Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಸೆಪ್ಟೆಂಬರ್ 7ರ ದಿನಭವಿಷ್ಯ
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಸೆಪ್ಟೆಂಬರ್ 7ರ ಗುರುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಸೆಪ್ಟೆಂಬರ್ 7ರ ಗುರುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ನಿಮ್ಮ ಹುದ್ದೆ ಮೇಲ್ದರ್ಜೆಗೆ ಏರುವಂಥ ಅವಕಾಶಗಳಿವೆ. ಬಡ್ತಿ ಜತೆಗೆ ಜವಾಬ್ದಾರಿಗಳು ಸಹ ನಿಮ್ಮ ಹೆಗಲೇರಲಿವೆ. ರಾಜಕಾರಣದಲ್ಲಿ ಇರುವಂಥವರಿಗೆ ಒತ್ತಡದ ಸನ್ನಿವೇಶಗಳು ಎದುರಾಗಲಿವೆ. ಮನೆ ನಿರ್ಮಾಣ, ಮದುವೆ ಮೊದಲಾದ ಸಮಾರಂಭಗಳಿಗೆ ಹಣಕಾಸು ಹೊಂದಾಣಿಕೆ ಮಾಡುವಂಥವರಿಗೆ ಅನುಕೂಲಗಳು ಕೂಡಿಬರಲಿವೆ. ದೇವತಾ ಕಾರ್ಯಗಳನ್ನು ಮಾಡುವಂತೆ ಯಾರಾದರೂ ಸಲಹೆ ನೀಡಿದರೆ ಅದನ್ನು ಗಂಭೀರವಾಗಿ ಪರಿಗಣಿಸಿ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ಈ ದಿನ ಇತರರ ಮಾತಿಗೆ ಪಿಗ್ಗಿ ಬೀಳದಂತೆ ನೋಡಿಕೊಳ್ಳಿ. ಒಂದೋ ನಿಮ್ಮನ್ನು ಹೊಗಳಿ, ತಮ್ಮ ಕೆಲಸ ಮಾಡಿಸಿಕೊಳ್ಳಬಹುದು. ಅಥವಾ ತಮಗೆ ಆಗದವರ ವಿರುದ್ಧವಾಗಿ ನೀವು ಕೆಲಸ ಮಾಡುವಂತೆ ಪ್ರೇರೇಪಿಸಬಹುದು. ಆದ್ದರಿಂದ ಸಾಧ್ಯವಾದಷ್ಟೂ ಜಾಗ್ರತೆಯಿಂದ ಇರಬೇಕು. ಇನ್ನು ವಿವಾಹಿತರಾಗಿದ್ದಲ್ಲಿ ಅದರಾಚೆಗಿನ ಸಂಬಂಧದ ಕಡೆಗೆ ಮನಸ್ಸು ವಾಲುವ ಸಾಧ್ಯತೆ ಇದೆ. ಇತರರ ಬಗ್ಗೆ ಸಲುಗೆ ತೆಗೆದುಕೊಳ್ಳುವುದು ಒಳ್ಳೆಯದಲ್ಲ.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ಹದಿಹರೆಯದಲ್ಲಿ ಇರುವವರು ಪ್ರೀತಿ- ಪ್ರೇಮದಲ್ಲಿ ಬೀಳುವಂಥ ಸಾಧ್ಯತೆ ಇದೆ. ಇದರಿಂದ ಏಕಾಗ್ರತೆ ಹಾಗೂ ವ್ಯಾಸಂಗದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಆದ್ದರಿಂದ ಮನಸ್ಸಿನ ಮೇಲೆ ನಿಯಂತ್ರಣ ಇರಲಿ. ವಾಹನ ಚಾಲಕರಿಗೆ ವಿಪರೀತ ಒತ್ತಡದ ದಿನ ಇದಾಗಿರುತ್ತದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರು ಪದೋನ್ನತಿ ಪಡೆಯುವಂಥ ಅವಕಾಶಗಳಿವೆ. ಖಾಸಗಿ ಕಂಪನಿಯಲ್ಲಿ ಕಾರ್ಯ ನಿರ್ವಹಿಸುವವರಿಗೆ ಬೇರೆ ಸ್ಥಳ, ವಿಭಾಗಕ್ಕೆ ವರ್ಗಾವಣೆ ಆಗುವ ಮಾಹಿತಿ ದೊರೆಯಲಿದೆ.