Astrology: ಜವಾಬ್ದಾರಿಯನ್ನು ತೆಗೆದುಕೊಳ್ಳಲು ಈ ರಾಶಿಯವರು ಹಿಂದೇಟು ಹಾಕುವಿರಿ
ರಾಶಿ ಭವಿಷ್ಯ, ಶನಿವಾರ(ಅಕ್ಟೋಬರ್: 12): ಮೂರನೇ ವ್ಯಕ್ತಿಗಳ ಮೂಲ ನಿಮ್ಮ ಕೆಲಸವನ್ನು ಮಾಡಿಸಿಕೊಳ್ಳುವಿರಿ. ಸರಿಯಾದ ಮೂಲದಿಂದ ಬಮನದ ವಿಚಾರವನ್ನು ಮಾತ್ರ ಮಾತನಾಡಿ. ನಿಮ್ಮದಲ್ಲದ ಸಂಪತ್ತನ್ನು ನಿಮ್ಮದಾಗಿಸಿಕೊಳ್ಳಲು ಹೋಗುವುದು ಬೇಡ. ಹಾಗಾದರೆ ಅಕ್ಟೋಬರ್: 12ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಹಸ್ತಾ, ಮಾಸ: ಆಶ್ವಯುಜ, ಪಕ್ಷ: ಶುಕ್ಲ, ವಾರ: ಶನಿ, ತಿಥಿ: ದಶಮೀ, ನಿತ್ಯನಕ್ಷತ್ರ: ಶ್ರಾವಣ, ಯೋಗ: ಧೃತಿ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 24 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 13 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 09:22 ರಿಂದ 10:50, ಯಮಘಂಡ ಕಾಲ ಮಧ್ಯಾಹ್ನ 01:48ರಿಂದ 03:16ರವರೆಗೆ, ಗುಳಿಕ ಕಾಲ ಬೆಳಗ್ಗೆ 06:25 ರಿಂದ 07:53 ರವರೆಗೆ.
ಧನು ರಾಶಿ: ನೀವು ಮಾಡಿದ ತಪ್ಪಿಗೆ ಸಮರ್ಥನೆಯನ್ನು ಕೊಡುವಿರಿ. ಇತರರ ಕೆಂಗಣ್ಣಿಗೆ ಬೀಳಬಹುದು. ಇಂದು ನೀವು ಸಮಯವನ್ನು ಕಳೆಯಲು ಬೇರೆ ಬೇರೆ ದಾರಿಗಳನ್ನು ಹುಡುಕುವಿರಿ. ಒಂಟಿಯಾಗಿ ಇರುವುದು ನಿಮಗೆ ಕಷ್ಟವೆನಿಸುವುದು. ಇನ್ನೊಬ್ಬರ ಕಷ್ಟಕ್ಕೆ ಸ್ಪಂದಿಸುವುದು ಹೆಚ್ಚು ಒಳ್ಳೆಯದು. ಹೊಸತನ್ನು ಕಲಿಯಬೇಕು ಎನ್ನುವ ಆಸೆಯು ಬೇಡವೆನಿಸಬಹುದು. ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳಲು ನೀವು ಹಿಂದೇಟು ಹಾಕುವಿರಿ. ಅಪರಿಚಿತರಿಂದ ಭಯಗೊಳ್ಳುವ ಸಾಧ್ಯತೆ ಇದೆ. ಸ್ಥಿರಾಸ್ತಿಯನ್ನು ಪಡೆಯುವ ಮನಸ್ಸು ಇನ್ನೊಬ್ಬರಿಂದ ಪ್ರೇರಿತವಾಗಿ ಬರಬಹುದು. ಅನಿರೀಕ್ಷಿತವಾಗಿ ಆರೋಗ್ಯದಲ್ಲಿ ವ್ಯತ್ಯಾಸವು ಆಗಿದ್ದು ನೀವು ಇದರಿಂದ ವಿಚಲಿತಗೊಳ್ಳುವಿರಿ. ನಿಮಗೆ ಸಿಕ್ಕ ಸಂಪತ್ತನ್ನು ಸದುಪಯೋಗ ಮಾಡುವತ್ತ ಗಮನವಿರಲಿ. ಕುಟುಂಬದವರು ನಿಮ್ಮನ್ನು ಬಹಳ ಪ್ರೀತಿಸುವರು. ಹೊಸ ವಸ್ತುಗಳನ್ನು ಖರೀದಿಸುವಾಗ ವಂಚನೆಯಾಗುವುದು.
ಮಕರ ರಾಶಿ: ನಿಮಗೆ ಇಷ್ಟವಾಗದ ಕಾರ್ಯವನ್ನು ಎಷ್ಟೇ ಒತ್ತಾಯ ಮಾಡಿದರೂ ಮಾಡಲಾರಿರಿ. ನಿಮಗೆ ಇಂದು ದಣಿವಾಗುವ ಸಾಧ್ಯತೆ ಹೆಚ್ಚಿದೆ. ಮಕ್ಕಳ ವಿಚಾರದಲ್ಲಿ ನಿಮ್ಮ ಧೋರಣೆಯು ಬದಲಾಗುವುದು. ಮನೆಯಲ್ಲಿ ಯಾರ ಮೇಲೂ ಪಕ್ಷಪಾತ ಮಾಡುವುದು ಬೇಡ. ಕೆಲಸಕ್ಕಾಗಿ ಹಣವನ್ನು ಕೊಟ್ಟು ಕಳೆದುಕೊಳ್ಳುವಿರಿ. ಕಛೇರಿಯ ಕೆಲಸದಲ್ಲಿ ನೀವು ಹೆಚ್ಚು ಆಸ್ಥೆಯನ್ನು ತೋರಿಸುವಿರಿ. ನಿಮ್ಮ ಅನನುಕೂಲದ ಸ್ಥಿತಿಗೆ ದೈವವು ಯಾರದೋ ಮೂಲಕ ಸಹಾಯವನ್ನು ಮಾಡಿಸುವುದು. ನೀವು ನಿಮ್ಮ ಕೆಲಸವನ್ನು ನಿಷ್ಠೆಯಿಂದ ಮುಂದುವರಿದು ಉತ್ತಮ. ವ್ಯಾಪಾರದಲ್ಲಿ ನೀವು ಹೆಚ್ಚು ಲಾಭವನ್ನು ಗಳಿಸಲು ತಂತ್ರಗಳನ್ನು ರೂಪಿಸುವರಿ. ಬೇರೆಯವರು ನಿಮ್ಮ ಮೇಲೆ ಇಟ್ಟ ನಂಬಿಕೆಯು ನಿಮಗೇ ಅಚ್ಚರಿ ಆಗುವಂತೆ ಇರುವುದು. ಮಕ್ಕಳಿಂದ ಶುಭವಾರ್ತೆ ಇರಲಿದೆ. ಯಾರನ್ನೂ ಒತ್ತಾಯಿಸದೇ ಕೆಲಸವನ್ನು ಮಾಡಿಸಿಕೊಳ್ಳಿ. ಕೃಷಿಯಲ್ಲಿ ಲಾಭ ಗಳಿಸಬೇಕೆಂದು ನಾನಾ ಪ್ರಯತ್ನವನ್ನು ಮಾಡುವಿರಿ. ನಿಮ್ಮಿಂದ ಆಗದಿರುವುದನ್ನು ಅನ್ಯರು ಮಾಡಿ ತೋರಿಸಿ ಅಪಮಾನ ಮಾಡಬಹುದು.
