Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಸೆಪ್ಟೆಂಬರ್ 12ರ ದಿನಭವಿಷ್ಯ
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಸೆಪ್ಟೆಂಬರ್ 12ರ ಮಂಗಳವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಸೆಪ್ಟೆಂಬರ್ 12ರ ಮಂಗಳವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ವಿದೇಶಗಳಲ್ಲಿ ವ್ಯವಹಾರ, ಉದ್ಯಮ ನಡೆಸುತ್ತಿರುವಂಥವರಿಗೆ ಆದಾಯದಲ್ಲಿ ಹೆಚ್ಚಳ ಆಗುವುದಕ್ಕೆ ಮಾರ್ಗ ಗೋಚರ ಆಗುತ್ತದೆ. ತೀವ್ರವಾದ ಕಾಲು ನೋವು ಅನುಭವಿಸುತ್ತಿದ್ದಲ್ಲಿ ಸೂಕ್ತ ವೈದ್ಯೋಪಚಾರ ದೊರೆಯುವಂಥ ಯೋಗ ಇದೆ. ಬ್ರ್ಯಾಂಡೆಡ್ ಬಟ್ಟೆಗಳು, ಗ್ಯಾಜೆಟ್, ಶೂ, ವಾಚ್ ಇತ್ಯಾದಿಗಳನ್ನು ಖರೀದಿ ಮಾಡುವುದಕ್ಕೆ ಮನಸ್ಸು ಮಾಡಲಿದ್ದೀರಿ. ಈ ದಿನ ಸಾಧ್ಯವಾದಲ್ಲಿ ವಿಷ್ಣು ಸಹಸ್ರನಾಮ ಪಠಣ ಅಥವಾ ಶ್ರವಣವನ್ನು ಮಾಡಿದಲ್ಲಿ ಒಳ್ಳೆಯದು.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ಯಾವುದೇ ಮುಖ್ಯ ಪ್ರಯಾಣ ಅಥವಾ ಪ್ರವಾಸ ಇದ್ದಲ್ಲಿ ನಿಗದಿತ ಸಮಯಕ್ಕಿಂತ ಮುಂಚೆಯೇ ಅಲ್ಲಿರುವುದಕ್ಕೆ ಪ್ರಯತ್ನ ಮಾಡಿ. ಕೊನೆ ಕ್ಷಣದ ತನಕ ಕಾಯ್ದಲ್ಲಿ ಒತ್ತಡ ಸೃಷ್ಟಿ ಆಗಲಿದೆ. ಸ್ವಂತಕ್ಕೆ ಎಂದು ತೆಗೆದುಕೊಂಡಿದ್ದ ವಸ್ತು ಅಥವಾ ವಾಹನವನ್ನು ಇತರರಿಗೆ ತಾತ್ಕಾಲಿಕವಾಗಿ ಆದರೂ ನೀಡಬೇಕಾದಂಥ ಸನ್ನಿವೇಶ ಸೃಷ್ಟಿ ಆಗಲಿದೆ. ಒಲ್ಲದ ಮನಸ್ಸಿನಿಂದ ಮಾಡಿದ್ದ ಕೆಲಸದಲ್ಲಿ ತಪ್ಪುಗಳಾಗಿ, ಅದನ್ನೇ ಮತ್ತೆ ಮತ್ತೆ ಮಾಡಬೇಕಾಗಲಿದೆ.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ನಿಮ್ಮ ಮೇಲೆ ಹಗೆ ತೀರಿಸಿಕೊಳ್ಳಲು ಕೆಲವರು ಪ್ರಯತ್ನ ಮಾಡುತ್ತಿದ್ದಾರೆ ಎಂಬುದು ನಿಮ್ಮ ಗಮನಕ್ಕೆ ಬರಲಿದೆ. ಇಂಥವರಿಗೆ ಹೇಗೆ ಉತ್ತರ ಕೊಡಬೇಕು ಎಂದು ಆಲೋಚಿಸುವುದಕ್ಕೆ ಹೆಚ್ಚು ಸಮಯವನ್ನು ಮೀಸಲಿಡಲಿದ್ದೀರಿ. ಕಾರು ಅಥವಾ ಬೈಕ್ ಸರ್ವೀಸ್ ಮಾಡಿಸಿದ್ದೀರಾ ಎಂಬುದನ್ನು ನೋಡಿಕೊಳ್ಳಿ. ಒಂದು ವೇಳೆ ಮುಖ್ಯ ವ್ಯಕ್ತಿಯನ್ನು ಭೇಟಿ ಆಗಬೇಕು ಎಂದಿದ್ದಲ್ಲಿ ಸಮಯಕ್ಕೆ ಸರಿಯಾಗಿ ಅಲ್ಲಿರುವಂತೆ ನೋಡಿಕೊಳ್ಳಿ.