Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನವೆಂಬರ್ 7ರ ದಿನಭವಿಷ್ಯ

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ನವೆಂಬರ್ 7ರ ಮಂಗಳವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನವೆಂಬರ್ 7ರ ದಿನಭವಿಷ್ಯ
ಪ್ರಾತಿನಿಧಿಕ ಚಿತ್ರ
Follow us
ಸ್ವಾತಿ ಎನ್​ಕೆ
| Updated By: Ganapathi Sharma

Updated on: Nov 07, 2023 | 1:00 AM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ನವೆಂಬರ್ 7ರ ಮಂಗಳವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ನಿಮ್ಮ ಜೊತೆಗೆ ಇಷ್ಟು ಸಮಯ ಒಟ್ಟಾಗಿಯೇ ಕೆಲಸ ಮಾಡುತ್ತಿರುವವರಿಗೆ ಕೆಲವು ಆಕ್ಷೇಪಗಳು ಹಾಗೂ ನಿಮ್ಮ ಬಗ್ಗೆ ಅಸಮಾಧಾನ ಕಾಣಿಸಿಕೊಳ್ಳಬಹುದು. ಇದು ಒಂದು ವೇಳೆ ನಿಮ್ಮ ಗಮನಕ್ಕೆ ಬಂದಲ್ಲಿ ಕೂತು ಮಾತನಾಡಿ, ಅಭಿಪ್ರಾಯ ಬೇಧಗಳನ್ನು ಬಗೆಹರಿಸಿಕೊಳ್ಳುವುದಕ್ಕೆ ಪ್ರಯತ್ನಿಸಿ. ಭಾವನಾತ್ಮಕ ಸಂಗತಿಗಳು ಯಾವುವು ಹಾಗೂ ಹಣಕಾಸಿನ ಸಂಗತಿಗಳನ್ನು ಒಳಗೊಂಡಿರುವ ವಿಚಾರಗಳು ಯಾವುವು ಎಂಬ ಬಗ್ಗೆ ಒಂದು ಸ್ಪಷ್ಟತೆ ಇಟ್ಟುಕೊಂಡು ವ್ಯವಹರಿಸುವುದು ಒಳ್ಳೆಯದು. ಕೆಲವು ಕೆಲಸಗಳು ನೀವು ಅಂದುಕೊಂಡಿರುವುದಕ್ಕಿಂತ ಬಹಳ ನಿಧಾನಕ್ಕೆ ಸಾಗುತ್ತಿವೆ ಎಂದು ಈ ದಿನ ಅನಿಸಲಿದೆ. ಆ ಕಾರಣಕ್ಕಾಗಿ ಸಂಬಂಧಪಟ್ಟವರ ಜೊತೆ ಜೋರು ಧ್ವನಿಯಲ್ಲಿ ಮಾತನಾಡುವುದಕ್ಕೆ ಹೋಗಬೇಡಿ. ಅದಕ್ಕೆ ಕಾರಣವನ್ನು ತಿಳಿದುಕೊಂಡು, ಯಾವ ಗಡುವಿನೊಳಗೆ ಕೆಲಸ ನಿಮಗೆ ಮುಗಿಯಬೇಕಿದೆ ಎಂಬುದನ್ನು ಎದುರಿನವರಿಗೆ ಸೌಜನ್ಯದಿಂದ ತಿಳಿಸಿದರೆ ಸಾಕು.