AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope: ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆ ಕಾಣಿಸಿಕೊಳ್ಳಬಹುದು, ಅಧಿಕ ಪ್ರಯಾಣ ತಪ್ಪಿಸಿ

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದು, ಬೆಳಗ್ಗೆ ಎದ್ದು ಕೂಡಲೇ ನಿಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವ ಅಭ್ಯಾಸ ಇದೆಯೇ? ಹಾಗಿದ್ದರೆ ಇಂದಿನ (2023 ಅಕ್ಟೋಬರ್ 26) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿ ತಿಳಿದುಕೊಳ್ಳಿ.

Horoscope: ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆ ಕಾಣಿಸಿಕೊಳ್ಳಬಹುದು, ಅಧಿಕ ಪ್ರಯಾಣ ತಪ್ಪಿಸಿ
ಪ್ರಾತಿನಿಧಿಕ ಚಿತ್ರ
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on: Oct 26, 2023 | 12:15 AM

Share

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಅಕ್ಟೋಬರ್ 26 ಗುರುವಾರ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ತುಲಾ ಮಾಸ, ಮಹಾನಕ್ಷತ್ರ: ಚಿತ್ರಾ, ಮಾಸ: ಆಶ್ವಯುಜ, ಪಕ್ಷ: ಶುಕ್ಲ, ವಾರ: ಗುರು, ತಿಥಿ: ತ್ರಯೋದಶೀ, ನಿತ್ಯನಕ್ಷತ್ರ: ಪೂರ್ವಾಭಾದ್ರ, ಯೋಗ: ಧ್ರುವ / ವ್ಯಾಘಾತ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 27 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 05 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 01:44 ರಿಂದ 03:11 ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 06:27 ರಿಂದ 07:54 ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 09:22 ರಿಂದ 10:49ರ ವರೆಗೆ.

ಸಿಂಹ ರಾಶಿ: ಕುಟುಂಬದ ಭಿನ್ನಾಭಿಪ್ರಾಯಗಳು ನಿಮ್ಮ ಹಾದಿಯನ್ನು ತಪ್ಪಿಸಬಹುದು. ಸರ್ಕಾರದಿಂದ ಆಗಬೇಕಾದ ಕೆಲಸಕ್ಕೆ ಹೆಚ್ಚು ಖರ್ಚನ್ನು ಮಾಡಬೇಕಾಗುದು. ತಂದೆಯ ಆರೋಗ್ಯದ ಬಗ್ಗೆ ಗಮನ ಅಧಿಕವಾಗಿರಲಿ. ಬಂಧುಗಳ‌ ವಿಚಾರದಲ್ಲಿ ನಿಮಗೆ ಪೂರ್ಣ ವಿಶ್ವಾಸವಿರದು. ವಾಗ್ವಾದದಿಂದ ನಿಮ್ಮ ಹೆಸರನ್ನು ಕೆಡಿಸಿಕೊಳ್ಳುವಿರಿ. ಯಾವುದೋ ಆಲೋಚನೆಯಲ್ಲಿ ಮಗ್ನರಾಗಿ ಮಾಡಬೇಕಾದ ಕೆಲಸವನ್ನು ಮಾಡಲಾಗದು. ಕುರುಡಾಗಿ ಮುನ್ನುಗ್ಗುವುದು ಬೇಡ. ಮೊದಲೇ ನಿಶ್ಚಯಿಸಿದ ಕಾರ್ಯಗಳನ್ನು ಸರಿಯಾಗಿ ಮುಂದುವರಿಸಿ. ಆರೋಗ್ಯವು ಸುಧಾರಿಸುತ್ತ ಬರಲಿದೆ. ನೀವು ಮಾತನಾಡುವ ವೇಗದಲ್ಲಿ ಏನನ್ನಾದರೂ ಹೇಳುವಿರಿ. ಅಧ್ಯಯನದಲ್ಲಿ ನಿಮಗೆ ಹೆಚ್ಚು ಆಸಕ್ತಿ ಇರುವುದು. ಆರ್ಥಿಕ ಹಿನ್ನಡೆಯನ್ನು ನೀವು ಲೆಕ್ಕಿಸುವುದಿಲ್ಲ.