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ಸೋದರ- ಸೋದರಿಯರಿಗೆ ನಿಮ್ಮ ನೆರವಿನ ಅಗತ್ಯ ಕಂಡುಬರಲಿದೆ. ಈಗಾಗಲೇ ಮಾಡಿದ್ದ ಹೂಡಿಕೆ ಅಥವಾ ಸೇವಿಂಗ್ಸ್ ಮುರಿಸಬೇಕಾಗಬಹುದು. ಈ ಬಗ್ಗೆ ಗಂಭೀರವಾಗಿ ಆಲೋಚನೆ ಮಾಡಲಿದ್ದೀರಿ. ನೀವು ಲೆಕ್ಕ ಹಾಕಿಕೊಂಡಂತೆಯೇ ಕೆಲವು ವ್ಯವಹಾರಗಳ ನಡೆಯಲಿವೆ. ಮತ್ತೆ ಬಾರದು ಎಂದುಕೊಂಡಿದ್ದ ಹಣವೊಂದು ಕೈ ಸೇರುವುದಕ್ಕೆ ಏನು ಮಾಡಬೇಕು ಎಂಬ ಮಾರ್ಗ ಗೋಚರ ಆಗಲಿದೆ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ರೆಸಾರ್ಟ್, ರೆಸ್ಟೋರೆಂಟ್, ಸಿನಿಮಾ ಹೀಗೆ ಮನರಂಜನೆಗಾಗಿ ಹೆಚ್ಚಿನ ಸಮಯವನ್ನು ಮೀಸಲಿಡಲಿದ್ದೀರಿ. ಪ್ರೇಮಿಗಳಿಗೆ ಉತ್ತಮವಾದ ಸಮಯವನ್ನು ಕಳೆಯುವಂಥ ಯೋಗ ಇದೆ. ವಿದೇಶಗಳಲ್ಲಿ ಉದ್ಯೋಗ ಮಾಡುತ್ತಿರುವವರಿಗೆ ಕೆಲಸ ಬದಲಾವಣೆ ಮಾಡುವುದಕ್ಕೆ ಸ್ನೇಹಿತರ ಸಹಾಯ ದೊರೆಯಲಿದೆ. ಈ ಹಿಂದೆ ನೀವು ಪಟ್ಟ ಶ್ರಮವನ್ನು ಗುರುತಿಸಿ, ಉಡುಗೊರೆಗಳನ್ನು ನೀಡಬಹುದು. ಚಿನ್ನ- ಬೆಳ್ಳಿ ಖರೀದಿ ಮಾಡಬೇಕು ಎಂದುಕೊಂಡಿದ್ದಲ್ಲಿ ದಿನದ ಮಟ್ಟಿಗೆ ನಿರ್ಧಾರವನ್ನು ಮುಂದೆ ಹಾಕುವುದು ಉತ್ತಮ.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ನೀವು ಹೂಡಿಕೆ ಮಾಡಿದ್ದರಲ್ಲಿ ಅಸಲು ಹಣಕ್ಕೆ ಮೋಸ ಆಗಬಹುದು ಎಂಬ ಸೂಚನೆ ದೊರೆಯಲಿದೆ. ನೀವು ಬಹಳ ನಂಬಿದ್ದ ವ್ಯಕ್ತಿಗಳೇ ನನಗೂ ಇದಕ್ಕೂ ಸಂಬಂಧವಿಲ್ಲ ಎಂದುಬಿಡಲಿದ್ದಾರೆ. ಯಾವುದೇ ನಿರ್ಣಯಕ್ಕೆ ಬರುವ ಮುನ್ನ ಸಾವಿರ ಸಲ ಆಲೋಚಿಸಿ. ನಿಮ್ಮ ಪ್ರಭಾವ ಬಳಸಿ, ಆ ಕೆಲಸವನ್ನು ಮಾಡಬಹುದು ಎಂದೆನಿಸಿದರೆ ನೆರವನ್ನು ಕೇಳುವುದಕ್ಕೆ ಹಿಂದೆ- ಮುಂದೆ ಆಲೋಚನೆ ಮಾಡಬೇಡಿ. ಸಾಮ-ದಾನ-ಭೇದ-ದಂಡ ಹೀಗೆ ಚತುರೋಪಾಯಗಳನ್ನು ಬಳಸುವ ಕಡೆ ಚಿಂತಿಸಿ.
