Horoscope: ದಿನಭವಿಷ್ಯ, ಈ ರಾಶಿಯವರು ನಂಬಿಕೆಯ ಕೊರತೆಯಿಂದ ಪ್ರೇಮವು ಭಗ್ನವಾಗಬಹುದು
ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಸೆಪ್ಟೆಂಬರ್ 03) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಸೆಪ್ಟೆಂಬರ್ 3 ಭಾನುವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯ ಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಪೂರ್ವಾಫಲ್ಗುಣೀ, ಮಾಸ: ನಿಜ ಶ್ರಾವಣ, ಪಕ್ಷ: ಕೃಷ್ಣ, ವಾರ: ಭಾನು, ತಿಥಿ: ತೃತೀಯಾ, ನಿತ್ಯನಕ್ಷತ್ರ: ರೇವತೀ, ಯೋಗ: ಗಂಡ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 21 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 42 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 05:10 ರಿಂದ 06:42ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:32 ರಿಂದ 02:05ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:37 ರಿಂದ 05:10ರ ವರೆಗೆ.
ಸಿಂಹ ರಾಶಿ : ಮಿತ್ರರ ಆಗಮನವನ್ನು ನೀವು ಇಷ್ಟಪಡುವಿರಿ. ಅಹಂಕಾರದಿಂದ ನಿಮಗೆ ಮಿತ್ರರು ದೂರವಾಗಬಹುದು. ಸುಮ್ಮನೇ ಇದ್ದು ಹತ್ತಾರು ಯೋಚನೆಗಳು ಬರಲಿದೆ. ಬಂಧುಗಳಿಂದ ಉಡುಗೊರೆ ಸಿಗಲಿದೆ. ಮಾತಿನ ಮೇಲೆ ನಂಬಿಕೆಯನ್ನು ಉಳಿಸಿಕೊಳ್ಳುವುದು ಕಷ್ಟವಾದೀತು. ಗುಂಪಿನಲ್ಲಿ ಕಳೆಯುವುದು ಇಷ್ಟವಾಗದು. ನೀರಿನಿಂದ ಭೀತಿಯು ಇರಲಿದೆ. ಕಲಾವಿದರಿಗೆ ಅವಕಾಶಗಳು ತಪ್ಪಿಹೋಗಬಹುದು. ಧಾರ್ಮಿಕ ಆಚರಣೆಗಳಲ್ಲಿ ಆಸಕ್ತಿಯು ಕಡಿಮೆ ಆಗಲಿದೆ. ಮನೆಯ ಕಾರ್ಯದಲ್ಲಿ ತೊಡಗುವಿರಿ. ಸಭೆ ಸಮಾರಂಭಗಳಿಗೆ ಹೋಗುವಿರಿ. ಸ್ನೇಹಿತರಿಗೆ ಸಹಾಯ ಮಾಡುವಿರಿ.
ಕನ್ಯಾ ರಾಶಿ : ಕೆಲವು ಘಟನೆಗಳು ನಿಮ್ಮ ಮನಸ್ಸನ್ನು ವಿಚಲಿತಗೊಳಿಸುವುದು. ಸ್ಪರ್ಧೆಯಲ್ಲಿ ಜಯಗಳಿಸುವ ಬದಲು ಸೋಲಾಗಬಹುದು ಇದರಿಂದ. ಮಹಿಳೆಯರು ಸ್ವ ಉದ್ಯೋಗದಲ್ಲಿ ಲಾಭವನ್ನು ಮಾಡಿಕೊಳ್ಳುವಿರಿ ನಂಬಿಕೆಯ ಕೊರತೆಯಿಂದ ಪ್ರೇಮವು ಭಗ್ನವಾಗಬಹುದು. ಆಪ್ತರ ಸಹಕಾರದಿಂದ ನಿಮಗೆ ಉದ್ಯೋಗವು ಸಿಗುವುದು. ಭವಿಷ್ಯದ ಯೋಜನೆಯನ್ನು ಕುಟುಂಬದ ಜೊತೆ ಹಂಚಿಕೊಳ್ಳಿ. ಪಾರದರ್ಶಕ ಕಾರ್ಯವು ನಿಮ್ಮ ಮೇಲಿನ ಅನುಮಾನವನ್ನು ದೂರಮಾಡುಬುದು. ಭೂಮಿಗೆ ಸಂಬಂಧಿಸಿದ ದಾಖಲೆಗಳನ್ನು ಭದ್ರವಾಗಿ ಇರಿಸಿಕೊಳ್ಳಿ.