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ನೀವು ಮಾಡುತ್ತಿರುವ ಖರ್ಚಿನ ಬಗ್ಗೆ ಕುಟುಂಬ ಸದಸ್ಯರಲ್ಲಿ ಭಾರಿ ಆಕ್ಷೇಪ ವ್ಯಕ್ತವಾಗಲಿದೆ. ಇಷ್ಟು ಸಮಯ ಬಹಳ ಸೌಮ್ಯದಿಂದ ವರ್ತಿಸಿದವರು ಇವರೇನಾ ಎಂದು ಅನುಮಾನ ಪಡುವಷ್ಟರ ಮಟ್ಟಿಗೆ ವರ್ತನೆಗಳು ಇರಲಿವೆ. ನಿಮ್ಮ ಯೋಜನೆಗಳಿಗೆಲ್ಲ ಬಹಳ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದವರೇ ಈ ದಿನ ಪ್ರಶ್ನೆಗಳನ್ನು ಮಾಡಲು ಆರಂಭಿಸಲಿದ್ದಾರೆ. ಆದ್ದರಿಂದ ಯಾವುದೇ ವಿಚಾರದಲ್ಲಾಗಲಿ ನಾನು ಏನು ಮಾಡಿದರೂ ನಡೆಯುತ್ತದೆ ಎಂಬ ಧೋರಣೆ ಬೇಡ. ಉದ್ಯೋಗ ಬದಲಾವಣೆ ಮಾಡಬೇಕು ಎಂದುಕೊಳ್ಳುತ್ತಿರುವವರಿಗೆ ಕೆಲವು ಬೆಳವಣಿಗೆಗಳಿಂದ ಹಿನ್ನಡೆ ಆಗಬಹುದು. ಅದೆಂಥ ಸಣ್ಣ ಮಟ್ಟದ ಕೆಲಸವೇ ಆದರೂ ಆಲಸ್ಯವನ್ನು ತೋರಿಸಿ, ನಿಮ್ಮ ವರ್ಚಸ್ಸಿಗೆ ಧಕ್ಕೆ ಆಗುವಂತೆ ಮಾಡಿಕೊಳ್ಳಬೇಡಿ. ಯಾವುದಾದರೂ ಮುಖ್ಯ ಕೆಲಸದ ಮೇಲೆ ಮನೆಯಿಂದ ಆಚೆ ಹೊರಡುವ ಮುನ್ನ ಮನಸ್ಸಿನಲ್ಲಿ ಗಣಪತಿಯನ್ನು ಸ್ಮರಿಸಿಕೊಂಡು ಮುಂದುವರಿಯಿರಿ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ಎಲ್ಲರಿಗೂ ಆಗಿದ್ದೇ ನನಗೂ ಆಗುತ್ತದೆ ಎಂಬ ಧೋರಣೆ ಈ ದಿನ ಯಾವುದೇ ಕಾರಣಕ್ಕೂ ಬೇಡ. ನಿಮ್ಮ ಒಳ ಮನಸು ನೀಡುವಂತಹ ಸೂಚನೆಗಳು ಹಾಗೂ ನಿಮಗೆ ಹೊಳೆಯುವಂತಹ ಕೆಲವು ವಿಚಾರಗಳನ್ನು ಸರಿಯಾಗಿ ಆಲೋಚಿಸಿದ ನಂತರವಷ್ಟೇ ತೀರ್ಮಾನವನ್ನು ತೆಗೆದುಕೊಳ್ಳಿ. ದೊಡ್ಡ ಜವಾಬ್ದಾರಿಗಳನ್ನು ವಹಿಸುತ್ತಿದ್ದರೆ ಯಾವುದೇ ಹಿಂಜರಿಕೆ ಅಥವಾ ಅಂಜಿಕೆ ಇಲ್ಲದೆ ಒಪ್ಪಿಕೊಳ್ಳಿ. ಏಕೆಂದರೆ ಈ ಕೆಲಸದಲ್ಲಿ ನಿಮ್ಮ ಸಾಮರ್ಥ್ಯವನ್ನು ತೋರಿಸುವುದಕ್ಕೆ ವೇದಿಕೆ ದೊರೆಯುತ್ತದೆ. ಷೇರುಪೇಟೆ ಅಥವಾ ಮ್ಯೂಚುವಲ್ ಫಂಡ್ಸ್ ಗಾಗಿ ಹೂಡಿಕೆ ಮಾಡಬೇಕು ಎಂದಿರುವವರು ಸರಿಯಾದ ಮಾರ್ಗದರ್ಶನವನ್ನು ಪಡೆದುಕೊಂಡ ನಂತರವಷ್ಟೇ ಮುಂದಕ್ಕೆ ಹೆಜ್ಜೆ ಇಡಿ. ಸ್ವಂತ ಉದ್ಯಮ ಅಥವಾ ವ್ಯವಹಾರವನ್ನು ಮಾಡುತ್ತಿರುವವರಿಗೆ ದೊಡ್ಡ ಅವಕಾಶ ತೆರೆದುಕೊಳ್ಳಲಿದೆ. ಇದನ್ನು ನೀವು ಹೇಗೆ ಬಳಸುಕೊಳ್ಳಲಿದ್ದೀರಿ ಎಂಬುದು ನಿಮ್ಮ ದೀರ್ಘಾವಧಿಯ ಆದಾಯದ ಮೇಲೆ ಪರಿಣಾಮ ಬೀರಲಿದೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ಈ ಹಿಂದೆ ನೀವು ಪಟ್ಟಿದ್ದ ಶ್ರಮ ಹಾಗೂ ತೋರಿದ ಶ್ರದ್ಧೆಯ ಕಾರಣಕ್ಕೆ ಒಂದಿಷ್ಟು ಹೊಸ ಕೆಲಸಗಳು ನಿಮ್ಮನ್ನು ಹುಡುಕಿಕೊಂಡು ಬರಲಿವೆ. ನೀವು ನಿರೀಕ್ಷೆ ಮಾಡದ ರೀತಿಯಲ್ಲಿ ಆದಾಯದ ಮೂಲಗಳು ತೆರೆದುಕೊಳ್ಳಲಿವೆ. ಜೊತೆಗೆ ಆದಾಯ ಸಹ ಹೆಚ್ಚಾಗಲಿದೆ. ಕಲಾವಿದರು, ಗಾಯಕರು ಹಾಗೂ ಸ್ಟ್ಯಾಂಡ್ ಕಾಮಿಡಿ ಮಾಡುವಂತಹವರು ಇಂಥವರಿಗೆ ಆದಾಯದಲ್ಲಿ ಹೆಚ್ಚಳ ಆಗುವುದರ ಜೊತೆಗೆ ವಿದೇಶಗಳಿಗೆ ಅಥವಾ ದೂರದ ಪ್ರದೇಶಗಳಿಗೆ ತೆರಳುವಂತಹ ಅವಕಾಶ ದೊರೆಯಲಿದೆ. ಪ್ರೀತಿ- ಪ್ರೇಮದಲ್ಲಿ ಇರುವಂತಹವರು ಮೂರನೇ ವ್ಯಕ್ತಿಗಳ ಮಾತಿಗೆ ವಿಪರೀತ ಆದ್ಯತೆ ಕೊಡುವುದಕ್ಕೆ ಹೋಗಬೇಡಿ. ಇನ್ನೂ ನಿಮಗೆ ತುಂಬಾ ಚೆನ್ನಾಗಿ ಗೊತ್ತಿರುವ ಕೆಲಸವೇ ಆದರೂ ಈ ಸಮಯದಲ್ಲಿ ಅದರಲ್ಲೂ ಈ ದಿನ ನಿಮಗೆ ಬರುವಂತಹ ಕೆಲಸದ ಸಾಧಕ ಬಾಧಕಗಳ ಬಗ್ಗೆ ಸರಿಯಾಗಿ ಲೆಕ್ಕಾಚಾರ ಹಾಕಿಕೊಂಡು ಮುಂದುವರಿಯುವುದು ಒಳ್ಳೆಯದು.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ಈ ದಿನ ನಿಮಗೆ ಇತರರು ಪ್ರತಿಸ್ಪರ್ಧಿಗಳಾಗಿ ಕಾಣುವುದಕ್ಕೆ ಆರಂಭಿಸುತ್ತಾರೆ. ನಿಮಗೆ ಬಹಳ ಆಪ್ತರಾದವರು, ಪ್ರೇಮಿ ಅಥವಾ ಸಂಗಾತಿಯೇ ಒಂದು ಬಗೆಯ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದೆನಿಸುವುದಕ್ಕೆ ಆರಂಭವಾಗುತ್ತದೆ. ಉದ್ಯೋಗ ಸ್ಥಳದಲ್ಲಿ ನಿಮಗೆ ಅಂತಲೇ ವಹಿಸಿದ ಕೆಲಸವನ್ನು ಅದೆಂತಹ ಸಂದರ್ಭದಲ್ಲಿ ಆದರೂ ಇತರರಿಗೆ ವರ್ಗಾಯಿಸುವುದಕ್ಕೆ ಹೋಗಬೇಡಿ. ಒಂದು ವೇಳೆ ನೀವು ಹೀಗೆ ಮಾಡಿದರೆ ಇದು ಭವಿಷ್ಯದ ಮೇಲೆ, ಉದ್ಯೋಗ ಭವಿಷ್ಯದ ಮೇಲೆ ದೊಡ್ಡ ಪರಿಣಾಮ ಬೀರಲಿದೆ. ಸೋದರ ಮಾವನ ಅನಾರೋಗ್ಯ ಸಮಸ್ಯೆ ನಿಮಗೆ ಚಿಂತೆಗೆ ಈಡು ಮಾಡಬಹುದು. ದೂರ ಪ್ರಯಾಣಗಳು ಇದ್ದಲ್ಲಿ ಮುಖ್ಯವಾದ ಕಾಗದ ಪತ್ರಗಳು ಹಾಗೂ ಬೆಲೆಬಾಳುವ ವಸ್ತುಗಳು ಇದ್ದರೆ ಹೂಗಳ ಬಗ್ಗೆ ಹೆಚ್ಚಿನ ನಿಗಾ ವಹಿಸುವುದು ಮುಖ್ಯ. ಹಲ್ಲು ನೋವಿನ ಕಾರಣಕ್ಕಾಗಿ ಹೆಚ್ಚಿನ ಹಣ ಖರ್ಚಾಗಲಿದೆ. ಯಾವುದೇ ಕಾರಣಕ್ಕೂ ಸ್ವಯಂ ವೈದ್ಯ ಮಾಡಿಕೊಳ್ಳುವುದಕ್ಕೆ ಹೋಗಬೇಡಿ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಕೃಷಿ ಭೂಮಿ, ಜಮೀನು ಅಥವಾ ಮನೆ ಖರೀದಿ ಮಾಡಬೇಕು ಎಂದಿರುವವರಿಗೆ ಮನಸ್ಸಿಗೆ ಹಿಡಿಸುವಂಥದ್ದು ದೊರೆಯುವ ಸಾಧ್ಯತೆಗಳು ಈ ದಿನ ಹೆಚ್ಚಾಗಿದೆ. ಉದ್ಯೋಗ ಸ್ಥಳದಲ್ಲೇ ಆಗಲಿ ಅಥವಾ ನೀವು ವೃತ್ತಿ ಮಾಡುತ್ತಿದ್ದೀರಿ ಅಂತಾದರೆ ಅದರಲ್ಲಿಯೇ ಆಗಲಿ ಅಥವಾ ಉದ್ಯಮ, ವ್ಯಾಪಾರ, ವ್ಯವಹಾರ ಯಾವುದರಲ್ಲಿಯೇ ಆಗಲಿ ನಿಮ್ಮನ್ನು ನಿರ್ಲಕ್ಷ್ಯ ಮಾಡುವುದಕ್ಕೆ ಸಾಧ್ಯವೇ ಆಗುವುದಿಲ್ಲ. ನಿಮ್ಮಲ್ಲಿ ಕೆಲವರು ಆಯುರ್ವೇದ ಚಿಕಿತ್ಸೆಗಳನ್ನು ಮಾಡಿಸಿಕೊಳ್ಳುವುದಕ್ಕೆ ಆಲೋಚನೆ ಮಾಡಲಿದ್ದೀರಿ. ನಿಮ್ಮ ಪರಿಚಿತರು ಅಥವಾ ಸ್ನೇಹಿತರಿಂದ ನಿಮ್ಮ ನಿರ್ಧಾರಕ್ಕೆ ಬೆಂಬಲ ಹಾಗೂ ಸಹಾಯ ದೊರೆಯಲಿದೆ. ಜೊತೆಗೆ ಈ ದಿನ ಒಡವೆ ಖರೀದಿಸುವ ಯೋಗ ಇದ್ದು, ನಿಮ್ಮ ಹತ್ತಿರ ಇರುವ ಬಜೆಟ್ಟಿಗೆ ತಕ್ಕಂತೆ ಯೋಜನೆ ಹಾಕಿಕೊಳ್ಳುವುದು ಒಳ್ಳೆಯದು.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ನಿಮ್ಮ ಮಾತುಗಳು, ನಡವಳಿಕೆ, ವರ್ತಿಸುವ ರೀತಿ ಇತರರಲ್ಲಿ ಗೊಂದಲ ಮೂಡಿಸುವ ಸಾಧ್ಯತೆಗಳಿವೆ. ಈ ಹಿಂದಿನ ನಿಮ್ಮ ಕೆಟ್ಟ ಅನುಭವಗಳು ಏನಾದರೂ ಇದ್ದಲ್ಲಿ ಈ ದಿನ ಅದು ನಿಮ್ಮ ಮೇಲೆ ಪರಿಣಾಮ ಬೀರದಂತೆ ಎಚ್ಚರಿಕೆಯನ್ನು ವಹಿಸಿ. ಯಾರು ಸ್ವಂತ ಉದ್ಯೋಗ ಮಾಡುತ್ತಿದ್ದೀರಾ ಅಂತಹವರು ನಿಮಗೆ ಸಿಗುವಂತಹ ಅವಕಾಶವನ್ನು ಹೇಗೆ ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು. ಎಂಬುದರ ಕಡೆಗೆ ಹೆಚ್ಚಿನ ಗಮನವನ್ನು ನೀಡಿ. ನಿಮಗಿಂತ ಚಿಕ್ಕ ವಯಸ್ಸಿನವರ ಜೊತೆ ಮಾತನಾಡುತ್ತಿದ್ದೀರಿ ಎಂದಾದಲ್ಲಿ ಬಳಸುವ ಪದಗಳ ಬಗ್ಗೆ ನಿಗಾ ಇರಲಿ. ನೀವು ಆಡಿದ ಮಾತಿನ ಜೊತೆಗೆ ಆಡದ ಮಾತುಗಳಿಗೂ ಹೊಣೆ ಮಾಡುವ ಸಾಧ್ಯತೆಗಳಿವೆ. ಇನ್ನು ವೃತ್ತಿ ನಿರತರಿಗೆ ಅಗತ್ಯ ಬೀಳುವಂತಹ ಸಲಕರಣೆಗಳನ್ನು ಖರೀದಿ ಮಾಡುವುದಕ್ಕೆ ಸಾಲ ಮಾಡಬೇಕಾದಂತಹ ಸನ್ನಿವೇಶ ಸೃಷ್ಟಿಯಾಗಲಿದೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ನವವಿವಾಹಿತರಿಗೆ ಬಹಳ ಸಂತೋಷವಾಗಿ ಸಮಯವನ್ನು ಕಳೆಯುವಂತಹ ಅವಕಾಶ ದೊರೆಯಲಿದೆ. ಸಂತಾನ ಅಪೇಕ್ಷಿತರಿಗೆ ಶುಭ ಸುದ್ದಿ ಕೇಳುವ ಯೋಗ ಇದೆ. ನೀವು ಬರಲಾರದು ಎಂದುಕೊಂಡಿದ್ದ ಕೆಲಸವೋ ಅಥವಾ ಹಣವೋ ದೊರೆಯುವ ಅವಕಾಶಗಳು ಹೆಚ್ಚಿದೆ. ಇದಕ್ಕಾಗಿ ಒಂದು ಸಣ್ಣ ಪ್ರಯತ್ನವನ್ನು ಪಟ್ಟರೂ ಸಾಕು, ನೀವು ನಿರೀಕ್ಷೆಯೇ ಮಾಡದ ಮಟ್ಟಿಗೆ ಯಶಸ್ಸು ದೊರೆಯಲಿದೆ. ಆದರೆ ಮಹಿಳೆಯರಿಗೆ ಒಂದು ಎಚ್ಚರಿಕೆ ಇದೆ. ಅದೇನೆಂದರೆ, ಮೂತ್ರ ಸೋಂಕು ತಗಲುವ ಸಾಧ್ಯತೆಗಳು ಹೆಚ್ಚಿವೆ. ಆದ್ದರಿಂದ ಸ್ವಚ್ಛತೆಯ ಕಡೆಗೆ ಹೆಚ್ಚಿದ ಗಮನವನ್ನು ನೀಡಿ. ಕೋರ್ಟು ಕಚೇರಿ ವ್ಯಾಜ್ಯಗಳನ್ನು ಸಂಧಾನದ ಮೂಲಕ ಬಗೆಹರಿಸಿಕೊಳ್ಳುವುದಕ್ಕೆ ಮಾರ್ಗಗಳು ತೆರೆದುಕೊಳ್ಳಲಿವೆ. ಇಂಥ ಸನ್ನಿವೇಶದಲ್ಲಿ ಆಲಸ್ಯ ಮಾಡದೆ ಶೀಘ್ರವಾಗಿ ಸ್ಪಂದಿಸುವ ಕಡೆಗೆ ಗಮನವನ್ನು ನೀಡಿ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ಉದ್ಯೋಗಸ್ಥರಿಗೆ ಈಗಿರುವ ಕೆಲಸವನ್ನು ಬಿಟ್ಟು ತಮ್ಮದೇ ಸ್ವಂತ ವ್ಯವಹಾರ ಅಥವಾ ಉದ್ಯಮ ಅಥವಾ ವೃತ್ತಿಯನ್ನು ಆರಂಭಿಸಬೇಕು ಎಂದು ಬಲವಾಗಿ ಅನಿಸಲಿದೆ. ಇನ್ನು ಮನೆಗೆ ದೊಡ್ಡ ಅಳತೆಯ ಟಿವಿ, ಹೋಂ ಥಿಯೇಟರ್ ಇಂಥದ್ದನ್ನು ತರುವಂತಹ ಯೋಗ ಇದೆ. ತಂದೆ ತಾಯಿಯ ತೀರ್ಥಕ್ಷೇತ್ರ ಪ್ರವಾಸಗಳಿಗೆ ಹಣವನ್ನು ಖರ್ಚು ಮಾಡುವಂತಹ ಅವಕಾಶ ನಿಮಗೆ ದೊರೆಯಲಿದೆ. ಅಥವಾ ಅವರ ಒಳಿತಿಗಾಗಿ ದೇವತಾ ಕಾರ್ಯಗಳನ್ನು ಅಥವಾ ಪೂಜೆಗಳನ್ನು ಮನೆಯಲ್ಲಿ ಆಯೋಜಿಸಲಿದ್ದೀರಿ. ಯಾರು ಎತ್ತರದ ಸ್ಥಳಗಳಲ್ಲಿ ನಿಂತು ಕೆಲಸ ಮಾಡುತ್ತೀರಿ ಅಥವಾ ಬೆಂಕಿಯ ಮುಂದೆ ಕೆಲಸ ಮಾಡುತ್ತೀರಿ ಅಂತಹವರು ಸಾಮಾನ್ಯ ದಿನಗಳಿಗಿಂತ ಹೆಚ್ಚಿನ ಎಚ್ಚರಿಕೆಯನ್ನು ತೆಗೆದುಕೊಳ್ಳಬೇಕು. ಸಿನಿಮಾ ಅಥವಾ ಧಾರಾವಾಹಿಗಳಲ್ಲಿ ಕಾರ್ಯನಿರ್ವಹಿಸುವಂಥವರಿಗೆ ಹೊಸ ಪ್ರಾಜೆಕ್ಟ್ ಗಳು ದೊರೆಯುವಂತಹ ಸಾಧ್ಯತೆಗಳು ಹೆಚ್ಚಿವೆ.