AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope Today: ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ಮಂಗಳವಾರದ ದಿನ ಭವಿಷ್ಯ

ಇಂದಿನ ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭ ಎಂದು  ತಿಳಿದುಕೊಳ್ಳಿ.

Horoscope Today: ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ಮಂಗಳವಾರದ ದಿನ ಭವಿಷ್ಯ
ಪ್ರಾತಿನಿಧಿಕ ಚಿತ್ರ
ಗಂಗಾಧರ​ ಬ. ಸಾಬೋಜಿ
|

Updated on: Mar 21, 2023 | 6:00 AM

Share

ಪ್ರತಿ ದಿನ ಸೂರ್ಯ, ಚಂದ್ರ ಹುಟ್ಟುತ್ತಾರೆ. ಭೂಮಿ ತಿರುಗುತ್ತಿರುತ್ತೆ. ಪ್ರತಿಯೊಬ್ಬರ ಜೀವನವು ನಡೆಯುತ್ತಲೇ ಇರುತ್ತೆ. ದಿನ, ಸಮಯ ಎಲ್ಲರಿಗೂ ಒಂದೇ ಆದ್ರೂ ಜೀವನದಲ್ಲಿ ನಡೆಯುವ ಘಟನೆಗಳು ವಿಭಿನ್ನ. ಇದಕ್ಕೆ ಕಾರಣ ನಮ್ಮ ಜನ್ಮ ರಾಶಿಗಳಲ್ಲಾಗುವ ಬದಲಾವಣೆ. ನಮ್ಮ ಆರೋಗ್ಯ, ಯಶಸ್ಸು, ಸಂತೋಷ, ನೆಮ್ಮದಿ ಎಲ್ಲವೂ ನಮ್ಮ ರಾಶಿಗಳ ಮೇಲೆ ಅವಲಂಬಿತವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಕೆಲವರು ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗಾದರೆ ಇಂದಿನ (2023 ಮಾರ್ಚ್ 21) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭ ಎಂದು  ತಿಳಿದುಕೊಳ್ಳಿ.

ನಿತ್ಯ ಪಂಚಾಂಗ: ಶಾಲಿವಾಹನ ಶಕೆ 1945, ಶುಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಕುಂಭ ಮಾಸ, ಮಹಾನಕ್ಷತ್ರ: ಉತ್ತರಾಭಾದ್ರ, ಮಾಸ: ಫಾಲ್ಗುಣ, ಪಕ್ಷ: ಕೃಷ್ಣ, ವಾರ: ಮಂಗಳವಾರ, ತಿಥಿ: ಅಮಾವಾಸ್ಯಾ, ನಿತ್ಯನಕ್ಷತ್ರ: ಪೂರ್ವಾಭಾದ್ರಾ, ಯೋಗ: ಶುಭ, ಕರಣ: ಚತುಷ್ಪಾತ್, ಸೂರ್ಯೋದಯ ಬೆಳಗ್ಗೆ 06 ಗಂಟೆ 38 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 42 ನಿಮಿಷಕ್ಕೆ, ರಾಹು ಕಾಲ 03:15 ರಿಂದ 05:12ರ ವರೆಗೆ, ಯಮಘಂಡ ಕಾಲ 09: 39 ರಿಂದ 11:09ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:40 ರಿಂದ 02:11ರ ವರೆಗೆ.

ಸಿಂಹ: ನೀವು ಆರೋಗ್ಯವಾಗಿರಲು ಏನು ಮಾಡಬೇಕು ಎನ್ನುವುದನ್ನು ಆಪ್ತರಿಂದಲೋ ವೈದ್ಯರಿಂದಲೋ ಸಲಹೆಯನ್ನು ಪಡೆಯಿರಿ. ಆಹಾರ ಮತ್ತು ಪಾನೀಯವನ್ನು ಸರಿಯಾದ ಕಾಲಕ್ಕೆ ಸ್ವೀಕರಿಸಿ. ನೀವು ದುರಭ್ಯಾಸವನ್ನು ರೂಢಿಸಿಕೊಳ್ಳಲಿದ್ದೀರಿ. ನಿಮಗಿಂದು ಹೆಚ್ಚು ಜವಾಬ್ದಾರಿಯ ಕೆಲಸ ಸಿಗಲಿದೆ. ಅನಗತ್ಯ ಆಲೋಚನೆಗಳನ್ನು ಬಿಟ್ಟು ಕೆಲಸದಲ್ಲಿ ಮಗ್ನರಾಗಿ. ಸರ್ಕಾರದ ಕೆಲಸವು ಸ್ವಲ್ಪ ವೇಗವನ್ನು ಪಡೆದುಕೊಳ್ಳುವುದು. ಇಷ್ಟುದಿನ ಮಾಡುತ್ತಿದ್ದವರ ಬಳಿಯಿಂದ ಹಣಕಾಸಿನ ವ್ಯವಹಾರವನ್ನು ಬದಲಾಯಿಸುವಿರಿ. ಸೂರ್ಯನಮಸ್ಕಾರವನ್ನು ಮಾಡಿ ಆರೋಗ್ಯದತ್ತ ಗಮನ ಕೊಡಿ.

ಕನ್ಯಾ: ನಿಮ್ಮ ಯಶಸ್ಸಿಗೆ ಅಸೂಯೆ ಪಡುವವರಿದ್ದಾರೆ. ನಿಮಗೆ ಅಪಮಾನ ಮಾಡಲು ಪಿತೂರಿಗಳೂ ಆಗಬಹುದು. ನೀವು ನಿಮ್ಮ ಕೆಲಸದ ಮೇಲೆ ಹೆಚ್ಚು ಗಮನವಿಡಿ. ಮತ್ತೆಲ್ಲವೂ ಮಾಯವಾಗುತ್ತದೆ. ಸಾರ್ವಜನಿಕವಾಗಿ ನಿಮಗೆ ಗೌರವಗಳು ಸಿಗಲಿವೆ. ವಿದ್ಯುದುಪಕರಣದಿಂದ ಹಣವು ಖರ್ಚಾಗುವುದು. ಮಕ್ಕಳಿಂದ ಸಂತಸದ ವಾತಾವರಣ ಇರಲಿದೆ. ದಾಂಪತ್ಯದಲ್ಲಿ ಬಿರುಕು ಸರಿಯಾಗಿ ಸಂತೋಷವನ್ನು ಅನುಭವಿಸುವಿರಿ. ತೀರ್ಥಯಾತ್ರೆಗೆ ಹೋಗುವ ಸಾಧ್ಯತೆ ಇದೆ. ಸಾಲವನ್ನು ಕೊಡಲಿದ್ದೀರಿ. ರಾಮತಾರಕ ಮಂತ್ರವನ್ನು ಜಪಿಸಿ. ನಿಮ್ಮೊಳಗಿನ ಭಯವು ದೂರವಾಗುವುದು.

ತುಲಾ: ಆರೋಗ್ಯದಲ್ಲಿ ಇಂದು ಹೆಚ್ಚು ವ್ಯತ್ಯಾಸ ಆಗುವ ಸಾಧ್ಯತೆ ಇದೆ. ಅದನ್ನು ಗಮನಿಸಿಕೊಂಡು ವೈದ್ಯರ ಸಲಹೆಯನ್ನು ಪಡೆಯಿರಿ. ಆಸ್ತಿಯ ವಿಚಾರವಾಗಿ ಮನಸ್ತಾಪಗಳು ಮನೆಯಲ್ಲಿ ಉಂಟಾಗಬಹುದು‌. ತಾಳ್ಮೆಯಿಂದ ಅವುಗಳನ್ನು ತಣ್ಣಗಾಗಿಸಿ. ಹೆಚ್ಚು ಮಾತನಾಡಿ ಇನ್ನೊಂದಕ್ಕೆ ನಾಂದಿ ಹಾಡಬೇಡಿ. ಭವಿಷ್ಯದ ಕುರಿತು ಅತಿಯಾದ ಚಿಂತನೆಯನ್ನು ಮಾಡಲಿದ್ದೀರಿ. ಕೆಲಸದ ಆಯಾಸವು ನಿಮಗೆ ನಿದ್ರೆಯ ಬೇಗ ತರುಸುತ್ತದೆ. ಸ್ವಲ್ಪ ಹೊತ್ತು ಏಕಾಂತಕ್ಕೆ ಹೊಗುವಿರಿ. ಮನೆಗೆ ಬೇಕಾದ ವಸ್ತುಗಳನ್ನು ಖರೀದಿಸುವಿರಿ. ಸಮೀಪದ ದೇವಿಯ ದೇವಾಲಯಕ್ಕೆ ಹೋಗಿ ನಿಮ್ಮ ಮನೋಬಲವನ್ನು ಹೆಚ್ಚಿಸಿಕೊಳ್ಳಿ.

ವೃಶ್ಚಿಕ: ಮಾನಸಿಕ ಮತ್ತು ದೈಹಿಕವಾಗಿ ನೀವಿಂದು ಸಬಲರು. ಬೆಳಗಿನಿಂದಲೇ ಉಲ್ಲಾಸ ಮತ್ತು ಸಂತೋಷಗಳು ಇರಲಿವೆ. ನಿಮಗಿಷ್ಟವಾದ ಸಮಾರಂಭಕ್ಕೆ ಭೇಟಿ ಕೊಡುವಿರಿ. ಆಪ್ತರನ್ನು ಭೇಟಿಯಾಗುವಿರಿ. ನಿಮ್ಮ ವಿರುದ್ಧ ಮಾತನಾಡಿದವರಿಗೆ ಬಹಳ ವೇಗವಾಗಿ ಪ್ರತಿಕ್ರಿಯೆ ನೀಡುವಿರಿ. ಸ್ನೇಹಕ್ಕೆ ಬೆಂಬಲವನ್ನು ಕೊಡಲು ಇಚ್ಛಿಸುವಿರಿ. ನಿಮ್ಮವರಿಂದ ಇಂದು ಯಾವುದನ್ನೂ ನಿರೀಕ್ಷಿಸದೇ ಇದ್ದರೂ ತಾನಾಗಿಯೇ ಬಂದು ಒದಗುವುದು. ಆರೋಗ್ಯದ ಬಗ್ಗೆ ಗಮನವಿರಲಿ. ಆಹಾರದ ವ್ಯತ್ಯಾಸದಿಂದ ಅನಾರೋಗ್ಯವು ಉಂಟಾಗುವುದು. ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಹೋಗಿ ಪೂಜೆ ಮಾಡಿಸಿ, ಪ್ರಸಾದವನ್ನು ಮನೆಗೆ ತೆಗೆದುಕೊಂಡು ಬನ್ನಿ.