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ನಿಮ್ಮ ಧೈರ್ಯದ ನಿರ್ಧಾರಗಳ ಮೇಲೆ ಯಶಸ್ಸು ಅವಲಂಬಿಸಿರುತ್ತದೆ. ಸಾಮರ್ಥ್ಯದ ಬಗ್ಗೆ ನಿಮಗೆ ಸಂದೇಹಗಳು ಬೇಡ. ದೊಡ್ಡ ಆರ್ಡರ್ ಗಳು ಬಂದಲ್ಲಿ, ದೀರ್ಘ ಕಾಲದ ಕೆಲಸಗಳು ಬಂದಲ್ಲಿ ಅದನ್ನು ಒಪ್ಪಿಕೊಳ್ಳುವ ಬಗ್ಗೆ ಆಲೋಚನೆಯನ್ನು ಮಾಡಿ. ಕಟ್ಟಡ ಕಾಂಟ್ರಾಕ್ಟ್ ಒಪ್ಪಿಕೊಳ್ಳುವಂಥವರಿಗೆ ಹಣಕಾಸಿನ ಅಗತ್ಯ ಹೆಚ್ಚಿಗೆ ಕಂಡುಬರುತ್ತದೆ. ಹೊಸ ವಸ್ತ್ರಾಭರಣ ಖರೀದಿಗಾಗಿ ಹಣ ಖರ್ಚು ಮಾಡುವಂಥ ಯೋಗ ಇದೆ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ಆಹಾರ ಪಥ್ಯ, ದೇಹದ ತೂಕ, ಆರೋಗ್ಯದ ವಿಚಾರವು ಪ್ರಾಮುಖ್ಯ ಪಡೆದುಕೊಳ್ಳುತ್ತದೆ. ನಿಮ್ಮಲ್ಲಿ ಕೆಲವರು ಮನೆಗೆ ಹೋಮ್ ಥಿಯೇಟರ್ ಅಂಥದ್ದನ್ನು ಖರೀದಿ ಮಾಡುವಂಥ ಯೋಗ ಇದೆ. ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದೀರಿ ಎಂದಾದರೆ ಮನಸ್ಸಿನ ಮೇಲೆ ಹತೋಟಿ ಇರುವುದು ಮುಖ್ಯ. ಮದುವೆಗಾಗಿ ಪ್ರಯತ್ನ ಮಾಡುತ್ತಿರುವವರಿಗೆ ಇನ್ನೇನು ಸಂಬಂಧ ಗಟ್ಟಿಯಾಯಿತು ಎಂದೆನಿಸುವುದು ಕೈ ತಪ್ಪಿ ಹೋಗುವಂಥ ಸಾಧ್ಯತೆಯಿದೆ.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ನಿಮ್ಮ ಕೆಲಸಗಳನ್ನು ಗಡುವಿನೊಳಗೆ ಮುಗಿಸುವ ಬಗ್ಗೆ ಗಮನವನ್ನು ನೀಡಿ. ಸೌಂದರ್ಯ ಪ್ರಜ್ಞೆ ಹೆಚ್ಚಾಗಲಿದೆ. ಬ್ರ್ಯಾಂಡೆಡ್ ವಸ್ತುಗಳ ಖರೀದಿಗಾಗಿ ಹಣ ಖರ್ಚು ಮಾಡಲಿದ್ದೀರಿ. ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಕೆಲಸ ಬದಲಾವಣೆ ಮಾಡುವ ಬಗ್ಗೆ ಬಲವಾದ ಆಲೋಚನೆ ಮೂಡಲಿದೆ. ಸ್ನೇಹಿತರ ನೇರಾನೇರ ಮಾತುಗಳಿಂದ ಮನಸ್ಸಿಗೆ ಬೇಸರ ಆಗುವಂಥ ಸಾಧ್ಯತೆ ಇದೆ. ವಿಮರ್ಶೆಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸಿದಲ್ಲಿ ಭವಿಷ್ಯದಲ್ಲಿ ನಿಮಗೇ ಅನುಕೂಲ.
