AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nithya Bhavishya: ಧನು, ಮಕರ, ಕುಂಭ, ಮೀನಾ ರಾಶಿಯವರ ಇಂದಿನ ಭವಿಷ್ಯ ಹೀಗಿದೆ

ಇಂದಿನ ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

Nithya Bhavishya: ಧನು, ಮಕರ, ಕುಂಭ, ಮೀನಾ ರಾಶಿಯವರ ಇಂದಿನ ಭವಿಷ್ಯ ಹೀಗಿದೆ
ಪ್ರಾತಿನಿಧಿಕ ಚಿತ್ರImage Credit source: tv9hindi.com
ಗಂಗಾಧರ​ ಬ. ಸಾಬೋಜಿ
|

Updated on: Mar 21, 2023 | 6:15 AM

Share

ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದ್ರೆ ಇಂದಿನ (2023 ಮಾರ್ಚ್ 21) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

ನಿತ್ಯ ಪಂಚಾಂಗ: ಶಾಲಿವಾಹನ ಶಕೆ 1945, ಶುಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಕುಂಭ ಮಾಸ, ಮಹಾನಕ್ಷತ್ರ: ಉತ್ತರಾಭಾದ್ರ, ಮಾಸ: ಫಾಲ್ಗುಣ, ಪಕ್ಷ: ಕೃಷ್ಣ, ವಾರ: ಮಂಗಳವಾರ, ತಿಥಿ: ಅಮಾವಾಸ್ಯಾ, ನಿತ್ಯನಕ್ಷತ್ರ: ಪೂರ್ವಾಭಾದ್ರಾ, ಯೋಗ: ಶುಭ, ಕರಣ: ಚತುಷ್ಪಾತ್, ಸೂರ್ಯೋದಯ ಬೆಳಗ್ಗೆ 06 ಗಂಟೆ 38 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 42 ನಿಮಿಷಕ್ಕೆ, ರಾಹು ಕಾಲ 03:15 ರಿಂದ 05:12ರ ವರೆಗೆ, ಯಮಘಂಡ ಕಾಲ 09: 39 ರಿಂದ 11:09ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:40 ರಿಂದ 02:11ರ ವರೆಗೆ.

ಧನುಸ್ಸು: ಕುಟುಂಬದವರ ಪ್ರೀತಿಯನ್ನು ನೀವು ಅನುಭವಿಸುವಿರಿ‌. ಮಾಡಲು ಕೆಲಸಗಳಿದ್ದರೂ ಅದಾವುದನ್ನೂ ಮಾಡದೇ ಸಮಯವನ್ನು ಹಾಳುಮಾಡುವಿರಿ. ದೂರದ ಊರಿಗೆ ಪ್ರಯಾಣವು ಅನಿರೀಕ್ಷಿತ ವಾಗಲಿದೆ. ನಿಮ್ಮವರನ್ನು ಚೆನ್ನಾಗಿ ನೋಡಿಕೊಳ್ಳಲು ಇಚ್ಛಿಸುವಿರಿ‌. ಧಾರ್ಮಿಕ ಕಾರ್ಯಕ್ರಮಗಳಿಗೆ ಭೇಟಿಕೊಡುವ ಅಥವಾ ಧಾರ್ಮಿಕ ಕ್ಷೇತ್ರಗಳಿಗೆ ಹೋಗಿವ ಮನಸ್ಸು ಇರಲಿದೆ. ಅನ್ಯರ ಜೊತೆ ಸಣ್ಣ ಕಲಹವನ್ನು ಮಾಡಿಕೊಳ್ಳಲಿದ್ದೀರಿ‌. ಅಪರೂಪದ ಬಂಧುಗಳು ನಿಮಗೆ ಪರಿಚಿತರಾಗಲಿದ್ದಾರೆ. ಆರ್ಥಿಕತೆ ಒಂದೇ ರೀತಿಯಲ್ಲಿ ಇರಲಿದೆ. ಮಹಾವಿಷ್ಣುವಿನ ಸ್ತೋತ್ರವನ್ನು ಮಾಡಿ.

ಮಕರ: ನಿಮಗೆ ನಿಮ್ಮ ಸಂಗಾತಿಯಿಂದ ಯಾವದೇ ಸ್ಪಂದನೆ ಸಿಗದು. ನಿಮ್ಮನ್ನು ತಾತ್ಸಾರ ಮಡುತ್ತಿದ್ದಾರೆ ಎಂಬ ಭಾವನೆ ನಿಮ್ಮಲ್ಲಿ ಮೂಡಲಿದೆ. ನಿಮ್ಮ ದಾಂಪತ್ಯದಲ್ಲಿ ಪರಸ್ಪರ ಪ್ರೀತಿಯ ಕೊರತೆಯಿಂದ ಇಬ್ಬರ ನಡುವೆ ಅಸಮಾಧಾನವಾಗಲಿದೆ. ಇಬ್ಬರೂ ಎಲ್ಲಿಯಾದರೂ ದೂರ ಹೋಗಿಬನ್ನಿ. ಮನಸ್ಸು ಹಗುರಾದೀತು. ಪಾಲುದಾರಿಕೆಯ ಉದ್ಯಮವು ಹೆಚ್ಚು ಫಲಕಾರಿಯಾಗಲಿದೆ. ಕೆಲಸದ ವಿಷಯದಲ್ಲಿ ನೀವು ಬಹಳ ಚುರುಕಾಗಿ ಇರಲಿದ್ದೀರಿ. ನಿಮ್ಮ ಜೊತೆ ಸಂವಹನವನ್ನು ಮಾಡುವವರಿಗೆ ಖುಷಿ ಸಿಗಲಿದೆ. ನಿಮ್ಮನ್ನು ನೀವು ಅವಲೋಕನ ಮಾಡಿಕೊಳ್ಳುವ ಸಮಯವಾಗಿದೆ‌. ಹನುಮಾನ್ ಚಾಲೀಸ್ ಪಠಣವು ನಿಮ್ಮ ಯಶಸ್ಸಿನ ಗುಟ್ಟಾಗಲಿದೆ.

