Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನವೆಂಬರ್ 10ರ ದಿನಭವಿಷ್ಯ

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ನವೆಂಬರ್ 10ರ ಶುಕ್ರವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನವೆಂಬರ್ 10ರ ದಿನಭವಿಷ್ಯ
ಪ್ರಾತಿನಿಧಿಕ ಚಿತ್ರ
Follow us
ಸ್ವಾತಿ ಎನ್​ಕೆ
| Updated By: Ganapathi Sharma

Updated on: Nov 10, 2023 | 1:00 AM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ನವೆಂಬರ್ 10ರ ಶುಕ್ರವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ಈಗಾಗಲೇ ಮಾಡಿದಂತಹ ಹೂಡಿಕೆಗಳು ಲಾಭದಾಯಕವಾಗಿ ಪರಿಣಮಿಸುವಂತಹ ಎಲ್ಲ ಸಾಧ್ಯತೆಗಳು ಗೋಚರಿಸುತ್ತಿವೆ. ಈ ದಿನ ನಿಮ್ಮೆದುರು ಕಾಣಿಸಿಕೊಳ್ಳುವ ಅವಕಾಶಗಳನ್ನು ಹೇಗೆ ಸದುಪಯೋಗಪಡಿಸಿಕೊಳ್ಳುತ್ತೀರಿ ಎಂಬುದು ನಿಮ್ಮ ಕೈಯಲ್ಲೇ ಇದೆ. ಸರ್ಕಾರಿ ನೌಕರಿಯಲ್ಲಿ ಇರುವವರಿಗೆ ನೀವು ನಿರೀಕ್ಷೆ ಮಾಡಿದಂತಹ ಅಥವಾ ಅಪೇಕ್ಷೆ ಮಾಡಿದಂತಹ ಸ್ಥಳಕ್ಕೆ ವರ್ಗಾವಣೆ ದೊರೆಯುವ ಅವಕಾಶಗಳು ಹೆಚ್ಚಿವೆ. ಬ್ಯಾಂಕಿಂಗ್ ವ್ಯವಹಾರಗಳನ್ನು ಮಾಡುವಂಥವರು ಬಹಳ ಸಮಯದಂಥ ಬಾಕಿ ಉಳಿಸಿಕೊಂಡಂತಹ ಕೆಲಸಗಳನ್ನು ಯಶಸ್ವಿಯಾಗಿ ಮಾಡಿ ಮುಗಿಸಲಿದ್ದೀರಿ. ಎತ್ತರದ ಸ್ಥಳದಲ್ಲಿ ನಿಂತು ಕೆಲಸ ಮಾಡುವಂಥವರು ಮಾಮೂಲಿ ದಿನಗಳಿಗಿಂತ ಹೆಚ್ಚು ಎಚ್ಚರಿಕೆಯಿಂದ ಕೆಲಸ ಮಾಡಿ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ಬಂದದ್ದು ಬರಲಿ ಎಂದು ಧೈರ್ಯದಿಂದ ಮುನ್ನುಗ್ಗಿ ಮಾಡಿದ ಕೆಲಸಗಳು ಯಶಸ್ವಿಯಾಗಿ ಮುಗಿಯಲಿವೆ. ಸಂಗಾತಿ, ಮಕ್ಕಳೊಂದಿಗೆ ಉತ್ತಮವಾದ ಸಮಯವನ್ನು ಕಳೆಯುವಂತಹ ಯೋಗ ನಿಮ್ಮ ಪಾಲಿಗೆ ಈ ದಿನ ಇದೆ. ನಿಮ್ಮ ಬಗ್ಗೆ ಉದ್ಯೋಗದಲ್ಲಿಯೋ ವೃತ್ತಿಯಲ್ಲಿಯೋ ದೂರನ್ನು ಹೇಳಿದವರೇ ಸಮಸ್ಯೆಗೆ ಸಿಲುಕಿಕೊಳ್ಳಲಿದ್ದಾರೆ. ತೋಟಗಾರಿಕೆ ಬೆಳೆಗಳನ್ನು ಬೆಳೆಯುವಂತಹ ಕೃಷಿಕರಿಗೆ ಲಾಭದ ಪ್ರಮಾಣದಲ್ಲಿ ಭಾರೀ ಹೆಚ್ಚಳ ಆಗಲಿದೆ. ಪ್ರೀತಿ, ಪ್ರೇಮದಲ್ಲಿ ಇರುವಂತಹ ಸಾಧ್ಯತೆಗಳಿವೆ. ಈಗಾಗಲೇ ಕೆಲಸ ಮಾಡಿ ಆಗಿದೆ ಆ ಹಣ ಬರುತ್ತದೆಯೋ ಇಲ್ಲವೋ ಎಂಬ ಗೊಂದಲ ಇರುವಂಥದ್ದು ವಾಪಸ್ ಪಡೆದುಕೊಳ್ಳುವುದಕ್ಕೆ ಮಾರ್ಗಗಳು ಗೋಚರವಾಗಲಿವೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ಯಾರು ಲೇವಾದೇವಿ ವ್ಯವಹಾರಗಳನ್ನು ಮಾಡುತ್ತೀರೋ ಅಂತಹವರಿಗೆ ನಷ್ಟ ಒಂದರ ಸೂಚನೆ ದೊರೆಯಲಿದೆ. ಈ ದಿನ ಯಾವುದೇ ಕಾರಣಕ್ಕೂ ಇತರರ ಸಾಲಗಳಿಗೋ ಅಥವಾ ವ್ಯವಹಾರಗಳಿಗೂ ಜಾಮೀನಾಗಿ ನಿಲ್ಲಲಿಕ್ಕೆ ಹೋಗಬೇಡಿ. ಮೇಲ್ನೋಟಕ್ಕೆ ಕಾಣುವಂತಹ ವ್ಯಕ್ತಿತ್ವವೇ ಆ ವ್ಯಕ್ತಿಯದು ಆಗಿರಬೇಕು ಎಂದೇನೂ ಇಲ್ಲ. ನಿಮ್ಮ ಕೈಲಿ ಎಷ್ಟು ಹಣವಿದೆಯೋ ಅಷ್ಟಕ್ಕೆ ಮಾತ್ರ ಯೋಜನೆಗಳನ್ನು ಹಾಕಿಕೊಳ್ಳಿ, ಹೇಗಾದರೂ ಸಾಲ ಸಿಕ್ಕಿಯೇ ಬಿಡುತ್ತದೆ ಎಂಬ ಅತಿಯಾದ ವಿಶ್ವಾಸ ಬೇಡ. ಇಂಟರ್ ನೆಟ್ ಬ್ಯಾಂಕಿಂಗ್ ವ್ಯವಹಾರಗಳನ್ನು ಮಾಡುವಂಥವರು ನಿಮ್ಮ ಲಾಗಿನ್ ಐಡಿ ಹಾಗೂ ಪಾಸ್ ವರ್ಡ್ ಗಳನ್ನು ಜೋಪಾನವಾಗಿ ಇಟ್ಟುಕೊಳ್ಳಿ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ವೈದ್ಯಕೀಯ ಪರೀಕ್ಷೆ ಅಥವಾ ಚಿಕಿತ್ಸೆಗಾಗಿ ಹೆಚ್ಚಿನ ಖರ್ಚು ಆಗುವ ಯೋಗ ಈ ದಿನ ನಿಮ್ಮ ಪಾಲಿಗೆ ಇದೆ. ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಎಂದು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬೇಡಿ. ನಿಮ್ಮ ಮಕ್ಕಳು ಯಾರ ಜೊತೆಗೆ ಸ್ನೇಹ ಮಾಡುತ್ತಿದ್ದಾರೆ ಎಂಬ ಬಗ್ಗೆ ಒಂದಿಷ್ಟು ಗಮನ ಕೊಡಿ. ಹಾಸ್ಟೆಲ್ ಗಳಲ್ಲಿ ಬಿಟ್ಟು ಮಕ್ಕಳನ್ನು ಓದಿಸುತ್ತಿರುವವರು ಅವರ ವ್ಯಾಸಂಗದ ಪ್ರಗತಿ ಹೇಗಿದೆ ಎಂಬುದರ ಬಗ್ಗೆ ಖುದ್ದಾಗಿ ಭೇಟಿ ನೀಡಿ, ವಿಚಾರಿಸುವುದು ಉತ್ತಮ. ನಿಮ್ಮ ಬಗ್ಗೆ ಹಳೇ ದ್ವೇಷ ಇರುವಂತಹವರು ಅದನ್ನು ತೀರಿಸಿಕೊಳ್ಳುವ ಉದ್ದೇಶದಿಂದಲೇ ದೂರು ನೀಡುವ ಸಾಧ್ಯತೆ ಈ ದಿನ ಹೆಚ್ಚಿದೆ. ಕೈಯಿಂದ ಒಂದಿಷ್ಟು ಹಣವನ್ನು ಕಳೆದುಕೊಳ್ಳಲಿದ್ದೀರಿ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ಈ ದಿನ ನಿಮ್ಮ ಸುಪ್ತ ಪ್ರಜ್ಞೆ ತುಂಬಾ ಚೆನ್ನಾಗಿ ಕೆಲಸ ಮಾಡಲಿದೆ. ಯಾವುದಾದರೂ ಕಾರ್ಯವನ್ನು ಮಾಡಬೇಕು ಎಂದೆನಿಸಿದರೆ ಮಾಡಿ, ಒಂದು ವೇಳೆ ಬೇಡ ಅಂತೇನಾದರೂ ಮನಸ್ಸಿಗೆ ಅನಿಸಿದರೆ ಕಡ್ಡಾಯವಾಗಿ ಮಾಡಬೇಡಿ. ಇಷ್ಟು ಸಮಯ ಪ್ರತಿ ಹಂತದಲ್ಲೂ ನಿಮ್ಮನ್ನು ಮೀರಿ ಬೆಳೆಯುತ್ತಿದ್ದಾರೆ ಎಂದೆನಿಸಿದ ವ್ಯಕ್ತಿಗಳು ನಿಮ್ಮನ್ನೇ ಸಹಾಯ ಕೇಳಿಕೊಂಡು ಈ ದಿನ ಬರಲಿದ್ದಾರೆ. ಎಂಥ ಸಣ್ಣ ವಿಚಾರವಾದರೂ ಸರಿ, ನಿಮ್ಮ ಮಾತಿಗೆ ವಿಶೇಷ ಮೌಲ್ಯ ಇರಲಿದೆ. ಗೃಹೋಪಯೋಗಿ ವಸ್ತುಗಳನ್ನು ತರುವ ಬಗ್ಗೆ ಕುಟುಂಬ ಸದಸ್ಯರ ಜೊತೆಗೆ ಚರ್ಚೆ ಮಾಡಲಿದ್ದೀರಿ. ಇತರರು ತಮ್ಮಿಂದ ಮಾಡಲು ಸಾಧ್ಯವಿಲ್ಲ ಎಂದು ಕೈ ಬಿಟ್ಟಂತಹ ಕಾರ್ಯಗಳನ್ನು ನೀವು ಯಶಸ್ವಿಯಾಗಿ ಮಾಡಿ ಮುಗಿಸಲಿದ್ದೀರಿ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ನೀವು ನಿರೀಕ್ಷೆ ಕೂಡ ಮಾಡದ ರೀತಿಯಲ್ಲಿ ಕೆಲವು ಕೆಲಸಗಳು ಫಟಾಫಟ್ ಹೋಗಲಿವೆ. ನಿಮ್ಮಲ್ಲಿ ಯಾರು ಸೂಕ್ತ ವಿವಾಹ ವಯಸ್ಕರಿದ್ದೀರಿ ಅಂತಹವರಿಗೆ ಮನಸ್ಸಿಗೆ ಒಪ್ಪುವಂತಹ ಸಂಬಂಧ ದೊರೆಯಲಿದೆ. ಸಂಬಂಧಿಕರು ಅಥವಾ ಸ್ನೇಹಿತರ ಮೂಲಕವಾಗಿ ನಿಮಗೆ ಈ ಬಗ್ಗೆ ಮಾಹಿತಿ ದೊರೆಯಲಿದೆ. ಉದ್ಯೋಗ ಬದಲಾವಣೆ ಮಾಡಬೇಕು ಎಂದು ಆಲೋಚಿಸುತ್ತಿರುವವರಿಗೆ ಕೂಡ ಶುಭ ಸುದ್ದಿ ಕೇಳಿ ಬರಲಿದೆ. ಶೇರುಪೇಟೆಯಲ್ಲಿ ಹಣ ಹೂಡಿಕೆ ಮಾಡಿರುವವರಿಗೆ ಸ್ವಲ್ಪ ಮಟ್ಟಿಗೆ ಹಿನ್ನಡೆ ಆಗಬಹುದು. ನಿಮಗೇನಾದರೂ ಗೊಂದಲ ಏರ್ಪಟ್ಟಲ್ಲಿ ಅನುಭವಿಗಳು, ಹಿರಿಯರ ಮಾರ್ಗದರ್ಶನ ಪಡೆದುಕೊಳ್ಳುವುದು ಉತ್ತಮ. ಮನೆಯಿಂದ ಹೊರಡುವ ಮುನ್ನ ಒಮ್ಮೆ ಶಿರಡಿ ಸಾಯಿಬಾಬರನ್ನು ಮನಸ್ಸಿನಲ್ಲಿ ನೆನಪಿಸಿಕೊಳ್ಳಿ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ನೀವು ಆಡದ ಮಾತನ್ನು, ಹೇಳದ ವಿಚಾರವನ್ನು ನೀವೇ ಮಾತನಾಡಿದ್ದೀರಿ ಅಥವಾ ನೀವೇ ಹೇಳಿದ್ದೀರಿ ಎಂದು ಆರೋಪಿ ಸ್ಥಾನದಲ್ಲಿ ನಿಲ್ಲಿಸಿ, ಮಾನಸಿಕ ಹಿಂಸೆ ನೀಡಲಿದ್ದಾರೆ. ಸ್ವಂತ ವ್ಯಾಪಾರ- ವ್ಯವಹಾರ ಮಾಡುವಂಥವರು ಮುಖ್ಯ ಕಾಗದ, ಪತ್ರಗಳಿಗೆ ಸಹಿ ಮಾಡುವಾಗ ಬಹಳ ಎಚ್ಚರಿಕೆಯನ್ನು ವಹಿಸಬೇಕು. ಇತರರ ವಾಹನವನ್ನು, ಗ್ಯಾಜೆಟ್ ಗಳನ್ನು ಅಥವಾ ಲ್ಯಾಪ್ ಟಾಪ್ ಅಂಥದ್ದನ್ನು ಯಾವುದೇ ಕಾರಣಕ್ಕೂ ಈ ದಿನ ಬಳಸಲು ಹೋಗಬೇಡಿ. ದೊಡ್ಡದೋ ಸಣ್ಣದೋ ಒಟ್ಟಿನಲ್ಲಿ ಗುಂಪು ಗೂಡಿರುವ ಜನ ಒಂದು ವೇಳೆ ಗಾಸಿಪ್ ಮಾತನಾಡುತ್ತಿದ್ದಾರೆ ಎಂದಾದಲ್ಲಿ ಯಾವುದೇ ಕಾರಣಕ್ಕೂ ಅಲ್ಲಿ ನಿಲ್ಲಲು ಸಹ ಹೋಗಬೇಡಿ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ನಿಮ್ಮಿಂದ ಸಲಹೆ ಪಡೆದುಕೊಂಡ ವ್ಯಕ್ತಿಗಳಿಗೆ ಈ ದಿನ ಉತ್ತಮವಾದ ಲಾಭ ದೊರೆಯಲಿದೆ. ಸಹೋದ್ಯೋಗಿಗಳ ಪಾಲಿಗೆ ನೀವು ಒಂದು ಬೆರಗಿನಂತೆ ಕಾಣುತ್ತೀರಿ. ಮಾರ್ಕೆಟಿಂಗ್ ಅಥವಾ ಮಾರಾಟ ವಿಭಾಗದಲ್ಲಿ ಇರುವಂಥವರು ನಿಗದಿತ ಗುರಿಯನ್ನು ಬಹಳ ಬೇಗ ಮುಟ್ಟುವುದಕ್ಕೆ ಬೇಕಾದ ಸಿದ್ಧತೆಯನ್ನು ಮಾಡಿಕೊಳ್ಳಲಿದ್ದೀರಿ. ಅಡುಗೆ ಕಾಂಟ್ರಾಕ್ಟರ್ ಗಳು, ಇವೆಂಟ್ ಮ್ಯಾನೇಜ್ ಮೆಂಟ್ ಮಾಡುವಂಥವರು ಇಂಥವರಿಗೆ ಆದಾಯದಲ್ಲಿ ಬಹಳ ಹೆಚ್ಚಳ ಆಗುವಂತಹ ದೀರ್ಘಾವಧಿಯ ಕೆಲಸಗಳು ದೊರೆಯುವ ಅವಕಾಶಗಳು ಹೆಚ್ಚಿವೆ. ಸಿಹಿ ಪದಾರ್ಥಗಳಿಂದ ದೂರವಿದ್ದಲ್ಲಿ ಆರೋಗ್ಯ ಚೆನ್ನಾಗಿರುತ್ತದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ಈ ದಿನ ನೀವು ಎಷ್ಟು ಮೌನವಾಗಿರುತ್ತೀರೋ ಅಷ್ಟು ನೆಮ್ಮದಿಯಾಗಿ ಇರುತ್ತೀರಿ. ಅತಿ ಉತ್ಸಾಹದಿಂದ ಇತರರ ವೈಯಕ್ತಿಕ ವಿಚಾರಗಳಿಗೆ ಮೂಗು ತೂರಿಸಿದಿರೋ ಅವಮಾನದ ಪಾಲಾಗುತ್ತೀರಿ. ಇತರರು ನಿಮ್ಮ ಬಳಿ ರಹಸ್ಯ ಎಂದು ಹಂಚಿಕೊಂಡ ಮಾಹಿತಿಯನ್ನು ಅಥವಾ ವಿಚಾರವನ್ನು ಹೊರಗೆ ಹಾಕಬೇಡಿ. ಮಕ್ಕಳ ಶಿಕ್ಷಣ, ಆರೋಗ್ಯ, ಉದ್ಯೋಗ ಅಥವಾ ಮದುವೆ ಈ ಪೈಕಿ ಯಾವುದಕ್ಕಾದರೂ ಸರಿ, ನಿಮಗೊಂದು ಆತಂಕ ಸೃಷ್ಟಿಯಾಗಲಿದೆ. ಹಣದ ಖರ್ಚಿಗೆ ಸಂಬಂಧಿಸಿದಂತೆ ಕುಟುಂಬ ಸದಸ್ಯರ ಜೊತೆಗೆ ಅಭಿಪ್ರಾಯ ಭೇದಗಳು ಕಾಣಿಸಿಕೊಳ್ಳಲಿವೆ. ಒಂದು ಸಣ್ಣ ಸುಳ್ಳು ತಾನೇ ಈ ತಕ್ಷಣಕ್ಕೆ ತಪ್ಪಿಸಿಕೊಂಡರೆ ಸಾಕು ಎಂಬ ಧೋರಣೆ ಯಾವ ಕಾರಣಕ್ಕೂ ಬೇಡ.