Horoscope: ಈ ರಾಶಿಯವರು ವಾಹನವನ್ನು ಚಲಾಯಿಸುವಾಗ ಆತುರ ಬೇಡ

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದು, ಬೆಳಗ್ಗೆ ಎದ್ದು ಕೂಡಲೇ ನಿಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವ ಅಭ್ಯಾಸ ಇದೆಯೇ? ಹಾಗಿದ್ದರೆ ಇಂದಿನ (2023 ನವೆಂಬರ್​ 18) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿ ತಿಳಿದುಕೊಳ್ಳಿ.

Horoscope: ಈ ರಾಶಿಯವರು ವಾಹನವನ್ನು ಚಲಾಯಿಸುವಾಗ ಆತುರ ಬೇಡ
ರಾಶಿ ಭವಿಷ್ಯ
Follow us
| Edited By: Kiran Hanumant Madar

Updated on: Nov 18, 2023 | 12:30 AM

ಇಂದಿನ ರಾಶಿ ಭವಿಷ್ಯ (Horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಇದರ ಜೊತೆಗೆ ಪಂಚಾಂಗ ಹೇಗಿದೆ? ಎಂಬುದನ್ನು ಒಂದಷ್ಟು ಮಂದಿ ನೋಡುತ್ತಾರೆ. ಹಾಗಾದರೆ ಇಂದಿನ (2023 ನವೆಂಬರ್​ 18) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಶರತ್ ಋತು, ತುಲಾ ಮಾಸ, ಮಹಾನಕ್ಷತ್ರ: ವಿಶಾಖಾ, ಮಾಸ: ಕಾರ್ತಿಕ, ಪಕ್ಷ: ಶುಕ್ಲ, ವಾರ: ಶನಿ, ತಿಥಿ: ಪಂಚಮೀ, ನಿತ್ಯನಕ್ಷತ್ರ: ಉತ್ತರಾಷಾಢಾ, ಯೋಗ: ಗಂಡ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 35 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 05-59 ಗಂಟೆ, ರಾಹು ಕಾಲ ಬೆಳಗ್ಗೆ 09:27 ರಿಂದ 10:52ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 01:43 ರಿಂದ 03:09ರ ವರೆಗೆ, ಗುಳಿಕ ಕಾಲ ಬೆಳಗ್ಗೆ 06:36 ರಿಂದ 08:01ರ ವರೆಗೆ.

ಸಿಂಹ ರಾಶಿ : ಸಣ್ಣ ಸಂಸ್ಥೆಯೊಂದನ್ನು ಹುಟ್ಟುಹಾಕುವ ಯೋಚನೆ ಬರುವುದು. ಆಹಾರದ ಉದ್ಯಮದಲ್ಲಿ ಅಧಿಕ ಲಾಭವೂ ಕೆಲವು ಅನಿರೀಕ್ಷಿತ ತೊಂದರೆಯೂ ಬರಬಹುದು. ಉದ್ಯೋಗದ ಅವಕಾಶಗಳ ನಿರೀಕ್ಷೆಯಲ್ಲಿ ಇರುವಿರಿ. ಅಧಿಕಾರಿವರ್ಗದಿಂದ ನಿಮ್ಮ ಗೌರವಕ್ಕೆ ದಕ್ಕೆ ಆಗಬಹುದು. ಸಂಗಾತಿಯ ಇಂಗಿತವನ್ನೇ ಅರಿತು ಕಾರ್ಯವನ್ನು ಮಾಡುವಿರಿ. ಮನೋಭಿಲಾಶೆಯನ್ನು ಪೂರ್ಣಗೊಳಿಸಿಕೊಳ್ಳುವಿರಿ. ಒಂಟಿಯಾಗಿ ಸುತ್ತಾಡಬೇಕೆನಿಸುವುದು. ಕೆಲವರ ಮಾತಿಗೆ ಉತ್ತರವನ್ನು ಕೊಡುವುದು ಇಷ್ಟವಾಗದು. ಇಂದು ನಿಮ್ಮ‌ ಬಳಿ ಸಾಮಾಜಿಕ ಕಳಕಳಿಯಿರುವ ಜನರು ಬರುವರು. ಇನ್ನು ಬಾರದು ಎಂದುಕೊಂಡ ಹಣವು ಇಂದು ನಿಮ್ಮ ಕೈ ಸೇರುವುದು. ಕರ್ತವ್ಯದತ್ತ ನಿಮ್ಮ ಗಮನಹರಿಸುವಿರಿ. ನಿಮ್ಮ ಮೇಲೆ‌ ಬಂದ ಅಪವಾದವನ್ನು ನೀವು ಇನ್ನೊಬ್ಬರ ಮೇಲೆ‌ ಹಾಕಲು ಪ್ರಯತ್ನಿಸುವಿರಿ.

ಕನ್ಯಾ ರಾಶಿ : ಉದ್ಯಮಕ್ಕೆ ಆಪ್ತರ,‌ ಪರಿಚಿತರ ಪ್ರೋತ್ಸಾಹವು ಸಿಗಲಿದೆ. ಆಸ್ತಿಯ ವಿಚಾರದಲ್ಲಿ ಸರಿಯಾದ ನಿರ್ಧಾರವನ್ನು ತೆಗೆದಕೊಳ್ಳಲಾಗದು. ಸಹೋದರನ ಮಾತು ನಿಮಗೆ ಜೀರ್ಣಮಾಡಿಕೊಳ್ಳುವುದು ಕಷ್ಟವಾಗಿ ಸಿಟ್ಟಾಗುವಿರಿ. ಹಳೆಯ ಅನುಭವದ ಆಧಾರದ ಮೇಲೆ ನೀವು ಕೆಲಸವನ್ನು ಮಾಡುವಿರಿ. ಹೂಡಿಕೆಯನ್ನು ಬೇರೆಯವರ ಹೆಸರಿನಲ್ಲಿ ಮಾಡುವಿರಿ. ನಿಮ್ಮ ಮಾತಿನ ಮೇಲೆ ವಿಶ್ವಾಸದ ಕೊರತೆ ಕಾಣಲಿದೆ. ವಾಹನವನ್ನು ಚಲಾಯಿಸುವಾಗ ಆತುರ ಬೇಡ. ದೂರ ಹೋಗುವವರಿದ್ದರೆ ಹಿರಿಯರ ಆಶೀರ್ವಾದವನ್ನು ಪಡೆದುಕೊಳ್ಳಿ. ಸಂಗಾತಿಯು ನಿಮ್ಮ ಜೊತೆ ಜಗಳವಾಡಿ ಹಳೆಯ ವಿಚಾರವನ್ನು ಪುನಃ ಪ್ರಸ್ತಾಪಿಸಬಹುದು. ಸ್ತ್ರೀಸಂಬಂಧವಾದ ಆರೋಪವು ಬರಲಿದ್ದು, ಆತಂಕವೂ ಆಗುವುದು.

ತುಲಾ ರಾಶಿ : ಹಣಕಾಸಿನ‌ ವಿಚಾರದಲ್ಲಿ ದುಡುಕುವುದು ಬೇಡ. ನಿಮ್ಮ ಯೋಜನೆಗಳು ಕ್ರಮವನ್ನು ಅನುಸರಿಸಿ ಇರಲಿ.‌ ವಿಶ್ವಸ್ಥರ ಸಲಹೆಯನ್ನು ಪಡೆದುಕೊಳ್ಳಿ. ಬಂಧುಗಳಿಗಾಗಿ ಇಂದಿನ ಸಮಯವನ್ನು ಕೊಡುವಿರಿ. ‌ಅಶುಭ ವಾರ್ತೆಯಿಂದ ಏನನ್ನು ಮಾಡಲೂ ದಿಕ್ಕು ತೋರದು. ಆಸ್ತಿಯ ವಿಚಾರವಾಗಿ ಕಾನೂನಾತ್ಮಕ ಹೋರಾಟಕ್ಕೆ ಸಿದ್ಧರಾಗುವಿರಿ. ನಿಮ್ಮ ನಿರ್ಧಾರವನ್ನು ಯಾರು ಏನೇ ಹೇಳಿದರೂ ಬದಲಾಯಿಸುವುದಿಲ್ಲ.ಪರಸ್ಪರ ಸಾಮರಸ್ಯಕ್ಕಾಗಿ ದಂಪತಿಗಳು ದಾರಿಯನ್ನು ಹುಡುಕುವಿರು. ಕಳೆದು ಹೋದ ಪ್ರೇಮವನ್ನು ಮತ್ತೆ ಯಾರಾದರೂ ನೆನಪಿಸುವರು. ತಪ್ಪನ್ನು ಒಪ್ಪಿಕೊಳ್ಳದೇ ಅಹಂಕಾರವನ್ನು ತೋರಿಸುವಿರಿ. ನಿಮ್ಮ ಬಗ್ಗೆ ಬೇರೆಯವರಿಗೆ ಔದಾರ್ಯಭಾವವು ಇರಲಿದೆ. ನಿಮ್ಮ‌ ಅಸಾಮಾನ್ಯ ಚಿಂತನೆಯು ನಿಮ್ಮನ್ನು ದೊಡ್ಡವರನ್ನಾಗಿ ಮಾಡಿದ್ದು. ಅಪ್ರಾಪ್ತರ ಜೊತೆ ವಾಗ್ವಾದ ಬೇಡ.