ಕುಂಭ: ನಿಮಗೆ ಅತ್ಯಂತ ಸುಂದರವಾದ ದಿನವಿದಾಗಲಿದೆ. ಈ ದಿನ ನೀವು ಸಕಾರಾತ್ಮಕ ಚಿಂತನೆಯನ್ನು ಮಾಡುತ್ತ ಎಲ್ಲವನ್ನೂ ಸ್ವೀಕರಿಸುವಿರಿ. ನೂತನ ಗೃಹದ ಹುಡುಕಾಟ ಮಾಡಲಿದ್ದೀರಿ ಅಥವಾ ಹೊಸ ಮನೆಯ ಖರೀದಿಗೆ ಮನಸ್ಸು ಮಾಡುವಿರಿ. ಹೊಸ ಉದ್ಯಮವನ್ನು ಪ್ರಾರಂಭಿಸಲೂ ಯೋಚಿಸಬಹುದು. ನಿಮ್ಮ ಬಂಧುಗಳು ನಿಮ್ಮನ್ನು ಇಷ್ಟ ಪಡುವರು. ನಿಮ್ಮ ಜೊತೆ ಸಲುಗೆಯಿಂದ ಮಾತನಾಡಲು ಬಯಸುವರು. ಇನ್ನೊಬ್ಬರನ್ನು ಅರ್ಥಮಾಡಿಕೊಳ್ಳುವುದು ನಿಮಗೆ ಸಿದ್ಧಿಸಿದ ಗುಣವಾಗಿದೆ. ಆಲಸ್ಯವು ಸ್ವಲ್ಪವಿದ್ದರೂ ನಿಮ್ಮ ಇಂದಿನ ಕಾರ್ಯಗಳು ನಿಮ್ಮನ್ನು ಚುರುಕಾಗಿಸುತ್ತವೆ. ಮೃತ್ಯುಂಜಯನ ಮಂತ್ರವನ್ನು ಪಠಿಸಿ.

ಮೀನ: ನಿಮ್ಮ ಪ್ರೇಮಜೀವನವು ಹಿಂದಿಗಿಂತಲೂ ಉತ್ತಮವಾಗಿಯೂ ಪ್ರಣಯಪೂರ್ವಕವಾರುತ್ತದೆ. ಇಂದು ನಿಮಗೆ ಸಾಕಷ್ಟು ಸಮಯವಿದೆ. ನಿಮ್ಮ ಸಂಗಾತಿಯು ನಿಮ್ಮ ಬಗ್ಗೆ ಉತ್ತಮ ಮನೋಭಾವವನ್ನು ಹೊಂದಿರುವ ಸಾಧ್ಯತೆ ಇದೆ.‌ ನಿಮ್ಮವರು ನಿಮಗೆ ಕೆಲವು ಕಿವಿಮಾತನ್ನು ಹೇಳಬಹುದು. ವ್ಯಾಪಾರದಲ್ಲಿ ಸ್ವಲ್ಪ ನಷ್ಟವಾಗಲಿದೆ. ಅತಿಯಾದ ಚಿಂತಯನ್ನು ಮಾಡಬೇಡಿ. ಬೆಳಗಿನ ಉತ್ಸಾಹವೇ ನಿಮ್ಮ ಕಾರ್ಯಗಳನ್ನು ಪೂರೈಸುವುದು. ಮನಸ್ಸು ಚಂಚಲವಾಗಿದ್ದರೆ ಕ್ಷಣಕಾಲ ಧ್ಯಾನವನ್ನು ಮಾಡಿ ಸರಿ ಮಾಡಿಕೊಳ್ಳಿ.

