Horoscope: ದಿನಭವಿಷ್ಯ, ಇಷ್ಟವಿಲ್ಲದ ವೃತ್ತಿಯನ್ನು ಅವಲಂಭಿಸಿ ಕಷ್ಟಪಡುವಿರಿ

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದು, ಬೆಳಗ್ಗೆ ಎದ್ದು ಕೂಡಲೇ ನಿಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವ ಅಭ್ಯಾಸ ಇದೆಯೇ? ಹಾಗಿದ್ದರೆ ಇಂದಿನ (2023 ಅಕ್ಟೋಬರ್ 19) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿ ತಿಳಿದುಕೊಳ್ಳಿ.

Horoscope: ದಿನಭವಿಷ್ಯ, ಇಷ್ಟವಿಲ್ಲದ ವೃತ್ತಿಯನ್ನು ಅವಲಂಭಿಸಿ ಕಷ್ಟಪಡುವಿರಿ
ರಾಶಿ ಭವಿಷ್ಯ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 19, 2023 | 12:30 AM

ಇಂದಿನ ರಾಶಿ ಭವಿಷ್ಯ (Horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಇದರ ಜೊತೆಗೆ ಪಂಚಾಂಗ ಹೇಗಿದೆ? ಎಂಬುದನ್ನು ಒಂದಷ್ಟು ಮಂದಿ ನೋಡುತ್ತಾರೆ. ಹಾಗಾದರೆ ಇಂದಿನ (2023 ಅಕ್ಟೋಬರ್ 19) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಚಿತ್ರಾ, ಮಾಸ: ಆಶ್ವಯುಜ, ಪಕ್ಷ: ಶುಕ್ಲ, ವಾರ: ಗುರು, ತಿಥಿ: ಪಂಚಮೀ, ನಿತ್ಯನಕ್ಷತ್ರ: ಜ್ಯೇಷ್ಠಾ, ಯೋಗ: ಸೌಭಾಗ್ಯ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 25 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 09 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 01:46 ರಿಂದ 03:14ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 06:26 ರಿಂದ 07:54ರ ವರೆಗೆ, ಗುಳಿಕ ಕಾಲ ಬೆಳಗ್ಗೆ 09:22 ರಿಂದ ಮಧ್ಯಾಹ್ನ 10:50ರ ವರೆಗೆ.

ನವರಾತ್ರಿಯ ಐದನೇ ದಿನ ಮಹಾಲಕ್ಷ್ಮೀ ಸ್ವರೂಪಳಾದ ಸಿದ್ಧಿದಾತ್ರೀ ದೇವಿಯ ಆರಾಧನೆ. ಹೆಸರೇ ಹೇಳುವಂತೆ ಸಿದ್ಧಿಯನ್ನು ನೀಡುವವಳು. ಏನನ್ನಾದರೂ ಸಿದ್ಧಿಸಿಕೊಳ್ಳಲು ಇಚ್ಛಿಸಿದರೆ ಮಹಾಮಾತೆಗೆ ಶರಣಾಗುವುದು ಅನಿವಾರ್ಯ.

ಸಿದ್ಧಗಂಧರ್ವಯಕ್ಷಾದ್ಯೈಃ ಅಸುರೈರಮಸುರೈರಪಿ | ಸೇವ್ಯಮಾನಾ ಸದಾ ಭೂಯಾತ್ ಸಿದ್ಧಿದಾ ಸಿದ್ಧಿದಾಯಿನೀ ||

ಸಿಂಹ ರಾಶಿ : ಇನ್ನೊಬ್ಬರಿಗೆ ಸಹಾಯ ಮಾಡಲು ಕೂಡಿಟ್ಟ ಹಣವನ್ನು ತೆಗೆಯಬೇಕಾದೀತು. ನಿಗದಿತ ಸಮಯಕ್ಕೆ ಕೆಲಸವಾಗದೇ ಇರುವ ಕಾರಣ ಕೆಲಸವನ್ನು ಕೊಟ್ಟವರು ನಿಮ್ಮ ಮೇಲೆ ಮುನಿಸಿಕೊಂಡಾರು. ಕಳೆದ ಸಮಯವನ್ನು ಮೆಲುಕು ಹಾಕುವಿರಿ. ಯಾರ ಜೊತೆಯೂ ಅಸಂಬದ್ಧ ಚರ್ಚೆಗೆ ಹೋಗುವುದು ಬೇಡ. ಜಾಡ್ಯದಿಂದ ಇಂದು ಕಛೇರಿಗೆ ವಿಳಂಬವಾಗಿ ಹೋಗುವಿರಿ. ಬೆಲೆಬಾಳುವ ವಸ್ತುಗಳನ್ನು ಖರೀದಿಸಲಿದ್ದು ಅದರ ರಕ್ಷಣೆಯನ್ನು ಮಾಡಬೇಕಾಗುವುದು. ಹೊಸ ವಿಚಾರಗಳ ಕಲಿಕೆಗೆ ಅವಕಾಶಗಳು ಸಿಗುವುದು.‌ ವ್ಯಾಪಾರವನ್ನು ಹೆಚ್ಚಿನ ಆದಾಯ ಬರುವಂತೆ ಮಾಡಿಕೊಳ್ಳುವಿರಿ. ಹಳೆಯ ವಾಹನದಿಂದ ನಿಮಗೆ ಲಾಭವೇ ಆಗುವುದು. ಮಿತಿಮೀರಿದ ಓಡಾಟದಿಂದ ಆರೋಗ್ಯವು ಕೆಡಬಹುದು.

ಕನ್ಯಾ ರಾಶಿ : ಕಲಾವಿದರು ದೂರ ಪ್ರಯಾಣ ಮಾಡಬೇಕಾಗಿಬರಬಹುದು. ಸಂಕುಚಿತ ಸ್ವಭಾವವನ್ನು ದೂರ ಮಾಡಿಕೊಳ್ಳುವುದು ಉತ್ತಮ. ನಿಮ್ಮದಾದ ಕಾರ್ಯದಲ್ಲಿ ನೀವು ತೊಡಗಿಗೊಳ್ಳಿ. ಖಾಲಿ ಇರುವುದು ಬೇಡ. ವಾಹನ ಸಂಚಾರದಲ್ಲಿ ಅಡಚಣೆ ಆಗಲಿದೆ. ನಿದ್ರೆಯು ಸರಿಯಾಗದೇ ಮನಸ್ಸು ಭಾರವಾಗಬಹುದು. ಇಷ್ಟವಿಲ್ಲದ ವೃತ್ತಿಯನ್ನು ಅವಲಂಬಿಸಿ ಕಷ್ಟಪಡುವಿರಿ. ಸಹೋದ್ಯೋಗಿಗಳ ಅಸಹಕಾರವು ಅವರ ಮೇಲೆ ದ್ವೇಷವನ್ನು ಮೂಡಿಸಬಹುದು. ಆಕಸ್ಮಿಕವಾಗಿ ನಿಮಗೆ ಧನನಷ್ಟವಾಗಲಿದ್ದು ಚಿಂತೆ ಕಾಡುವುದು. ನಿಮ್ಮ ಸಣ್ಣ ತಪ್ಪೂ ಅಪಹಾಸ್ಯಕ್ಕೀಡಾಗುವುದು. ಗುರಿಯ ಬಗ್ಗೆ ಸರಿಯಾದ ಮಾರ್ಗದರ್ಶನ ಪಡೆದುಕೊಳ್ಳಿ. ಹಿರಿಯರ ಕಲಾವಿದರ ಭೇಟಿಯಾಗಲಿದೆ. ನಿಮ್ಮ‌ ಸಂಕಲ್ಪವು ಫಲಿಸಲಿದ್ದು ಖುಷಿಯಾಗುವುದು.

ತುಲಾ ರಾಶಿ : ಇಂದು ಯಾರನ್ನೂ ನಂಬುವ ಸ್ಥಿತಿಯಲ್ಲಿ ನೀವು ಇರಲಾರಿರಿ. ಸಾಮಾಜಿಕ ಕಾರ್ಯದಲ್ಲಿ ಅವಮಾನದ ಕಾರಣದಿಂದ ಅದನ್ನು ಮಾಡಲು ಹಿಂದೇಟು ಹಾಕುವಿರಿ. ಅಪರಿಚಿತ ಕರೆಗಳು ನಿಮಗೆ ಹಿಂಸೆಯನ್ನು ಕೊಡಬಹುದು. ಪಾಲುದಾರಿಕೆಯಲ್ಲಿ ನಿಮಗೆ ಪೂರ್ಣ ಸಮಾಧಾನ ಇರದು. ವಿವಾಹವಾದರೂ ಭವಿಷ್ಯದ ಬಗ್ಗೆ ನಕಾರಾತ್ಮಕ ಆಲೋಚನೆಯು ಇರಲಿದೆ. ನಿಮಗೆ ಅಭದ್ರತೆಯು ಕಾಡಬಹುದು. ಮಕ್ಕಳ ಸಂತೋಷದಲ್ಲಿ ನೆಮ್ಮದಿ ಇರಲಿದೆ. ನಿಮ್ಮ ಗೌಪ್ಯ ಸಂಗತಿಗಳನ್ನು ಯಾರ ಜೊತೆಯೂ ಹಂಚಿಕೊಳ್ಳುವುದು ಬೇಡ. ದೇವಾಲಯಕ್ಕೆ ಹೋಗಿ ಸ್ವಲ್ಪ ಕಾಲ ಇದ್ದು ಬರುವುದು ಉತ್ತಮ. ನಿಮ್ಮ ಬಗ್ಗೆ ಬಂಧುಗಳು ಮಾತಾನಾಡಿಕೊಳ್ಳುವುದು ಗೊತ್ತಾದೀತು.

ವೃಶ್ಚಿಕ ರಾಶಿ : ಕೃಷಿಯಲ್ಲಿ ಲಾಭವನ್ನು ಪಡೆಯಲು ಹೆಚ್ಚಿನ ಓಡಾಟ ಮಾಡಬೇಕಾಗುವುದು. ಚಿಂತಿತ ಕಾರ್ಯವನ್ನು ಪೂರೈಸಲು ನಿಮಗೆ ಬುದ್ಧಿಯು ಸೂಚಿಸದು. ಆಸ್ತಿಯನ್ನು ಪಡೆದುಕೊಳ್ಳಲು ನ್ಯಾಯಾಲಯಕ್ಕೆ ಹೋಗಬೇಕಾದೀತು. ದೇಹಪೀಡೆಯು ಮತ್ತೆ ಕಾಣಿಸಿಕೊಳ್ಳುವುದು. ಸಂಗಾತಿಯು ನಿಮ್ಮ‌ನಡೆಯನ್ನು ಅನುಮಾನಸಿಬಹುದು. ಭೂಮಿಯನ್ನು ಕೊಳ್ಳುವುದು ಇಂದು ಸುಲಭವಾಗದು. ಉದ್ಯೋಗವನ್ನು ಬದಲಾಯಿಸಲು ಇರುವ ಉದ್ಯೋಗವನ್ನು ಬಿಟ್ಟುಬಿಡುವಿರಿ. ಸ್ಪರ್ಧಾತ್ಮಕ ಪರೀಕ್ಷೆಗೆ ನಿಮ್ಮ ಪ್ರಯತ್ನ ಸಾಲದು. ಹುಡುಗಾಟದ ಮನೋಭಾವವು ಇರಲಿದೆ. ಕೆಲವು ಸಂಗತಿಗಳು ನಿಮಗೆ ಇಷ್ಟವಾಗದು. ನಿಮ್ಮನ್ನು ಪ್ರಶಂಸಿಸಿದಂತೆ ಕಂಡರೂ ಅದು ತೆಗಳಿಕೆಯಾಗಿರಲಿದೆ.

‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