ವೃಶ್ಚಿಕ ರಾಶಿ : ವ್ಯವಹಾರದಲ್ಲಿ ಕಾಳಜಿ ತಪ್ಪಿದ ಕಾರಣ ನಷ್ಟ ಮಾಡಿಕೊಳ್ಳುವಿರಿ. ಕಾರ್ಯಗಳು ನಿಧಾನವಾಗುತ್ತಿದೆ ಎಂಬ ಬೇಸರವು ಬೇಡ. ಇಂದಿನ ಸೋಲಿನಿಂದ ಪಾಠ ಕಲಿಯುವಿರಿ. ಅನಿರೀಕ್ಷಿತ ಪ್ರಯಾಣವು ಆಯಾಸವನ್ನು ಕೊಡಬಹುದು. ಸ್ಪರ್ಧಾತ್ಮಕ ಚಟುವಟಿಕೆಯಲ್ಲಿ ಪರಾಜಯ ಆಗಬಹುದು. ಭಾವನಾತ್ಮಕ ವಿಚಾರಗಳಿಗೆ ಸ್ಪಂದಿಸುವುದು ಕಷ್ಟವಾಗಲವಾಗಲಿದೆ. ನಿಮ್ಮವರ ಮಾತುಗಳಿಂದ ನೀವು ಬೇಸರಗೊಳ್ಳುವಿರಿ. ಸಾಲಗಾರರಿಗೆ ಅತಿಯಾದ ಕಿರಿಕಿರಿಯು ಮೇಲಿಂದ‌ ಮೇಲೆ ಬರಲಿದೆ. ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಳ್ಳುವಿರಿ. ನಿಮ್ಮ‌ ಅಂತಸ್ಸಾಕ್ಷಿಗೆ ಸತ್ಯವನ್ನು ಹೇಳುವ ಧೈರ್ಯ ಬರುವುದು. ವಿದೇಶದಿಂದ ಆಹ್ವಾನವು ಬರಬಹುದು. ಆತುರದ ಪ್ರಯಾಣವನ್ನು ಇಂದು ಮಾಡಬೇಡಿ. ಒತ್ತಾಯದಿಂದ‌ ಸ್ನೇಹಿತರ ಮನೆಗೆ ಹೋಗುವಿರಿ. ಆದಾಯದ ಬಗ್ಗೆ ಗಮನಹರಿಸಿ ಆರೋಗ್ಯವನ್ನು ನಿರ್ಲಕ್ಷ್ಯದಿಂದ ನೋಡುವಿರಿ.

ತಾಜಾ ಸುದ್ದಿ
ಜೆಸಿಬಿಯಲ್ಲಿ ಕಲ್ಯಾಣ ಮಂಟಪಕ್ಕೆ ಬಂದು, ಅಂಕದ ಕೋಳಿ ಪೈಟ್ ಆಡಿದ ನವಜೋಡಿಗಳು
ಜೆಸಿಬಿಯಲ್ಲಿ ಕಲ್ಯಾಣ ಮಂಟಪಕ್ಕೆ ಬಂದು, ಅಂಕದ ಕೋಳಿ ಪೈಟ್ ಆಡಿದ ನವಜೋಡಿಗಳು
ರಿಜಿಸ್ಟ್ರೇಷನ್ ಸರ್ಟಿಫಿಕೇಟ್ ನೀಡದಿದ್ದಕ್ಕೆ KNC ಬಳಿ ವಿದ್ಯಾರ್ಥಿಗಳ ಗಲಾಟೆ
ರಿಜಿಸ್ಟ್ರೇಷನ್ ಸರ್ಟಿಫಿಕೇಟ್ ನೀಡದಿದ್ದಕ್ಕೆ KNC ಬಳಿ ವಿದ್ಯಾರ್ಥಿಗಳ ಗಲಾಟೆ
ವಂಟಮೂರಿ ಘಟನೆ ಅವಮಾನದಿಂದ ತಲೆ ತಗ್ಗಿಸುವಂತೆ ಮಾಡಿದೆ:ಲಕ್ಷ್ಮಿ ಹೆಬ್ಬಾಳ್ಕರ್
ವಂಟಮೂರಿ ಘಟನೆ ಅವಮಾನದಿಂದ ತಲೆ ತಗ್ಗಿಸುವಂತೆ ಮಾಡಿದೆ:ಲಕ್ಷ್ಮಿ ಹೆಬ್ಬಾಳ್ಕರ್
ಬರದ ಬಗ್ಗೆ ಚರ್ಚಿಸದೆ ಪ್ರತಿಭಟಿಸುವ ಶಾಸಕರಿಗೆ ನಾಚಿಕೆಯಾಗಬೇಕು: ಸಿಎಂ
ಬರದ ಬಗ್ಗೆ ಚರ್ಚಿಸದೆ ಪ್ರತಿಭಟಿಸುವ ಶಾಸಕರಿಗೆ ನಾಚಿಕೆಯಾಗಬೇಕು: ಸಿಎಂ
ಬರ ಮತ್ತು ಉತ್ತರ ಕರ್ನಾಟಕ ಚರ್ಚೆಗೆ ಅಧಿವೇಶನ ವಾರ ವಿಸ್ತರಿಸಲಿ: ಯತ್ನಾಳ್
ಬರ ಮತ್ತು ಉತ್ತರ ಕರ್ನಾಟಕ ಚರ್ಚೆಗೆ ಅಧಿವೇಶನ ವಾರ ವಿಸ್ತರಿಸಲಿ: ಯತ್ನಾಳ್
ಸ್ಪೀಕರ್ ಗೆ ಎಲ್ಲ ನಮಸ್ಕಾರ್ ಸಾರ್ ಅನ್ನಬೇಕು ಅಂದರೆ ತಪ್ಪೇನು?ಜಮೀರ್ ಅಹ್ಮದ್
ಸ್ಪೀಕರ್ ಗೆ ಎಲ್ಲ ನಮಸ್ಕಾರ್ ಸಾರ್ ಅನ್ನಬೇಕು ಅಂದರೆ ತಪ್ಪೇನು?ಜಮೀರ್ ಅಹ್ಮದ್
ಸ್ಪೀಕರ್ ಖಾದರ್ ಹೇಳುವ ಮಾತು ಸದನದಲ್ಲಿರುವವರೆಲ್ಲರ ಮನಸ್ಸಿಗೆ ನಾಟುತ್ತದೆ
ಸ್ಪೀಕರ್ ಖಾದರ್ ಹೇಳುವ ಮಾತು ಸದನದಲ್ಲಿರುವವರೆಲ್ಲರ ಮನಸ್ಸಿಗೆ ನಾಟುತ್ತದೆ
ಹುಟ್ಟೂರು ಹರದನಹಳ್ಳಿಯಲ್ಲಿ ಮನೆ ದೇವರಿಗೆ ಹೆಚ್​ಡಿಡಿ ದಂಪತಿ ಪೂಜೆ
ಹುಟ್ಟೂರು ಹರದನಹಳ್ಳಿಯಲ್ಲಿ ಮನೆ ದೇವರಿಗೆ ಹೆಚ್​ಡಿಡಿ ದಂಪತಿ ಪೂಜೆ
ಬಿಗ್ ಬಾಸ್​ನಲ್ಲಿ ಆಪ್ತರನ್ನೇ ನಾಮಿನೇಟ್ ಮಾಡಿದ ಕಂಟೆಸ್ಟಂಟ್​ಗಳು
ಬಿಗ್ ಬಾಸ್​ನಲ್ಲಿ ಆಪ್ತರನ್ನೇ ನಾಮಿನೇಟ್ ಮಾಡಿದ ಕಂಟೆಸ್ಟಂಟ್​ಗಳು
ಬೆಂಗಳೂರಿನ ಜಯನಗರದಲ್ಲಿ ಹಾಡಹಗಲೇ ಸ್ಕೂಟರ್‌ ಕಳ್ಳತನ
ಬೆಂಗಳೂರಿನ ಜಯನಗರದಲ್ಲಿ ಹಾಡಹಗಲೇ ಸ್ಕೂಟರ್‌ ಕಳ್ಳತನ