ಕನ್ಯಾ ರಾಶಿ: ವಿದ್ಯಾಭ್ಯಾಸದ ಹಿನ್ನಡೆಯ ಕಾರಣ ಎಲ್ಲರಿಂದ ಅವಮಾನವಾಗಬಹುದು. ಬೇರೆ ಬೇರೆ ರೀತಿಯಲ್ಲಿ ನಿಮ್ಮನ್ನು ಆಡಿಕೊಳ್ಳಬಹುದು. ನಿಮಗೆ ಪ್ರೋತ್ಸಾಹದ ಕೊರತೆ ಅಧಿಕವಾಗಿ ಕಾಣಿಸುವುದು. ಪ್ರೀತಿಯಲ್ಲಿ ನಿಮಗೆ ನೋವಾಗುವ ಸಾಧ್ಯತೆ ಇದೆ. ಏನೂ ಬೇಡ ಎನಿಸಬಹುದು. ಸಣ್ಣ ಸಣ್ಣ ವಿಚಾರಗಳೂ ದೊಡ್ಡದಾಗಿ ಕಾಣಿಸುವುದು. ಅಧಿಕಾರಿಗಳಿಂದ ನಿಮಗೆ ಮಾನಸಿಕ ಹಿಂಸೆ ಆಗಬಹುದು. ಎಷ್ಟೋ ವರ್ಷಗಳಿಂದ ಆಗದೇ ಇರುವ ಕೆಲಸವನ್ನು ಸಾಮಾಜಿಕ‌ ಕೆಲಸದಿಂದ‌‌ ಸಾಧಿಸುವಿರಿ. ನಕಾರಾತ್ಮಕ ಆಲೋಚನೆಗಳು ಬಾರದಂತೆ ನೋಡಿಕೊಳ್ಳಿ.‌ ಯೋಗ ಧ್ಯಾನದ ಬಗ್ಗೆ ಒಲವು ಹೆಚ್ಚಾಗುವುದು. ಮಕ್ಕಳ‌ ವಿವಾಹ ಚಿಂತೆಯನ್ನು ಬಿಡುವಿರಿ. ಯಾರ ಮಾತನ್ನೋ ಕೇಳಿ ಮಾಡುವ ಕೆಲಸಕ್ಕಿಂತ ನಿಮ್ಮ ಮನಸ್ಸಿಗೆ ಬಂದರೆ ಮಾತ್ರ ಮಾಡಿ.

ತುಲಾ ರಾಶಿ: ಆಸ್ತಿಯ ಮೇಲೆ ಸಾಲವನ್ನು ಪಡೆಯುವ ಸಂದರ್ಭವು ಬರಬಹುದು. ಅನಿವಾರ್ಯವಾದುದನ್ನು ಮಾತ್ರ ಸಾಲ ಮಾಡಿ. ಅತಿಯಾಗಿ ಬೇಡ. ಸಂಗಾತಿಯ ಮನೋಭಾವವು ಬದಲಾದಂತೆ ಅನ್ನಿಸುವುದು. ಚರ್ಮಕ್ಕೆ ಸಂಬಂಧಿಸಿದಂತೆ ಏನಾದರೂ ಆಗಬಹುದು. ಸಮಾಧಾನಚಿತ್ತದಿಂದ ನೀವು ಇಂದಿನ ಮಧುರ ಕ್ಷಣಗಳನ್ನು ಆನಂದಿಸುವಿರಿ. ಭೂಮಿಯ ವ್ಯವಹಾರದಿಂದ ಅಲ್ಪ ಹಣವು ನಷ್ಟವಾಗುವುದು. ಮನೆಯ ವಾತಾವರಣವು ನಿಮಗೆ ಹಿತವೆನಿಸಲಿದ್ದು ಮನೆಯಿಂದ ದೂರವಿರಲು ಕಷ್ಟವಾಗುವುದು. ಸ್ವಾಭಿಮಾನಕ್ಕೆ ಆಪ್ತರಿಂದ ತೊಂದರೆಯಾಗಬಹುದು. ಸಂಗಾತಿಯ ಮೌನವು ನಿಮಗೆ ಕಷ್ಟವಾಗಬಹುದು. ಅಧಿಕ ಪ್ರಯಾಣದಿಂದ ಆಯಾಸವಾಗಬಹುದು.

