ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಹಸ್ತಾ, ಮಾಸ: ಆಶ್ವಯುಜ, ಪಕ್ಷ: ಶುಕ್ಲ, ವಾರ: ಶನಿ, ತಿಥಿ: ದಶಮೀ, ನಿತ್ಯನಕ್ಷತ್ರ: ಶ್ರಾವಣ, ಯೋಗ: ಧೃತಿ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 24 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 13 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 09:22 ರಿಂದ 10:50, ಯಮಘಂಡ ಕಾಲ ಮಧ್ಯಾಹ್ನ 01:48ರಿಂದ 03:16ರವರೆಗೆ, ಗುಳಿಕ ಕಾಲ ಬೆಳಗ್ಗೆ 06:25 ರಿಂದ 07:53 ರವರೆಗೆ.
ಸಿಂಹ ರಾಶಿ: ನೀವು ಮಾಡಿದ ಉಪಕಾರವನ್ನು ಹೇಳಿಕೊಳ್ಳುತ್ತ ಇರುವುದು ಬೇಡ. ಪರಿಮಳವಿರುವ ಹೂವನ್ನೂ ಯಾರೂ ಪರಿಚಯಿಸಬೇಕಿಲ್ಲ. ನೀವು ಪುರಸ್ಕಾರಗಳ ಕುರಿತು ಆಲೋಚನೆ ಮಾಡದೇ ಸತತವಾಗಿ ಕಠಿಣ ಪರಿಶ್ರಮಪಡುವಿರಿ. ಸಾಮಾಜಿಕ ಕಾರ್ಯದಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಲು ಪ್ರಯತ್ನಿಸುವಿರಿ. ನಿಮ್ಮ ಉದ್ಯಮದ ವಿಸ್ತರಣೆಗೆ ಕೆಲವು ಕ್ರಮವನ್ನು ಕೈಗೊಳ್ಳುವಿರಿ. ಒಂದೇ ವಿಷಯದಲ್ಲಿ ನಿಮ್ಮ ಗಮನವು ಅಧಿಕವಾಗಿ ಇರಲಿದೆ. ಕೆಲವು ಘಟನೆಗಳು ಕೌಟುಂಬಿಕ ಕಾಳಜಿಗಳ ಹೆಚ್ಚಾಗುವಂತೆ ಮಾಡುವುದು. ಎಷ್ಟೇ ಚತುರ ಮತಿಗಳಾದರೂ ಎಡವುವ ಸಾಧ್ಯತೆ ಇದೆ. ನಿಧಾನವಾದರೂ ಸರಿಯಾದುದನ್ನು ಆಯ್ಕೆ ಮಾಡಿಕೊಳ್ಳಿ. ಒಂದೇ ಶ್ರಮಕ್ಕೆ ಎರಡು ಫಲವನ್ನು ನೀವು ಪಡೆಯಲು ಬಯಸುವಿರಿ. ಉದ್ಯೋಗದ ಸ್ಥಳದಲ್ಲಿ ನಿಮ್ಮ ಮಾತು ಸಂತೋಷವನ್ನು ಇಮ್ಮಡಿಗೊಳಿಸಬಹುದು. ವಿದ್ಯಾರ್ಥಿಗಳಿಗೆ ನಿಮ್ಮಿಂದ ಮಾರ್ಗದರ್ಶನ ಸಿಕ್ಕೀತು. ಪ್ರಭಾವಿ ವ್ಯಕ್ತಿತ್ವವು ನಿಮಗೆ ಅನುಸರಣೀಯ ಆಗಬಹುದು. ಮಕ್ಕಳ ಪ್ರೀತಿಯನ್ನು ಪಡೆದುಕೊಳ್ಳುವಿರಿ. ಪ್ರೀತಿಪಾತ್ರರ ಜೊತೆ ಸಣ್ಣ ಕಲಹವಾಗಬಹುದು.
