Horoscope: ಈ ರಾಶಿಯವರಿಗೆ ಗೆಳತಿಯೊಬ್ಬಳಿಂದ ನಿಮ್ಮಆಸಕ್ತಿಯ ಕ್ಷೇತ್ರವು ಬದಲಾಗುವುದು
ನೀವು ಧನು, ಮಕರ, ಕುಂಭ, ಮೀನ ರಾಶಿಯವರಾಗಿದ್ದು, ಬೆಳಗ್ಗೆ ಎದ್ದು ಕೂಡಲೇ ನಿಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವ ಅಭ್ಯಾಸ ಇದೆಯೇ? ಹಾಗಿದ್ದರೆ ಇಂದಿನ (2023 ಸೆಪ್ಟೆಂಬರ್ 07) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿ ತಿಳಿದುಕೊಳ್ಳಿ.
ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಸೆಪ್ಟೆಂಬರ್ 07 ಗುರುವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಉತ್ತರಾಫಲ್ಗುಣೀ, ಮಾಸ: ನಿಜ ಶ್ರಾವಣ, ಪಕ್ಷ: ಕೃಷ್ಣ, ವಾರ: ಗುರು, ತಿಥಿ: ಅಷ್ಟಮೀ, ನಿತ್ಯನಕ್ಷತ್ರ: ರೋಹಿಣೀ, ಯೋಗ: ಹರ್ಷಣ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 22 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 39 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 02:03 ರಿಂದ 03:35 ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 06:22 ರಿಂದ 07:54ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 09:26 ರಿಂದ 10:59ರ ವರೆಗೆ.
ಧನು ರಾಶಿ : ಸತತವಾದ ಸೋಲಿನಿಂದ ಉತ್ಸಾಹವೂ ಕುಗ್ಗಿದೆ. ಬೇರೆಯವರಿಗೆ ನಿಮ್ಮ ಬಗ್ಗೆ ನಕಾರಾತ್ಮ ಭಾವಗಳು ಇರಬಹುದು. ಗುರಿಯನ್ನು ಬದಲಿಸದೇ ಮುನ್ನುಗ್ಗಿ. ಮಕ್ಕಳಿಗೆ ಪ್ರೋತ್ಸಾಹವನ್ನು ಕೊಡುವಿರಿ. ನಿಮ್ಮ ಉಳಿಕೆಯ ಹಣದ ಬಗ್ಗೆ ಎಚ್ಚರವಿರಲಿ. ಭೂಮಿಯ ಉತ್ಪನ್ನಗಳಿಂದ ಲಾಭವು ಸಿಗುವುದು. ಆತುರದಲ್ಲಿ ಯಾವ ನಿರ್ಧಾರವನ್ನೂ ಮಾಡದೇ ಯೋಚಿಸಿ ಮುಂದುವರಿಯಬೇಕಾಗುವುದು. ಕುಟುಂಬದಲ್ಲಿ ಬಂದ ಭಿನ್ನಾಭಿಪ್ರಾಯವನ್ನು ನೀವು ಸರಿ ಮಾಡಲು ನೀವು ಸಮರ್ಥರಾಗುವಿರಿ. ಪ್ರತಿಯೊಬ್ಬರದ್ದೂ ಜೀವನವು ಭಿನ್ನವಾಗಿದ್ದು ಹೋಲಿಕೆ ಬೇಡ. ನಿಮಗೆ ಗೌರವ ಸಿಗದೆ ಕಡೆ ಹೋಗುವುದಿಲ್ಲ. ನೌಕರರ ವಿಚಾರದಲ್ಲಿ ಒಂದು ಕಣ್ಣಿರಲಿ. ತಾಳ್ಮೆ ಅವಶ್ಯಕ.
ಮಕರ ರಾಶಿ : ಅತಿಯಾದ ಮರೆವಿನ ಸಮಸ್ಯೆಯಿಂದ ವಿದ್ಯಾಭ್ಯಾಸದ ಮೇಲೆ ದುಷ್ಪರಿಣಾಮವನ್ನು ಬೀರುವುದು. ನಿವೃತ್ತಿಯ ಅಂಚಿನಲ್ಲಿದ್ದು ನಡತೆಯನ್ನು ಸರಿಯಾಗಿ ಇಟ್ಟುಕೊಳ್ಳಿ. ಮನೆಮಂದಿಯವರ ಜೊತೆ ಸಿಟ್ಟಗೊಂಡರೆ ನಿಮಗೇ ತೊಂದರೆಯಾದೀತು. ಗತಿಸಿದ ಬಾಳ ಸಂಗಾತಿಯ ಬಗ್ಗೆ ತುಂಬಾ ಯೋಚನೆ ಬರಬಹುದು. ನಿಮ್ಮ ಇಂದಿನ ಕಾರ್ಯದಿಂದ ಕಛೇರಿಯಲ್ಲಿ ನಿರೀಕ್ಷೆ ಮೀರಿ ಪ್ರಶಂಸೆ ಸಿಗುವುದು. ನಿಮ್ಮವರೇ ನಿಮ್ಮ ಯಶಸ್ಸನ್ನು ಸಹಿಸದೇ ತೊಂದರೆ ಕೊಡುವರು. ಹಣವನ್ನು ಸರಿಯಾಗಿ ಸಂಗ್ರಹಿಸಿ, ಕೂಡಿಡಿ. ಸಾಲದಿಂದ ನೀವು ಬೇಗ ಮುಕ್ತರಾಗುವಿರಿ. ನಿಮ್ಮ ಆತ್ಮವಿಶ್ವಾಸವು ಇತರರಿಗೆ ಅಹಂಕಾರದಂತೆ ತೋರುವುದು. ದೂರ ಪ್ರಯಾಣವನ್ನು ಮಾಡುವುದಿದ್ದರೆ ಮುಂದೂಡಿ. ನಿಮ್ಮ ಇಂದಿನ ಸ್ಥಾನವು ಬಹಳ ಪರಿಶ್ರಮದ ಫಲವಾಗಿದೆ.