ಕುಂಭ ರಾಶಿ: ಇಂದು ನೀವು ಅತಿಯಾದ ಒತ್ತಡವನ್ನು ತಂದುಕೊಳ್ಳುವ ಅಗತ್ಯ ಇಲ್ಲ. ನೀವು ನೆಪವೊಡ್ಡಿ ಯಾವುದೇ ಕಾರ್ಯದಲ್ಲಿ ತೊಡಗಲಾರಿರಿ. ಧಾರ್ಮಿಕ ಆಚರಣೆಗಳನ್ನು ಮಾಡುತ್ತಿದ್ದರೂ ಅದು ಕೃತಕದಂತೆ ಅನ್ನಿಸಬಹುದು. ಒಂದೇ ವಿಷಯವು ಅನೇಕ ಬಾರಿ ಕೇಳಿ ಹಿಂಸೆಯಾಗುವುದು. ಶೀತಲ ಸಂಘರ್ಷವು ಸ್ಫೋಟವಾಗಬಹುದು. ಹಳೆಯದನ್ನು ಮರೆತು ಹೊಸತನದಲ್ಲಿ ಮುನ್ನಡೆಯುವುದು ಉತ್ತಮ. ಹಗೆತನದಿಂದ ನಿಮಗೇ ತೊಂದರೆ. ಯಾರ ಮಾತನ್ನೂ ಕೇಳದೇ ಉದ್ಧಟತನ ತೋರುವುದು ಸರಿಯಾಗದು. ಆರ್ಥಿಕ ಅಭಿವೃದ್ದಿಗೆ ನಾನಾ ಯೋಚನೆಯನ್ನು ಮಾಡುವಿರಿ. ನಿಮ್ಮ ಸತ್ಯವನ್ನು ನಿಮ್ಮವರು ನಂಬುವುದು ಕಷ್ಟವಾದೀತು. ಆರೋಗ್ಯದಲ್ಲಿ ಆಗುವ ಸಣ್ಣ ಸಣ್ಣ ವ್ಯತ್ಯಾಸವು ನಿಮಗೆ ಕಿರಿಕಿರಿ ಆಗಬಹುದು. ಕಾರ್ಯಕ್ಷೇತ್ರದಲ್ಲಿ, ನೀವು ಬಯಸಿದ ಕೆಲಸವನ್ನು ಮಾಡುವಿರಿ.
ಮೀನ ರಾಶಿ: ನಿಮಗೆ ಇಂದು ವಿಶ್ರಾಂತಿಯನ್ನು ಪಡೆಯುವ ಕಾಲ. ಇಂದು ನೀವು ಅನಗತ್ಯ ಸನ್ನಿವೇಶಗಳಲ್ಲಿ ಸಿಲುಕಿಕೊಳ್ಳುವ ಸಾಧ್ಯತೆ ಇದೆ. ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಕೆಲಸಗಳನ್ನು ಒಪ್ಪಿಕೊಳ್ಳಿ. ಕಾರ್ಯದ ಸ್ಥಳವನ್ನು ಬದಲಾಯಿಸುವ ಸಾಧ್ಯತೆ ಇದೆ. ಮೂರನೇ ವ್ಯಕ್ತಿಗಳ ಮೂಲ ನಿಮ್ಮ ಕೆಲಸವನ್ನು ಮಾಡಿಸಿಕೊಳ್ಳುವಿರಿ. ಸರಿಯಾದ ಮೂಲದಿಂದ ಬಮನದ ವಿಚಾರವನ್ನು ಮಾತ್ರ ಮಾತನಾಡಿ. ನಿಮ್ಮದಲ್ಲದ ಸಂಪತ್ತನ್ನು ನಿಮ್ಮದಾಗಿಸಿಕೊಳ್ಳಲು ಹೋಗುವುದು ಬೇಡ. ಸಂಕಷ್ಟದ ಸನ್ನಿವೇಶಗಳನ್ನು ಬುದ್ಧಿವಂತಿಕೆಯಿಂದ ದಾಟಬೇಕಾಗುವುದು. ಅನಪೇಕ್ಷಿತ ವಿಚಾರಗಳನ್ನು ಚರ್ಚಿಸುವುದು ನಿಮಗೆ ಇಷ್ಟವಾಗದು. ಅನಿವಾರ್ಯ ಕಾರಣದಿಂದ ಆಸ್ಪತ್ರೆಗೆ ಅಲೆದಾಡಬೇಕಾಗುವುದು. ನ್ಯಾಯಾಲಯಕ್ಕೆ ಸಂಬಂಧಿಸಿದಂತೆ ಸಕಾರಾತ್ಮಕ ನಿಲುವು ಇರಲಿ. ಮಕ್ಕಳು ನಿಮ್ಮ ಜೊತೆ ವಾಗ್ವಾದ ಬರಬಹುದು. ಒಳ್ಳೆಯ ಸುದ್ದಿಯು ನಿಮ್ಮ ಉತ್ಸಾಹವನ್ನು ಹೆಚ್ಚಿಸುವುದು.