ತುಲಾ ರಾಶಿ : ಸಂಗಾತಿಯ ಸಂಪತ್ತನ್ನು ಇಂದು ಖಾಲಿಮಾಡಲಿದ್ದೀರಿ. ನಿಮ್ಮ ಮನಸ್ಸು ಯಾವುದೋ ಆಲೋಚನೆಯಲ್ಲಿ ಇರಲಿದೆ. ಹಿರಿಯರ ಸೇವೆಯನ್ನು ನೀವು ಮಾಡಲಿದ್ದೀರಿ. ಆರಂಭಿಸಿದ ಉದ್ಯೋಗದಲ್ಲಿ ಏನೂ ತೊಂದರೆಗಳು ಬಾರದಂತೆ ಪ್ರಾರ್ಥನೆಯನ್ನು ಮಾಡುವಿರಿ. ತಂದೆಯ ಮಾತು ನಿಮಗೆ ಕಿರಿಕಿರಿ ನೀಡಬಹುದು. ನಿಮ್ಮ ಆದಾಯದ ಮೂಲವಾದ ವ್ಯಾಪಾರದಲ್ಲಿ ಲಾಭವಿರುವುದು. ವಾಸಿಯಾಗದ ರೋಗಕ್ಕೆ ಔಷಧವು ಸಿಗಬಹುದು. ಇಂದು ನಿಮ್ಮ ಪ್ರೀತಿಪಾತ್ರರನ್ನು ಭೇಟಿಯಾಗುವಿರಿ. ನಿಮ್ಮ ಉದ್ಯೋಗದ ಬಗ್ಗೆ ಅಸೂಯೆ ಬರಬಹುದು.
ವೃಶ್ಚಿಕ ರಾಶಿ : ನಿಮ್ಮ ಎಲ್ಲ ಕಾರ್ಯಗಳೂ ವಿಳಂಬವಾಗಿ ಯಾರಿಂದಲಾದರೂ ಹೇಳಿಸಿಕೊಳ್ಳುವಿರಿ. ಸ್ತ್ರೀಯರು ಅಲಂಕಾರಕ್ಕೆ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುವರು. ಮಾಡಿದ ತಪ್ಪಿಗೆ ನಿಮಗೆ ಬೇಸರವಾಗಬಹುದು. ಎಷ್ಟೇ ಪ್ರಯತ್ನಿಸಿದರೂ ನಿಮ್ಮ ಹಣವು ನಿಮಗೆ ಸಿಗದು. ನಿಮ್ಮವರ ಮೇಲೆ ನೀವು ಇಟ್ಟ ನಂಬಿಕೆಯು ಹುಸಿಯಾಗಬಹುದು. ಮಕ್ಕಳ ವಿವಾಹಕ್ಕೆ ಪ್ರಯತ್ನ ಅತಿಯಾಗುವುದು. ಯಂತ್ರಗಳ ವ್ಯಾಪಾರದಲ್ಲಿ ನಿಮಗೆ ಲಾಭವು ಸಿಗುವುದು. ವೇಗವಾಗಿ ವಾಹನವನ್ನು ಚಲಾಯಿಸುವುದು ಬೇಡ. ಅನಾರೋಗ್ಯವನ್ನು ಯಾರ ಬಳಿಯಾದರೂ ಹೇಳಿಕೊಂಡು ಸೂಕ್ತವಾದ ಸಲಹೆಯನ್ನು ಪಡೆಯುವಿರಿ.
–ಲೋಹಿತಶರ್ಮಾ 8762924271 (what’s app only)