ಕನ್ಯಾ ರಾಶಿ: ಅತಿಥಿಗಳ ಆಗಮನದಿಂದ ಮನೆಯಲ್ಲಿ ಹರ್ಷ. ನಿಮ್ಮ ಸುತ್ತಲಿನ ಎಲ್ಲರೂ ನಿಮ್ಮ ಆಲೋಚನೆಗಳಿಗೆ ಪ್ರಶಂಸಿಸುವರು. ಯಾರನ್ನೂ ಪೂರ್ತಿಯಾಗಿ ತಿಳಿಯದೇ ಒಳಗೆ ತೆಗೆದುಕೊಳ್ಳುವುದು ಬೇಡ. ಅಪರಿಚಿತರು ಕೊಟ್ಟ ವಸ್ತುಗಳಿಂದ ನಿಮಗೆ ತೊಂದರೆ ಸಂಭವಿಸಬಹುದು. ಯಾರನ್ನೋ ಮೆಚ್ಚಿಸಿ ನಿಮ್ಮ ಕಾರ್ಯವನ್ನು ಮಾಡಿಸಿಕೊಳ್ಳುವಿರಿ. ವೃತ್ತಿಕ್ಷೇತ್ರದಲ್ಲಿ ನಿಮ್ಮ ಜ್ಞಾನವನ್ನು ಪ್ರದರ್ಶಿಸುವ ಮೂಲಕ ನಿಮ್ಮ ಸಾಮರ್ಥ್ಯದ ಪರಿಚಯ ಆಗುವುದು. ಬಹಳ ಕಾಲದ ಹಿಂದೇ ಚಿಂತಿಸಿರುವ ಕೆಲಸವು ಇಂದು ಆರಂಭಿಸಲು ಚಿಂತಿಸುವಿರಿ. ಕಲಾಕ್ಷೇತ್ರದ ಜನರು ತಮ್ಮ ಜೀವನವನ್ನು ಒಂದಲ್ಲ ಒಂದು ರೀತಿಯಲ್ಲಿ ಸಂಪತ್ತಿನಿಂದ ತುಂಬಿಕೊಳ್ಳುವರು. ಒಂದಿಲ್ಲೊಂದು ಅವಕಾಶಗಳು ನಿಮ್ಮ ಪಾಲಿಗೆ ಸಿಗಲಿದೆ. ಮುಂದಾಳುತ್ವವನ್ನು ವಹಿಸಬೇಕಾಗಬಹುದು. ಯಾವ ವಿವರಗಳನ್ನೂ ಕೊಡಬೇಡಿ. ಅದನ್ನು ಹೊಂದಿಸುವುದು ಕಷ್ಟವಾದೀತು. ವಾಗ್ವಾದವಾಗುವುದೆಂಬ ಭಯವೂ ನಿಮ್ಮನ್ನು ಕಾಡುವುದು.
ತುಲಾ ರಾಶಿ: ಇಂದಿನ ನಿಮ್ಮ ಕಾರ್ಯಗಳಿಗೆ ಜೊತೆಗಾರರು ಸಿಗಬಹುದು. ಇಬ್ಬರೂ ಸೇರಿ ಇಬ್ಬರ ಕಾರ್ಯವನ್ನು ಕಛೇರಿಯಲ್ಲಿ ಮಾಡಿ ಮುಗಿಸುವಿರಿ. ವಿಶ್ವಾಸ ನಿಮಗೆ ಸುಲಭವಾಗಿ ಗೊತ್ತಿಲ್ಲದ ದಾರಿಗಳಲ್ಲಿ ಸಂಚರಿಸಲು ನೆರವಾಗುತ್ತದೆ. ಭೂಮಿಯ ವ್ಯವಹಾರಸ್ಥರು ನಷ್ಟವನ್ನು ಅನುಭವಿಸಬೇಕಾದೀತು. ದುಸ್ಸಾಧ್ಯ ಎನಿಸಿದ್ದನ್ನು ಬಿಟ್ಟುಬಿಡಿವುದು ಒಳ್ಳೆಯದು. ಚಿಂತೆಗಳೇ ಇರುವ ಮನಸ್ಸನ್ನು ದೇವರ ಭಕ್ತಿಗೆ ಮೀಸಲಿಟ್ಟು ಸಮಾಧಾನಿಗಳಾಗಿ. ನೀವು ತೆಗೆದುಕೊಂಡ ದೃಢ ನಿರ್ಧಾರವು ನಿಮ್ಮ ಮಾನಸಿಕ ಧಾರ್ಷ್ಟ್ಯವನ್ನು ತೋರಿಸುವುದು. ಸಂಗಾತಿಯನ್ನು ನೀವು ಭೇಟಿಯಾಗಲು ಹೋಗುವಿರಿ. ಅವರ ಮೇಲೆ ಪೋಷಕ ಕಣ್ಣು ಇರಬೇಕಾದೀತು. ಅಧ್ಯಾತ್ಮದ ವಿಚಾರಗಳು ನಿಮ್ಮ ಮನಸ್ಸಿಗೆ ಹಿತ ಎನಿಸಬಹುದು. ಸುಮ್ಮನೇ ಕುಳಿತು ಸಮಯವನ್ನು ವ್ಯರ್ಥಮಾಡಬೇಡಿ. ಆರ್ಥಿಕ ವಿಚಾರಕ್ಕೆ ಯಾರಾದರೂ ಮಧ್ಯ ಪ್ರವೇಶಿಸುವುದರಿಂದ ಸಿಟ್ಟಾಗುವಿರಿ.
ವೃಶ್ಚಿಕ ರಾಶಿ: ಯಶಸ್ಸಿಗಾಗಿಯೇ ಮಾಡುವ ಕಾರ್ಯದಿಂದ ಅಪಯಶಸ್ಸು ಸಿಗುವುದು. ನೀವು ಇಂದು ಯಾವುದೇ ಅವಕಾಶವನ್ನೂ ಬಿಡಬೇಡಿ. ಇಂದು ನಿಮ್ಮ ಆರ್ಥಿಕತೆಯ ಮಟ್ಟವು ಗೊತ್ತಾಗಲಿದೆ. ಬರುವ ಹಣವನ್ನು ನಿಮ್ಮ ಭವಿಷ್ಯದ ಸಂಪತ್ತಾಗಿ ಕೂಡಿ ಇಡುವಿರಿ. ಸಂಘ, ಸಂಸ್ಥೆಗಳಲ್ಲಿ ಕೆಲಸ ಮಾಡುವವರು ಉತ್ತಮ ಅಭಿವೃದ್ಧಿಯನ್ನು ಪಡೆಯುವರು. ನಿಮ್ಮ ಮಾತುಗಳ ಮೇಲೆ ಹೆಚ್ಚು ನಿಯಂತ್ರಣದ ಅಗತ್ಯವಿದೆ. ಕಳ್ಳರಿ ಭೀತಿಯು ನಿಮಗಾಗಬಹುದು. ಉತ್ಸಾಹದಿಂದ ನೀವು ಕಾರ್ಯದಲ್ಲಿ ಪ್ರವೃತ್ತರಾಗುವಿರಿ. ಸಂಗಾತಿಯ ಜೊತೆ ಹೆಚ್ಚಿನ ಸಮಯವನ್ನು ಕಳೆದರೂ ಮತ್ತಷ್ಟು ಬೇಕು ಎನಿಸಬಹುದು. ಕೆಲಸದ ನಿಮಿತ್ತ ಬೇರೆ ಊರಿಗೆ ತೆರಳುವಿರಿ. ತಂದೆಯ ಮಾತು ನಿಮಗೆ ಸರಿ ಕಾಣಿಸದೇ ಇರುವುದು. ಕೃಷಿ ಚಟುವಟಿಕೆಯಲ್ಲಿ ಹಿನ್ನಡೆಯಾಗಲಿದೆ. ಗೃಹನಿರ್ಮಾಣದ ದಾಖಲಾತಿಗೆ ನೀವು ಓಡಾಟ ಮಾಡಬೇಕಾಗುವುದು.