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ತಂದೆ- ತಾಯಿಯ ಆರೋಗ್ಯ ವಿಚಾರ ಚಿಂತೆಗೆ ಕಾರಣ ಆಗಲಿದೆ. ನೀವು ನಿರೀಕ್ಷೆಯೇ ಮಾಡದಿದ್ದ ವ್ಯಕ್ತಿಯೊಬ್ಬರ ಮುಖಾಮುಖಿಯಿಂದಾಗಿ ಮುಜುಗರ, ಮಾನಸಿಕ ಹಿಂಸೆ ಅನುಭವಿಸಬೇಕಾಗುತ್ತದೆ. ನಿಮ್ಮ ಸಾಮರ್ಥ್ಯಕ್ಕೆ ಮೀರಿದ ಕೆಲಸವನ್ನು ಮಾಡಿಕೊಡುವುದಾಗಿ ಒಪ್ಪಿಕೊಳ್ಳಲಿಕ್ಕೆ ಹೋಗದಿರಿ. ಮರೆತೇ ಹೋಗುವಷ್ಟು ಹಿಂದಿನ ಸ್ನೇಹಿತರು ಮತ್ತೆ ನಿಮ್ಮನ್ನು ಭೇಟಿ ಆಗಬಹುದು. ಅಂಥವರು ಹಣಕಾಸಿನ ಸಹಾಯ ಕೇಳಿದಲ್ಲಿ ಏಕಾಏಕಿ ಒಪ್ಪಿಕೊಳ್ಳದಿರುವುದು ಕ್ಷೇಮ.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ಸಣ್ಣ ಸಮಸ್ಯೆಗೆ ಇಡೀ ದಿನ ತಲೆ ಕೆಡಿಸಿಕೊಳ್ಳುವಂತಾಗುತ್ತದೆ. ಉಗುರಿನಲ್ಲಿ ಹೋಗುವುದಕ್ಕೆ ಕೊಡಲಿ ತೆಗೆದುಕೊಂಡರು ಎಂಬ ಮಾತಿದೆಯಲ್ಲಾ ಹಾಗೆ. ಈ ದಿನ ನಿಮ್ಮ ಪರಿಸ್ಥಿತಿ ಆಗಲಿದೆ. ಆದ್ದರಿಂದ ಮೇಲುನೋಟಕ್ಕೆ ಕಾಣುವಂಥ ವಿಚಾರಗಳು ಆಳದಲ್ಲಿ ಅಷ್ಟು ಗಂಭೀರವಾಗಿ ಇರುವುದಿಲ್ಲ ಎಂಬುದನ್ನು ಅರಿತುಕೊಳ್ಳುವುದು ಮುಖ್ಯವಾಗುತ್ತದೆ. ಕಟ್ಟಡ ನಿರ್ಮಾಣ ವೃತ್ತಿಯಲ್ಲಿ ಇರುವವರಿಗೆ ಹೊಸ ಕೆಲಸಗಳು ದೊರೆಯಲಿವೆ.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ನಿಮ್ಮಷ್ಟಕ್ಕೆ ನೀವಿರುವುದಕ್ಕೆ ಈ ದಿನ ಬಹಳ ಪ್ರಾಮುಖ್ಯ ನೀಡುತ್ತೀರಿ. ಪುಸ್ತಕ ಓದುವುದು, ಸಂಗೀತ ಕೇಳುವುದು, ಧ್ಯಾನ ಮಾಡುವುದು ಇಂಥದ್ದರಿಂದ ಹೊಸ ಕೆಲಸಗಳಿಗೆ ಸಿದ್ಧವಾಗುವುದಕ್ಕೆ ಉತ್ಸಾಹ ದೊರೆಯುತ್ತದೆ. ಕಾಗದ, ಪತ್ರ ಅಥವಾ ದಾಖಲೆಗಳಿಗಾಗಿ ಹುಡುಕಾಟ ನಡೆಸುತ್ತಿದ್ದಲ್ಲಿ ಅವು ಅಚಾನಕ್ ಆಗಿ ಸಿಗುವಂಥ ಯೋಗ ಇದೆ. ಉದ್ಯಮ, ವ್ಯವಹಾರಗಳನ್ನು ನಡೆಸುತ್ತಿರುವವರು ದೀರ್ಘಾವಧಿ ಹೂಡಿಕೆ ಬಗ್ಗೆ ಚರ್ಚೆ ನಡೆಸಲಿದ್ದೀರಿ.