ವೃಶ್ಚಿಕ ರಾಶಿ: ಸಹೋದ್ಯೋಗಿಗಳ ಸಹಕಾರ ನಿಮಗೆ ಸಿಗದೇ ಹೋಗಬಹುದು. ಛಲದಿಂದ ಒಂಟಿಯಾಗಿ ನಿಮ್ಮ ಕಾರ್ಯವನ್ನು ಸಾಧಿಸುವಿರಿ. ಕೃಷಿಯಲ್ಲಿ ಕೆಲವು ತೊಂದರೆಯಾಗಬಹುದು. ಅದನ್ನು ಲೆಕ್ಕಿಸದೇ ನಿಮ್ಮ ಪೂರ್ಣ ಶ್ರಮವನ್ನು ಹಾಕುವಿರಿ. ಕಾರ್ಯಕ್ಕೆ ಎಲ್ಲರಿಂದ ಪ್ರಶಂಸೆ ಸಿಕ್ಕರೂ ನಿಮ್ಮ ಕೆಲಸವು ಸಮಾಧಾನ ಕೊಡದು. ಇಂದು ಬಂದ ಹಣವು ಸಾಲಕ್ಕೆ ಸರಿಯಾಗುವುದು. ಅವ್ಯವಹಾರವನ್ನು ಮಾಡಲು ಸಹೋದ್ಯೋಗಿಗಳು ಪ್ರೇರಿಸಬಹುದು. ಅಪ್ರಯೋಜಕ ಎಂದುಕೊಂಡ ವಿದ್ಯೆಯಿಂದ ಪ್ರಯೋಜನವಾಗುವುದು. ಮನೆಗೆ ಬೇಕಾದ ಬಂಧುಗಳು ಬಾರದೇ ಹೋಗಬಹುದು. ಸಜ್ಜನರನ್ನು ನೀವು ದೂರ ಮಾಡಿಕೊಳ್ಳುವಿರಿ. ಯಾರ ಮೇಲೂ ಪೂರ್ವಾಗ್ರಹ ಬೇಡ. ಸ್ವತಂತ್ರವಾಗಿ ಆಲೋಚಿಸಿ.

