಆದಾಯ ಅಥವಾ ಲಾಭ ನಿರೀಕ್ಷೆ ಮಾಡುತ್ತಿದ್ದಲ್ಲಿ ಅಷ್ಟು ಪ್ರಮಾಣದಲ್ಲಿ ನಿಮ್ಮ ಕೈ ಸೇರುವುದಿಲ್ಲ. ಇತರರಿಂದ ಹೆಚ್ಚಿನ ಸಹಾಯವನ್ನು ನಿರೀಕ್ಷೆ ಮಾಡದಿರಿ. ದೂರ ಪ್ರಯಾಣಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಲ್ಲಿ ಕೊನೆ ಕ್ಷಣದಲ್ಲಿ ಅದು ರದ್ದು ಮಾಡಿಕೊಳ್ಳುವಂಥ ಸನ್ನಿವೇಶ ಸೃಷ್ಟಿಯಾಗಬಹುದು. ಸಾವಯವ ಕೃಷಿ ಮಾಡುವಂಥ ರೈತರಿಗೆ ಸನ್ಮಾನ- ಗೌರವ ದೊರೆಯುವಂಥ ಯೋಗ ಇದೆ. ವಯಸ್ಸಾದ ತಂದೆ- ತಾಯಿ ಇದ್ದಲ್ಲಿ ಅವರ ಆರೋಗ್ಯದ ಕಡೆಗೆ ಗಮನ ನೀಡಿ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ಹೊಸ ವಿಷಯಗಳನ್ನು ಕಲಿತುಕೊಳ್ಳಲಿದ್ದೀರಿ. ವಹಿಸಿಕೊಂಡ ಕೆಲಸಗಳು ಸುಸೂತ್ರವಾಗಿ ಮಾಡಿ ಮುಗಿಸಲಿದ್ದೀರಿ. ನಿಮ್ಮ ಮಾತಿಗೆ ಮೌಲ್ಯ ಹೆಚ್ಚಾಗಲಿದೆ. ಸ್ವಂತ ವ್ಯವಹಾರ ಮಾಡುತ್ತಿರುವವರಿಗೆ ಆದಾಯದಲ್ಲಿ ಹೆಚ್ಚಳ ಆಗಲಿದೆ. ದೂರದ ಪ್ರಯಾಣಕ್ಕೆ ಸಿದ್ಧತೆ ಮಾಡಿಕೊಳ್ಳಲಿದ್ದೀರಿ. ಹೂಡಿಕೆ ವಿಚಾರಕ್ಜೆ ಕುಟುಂಬಸ್ಥರ ಜತೆಗೆ ಮಾತುಕತೆ ನಡೆಸಲಿದ್ದೀರಿ. ಉಳಿತಾಯದ ಬಗ್ಗೆ ಗಂಭೀರವಾದ ಆಲೋಚನೆ ಮಾಡಲಿದ್ದೀರಿ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ವ್ಯಾಪಾರ- ಉದ್ಯಮದಲ್ಲಿ ಇರುವವರಿಗೆ ಅನಿರೀಕ್ಷಿತವಾಗಿ ಹಲವು ಅವಕಾಶಗಳು ಬರಲಿವೆ. ಈ ಹಿಂದೆ ನೀವು ಯಾರಿಗೆ ನೆರವು ನೀಡಿದ್ದಿರೋ ಅವರ ಮೂಲಕವಾಗಿ ಆದಾಯವನ್ನು ಹೆಚ್ಚಳ ಮಾಡಿಕೊಳ್ಳುವಂತಹ ಅವಕಾಶಗಳು ತೆರೆದುಕೊಳ್ಳಲಿವೆ. ಹಾಸಿಗೆ, ಪೀಠೋಪಕರಣಗಳ ಖರೀದಿಗಾಗಿ ಹಣ ಖರ್ಚು ಮಾಡುವಂಥ ಯೋಗ ಇದೆ. ಖರ್ಚಿನ ಅಂದಾಜಿಲ್ಲದೆ ಮನೆಯ ದುರಸ್ಥಿ ಕೆಲಸಗಳನ್ನು ಕೈಗೆತ್ತಿಕೊಳ್ಳಬೇಡಿ. ನಷ್ಟವಾಗುವ ಯೋಗ ಇದೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ಸೈಟು ಖರೀದಿ ಅಥವಾ ಮಾರಾಟ ವಿಚಾರದಲ್ಲಿ ಈ ವರೆಗೆ ಏನಾದರೂ ಗೊಂದಲ ಇದ್ದಲ್ಲಿ ಅದು ನಿವಾರಣೆ ಆಗಲಿದೆ. ಸ್ವಂತ ವ್ಯವಹಾರ- ವ್ಯಾಪಾರ ಮಾಡುತ್ತಿರುವವರು ಗೋಡೌನ್ ನಿರ್ಮಾಣಕ್ಕೆ ಹಣ ವೆಚ್ಚ ಮಾಡಬಹುದು. ಅಥವಾ ಈಗಿರುವುದಕ್ಕಿಂತ ದೊಡ್ಡದನ್ನು ಬಾಡಿಗೆಗೆ ತೆಗೆದುಕೊಳ್ಳಲಿಕ್ಕೆ ಮನಸ್ಸು ಮಾಡಲಿದ್ದೀರಿ. ಹೂವು ಅಥವಾ ಹಣ್ಣು ವ್ಯಾಪಾರಿಗಳಿಗೆ ಲಾಭದ ಪ್ರಮಾಣದಲ್ಲಿ ಏರಿಕೆ ಆಗಲಿದೆ. ಸಣ್ಣ ಮಟ್ಟದಲ್ಲಿಯಾದರೂ ಉಳಿತಾಯ ಮಾಡುವ ಬಗ್ಗೆ ನಿರ್ಧಾರ ಮಾಡುತ್ತೀರಿ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ಬ್ಯಾಂಕಿಂಗ್ ವ್ಯವಹಾರ ಮಾಡುತ್ತಿದ್ದಲ್ಲಿ ಈ ದಿನ ಬಹು ಸಮಯ ಹೋಗಲಿದೆ. ಮುಖ್ಯ ದಾಖಲೆ- ಪತ್ರಗಳ ಸಹಿತ ತೆರಳಿ, ನಿಮ್ಮ ವ್ಯವಹಾರವನ್ನು ಮುಗಿಸಿಕೊಳ್ಳುವ ಕಡೆಗೆ ಗಮನವನ್ನು ನೀಡಿ. ದೈವಾನುಗ್ರಹ ನಿಮ್ಮ ಮೇಲೆ ಇರಲಿದೆ. ಆದ್ದರಿಂದ ನಿಮಗೆ ಸತ್ಯ ಎಂದು ಗೊತ್ತಿದ್ದು, ಅನುಭವಿಗಳು- ಪರಿಣತರು ಖಾತ್ರಿ ಮಾಡಿದ ಸಂಗತಿಗಳ ಬಗ್ಗೆ ನಿಮ್ಮ ನಿಲುವನ್ನು ಬದಲಾಯಿಸಿಕೊಳ್ಳಬೇಡಿ. ನಾಲಗೆ ಮೇಲೆ, ಅಂದರೆ ಊಟ- ತಿಂಡಿ ವಿಚಾರದಲ್ಲಿ ನಿಯಂತ್ರಣ ಇರಿಸಿಕೊಳ್ಳಿ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಆಯಾ ದಿನದ ಆದಾಯ ಆ ದಿನಕ್ಕೆ ಎಂಬಂತೆ ಬದುಕುತ್ತಿರುವವರು ಹಣದ ಮೂಲ ಹೆಚ್ಚು ಮಾಡಿಕೊಳ್ಳುವ ನಿಟ್ಟಿನಲ್ಲಿ ಹೊಸ ಕೆಲಸಗಳನ್ನು ಒಪ್ಪಿಕೊಳ್ಳುವ ಬಗ್ಗೆ ಆಲೋಚನೆ ಮಾಡುತ್ತೀರಿ. ವಿವಾಹ ವಯಸ್ಕ ಮಕ್ಕಳಿಗಾಗಿ ಮದುವೆಗೆ ಪ್ರಯತ್ನಿಸುತ್ತಿದ್ದಲ್ಲಿ ಸೂಕ್ತ ಸಂಬಂಧಗಳು ದೊರೆಯುವ ಸಾಧ್ಯತೆ ಇದೆ. ಮನೆಯಲ್ಲಿ ದೇವತಾರಾಧನೆಗಳನ್ನು ಮಾಡುವುದಕ್ಕೆ ಕುಟುಂಬದ ಸದಸ್ಯರ ಜತೆಗೆ ಮಾತುಕತೆ ನಡೆಸಲಿದ್ದೀರಿ. ವಾಹನಗಳ ಖರೀದಿಗಾಗಿ ಪ್ರಯತ್ನಿಸಲಿದ್ದೀರಿ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ದೂರ ಪ್ರಯಾಣ ಮಾಡಬೇಕಾದ ಅನಿವಾರ್ಯ ಸೃಷ್ಟಿ ಆಗಬಹುದು. ವೈದ್ಯಕೀಯ ಕ್ಷೇತ್ರದಲ್ಲಿ ಇರುವವರಿಗೆ ವೈಯಕ್ತಿಕ ಕೆಲಸಗಳನ್ನು ಮಾಡಿಕೊಳ್ಳುವುದಕ್ಕೆ ಸಾಧ್ಯವೇ ಆಗದಷ್ಟು ಒತ್ತಡ ಆಗಲಿದೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿರುವವರು ಅದನ್ನು ಹಿಂತೆಗೆದುಕೊಳ್ಳುವ ಬಗ್ಗೆ ಆಲೋಚನೆ ಮಾಡಲಿದ್ದೀರಿ. ಕೆಲವು ನಿರ್ಧಾರಗಳನ್ನು ನಿಂತ ನಿಲುವಿನಲ್ಲೇ ಹೇಳಬೇಕಾದ ಸಂದರ್ಭ ಬರಲಿದೆ. ಇತರರಿಂದ ಅತಿಯಾದ ನಿರೀಕ್ಷೆ ಮಾಡಬೇಡಿ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ದೂಳಿನ ಅಲರ್ಜಿ ಇರುವವರಿಗೆ ಈ ದಿನ ಅನಾರೋಗ್ಯ ಕಾಡಬಹುದು. ಆದ್ದರಿಂದ ಸಾಧ್ಯವಾದಷ್ಟೂ ಇಂಥ ವಾತಾವರಣದಲ್ಲಿ ಅಡ್ಡಾಡದಂತೆ ಜಾಗ್ರತೆಯನ್ನು ವಹಿಸಿ. ಈ ಹಿಂದೆ ನೀವು ತೆಗೆದುಕೊಂಡಿದ್ದ ತೀರ್ಮಾನದ ಉತ್ತಮ ಫಲವನ್ನು ಈ ದಿನದಂದು ಕಾಣಲಿದ್ದೀರಿ. ನಿಮ್ಮ ಕುಟುಂಬದೊಳಗೆ ಹಣಕಾಸಿನ ತುರ್ತು ಕಂಡುಬರಲಿದೆ. ಮುಖ್ಯ ಸಂಗತಿಗಳು ಮರೆತು ಹೋಗದಂತೆ ಒಂದು ಕಡೆ ನೋಟ್ ಮಾಡಿಟ್ಟುಕೊಂಡು, ಆದ್ಯತೆ ಮೇಲೆ ಕೆಲಸ ಮಾಡಿ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ಫ್ಯಾಷನ್ ಡಿಸೈನಿಂಗ್, ಚಿನ್ನಾಭರಣಗಳು ಕುಸುರಿ ಕೆಲಸದಲ್ಲಿ ತೊಡಗಿಕೊಂಡವರಿಗೆ ಕೀರ್ತಿ, ಪ್ರತಿಷ್ಠೆಗಳು ಹೆಚ್ಚಾಗಲಿವೆ. ಯೂಟ್ಯೂಬರ್ ಗಳಾಗಿ ವೃತ್ತಿಯನ್ನು ಆರಿಸಿಕೊಂಡಿರುವವರಿಗೆ ಆದಾಯದಲ್ಲಿ ಸ್ವಲ್ಪ ಮಟ್ಟಿಗೆ ಇಳಿಕೆ ಕಂಡುಬರಲಿದೆ. ಸ್ವಂತ ವ್ಯಾಪಾರ, ವ್ಯವಹಾರ ಮಾಡಿಕೊಂಡು ಇರುವವರಿಗೆ ಹೆಚ್ಚಿನ ಆದಾಯ ಮೂಲಗಳು ತೆರೆದುಕೊಳ್ಳಲಿವೆ. ಸಂತಾನ ಅಪೇಕ್ಷಿತರಿಗೆ ಶುಭವಾದ ಬೆಳವಣಿಗೆಗಳು ಆಗಲಿವೆ, ಮನಸ್ಸಿಗೆ ನೆಮ್ಮದಿಯಿದೆ.

ಲೇಖನ- ಎನ್‌.ಕೆ.ಸ್ವಾತಿ