Horoscope: ದಿನಭವಿಷ್ಯ, ಈ ರಾಶಿಯವರು ಕೋಪದಿಂದ ನಿಮ್ಮ‌ ಮನಸ್ಸನ್ನು ಹಾಳುಮಾಡಿಕೊಳ್ಳುವಿರಿ

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಸೆಪ್ಟೆಂಬರ್ 01) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Horoscope: ದಿನಭವಿಷ್ಯ, ಈ ರಾಶಿಯವರು ಕೋಪದಿಂದ ನಿಮ್ಮ‌ ಮನಸ್ಸನ್ನು ಹಾಳುಮಾಡಿಕೊಳ್ಳುವಿರಿ
ಸಾಂದರ್ಭಿಕ ಚಿತ್ರ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 01, 2023 | 12:20 AM

ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನವಾಗಿರುತ್ತದೆ. ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ತಮ್ಮ ರಾಶಿ ಭವಿಷ್ಯ (Daily horoscope) ನೋಡುವುದು ಕೆಲವರಿಗೆ ಅಭ್ಯಾಸ. ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಂಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2023 ಸೆಪ್ಟೆಂಬರ್ 01) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಮಘಾ, ಮಾಸ: ನಿಜ ಶ್ರಾವಣ, ಪಕ್ಷ: ಕೃಷ್ಣ, ವಾರ: ಶುಕ್ರ, ತಿಥಿ: ಪ್ರತಿಪತ್, ನಿತ್ಯನಕ್ಷತ್ರ: ಪೂರ್ವಾಭಾದ್ರ, ಯೋಗ: ಧೃತಿ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 21 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 43 ನಿಮಿಷಕ್ಕೆ, ರಾಹುಕಾಲ ಮಧ್ಯಾಹ್ನ 10:59 ರಿಂದ 12:33ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 03:38 ರಿಂದ 05:11ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 07:54 ರಿಂದ 09:27ರ ವರೆಗೆ.

ಸಿಂಹ ರಾಶಿ : ಜಾಣ್ಮೆಯಿಂದ ಮಾಡುವ ಸರ್ಕಾರದ ಕೆಲಸವನ್ನು ಮಾಡಿಸಿಕೊಳ್ಳುವಿರಿ. ಸ್ವಂತ ವಾಹನದ ದುರಸ್ತಿಯ ಕಾರ್ಯವನ್ನು ಮಾಡಿಸಿಕೊಳ್ಳುವಿರಿ. ಬರುವ ಅಡೆತಡೆಗಳನ್ನು ನೀವು ಧೈರ್ಯವಾಗಿ ಎದುರಿಸುವಿರಿ. ನೀವು ಕಲಿತ ವಿದ್ಯೆಯು ನಿಮಗೆ ಬಲವಾಗಲಿದೆ. ಸಭೆಯಲ್ಲಿ ಅತಿಥಿಗಳಾಗಿ ನೀವು ಭಾಗಿಗಳಾಗುವಿರಿ. ನಿಮ್ಮ‌ ಕನಸನ್ನು ಸಾಕಾರಗೊಳಿಕೊಳ್ಳುವತ್ತ ನಿಮ್ಮ ಆಲೋಚನೆಯು ಇರಲಿದೆ. ಪ್ರೇಮ‌ಸಂಬಂಧವು ಸಡಿಲವಾಗಬಹುದು. ಸೊಂಟ ನೀವು ನಿಮಗೆ ಬಾಧೆಯನ್ನು ಕೊಡಬಹುದು. ಔಷಧೋಪಚಾರಗಳಿಂದ ಕಡಿಮೆ ಆಗುವುದು. ಯಾರಿಗಾದರೂ ನಿಮ್ಮ ಯೋಗ್ಯತೆಗೆ ಅನುಸಾರವಾಗಿ ಧನ ಸಹಾಯವನ್ನು ಮಾಡುವಿರಿ.

ಕನ್ಯಾ ರಾಶಿ : ನಾಜೂಕಾದ ಕಾರ್ಯಗಳಿಗೆ ನಿಮಗೆ ಪ್ರಶಂಸೆಯೂ ಅಪಹಾಸ್ಯವೂ ಸಿಗಲಿದೆ. ಕೋಪದಿಂದ ನಿಮ್ಮ‌ ಮನಸ್ಸನ್ನು ಹಾಳುಮಾಡಿಕೊಳ್ಳುವಿರಿ. ಕುಟುಂಬದ ಕಲಹಕ್ಕೆ ಹೆದರಿ ಹೊಸ ಜೀವನವನ್ನು ನಡೆಸಲು ಇಚ್ಛಿಸುವಿರಿ. ಪುಣ್ಯಸ್ಥಳಗಳಿಗೆ ಹೋಗಿ ನೆಮ್ಮದಿಯನ್ನು ಪಡೆಯುವಿರಿ. ಅಧಿಕ ಮಾತುಗಳು ಬೇಡ. ಕಲಾವಿದರಿಗೆ ಹೆಚ್ಚಿನ ಅವಕಾಶಗಳು ಸಿಗುವುದು. ಖರ್ಚಿನ ಬಗ್ಗೆ ಸರಿಯಾದ ಚಿತ್ರಣವಿರಲಿ.‌ ನಿಮ್ಮ ವಸ್ತುಗಳು ಕಾಣಿದಸದೇ ಉದ್ವೇಗಕ್ಕೆ ಸಿಕ್ಕಿಕೊಳ್ಳುವಿರಿ. ಎಲ್ಲವೂ ನಿಮಗೆ ದುರದೃಷ್ಟದಂತೆ ತೋರುವುದು. ಕಣ್ಣಿನ ದೋಷವನ್ನು ನಿವಾರಿಸಿಕೊಳ್ಳಬೇಕಾಗುವುದು. ನಿಮ್ಮ ಅಭಿರುಚಿಗೆ ಪ್ರೋತ್ಸಾಹವು ಸಿಗಲಿದೆ.

