AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope: ವ್ಯಾಪಾರದಲ್ಲಿ ಹಿತಶತ್ರುಗಳ ಕಾಟದಿಂದ ನಿಮಗೆ ತೊಂದರೆಗಳು ಆಗಬಹುದು

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದು, ಬೆಳಗ್ಗೆ ಎದ್ದು ಕೂಡಲೇ ನಿಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವ ಅಭ್ಯಾಸ ಇದೆಯೇ? ಹಾಗಿದ್ದರೆ ಇಂದಿನ (2023 ನವೆಂಬರ್​ 06) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿ ತಿಳಿದುಕೊಳ್ಳಿ.

Horoscope: ವ್ಯಾಪಾರದಲ್ಲಿ ಹಿತಶತ್ರುಗಳ ಕಾಟದಿಂದ ನಿಮಗೆ ತೊಂದರೆಗಳು ಆಗಬಹುದು
ರಾಶಿ ಭವಿಷ್ಯ
TV9 Web
| Updated By: ಕಿರಣ್ ಹನುಮಂತ್​ ಮಾದಾರ್|

Updated on: Nov 06, 2023 | 12:30 AM

Share

ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಇದರ ಜೊತೆಗೆ ಪಂಚಾಂಗ ಹೇಗಿದೆ? ಎಂಬುದನ್ನು ಒಂದಷ್ಟು ಮಂದಿ ನೋಡುತ್ತಾರೆ. ಹಾಗಾದರೆ ಇಂದಿನ (2023 ನವೆಂಬರ್​ 06) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಶರತ್ ಋತು, ತುಲಾ ಮಾಸ, ಮಹಾನಕ್ಷತ್ರ: ಸ್ವಾತೀ, ಮಾಸ: ಆಶ್ವಯುಜ, ಪಕ್ಷ: ಕೃಷ್ಣ, ವಾರ: ಸೋಮ, ತಿಥಿ: ನವಮೀ, ನಿತ್ಯನಕ್ಷತ್ರ: ಆಶ್ಲೇಷಾ, ಯೋಗ: ಪ್ರೀತಿ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 30 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 01 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 07:57 ರಿಂದ 09:23 ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 10:50 ರಿಂದ ಮಧ್ಯಾಹ್ನ 12:16 ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 01:43 ರಿಂದ 03:09ರ ವರೆಗೆ.

ಸಿಂಹ ರಾಶಿ : ಬಹಳ‌ ದಿನಗಳ‌ ಅನಂತರ ಕುಟುಂಬದವರನ್ನು ಭೇಟಿಯಾಗುತ್ತಿರುವುದು ನಿಮ್ಮ‌ ಮುಖದಲ್ಲಿ ಹರುಷ ಕಾಣುವುದು. ವಿದ್ಯಾರ್ಥಿಗಳು ಅಹಂಕಾರದ ವರ್ತನೆಯನ್ನು ತೋರಿಸಬಹುದು. ತಿಳಿವಳಿಕೆಯನ್ನು ಹೇಳಬೇಕಾದೀತು. ಎಲ್ಲವನ್ನೂ ನಂಬಿಕೆಯ ಆಧಾರದ ಮೇಲೆ ಸ್ವೀಕರಿಸಬೇಕಿಲ್ಲ. ಸರ್ಕಾರಿ ಉದ್ಯೋಗಿಗಳಿಗೆ ನಿಮ್ಮ ಚಾತುರ್ಯದ ಕಾರಣದಿಂದ ಹೆಚ್ಚಿನ ಅಧಿಕಾರವು ಪ್ರಾಪ್ತವಾಗುವುದು. ಧೈರ್ಯದಿಂದ ಮುನ್ನಡೆದರೆ ಯಾವ ತೊಂದರೆಯೂ ತೊಂದರೆಯಾಗಿ ಉಳಿಯದು. ಪ್ರಯಾಣದಲ್ಲಿ ಯಾವುದೇ ತೊಂದರೆಯು ಬಾರದಂತೆ ದೈವವನ್ನು ಪ್ರಾರ್ಥಿಸಿ. ದಾಂಪತ್ಯದಲ್ಲಿ ಉಂಟಾದ ಕಲಹವನ್ನು ನೀವೇ ಸರಿ ಮಾಡಿಕೊಳ್ಳಿ. ನಿಮ್ಮನ್ನೇ ನೀವು ವಂಚಿಸಿಕೊಳ್ಳುವಿರಿ. ಕಲಾವಿದರಿಗೆ ಸಿಕ್ಕ ಅವಕಾಶಗಳು ತಪ್ಪಿಹೋಗಬಹುದು. ಆಸ್ತಿಯ ವಿಚಾರದಲ್ಲಿ ದುಡುಕುವುದು ಬೇಡ, ಎಲ್ಲವೂ ಶಾಂತವಾಗುವ ತನಕ ಕಾಯಬೇಕಾಗುವುದು.

ಕನ್ಯಾ ರಾಶಿ : ಅಕಾರಣವಾಗಿ ನಿಮ್ಮ ಮೇಲೆ‌ ಆರೋಪಗಳು ಬರುವುದು. ಸಹನೆಯಿಂದ ಅದನ್ನು ಎದುರಿಸಬೇಕಾಗುವುದು. ದುಡುಕಿ ಏನನ್ನಾದರೂ ಮಾಡಿಕೊಳ್ಳುವುದು ಬೇಡ. ನ್ಯಾಯಾಲಯದ ವಿಚಾರದಲ್ಲಿ ನಿಮಗೆ ಹಿನ್ನಡೆಯ ಸಾಧ್ಯತೆ ಇದೆ. ನಿಮಗೆ ಬರಬೇಕಾದ ಹಣದ ವಿಚಾರದಲ್ಲಿಯೂ ನಿಮಗೆ ಸೋಲಾಗುವುದು. ಮನೆಯಲ್ಲಿಯೂ ನಿಮ್ಮ ಮಾತಿಗೆ ಸರಿಯಾದ ಬೆಲೆಯೂ ಸಿಗದು. ಕಛೇರಿಯಲ್ಲಿ ಇಂದು ನಿಮ್ಮಿಂದ ತಪ್ಪಾಗಿದ್ದು ಅದನ್ನು ನೀವು ಒಪ್ಪಿಕೊಳ್ಳಲಾರಿರಿ. ದುರ್ವ್ಯಸನದಿಂದ ಸಂಪತ್ತನ್ನು ನಷ್ಟ ಮಾಡಿಕೊಳ್ಳುವಿರಿ. ನಿಮ್ಮ ತಪ್ಪಿಗೆ ಪಶ್ಚಾತ್ತಾಪವಾದರೂ ಕೊನೆಯ ಹಂತವಾಗಿ ಇರಲಿ. ಕುಟಂಬದವರು ಸೇರಿಸಿಕೊಂಡು ಧಾರ್ಮಿಕ ಕಾರ್ಯಗಳನ್ನು ಮಾಡುವಿರು. ಏಕಾಂಗಿಯಾಗಿ ಇರುವುದು ಹಿತವೆನಿಸಬಹುದು.

