AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope Today: ಮೇಷ, ವೃಷಭ, ಮಿಥುನ, ಕಟಕ ರಾಶಿಗಳ ಫಲ, ಭವಿಷ್ಯ ಹೀಗಿದೆ

2023 ಮಾರ್ಚ್ 21 ಮಂಗಳವಾರದ ನಿಮ್ಮ ರಾಶಿ ಫಲ ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

Horoscope Today: ಮೇಷ, ವೃಷಭ, ಮಿಥುನ, ಕಟಕ ರಾಶಿಗಳ ಫಲ, ಭವಿಷ್ಯ ಹೀಗಿದೆ
ಪ್ರಾತಿನಿಧಿಕ ಚಿತ್ರImage Credit source: maharashtratimes.com
ಗಂಗಾಧರ​ ಬ. ಸಾಬೋಜಿ
|

Updated on: Mar 21, 2023 | 5:30 AM

Share

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಮಾರ್ಚ್ 21 ಮಂಗಳವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯ ಪಂಚಾಂಗ: ಶಾಲಿವಾಹನ ಶಕೆ 1945, ಶುಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಕುಂಭ ಮಾಸ, ಮಹಾನಕ್ಷತ್ರ: ಉತ್ತರಾಭಾದ್ರ, ಮಾಸ: ಫಾಲ್ಗುಣ, ಪಕ್ಷ: ಕೃಷ್ಣ, ವಾರ: ಮಂಗಳವಾರ, ತಿಥಿ: ಅಮಾವಾಸ್ಯಾ, ನಿತ್ಯನಕ್ಷತ್ರ: ಪೂರ್ವಾಭಾದ್ರಾ, ಯೋಗ: ಶುಭ, ಕರಣ: ಚತುಷ್ಪಾತ್, ಸೂರ್ಯೋದಯ ಬೆಳಗ್ಗೆ 06 ಗಂಟೆ 38 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 42 ನಿಮಿಷಕ್ಕೆ, ರಾಹು ಕಾಲ 03:15 ರಿಂದ 05:12ರ ವರೆಗೆ, ಯಮಘಂಡ ಕಾಲ 09: 39 ರಿಂದ 11:09ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:40 ರಿಂದ 02:11ರ ವರೆಗೆ.

ಮೇಷ: ನೀವು ಇಂದು ಪ್ರಪಂಚವನ್ನು ಹೊಸದೃಷ್ಟಿಯಿಂದ ನೋಡುವಿರಿ. ಇಂದು ನಡೆಯುವ ನಕಾರಾತ್ಮಕ ವಾರ್ತೆಯನ್ನು ಲೆಕ್ಕಿಸದೇ ನಿಮ್ಮ ಕೆಲಸದಲ್ಲಿ ತೊಡಗಿಕೊಳ್ಳುವಿರಿ. ನಿಮ್ಮ ವ್ಯವಹಾರವು ನಿಮಗೆ ನಿಜವಾಗಿಯೂ ಸಂತೋಷವನ್ನು ನೀಡಲಿದೆ. ನಿಮ್ಮನ್ನು ಸುಧಾರಿಸಲು ಉದ್ದೇಶದಿಂದ ಕೆಲವು ಶಿಸ್ತಿನ ಕ್ರಮವನ್ನು ನೀವೇ ರೂಢಿಸಿಕೊಳ್ಳುವಿರಿ. ನಿಮ್ಮ ಅಧ್ಯಯನ ಶೀಲತೆ ನಿಮಗೆ ಭವಿಷ್ಯದಲ್ಲಿ ನಿಮಗೆ ಬಹಳಷ್ಟು ಸಹಾಯ ಮಾಡುತ್ತದೆ. ಬೆನ್ನುನೋವು ಕಾಣಿಸಿಕೊಂಡೀತು. ವ್ಯಾಯಾಮವನ್ನು ಮಾಡಿ.