ತುಲಾ ರಾಶಿ : ಆರ್ಥಿಕತೆಯನ್ನು ನೀವು ಬಲಗೊಳಿಸಿಕೊಳ್ಳುವಿರಿ. ದುರಭ್ಯಾಸದಿಂದ ಧನನಷ್ಟವನ್ನು ಮಾಡಿಕೊಳ್ಳುವಿರಿ. ಮಿತ್ರರಿಂದ ನಿಮಗೆ ಮೋಸವಾಗುವುದು. ಧಾರ್ಮಿಕ ವಿಚಾರದಲ್ಲಿ ನೀವು ಹೆಚ್ಚು ತಿಳಿವಳಿಕೆಯು ಇರಲಿದೆ. ಕಛೇರಿಯಲ್ಲಿ ಆಗುವ ಕಲಹದಿಂದ ಉದ್ಯೋಗದಲ್ಲಿ ಬದಲಾವಣೆಯನ್ನು ಮಾಡುವಿರಿ. ವಿದೇಶವನ್ನು ಸುತ್ತುವ ಮನಸ್ಸಾಗಲಿದೆ. ಸ್ಥಿರಾಸ್ತಿಯನ್ನು ಸ್ವಲ್ಪ ನಷ್ಟಕೊಳ್ಳುವಿರಿ. ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳುವಿರಿ. ಸಕಾರಾತ್ಮಕ ವಿಚಾರಕ್ಕೆ ನಿಮಗೆ ಪ್ರಶಂಸೆಯು ಸಿಗಬಹುದು. ಕಳೆದುಕೊಂಡಿದ್ದನ್ನು ಪಡೆಯುವವರೆಗೂ ನಿಮಗೆ ಸಮಾಧಾನ ಇರದು. ಸಹೋದ್ಯೋಗಿಯ ಜೊತೆ ಪ್ರೇಮವಾಗುವುದು.

ವೃಶ್ಚಿಕ ರಾಶಿ : ಉದ್ಯೋಗದ ನಿಮಿತ್ತ ಹೆಚ್ಚು ತಿರುಗಾಟವು ಆಗಲಿದೆ. ಸಂಗಾತಿಯ ಮಾತುಗಳು ನಿಮ್ಮ‌ ಸ್ವಾಭಿಮಾನಕ್ಕೆ ತೊಂದರೆಯನ್ನು ಉಂಟುಮಾಡುವುದು. ನೀವು ಅಪಮಾನವನ್ನೂ ಸಹಿಸಿಕೊಂಡು ಕೆಲಸದಲ್ಲಿ ಮಗ್ನರಾಗುವಿರಿ. ಹೊಸ ಉದ್ಯೋಗಕ್ಕೆ ಸೇರಿಕೊಳ್ಳುವಿರಿ. ನಿಮ್ಮ ಶ್ರೇಯಸ್ಸನಲ್ಲಿ ಬಂಧುಗಳ‌ ಪಾತ್ರವು ಬಹಳ ಇರಲಿದೆ. ನಿಮಗೆ ಇಂದು ಮಕ್ಕಳ ಬೆಳವಣಿಗೆಯು ಸಮಾಧಾನವನ್ನು ತರದು. ಸಾಮಾಜಿಕವಾಗಿ ಉತ್ತಮ‌ ಬಾಂಧವ್ಯವು ಇರಲಿದೆ‌. ಸ್ನೇಹಿತರ ಜೊತೆ ಉತ್ತಮ‌ ಬಾಂಧವ್ಯವು ಇರಲಿದೆ. ನಿಮ್ಮ ಆಸಕ್ತಿಯ‌ ವಿಚಾರವು ಬದಲಾಗುವುದು. ನಿಮ್ಮ ಸ್ವಭಾವವು ದುರುಪಯೋಗ ಆಗುವುದು.

ಲೋಹಿತಶರ್ಮಾ 8762924271 (what’s app only)

ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