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ಒಂದು ಕೆಲಸ ಮುಗಿಸಿದರೆ ಮತ್ತೊಂದು, ಅದು ಮುಗಿದರೆ ಇನ್ನೊಂದು ಹೀಗೆ ದಿನವಿಡೀ ಒಂದಲ್ಲ ಒಂದು ಕೆಲಸ ಬರುತ್ತಲೇ ಇರುತ್ತದೆ. ವೈಯಕ್ತಿಕ ವಿಚಾರಗಳನ್ನು ಹೊಸಬರ ಜತೆಗೆ ಹಂಚಿಕೊಳ್ಳ ಬೇಡಿ. ಹೋಟೆಲ್ ಉದ್ಯಮಿಗಳಿಗೆ ಲೆಕ್ಕಾಚಾರದಲ್ಲಿ ಏನೋ ಹೆಚ್ಚು- ಕಡಿಮೆ ಆಗಿದೆ ಎಂಬ ಅನುಮಾನ ಮೂಡಬಹುದು. ಇದರಿಂದ ಜೋರು ಧ್ವನಿಯ ಮಾತುಕತೆ ಕೂಡ ಆಗಬಹುದು. ಸಾಯಿ ಬಾಬ ಮಂದಿರಕ್ಕೆ ಭೇಟಿ ನೀಡಿ, ದರ್ಶನ ಪಡೆಯಿರಿ
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ಹಣದ ದೃಷ್ಟಿಯಿಂದ, ಜವಾಬ್ದಾರಿ ಕಾರಣದಿಂದ ಈಗಿರುವುದಕ್ಕಿಂತ ಭಾರೀ ಏರಿಕೆ ಆಗುವಂಥ ಕೆಲಸ ನಿಮಗೆ ಸ್ನೇಹಿತರು ಅಥವಾ ಗುರು ಸಮಾನರಾದವರು ಹೇಳುವ ಸಾಧ್ಯತೆ ಇದೆ. ಒಪ್ಪಿಕೊಳ್ಳುವ ಮುನ್ನ ನಿಮ್ಮ ವೈಯಕ್ತಿಕ ಜವಾಬ್ದಾರಿ ಹಾಗೂ ಸವಾಲುಗಳನ್ನು ಒಮ್ಮೆ ಪರಾಮರ್ಶೆ ಮಾಡಿಕೊಳ್ಳಿ. ಸಂಗಾತಿಯ ಜತೆಗೆ ಮಾತುಕತೆ ಆಡುವಾಗ ಹೊಳೆಯುವ ಹೊಸ ಆಲೋಚನೆಗಳನ್ನು ಜಾರಿಗೆ ತರುವುದಕ್ಕೆ ಯತ್ನಿಸಿದರೆ ಭವಿಷ್ಯದಲ್ಲಿ ಅನುಕೂಲ ಇದೆ.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ಖರ್ಚು ಕೈ ಮೀರಿ ಹೋಗುತ್ತಿದೆ ಎಂದು ಬಲವಾಗಿ ಅನಿಸುವುದಕ್ಕೆ ಶುರುವಾಗುತ್ತದೆ. ಇತರರಿಗೆ ಇಷ್ಟು ಸಮಯ ಸಹಾಯ ಮಾಡುತ್ತಿದ್ದಲ್ಲಿ ಇನ್ನು ಮುಂದೆ ನಿಲ್ಲಿಸಿ ಬಿಡಬೇಕು ಎಂದು ಎನಿಸುತ್ತದೆ. ಸೋದರ ಸಂಬಂಧಿಗಳು ನಿಮ್ಮ ಬಗ್ಗೆ ಆಕ್ಷೇಪ ವ್ಯಕ್ತಪಡಿಸಬಹುದು. ಇದು ನಿಮ್ಮೆದುರು ಆಗಬಹುದು ಅಥವಾ ಬಂಧುಗಳ ಎದುರಲ್ಲಿ ಆಗಬಹುದು. ಮನೆಗೆ ಎಲೆಕ್ಟ್ರಿಕ್ ಉಪಕರಣಗಳನ್ನು ತರುವಂಥ ಯೋಗ ಇದೆ.