ಕುಂಭ ರಾಶಿ : ಯಾರದೋ ಜಗಳದಲ್ಲಿ ತಲೆ ಹಾಕಿ ಅಪಾಯಕ್ಕೆ ಸಿಕ್ಕಿಕೊಳ್ಳಬೇಕಾದೀತು. ಹೊಸ ವಿಷಯಗಳತ್ತ ಉತ್ಸಾಹವೇ ಇರಲಿದ್ದು, ಇದು ತಾತ್ಕಾಲಿಕ ಅಷ್ಟೇ. ದಾಂಪತ್ಯದಲ್ಲಿನ ವಿರಸದಿಂದ ಮಾನಸಿಕ ಆರೋಗ್ಯವನ್ನು ಕೆಡಿಸುವುದು. ಶ್ರಮದಿಂದ ನ್ಯಾಯಾಲಯಲ್ಲಿ ಗೆಲುವನ್ನು ಸಾಧಿಸುವಿರಿ. ನಿಮ್ಮಲ್ಲಿ ಅನಾರೋಗ್ಯದ ಭಯವು ಇರುವುದು. ಹಿರಿಯರಿಂದ ನಿಮ್ಮ ಜೀವನಕ್ಕೆ ಮಾರ್ಗದರ್ಶನ ಸಿಗಲಿದೆ. ಉದ್ಯೋಗದ ಕಾರಣಕ್ಕೆ ಇಂದು ನೀವು ಪ್ರಯಾಣವನ್ನು ಮಾಡಬೇಕಾಗುವುದು. ನಿಶ್ಚಿಂತೆಯಿಂದ ಇರಬೇಕೆಂದುಕೊಂಡರೂ ಕೆಲಸಗಳು ಬರುವುದು. ವ್ಯಾಪಾರದಲ್ಲಿ ನಷ್ಟವಾಗಲಿದ್ದು ಲಾಭದ ತಂತ್ರವನ್ನು ಹೂಡಿ.
ಮೀನ ರಾಶಿ : ಗೆಳತಿಯೊಬ್ಬಳಿಂದ ನಿಮ್ಮಆಸಕ್ತಿಯ ಕ್ಷೇತ್ರವು ಬದಲಾಗುವುದು. ಇಂದಿನ ಕಾರ್ಯವನ್ನು ಮುಂದೂಡುವುದು ಬೇಡ. ಪೋಷಕರನ್ನು ಕಡೆಗಣಿಸಿದ್ದು ನಿಮಗೆ ಪಾಪಪ್ರಜ್ಞೆ ಕಾಡಬಹುದು. ಕುಟುಂಬದಲ್ಲಿ ಸಂತಸದ ವಾತಾವರಣವಿರುವಂತೆ ಮಾಡುವಿರಿ. ವಾಹನವನ್ನು ಚಲಾಯಿಸುವಾಗ ಸ್ವಲ್ಪ ಎಚ್ಚರವಿರಲಿ. ಹೊಸ ವ್ಯಾಪಾರದಲ್ಲಿಯೂ ನಿಮಗೆ ಮನಸ್ಸಾಗಬಹುದು. ಇಂದು ನಿಮ್ಮದೇ ಸ್ವಂತ ಕಾರ್ಯಗಳು ಇರಲಿದ್ದು, ಬೇರೆ ಕೆಲಸಕ್ಕೆ ಮನಸ್ಸು ಕೊಡುವುದು ಕಷ್ಟವಾದೀತು. ಸಂದರ್ಭಕ್ಕೆ ತಕ್ಕುದಾದ ಪಾಠವನ್ನು ನೀವು ಕಲಿಯುವಿರಿ. ನಿಮ್ಮ ಉತ್ತರವು ಸಮಾಧಾನಕರವಾಗಿರದು.
-ಲೋಹಿತಶರ್ಮಾ 8762924271 (what’s app only)