ಲೋಹಿತಶರ್ಮಾ ಇಡುವಾಣಿ

ಭಾಷೆಯಿಂದ ನಾವು, ನಮ್ಮಿಂದ ಭಾಷೆ ಅಲ್ಲ: ಗೋಲ್ಡನ್ ಸ್ಟಾರ್ ಗಣೇಶ್
ಭಾಷೆಯಿಂದ ನಾವು, ನಮ್ಮಿಂದ ಭಾಷೆ ಅಲ್ಲ: ಗೋಲ್ಡನ್ ಸ್ಟಾರ್ ಗಣೇಶ್
ಉತ್ತರಾಖಂಡದಲ್ಲಿ ಪ್ರವಾಹ, ಭೂಕುಸಿತದಿಂದ ರಸ್ತೆಗಳೇ ಮಾಯ!
ಉತ್ತರಾಖಂಡದಲ್ಲಿ ಪ್ರವಾಹ, ಭೂಕುಸಿತದಿಂದ ರಸ್ತೆಗಳೇ ಮಾಯ!
ಫೋಟೋಶೂಟ್ ಮಾಡಿಕೊಳ್ಳೋಕೆ ಬಂದ್ರಾ?; ಮಹಿಳೆಯ ಪ್ರಶ್ನೆಗೆ ಬೆವರಿದ ಕಂಗನಾ
ಫೋಟೋಶೂಟ್ ಮಾಡಿಕೊಳ್ಳೋಕೆ ಬಂದ್ರಾ?; ಮಹಿಳೆಯ ಪ್ರಶ್ನೆಗೆ ಬೆವರಿದ ಕಂಗನಾ
ಎಲ್ಲರ ಅಪೇಕ್ಷೆಯಂತೆ ಬಿಜೆಪಿಯಲ್ಲಿ ಖಂಡಿತ ಬದಲಾವಣೆಗಳು ಆಗಲಿವೆ: ಈಶ್ವರಪ್ಪ
ಎಲ್ಲರ ಅಪೇಕ್ಷೆಯಂತೆ ಬಿಜೆಪಿಯಲ್ಲಿ ಖಂಡಿತ ಬದಲಾವಣೆಗಳು ಆಗಲಿವೆ: ಈಶ್ವರಪ್ಪ
ಸುರ್ಜೇವಾಲಾ ನನಗೆ ಬಾಯ್ಮುಚ್ಚಿಕೊಂಡಿರುವಂತೆ ಹೇಳಿದ್ದಾರೆ: ಮಧು ಬಂಗಾರಪ್ಪ
ಸುರ್ಜೇವಾಲಾ ನನಗೆ ಬಾಯ್ಮುಚ್ಚಿಕೊಂಡಿರುವಂತೆ ಹೇಳಿದ್ದಾರೆ: ಮಧು ಬಂಗಾರಪ್ಪ
ಯಾವಾಗಲೂ ಕುಮಾರ್ ಬಂಗಾರಪ್ಪ ಮನೆಯಲ್ಲಿ ಸಭೆ ನಡೆಸುತ್ತಿದ್ದ ರೆಬೆಲ್​ಗಳು
ಯಾವಾಗಲೂ ಕುಮಾರ್ ಬಂಗಾರಪ್ಪ ಮನೆಯಲ್ಲಿ ಸಭೆ ನಡೆಸುತ್ತಿದ್ದ ರೆಬೆಲ್​ಗಳು
ನೀರಿಗಿಳಿಯಬಾರದೆಂಬ ಸೂಚನೆಯಿದ್ದರೂ ಉಲ್ಲಂಘಿಸುತ್ತಿರುವ ಪ್ರವಾಸಿಗರು
ನೀರಿಗಿಳಿಯಬಾರದೆಂಬ ಸೂಚನೆಯಿದ್ದರೂ ಉಲ್ಲಂಘಿಸುತ್ತಿರುವ ಪ್ರವಾಸಿಗರು
ಸಿಎಂ, ಡಿಸಿಎಂ ಆದಿಯಾಗಿ ಎಲ್ಲರೂ ಫೋನ್ ರಿಸೀವ್ ಮಾಡುತ್ತಾರೆ: ಲಕ್ಷ್ಮಣ ಸವದಿ
ಸಿಎಂ, ಡಿಸಿಎಂ ಆದಿಯಾಗಿ ಎಲ್ಲರೂ ಫೋನ್ ರಿಸೀವ್ ಮಾಡುತ್ತಾರೆ: ಲಕ್ಷ್ಮಣ ಸವದಿ
ಕವಡೆ ಶಾಸ್ತ್ರವೇ ನಿಜವಾದರೆ ಕಾಂಗ್ರೆಸ್ ನಾಯಕರು ಆಗೇನು ಹೇಳುತ್ತಾರೆ? ಅಶೋಕ
ಕವಡೆ ಶಾಸ್ತ್ರವೇ ನಿಜವಾದರೆ ಕಾಂಗ್ರೆಸ್ ನಾಯಕರು ಆಗೇನು ಹೇಳುತ್ತಾರೆ? ಅಶೋಕ
ಗಣ್ಯರಿಗೆ ಖಾಸಗಿ ಆಸ್ಪತ್ರೆಗಳೇ ಯಾಕೆ? ಸರ್ಕಾರೀ ಆಸ್ಪತ್ರೆ ಯಾಕೆ ಬೇಡ?
ಗಣ್ಯರಿಗೆ ಖಾಸಗಿ ಆಸ್ಪತ್ರೆಗಳೇ ಯಾಕೆ? ಸರ್ಕಾರೀ ಆಸ್ಪತ್ರೆ ಯಾಕೆ ಬೇಡ?