ಟನಲ್ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ: ತೇಜಸ್ವಿ ಸೂರ್ಯಗೆ ಸಿಎಂ ತಿರುಗೇಟು
ಟನಲ್ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ: ತೇಜಸ್ವಿ ಸೂರ್ಯಗೆ ಸಿಎಂ ತಿರುಗೇಟು
ಬಿ.ಸಿ. ಪಾಟೀಲ್ ಸಿನಿಮಾಗೆ ಸಮಸ್ಯೆ ಆದಾಗ ಸಹಾಯ ಮಾಡಿದ್ದ ಬಿ. ಸರೋಜಾದೇವಿ
ಬಿ.ಸಿ. ಪಾಟೀಲ್ ಸಿನಿಮಾಗೆ ಸಮಸ್ಯೆ ಆದಾಗ ಸಹಾಯ ಮಾಡಿದ್ದ ಬಿ. ಸರೋಜಾದೇವಿ
ಪ್ರತಿಭಟನೆಯ ಭಾಗವಾಗೇ ನಿತಿನ್ ಗಡ್ಕರಿಗೆ ಪತ್ರ ಬರೆದಿರೋದು: ಸಿದ್ದರಾಮಯ್ಯ
ಪ್ರತಿಭಟನೆಯ ಭಾಗವಾಗೇ ನಿತಿನ್ ಗಡ್ಕರಿಗೆ ಪತ್ರ ಬರೆದಿರೋದು: ಸಿದ್ದರಾಮಯ್ಯ
ಕರ್ನಾಟಕದಲ್ಲಿ 3 ಲಕ್ಷ ಕೋಟಿ ರೂ. ವೆಚ್ಚದ ಕಾಮಗಾರಿ ಜಾರಿಯಲ್ಲಿವೆ: ಸಚಿವ
ಕರ್ನಾಟಕದಲ್ಲಿ 3 ಲಕ್ಷ ಕೋಟಿ ರೂ. ವೆಚ್ಚದ ಕಾಮಗಾರಿ ಜಾರಿಯಲ್ಲಿವೆ: ಸಚಿವ
ಕೀಟನಾಶಕ‌ ಮಿಶ್ರಿತ ನೀರು ಕುಡಿದು 12 ಮಂದಿ ಮಕ್ಕಳು ಅಸ್ವಸ್ಥ
ಕೀಟನಾಶಕ‌ ಮಿಶ್ರಿತ ನೀರು ಕುಡಿದು 12 ಮಂದಿ ಮಕ್ಕಳು ಅಸ್ವಸ್ಥ
ಬಿ. ಸರೋಜಾದೇವಿ ಬರೆದಿದ್ದ ವಿಲ್​ಗೆ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಸಹಿ
ಬಿ. ಸರೋಜಾದೇವಿ ಬರೆದಿದ್ದ ವಿಲ್​ಗೆ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಸಹಿ
ವಿಷಸರ್ಪಗಳು ಏನೂ ಮಾಡೋದಿಲ್ಲ, ತಮ್ಮ ಪಾಡಿಗೆ ತಾವು ಸರಿದಾಡುತ್ತವೆ: ನೈನಾ
ವಿಷಸರ್ಪಗಳು ಏನೂ ಮಾಡೋದಿಲ್ಲ, ತಮ್ಮ ಪಾಡಿಗೆ ತಾವು ಸರಿದಾಡುತ್ತವೆ: ನೈನಾ
ನನ್ನ ಮದುವೆಯಾದಾಗ ನೀನೂ ಗೌಡ್ತಿಯಾದೆ ಅಂತ ಛೇಡಿಸುತ್ತಿದ್ದರು: ಮಾಲಾಶ್ರೀ
ನನ್ನ ಮದುವೆಯಾದಾಗ ನೀನೂ ಗೌಡ್ತಿಯಾದೆ ಅಂತ ಛೇಡಿಸುತ್ತಿದ್ದರು: ಮಾಲಾಶ್ರೀ
ರಾಜಕಾರಣಿಯಾಗಿರದಿದ್ದರೆ ಪರಮೇಶ್ವರ್ ಹೋಟೆಲ್ ಉದ್ಯಮಿಯಾಗುತ್ತಿದ್ದರೇ?
ರಾಜಕಾರಣಿಯಾಗಿರದಿದ್ದರೆ ಪರಮೇಶ್ವರ್ ಹೋಟೆಲ್ ಉದ್ಯಮಿಯಾಗುತ್ತಿದ್ದರೇ?
ಗೇಟ್​ ಹತ್ತಿ ಹಾರಿ ಜಮ್ಮು ಕಾಶ್ಮೀರದ ಸಿಎಂ ಒಮರ್ ಹೋಗಿದ್ದೆಲ್ಲಿಗೆ?
ಗೇಟ್​ ಹತ್ತಿ ಹಾರಿ ಜಮ್ಮು ಕಾಶ್ಮೀರದ ಸಿಎಂ ಒಮರ್ ಹೋಗಿದ್ದೆಲ್ಲಿಗೆ?