ತುಲಾ ರಾಶಿ : ಸತ್ಪಾತ್ರರಿಗೆ ದಾನವನ್ನು ಕೊಟ್ಟಿದ್ದು ನಿಮಗೆ ಖುಷಿಯಾಗಲಿದೆ. ವ್ಯಾಪಾರದಲ್ಲಿ ಹಿತಶತ್ರುಗಳ ಕಾಟದಿಂದ ನಿಮಗೆ ತೊಂದರೆಗಳು ಆಡಬಹುದು. ಇದರಿಂದ ನಿಮ್ಮ ನೆಮ್ಮದಿಯೂ ದೂರವಾದೀತು. ವಿದ್ಯಾಭ್ಯಾಸದಲ್ಲಿ ಯಶಸ್ಸನ್ನು ಸಾಧಿಸಲು ಅನೇಕ ಮಾರ್ಗಗಳು ಇರಲಿದೆ. ನಿಮ್ಮನ್ನು ಬಳಸಿಕೊಳ್ಳಬಹುದು, ಯಾರನ್ನೂ ಅತಿಯಾಗಿ ನಂಬಿ ನೀವು ಮೋಸಹೋಗಬಹುದು.‌ ವಿವಾಹಕ್ಕೆ ಸಂಬಂಧಿಸಿದಂತೆ ತುರ್ತಾಗಿ ತೀರ್ಮಾನವನ್ನು ತೆಗೆದುಕೊಳ್ಳುವುದು ಸೂಕ್ತ. ನಿಮ್ಮವರ ತಪ್ಪುಗಳನ್ನು ತಿದ್ದಿಕೊಳ್ಳಲು ಸಮಯವನ್ನು ಕೊಡಿ. ಭೂಮಿಯ ವ್ಯವಹಾರದಿಂದ ಅಲ್ಪ ಅಭಿವೃದ್ಧಿಯು ಆಗಲಿದೆ. ಆರ್ಥಿಕ ಒತ್ತಡದಿಂದ ಮನೆಯ ನೆಮ್ಮದಿಯು ಕದಡಬಹುದು. ತಜ್ಞರ ಜೊತೆ ಇಂದಿನ ಸಮಯವನ್ನು ಕಳೆಯುವಿರಿ. ತ್ರಿಪುರಸುಂದರಿಯನ್ನು ಆರಾಧಿಸಿರಿ.

ವೃಶ್ಚಿಕ ರಾಶಿ : ನ್ಯಾಯಾಲಯದ ವಿಚಾರವನ್ನು ಯಾರ ಬಳಿಯೂ ಹೇಳಲು ಇಚ್ಛಿಸುವುದಿಲ್ಲ. ಕುಟುಂಬದಲ್ಲಿ ಎಲ್ಲರೂ ಸುಖದಿಂದ ಜೀವಿಸುವ ಕಾರಣ ನಿಮ್ಮಲ್ಲಿಯೂ ನೆಮ್ಮದಿಯು ಕಾಣಿಸುವುದು. ದಾಂಪತ್ಯದಲ್ಲಿ ಪರಸ್ಪರ ನೋವು ಹಂಚಿಕೊಂಡು ಸಮಾಧಾನವಾಗುವಿರಿ. ನಿಮ್ಮ ನಡವಳಿಕೆಗೆ ಬಂಧುಗಳಿಂದ ಪ್ರಶಂಸೆಯು ಸಿಗಲಿದೆ. ಅಂದುಕೊಂಡಂತೆ ಕಾರ್ಯವು ಸಾಗದು ಎಂಬ ಕೊರಗು ಇರುವುದು. ನಿಮ್ಮ ಬಲದ ಮೇಲೇ ಕೆಲಸವನ್ನು ಪ್ರಾರಂಭಿಸಿ. ಇನ್ನೊಬ್ಬರ ಗೊತ್ತಿಲ್ಲದ ವಿಚಾರವನ್ನು ಹೇಳುವುದು ಬೇಡ. ಅನೇಕ ದಿನಗಳಿಂದ ಉದ್ಯೋಗ ನಿರ್ವಹಣೆಯಲ್ಲಿ ಬೇಸರ ಉಂಟಾಗಿದ್ದು ಹೊರಗೆ ಸುತ್ತಾಡುವ, ವಿರಾಮವನ್ನು ಪಡೆಯುವ ಮನಸ್ಸು ಇರಲಿದೆ. ನಿಮ್ಮ ಮಾತಿಗೆ ಬೆಲೆ ಇಲ್ಲವಾದೀತು. ದೇವಸೇನಾಪತಿಯಾದ ಸುಬ್ರಹ್ಮಣ್ಯನು ನಿಮಗೆ ಮಾನಸಿಕ ಹಾಗೂ ದೈಹಿಕ ಬಲವನ್ನು ಕೊಡುವನು.

ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು