AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope: ರಾಶಿಭವಿಷ್ಯ, ಈ ರಾಶಿಯವರು ದಾಂಪತ್ಯದಲ್ಲಿ ಪರಸ್ಪರ ಸದ್ಭಾವವನ್ನು ಇಟ್ಟುಕೊಳ್ಳುವುದು ಮುಖ್ಯವಾಗುವುದು

ನೀವು ಧನು, ಮಕರ, ಕುಂಭ, ಮೀನ ರಾಶಿಯವರಾಗಿದ್ದು, ಬೆಳಗ್ಗೆ ಎದ್ದು ಕೂಡಲೇ ನಿಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವ ಅಭ್ಯಾಸ ಇದೆಯೇ? ಹಾಗಿದ್ದರೆ ಇಂದಿನ (2023 ಅಕ್ಟೋಬರ್ 19) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿ ತಿಳಿದುಕೊಳ್ಳಿ.

Horoscope: ರಾಶಿಭವಿಷ್ಯ, ಈ ರಾಶಿಯವರು ದಾಂಪತ್ಯದಲ್ಲಿ ಪರಸ್ಪರ ಸದ್ಭಾವವನ್ನು ಇಟ್ಟುಕೊಳ್ಳುವುದು ಮುಖ್ಯವಾಗುವುದು
ಪ್ರಾತಿನಿಧಿಕ ಚಿತ್ರ
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಕಿರಣ್ ಹನುಮಂತ್​ ಮಾದಾರ್|

Updated on: Oct 19, 2023 | 12:45 AM

Share

ಇಂದಿನ ರಾಶಿ ಭವಿಷ್ಯ (Horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಇದರ ಜೊತೆಗೆ ಪಂಚಾಂಗ ಹೇಗಿದೆ? ಎಂಬುದನ್ನು ಒಂದಷ್ಟು ಮಂದಿ ನೋಡುತ್ತಾರೆ. ಹಾಗಾದರೆ ಇಂದಿನ (2023 ಅಕ್ಟೋಬರ್ 19) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಚಿತ್ರಾ, ಮಾಸ: ಆಶ್ವಯುಜ, ಪಕ್ಷ: ಶುಕ್ಲ, ವಾರ: ಗುರು, ತಿಥಿ: ಪಂಚಮೀ, ನಿತ್ಯನಕ್ಷತ್ರ: ಜ್ಯೇಷ್ಠಾ, ಯೋಗ: ಸೌಭಾಗ್ಯ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 25 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 09 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 01:46 ರಿಂದ 03:14ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 06:26 ರಿಂದ 07:54ರ ವರೆಗೆ, ಗುಳಿಕ ಕಾಲ ಬೆಳಗ್ಗೆ 09:22 ರಿಂದ ಮಧ್ಯಾಹ್ನ 10:50ರ ವರೆಗೆ.

ನವರಾತ್ರಿಯ ಐದನೇ ದಿನ ಮಹಾಲಕ್ಷ್ಮೀ ಸ್ವರೂಪಳಾದ ಸಿದ್ಧಿದಾತ್ರೀ ದೇವಿಯ ಆರಾಧನೆ. ಹೆಸರೇ ಹೇಳುವಂತೆ ಸಿದ್ಧಿಯನ್ನು ನೀಡುವವಳು. ಏನನ್ನಾದರೂ ಸಿದ್ಧಿಸಿಕೊಳ್ಳಲು ಇಚ್ಛಿಸಿದರೆ ಮಹಾಮಾತೆಗೆ ಶರಣಾಗುವುದು ಅನಿವಾರ್ಯ.

ಸಿದ್ಧಗಂಧರ್ವಯಕ್ಷಾದ್ಯೈಃ ಅಸುರೈರಮಸುರೈರಪಿ | ಸೇವ್ಯಮಾನಾ ಸದಾ ಭೂಯಾತ್ ಸಿದ್ಧಿದಾ ಸಿದ್ಧಿದಾಯಿನೀ ||

ಧನು ರಾಶಿ : ದಾಂಪತ್ಯದಲ್ಲಿ ಪರಸ್ಪರ ಸದ್ಭಾವವನ್ನು ಇಟ್ಟುಕೊಳ್ಳುವುದು ಮುಖ್ಯವಾಗುದು. ನಿಮ್ಮ ಶ್ರಮವು ದುರುಪಯೋಗವಾಗುವುದು. ದೂರಪ್ರಯಾಣದಿಂದ ನಿಮಗೆ ಖರ್ಚಾಗುವುದು ಗೊತ್ತಾಗದೇ ಹೋಗಬಹುದು. ನ್ಯಾಯಸಮ್ಮತ ಮಾರ್ಗದಲ್ಲಿ ನೀವು ಇರುವುದು ಸೂಕ್ತ. ಹಿರಿಯರ ಜೊತೆ ಔಚಿತ್ಯ ರೀತಿಯಿಂದ ವ್ಯವಸ್ಥೆ ವ್ಯವಹರಿಸಿ. ಸ್ತ್ರೀಯರಿಂದ ಅಪಮಾನವಾಗುವ ಸಾಧ್ಯತೆ ಇದೆ. ಕುಟುಂಬದಿಂದ ಅನಾದರಕ್ಕೆ ಒಳಗಾಗುವಿರಿ. ಆಕಸ್ಮಿಕ ಧನಲಾಭವು ನಿಮಗೆ ಆಶ್ಚರ್ಯ ಉಂಟಾಗಬಹುದು. ಸಂಗಾತಿಯ ಜೊತೆ ಆರಾಮಾಗಿ ಮಾತನಾಡುವಿರಿ. ಕುಟುಂಬದ ಜೊತೆ ಕಳೆಯುವ ಕಾಲವು ನಿಮಗೆ ನೆನಪಿನಲ್ಲಿ ಉಳಿಯುವಂತೆ ಆಗುವುದು. ಕಾರ್ಯದಲ್ಲಿ ಶ್ರದ್ಧೆಯನ್ನು ಇಟ್ಟುಕೊಳ್ಳುವುದು ಮುಖ್ಯವಾಗುವುದು.

ಮಕರ ರಾಶಿ : ನಿರುಪಯೋಗಿ ವಸ್ತುಗಳನ್ನು ನೀವು ದೂರ ಮಾಡುವಿರಿ. ನಿರುದ್ಯೋಗವೇ ನಿಮಗೆ ಅಭ್ಯಾಸವಾಗುವ ಸಾಧ್ಯತೆ ಇದೆ. ಸ್ತ್ರೀಯರಿಗೆ ಪ್ರಯಾಣದಲ್ಲಿ ತೊಂದರೆ ಬರಬಹುದು. ಯಾರದೋ ಪ್ರಭಾವವನ್ನು ಬಳಸಿ ನೀವು ಕೆಲಸವನ್ನು ಮಾಡಿಸಿಕೊಳ್ಳುವಿರಿ. ನಿಮಗೆ ಕಾರ್ಯದಲ್ಲಿ ನಿಷ್ಠೆ ಇಲ್ಲ ಎಂದು ಸಾಬೀತಾಗಬಹುದು. ವ್ಯವಹಾರದಲ್ಲಿ ಮುಗ್ಗರಿಸುವ ಸಂದರ್ಭವು ಬರಬಹುದು. ಸಾಲವನ್ನು ಕೊಡುವ ಸಂದರ್ಭವು ಬರಬಹುದು. ಏನಾದರೂ ಹೇಳಿ ತಪ್ಪಿಸಿಕೊಳ್ಳುವುದು ಸೂಕ್ತ. ನಿಮ್ಮ ನೌಕರರ ತಪ್ಪಿಗೆ ನೀವು ಉತ್ತರಿಸಬೇಕಾದೀತು. ತಂದೆಯ ವ್ಯವಹಾರದಲ್ಲಿ ಮಧ್ಯ ಪ್ರವೇಶ ಮಾಡುವುದು ಬೇಡ. ದ್ವಿಚಕ್ರ ವಾಹನದ ಮೇಲೆ‌ ಜಿಗುಪ್ಸೆ ಬಂದೀತು.

ಕುಂಭ ರಾಶಿ : ಅಂದುಕೊಂಡಿದ್ದಕ್ಕಿಂತ ಖರ್ಚು ಅಧಿಕವಾಗಿದ್ದು ಗಳಿಕೆಯ ಬಗ್ಗೆ ಆಲೋಚಿಸುವಿರಿ. ಧಾರ್ಮಿಕ‌ ಕಾರ್ಯದಲ್ಲಿ ತೊಡಗಿರುವವರಿಗೆ ಆದಾಯವು ಹೆಚ್ಚು ಇರಲಿದೆ. ಕುಟುಂಬದ ಪೋಷಣೆಯಲ್ಲಿ ಇಂದು ಸಹಭಾಗಿತ್ವ ಇರುವುದು. ವೃತ್ತಿಯ ಸ್ಥಳದಲ್ಲಿ ತೇಜೋವಧೆಯಾಗುವ ಸಂದರ್ಭವು ಬರಬಹುದು. ಬೇಕೆಂದೇ ನಿಮ್ಮ ಮೇಲೆ‌ ಒತ್ತಡ ತರಬಹುದು. ಸ್ನೇಹಿತರು ನಿಮ್ಮನ್ನು ದೂರವಿಟ್ಟಾರು. ಸಂಗಾತಿಯ ಅನಾದರವು ನಿಮ್ಮನ್ನು ಬಹಳ ಕಾಡಬಹುದು. ವೈಫಲ್ಯವನ್ನು ಸಕಾರಾತ್ಮಕ ದೃಷ್ಟಿಯಿಂದ ನೋಡಿ. ಮಕ್ಕಳಿಗೆ ಕಡಿವಾಣ ಹಾಕಲು ಹೋಗುವುದು ಬೇಡ. ಅವರ ಮೇಲೆ ನಿಮ್ಮ ನಿಗಾ ಇರಲಿ. ಆಹಾರದ ಕಾರಣಕ್ಕೆ ಉದರಬಾಧೆಯು ಕಾಣಿಸಿಕೊಂಡೀತು.

ಮೀನ ರಾಶಿ : ನೌಕರರು ಇಂದು ಹೆಚ್ಚಿನ ಸೌಲಭ್ಯವನ್ನು ಪಡೆದುಕೊಳ್ಳುವರು. ಸಮಾನ ಚಿಂತನಶೀಲರ‌ ನಡುವೆ ಸಖ್ಯವಾಗುವುದು. ಇನ್ನೊಬ್ಬರಿಂದ ಸಹಕಾರವನ್ನು ಬಯಸುವುದಿಲ್ಲ. ನಿಮ್ಮಷ್ಟಕ್ಕೆ ಕಾರ್ಯದಲ್ಲಿ ಮಗ್ನರಾಗಿರುವಿರಿ. ಸಂಧಾನಕ್ಕೆ ಕರೆದರೆ ಮಾತ್ರ ಹೋಗಿ. ಮನಸ್ಸಿನ ಸೋಮಾರಿತನವು ನಿಮ್ಮ ಕಾರ್ಯವನ್ನು ಹಿಂದಿಕ್ಕುವುದು. ಗ್ರಾಹಕರಿಗೆ ನಿಮ್ಮ‌ ಅಸಮಾಧಾನವೂ ಆಗುವುದು. ಇಂದು ಜ್ಞಾನವೃದ್ಧರ ಸೇವೆಗೆ ಅವಕಾಶ ಸಿಗಲಿದೆ. ಅಪಘಾತದಿಂದ‌ ಉಂಟಾದ ನೋವಿನಿಂದ ನಿಧಾನವಾಗಿ ಆಚೆ ಬರಬಹುದು. ಅರ್ಥಿಕವಾಗಿ ಕಷ್ಟವಿದ್ದರೂ ವಿದ್ಯಾಭ್ಯಾಸದ ಛಲವಿರಲಿದೆ. ಯಾರದ್ದಾದರೂ ಸಣ್ಣ ಸಹಾಯವನ್ನೂ ನೀವು ನಿರೀಕ್ಷಿಸುವಿರಿ. ಸಕಾಲಕ್ಕೆ ಸಿಕ್ಕ ಸೌಕರ್ಯದಿಂದ ನಿಮ್ಮ ಕಾರ್ಯವು ಸುಲಲಿತವಾಗುವುದು.

-ಲೋಹಿತಶರ್ಮಾ – 8762924271 (what’s app only)

ನಿಮ್ಮನ್ನೂ ದೇವೇಗೌಡ್ರು ಉಚ್ಛಾಟಿಸಿದ್ರು: ಸಿದ್ದರಾಮಯ್ಯಗೆ ಯತ್ನಾಳ್ ಚಮಕ್
ನಿಮ್ಮನ್ನೂ ದೇವೇಗೌಡ್ರು ಉಚ್ಛಾಟಿಸಿದ್ರು: ಸಿದ್ದರಾಮಯ್ಯಗೆ ಯತ್ನಾಳ್ ಚಮಕ್
ಸುಜಾತ ಭಟ್ ಗೆ ಮಹೇಶ್ ತಿಮರೋಡಿ ಕೆಲದಿನ ಆಶ್ರಯ ನೀಡಿದ್ದರು: ಜಯಂತ್
ಸುಜಾತ ಭಟ್ ಗೆ ಮಹೇಶ್ ತಿಮರೋಡಿ ಕೆಲದಿನ ಆಶ್ರಯ ನೀಡಿದ್ದರು: ಜಯಂತ್
ರಸ್ತೆ ಬದಿಯಲ್ಲಿ ಕುಳಿತಿದ್ದ ವ್ಯಕ್ತಿ ಮೇಲೆ ಹತ್ತಿ ಎಳೆದುಕೊಂಡು ಹೋದ ಕಾರು!
ರಸ್ತೆ ಬದಿಯಲ್ಲಿ ಕುಳಿತಿದ್ದ ವ್ಯಕ್ತಿ ಮೇಲೆ ಹತ್ತಿ ಎಳೆದುಕೊಂಡು ಹೋದ ಕಾರು!
ಕೆಎಸ್​ಸಿಎಗೆ ಪರವಾನಗಿ ಇರದಿದ್ದರೆ ಡಿಸಿಎಂ ಹೋಗಿದ್ದು ಯಾಕೆ? ಅಶೋಕ
ಕೆಎಸ್​ಸಿಎಗೆ ಪರವಾನಗಿ ಇರದಿದ್ದರೆ ಡಿಸಿಎಂ ಹೋಗಿದ್ದು ಯಾಕೆ? ಅಶೋಕ
ನಿಯಮಗಳನ್ನು ಉಲ್ಲಂಘಿಸಿ ತಿಮರೋಡಿಯವರನ್ನು ಬಂಧಿಸಲಾಗಿದೆ: ಮಟ್ಟಣ್ಣನವರ್
ನಿಯಮಗಳನ್ನು ಉಲ್ಲಂಘಿಸಿ ತಿಮರೋಡಿಯವರನ್ನು ಬಂಧಿಸಲಾಗಿದೆ: ಮಟ್ಟಣ್ಣನವರ್
ವಿವಾದದಲ್ಲಿ ರಮೋಲಾ; ಸಿನಿಮಾದಲ್ಲಿ ನಟಿಸಿ ಪ್ರಮೋಷನ್​ಗೆ ಬರಲ್ಲ ಎಂದ ನಟಿ?
ವಿವಾದದಲ್ಲಿ ರಮೋಲಾ; ಸಿನಿಮಾದಲ್ಲಿ ನಟಿಸಿ ಪ್ರಮೋಷನ್​ಗೆ ಬರಲ್ಲ ಎಂದ ನಟಿ?
ಕಾಲ್ತುಳಿತ ಪ್ರಕರಣದಲ್ಲಿ ಸರ್ಕಾರವನ್ನು ಅಬೆಟರ್ ಅನ್ನೋದು ಸರಿಯಲ್ಲ: ಸಿಎಂ
ಕಾಲ್ತುಳಿತ ಪ್ರಕರಣದಲ್ಲಿ ಸರ್ಕಾರವನ್ನು ಅಬೆಟರ್ ಅನ್ನೋದು ಸರಿಯಲ್ಲ: ಸಿಎಂ
ರಸ್ತೆ ತಡೆಗೋಡೆ ಮೇಲೆ ಕುಳಿತು ಕ್ಯಾಮೆರಾಗೆ ಪೋಸ್​​ ಕೊಟ್ಟ ಚಿರತೆ
ರಸ್ತೆ ತಡೆಗೋಡೆ ಮೇಲೆ ಕುಳಿತು ಕ್ಯಾಮೆರಾಗೆ ಪೋಸ್​​ ಕೊಟ್ಟ ಚಿರತೆ
ವಿರೇಂದ್ರ ಪಪ್ಪಿ ಜೊತೆ ಕುಸುಮ ಸಹೋದರನ ವ್ಯಾವಹಾರಿಕ ಸಂಬಂಧ ಹಿನ್ನೆಲೆ ದಾಳಿ
ವಿರೇಂದ್ರ ಪಪ್ಪಿ ಜೊತೆ ಕುಸುಮ ಸಹೋದರನ ವ್ಯಾವಹಾರಿಕ ಸಂಬಂಧ ಹಿನ್ನೆಲೆ ದಾಳಿ
ಬಿಹಾರದಲ್ಲಿ ತೆಗೆದುಕೊಂಡ ಯಾವುದೇ ನಿರ್ಧಾರ ವ್ಯರ್ಥವಾಗುವುದಿಲ್ಲ: ಮೋದಿ
ಬಿಹಾರದಲ್ಲಿ ತೆಗೆದುಕೊಂಡ ಯಾವುದೇ ನಿರ್ಧಾರ ವ್ಯರ್ಥವಾಗುವುದಿಲ್ಲ: ಮೋದಿ