ವೃಷಭ: ನಿಮ್ಮ ಆರೋಗ್ಯವು ಕ್ರಮೇಣ ಕಡಿಮೆಯಾಗುತ್ತಾ ಹೋಗಲಿದೆ. ಇಂದು ನಿಮಗೆ ಹಾಯೆನಿಸಬಹುದು. ನೀವು ಸದ್ಯ ಆರೋಗ್ಯಕರ ಆಹಾರ ಮತ್ತು ವ್ಯಾಯಾಮದತ್ತ ಗಮನ ಹರಿಸುವುದು ಉತ್ತಮ. ಆದಷ್ಟು ಹೊರಗಿನ ತಿಂಡಿಯನ್ನು ಕಡಿಮೆ ಮಾಡಿ. ಸೋಮಾರಿತನ ಮತ್ತು ಅಸಡ್ಡೆಯಿಂದ ಅವಕಾಶಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಅದನ್ನು ಗಮನಿಸಿಕೊಳ್ಳಿ. ಹೊಸತನ್ನು ಕಲಿಯುವ ನಿರ್ಧಾರವನ್ನು ಮಾಡಲಿದ್ದೀರಿ. ಪತಿಯ ಪ್ರೀತಿ ಇಂದು ಸಿಗಲಿದೆ. ಮನಚಾಂಚಲ್ಯವನ್ನು ಕಡಿಮೆ ಮಾಡಿಕೊಳ್ಳಿ. ಶಿವದೇವಾಲಯಕ್ಕೆ ಹೋಗಿ ಅಭಿಷೇಕ ಮಾಡಿಸಿ ಬನ್ನಿ.

ಮಿಥುನ: ಹದಗೆಟ್ಟ ಆರೋಗ್ಯವು ಸರಿಯಾಗುತ್ತ ಬರುತ್ತದೆ. ಕಛೇರಿಯಲ್ಲಿ ಕೆಲವು ಸವಾಲಗಳು ಇರಲಿವೆ. ಒತ್ತಡಕ್ಕೆ ಸಿಲುಕದೇ ಆಪ್ತರ ಜೊತೆ ಸಮಾಲೋಚನೆ ಮಾಡಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ. ಸಾಲಕೊಟ್ಟ ಹಣವು ನಿಮಗೆ ಸಿಗಲಿದೆ. ನಿಮ್ಮವರು ನಿಮಗೆ ಸಹಾಯ ಮಾಡಿದಂತೆ ಕಂಡರೂ ಅದು ಸುಳ್ಳಾಗಲಿದೆ. ನೀವಿಟ್ಟ ನಂಬಕೆ ಹುಸಿಯಾಗುವ ಕಾಲ ಇಂದು.‌ ಬಹಳ ನೋವಾಗಲಿದೆ. ಆದರೆ ಬೇಗ ತಿಳಿಯಿತು ಎಂಬ ಸಮಾಧನ ಮಾಡಿಕೊಳ್ಳಿ. ಏಕಾಗ್ರತೆಯ ಕೊರತೆ ಕಾಣಲಿದೆ. ಬೆಳಗ್ಗೆ ಪ್ರಾಣಾಯಾಮ ಮಾಡಿ ಧ್ಯಾನ ಮಾಡಿ.

ಕಟಕ: ನಿಮಗೆ ಸಹೋದ್ಯೋಗಿಗಳ ಸಹಕಾರವು ಸಿಕ್ಕಿ ಕಛೇರಿಯ ಇಂದಿನ ಕೆಲಸವನ್ನು ಮಾಡಿ ಮುಗಿಸುವಿರಿ. ನಿದ್ರಾಹೀನತೆಯಿಂದ ಸ್ವಲ್ಪ ಆಲಸ್ಯವೂ ಇರಲಿದೆ. ಸಂಗಾತಿಯ ಜೊತೆ ದೂರಪ್ರಯಾಣ ಮಾಡಬಹುದು. ಕಛೇರಿಯಲ್ಲಿ ನಿಮ್ಮ ಕೆಲಸಗಳನ್ನು ಆಡಿಕೊಳ್ಳುತ್ತಾರೆ. ಇದರಿಂದ ನಿಮಗೆ ಪ್ರಮೋಷನ್ ಗೆ ಸಮಸ್ಯೆಯಾಗಲಿದೆ. ಹೊಸ ಉದ್ಯೋಗವನ್ನು ಹುಡುಕುತ್ತಿದ್ದರೆ ಇಂದು ಸಿಗಲಿದೆ. ವಾತಕ್ಕೆ ಸಂಬಂಧಿಸಿದ ಖಾಯಿಲೆ ಬರಲಿದೆ. ಧನ್ವಂತರಿಯ ಸ್ತೋತ್ರ ಮಾಡಿ.