AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope: ಹಿತಶತ್ರುಗಳು ಏನಾದರೂ ಕಿರಿಕಿರಿ ಮಾಡುವರು, ಹಣಕಾಸಿನ ವಿಚಾರದಲ್ಲಿ ಗೊಂದಲ

ನೀವು ಧನು, ಮಕರ, ಕುಂಭ, ಮೀನ ರಾಶಿಯವರಾಗಿದ್ದು, ಬೆಳಗ್ಗೆ ಎದ್ದು ಕೂಡಲೇ ನಿಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವ ಅಭ್ಯಾಸ ಇದೆಯೇ? ಹಾಗಿದ್ದರೆ ಇಂದಿನ (2023 ಅಕ್ಟೋಬರ್ 26) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿ ತಿಳಿದುಕೊಳ್ಳಿ.

Horoscope: ಹಿತಶತ್ರುಗಳು ಏನಾದರೂ ಕಿರಿಕಿರಿ ಮಾಡುವರು, ಹಣಕಾಸಿನ ವಿಚಾರದಲ್ಲಿ ಗೊಂದಲ
ಪ್ರಾತಿನಿಧಿಕ ಚಿತ್ರ
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on: Oct 26, 2023 | 12:20 AM

Share

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಅಕ್ಟೋಬರ್ 26ಗುರುವಾರ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ತುಲಾ ಮಾಸ, ಮಹಾನಕ್ಷತ್ರ: ಚಿತ್ರಾ, ಮಾಸ: ಆಶ್ವಯುಜ, ಪಕ್ಷ: ಶುಕ್ಲ, ವಾರ: ಗುರು, ತಿಥಿ: ತ್ರಯೋದಶೀ, ನಿತ್ಯನಕ್ಷತ್ರ: ಪೂರ್ವಾಭಾದ್ರ, ಯೋಗ: ಧ್ರುವ / ವ್ಯಾಘಾತ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 27 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 05 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 01:44 ರಿಂದ 03:11 ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 06:27 ರಿಂದ 07:54 ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 09:22 ರಿಂದ 10:49ರ ವರೆಗೆ.

ಧನು ರಾಶಿ: ಸಹೋದರನ‌ ಮನವೊಲಿಸಲು ನಿಮಗೆ ಕಷ್ಟವಾದೀತು. ಹಠದ ಸ್ವಭಾವದವರ ಜೊತೆ ಅತಿಯಾದ ಮಾತು ಬೇಡ. ಮಾನಸಿಕ ಕಿರಿಕಿರಿಯಿಂದ ಕುಳಿತಲ್ಲಿ ಕುಳಿತುಕೊಳ್ಳುವುದು ಕಷ್ಟವಾದೀತು. ಯಾರ ಮೇಲೂ ಸಿಟ್ಟಿನಿಂದ ಮಾತನಾಡುವುದು ಬೇಡ. ತಂದೆಯ ಅಸಮಾಧಾನವನ್ನು ಕುಳಿತು ಬಗೆಹರಿಸಿ. ಯಾರದೋ ಕೋಪವನ್ನು ಮತ್ಯಾರದೋ ಮೇಲೆ ತೋರಿಸಬೇಕಾಗುವುದು. ಗೆಲುವಿಗೆ ಬಹಳ ಪ್ರಯತ್ನಪಟ್ಟು ಯಶಸ್ವಿಯಾಗುವಿರಿ. ವ್ಯಕ್ತಿತ್ವವನ್ನು ಗಮನಿಸಿಕೊಂಡು ಯಾರ ಬಳಿಯಾದರೂ ಮಾತನಾಡಿ. ನಿಮ್ಮ ಸ್ಥಾನದ ಬಗ್ಗೆ ಭಯ ಉಂಟಾಗಬಹುದು. ಪವಿತ್ರಕ್ಷೇತ್ರಗಳಿಗೆ ತೆರಳುವ ಅವಕಾಶ ಸಿಗಬಹುದು. ಬಿಟ್ಟುಕೊಳ್ಳುವುದು ಬೇಡ. ಶುಭ ಅವಸರದಲ್ಲಿ ಸದುಪಯೋಗ ಮಾಡಿಕೊಳ್ಳಿ. ಹೆಚ್ವಿನ ಸಮಯವನ್ನು ಧಾರ್ಮಿಕ ಆಚರಣೆಗೆ ಮೀಸಲಿಡುವಿರಿ.

ಮಕರ ರಾಶಿ: ಇಂದು ಕಾರ್ಯದ ಸ್ಥಳದಲ್ಲಿ ನಿಮ್ಮ ಹಿತಶತ್ರುಗಳು ಏನಾದರೂ ಕಿರಿಕಿರಿ ಮಾಡಿ ನಿಮ್ಮ ಕೆಲಸವು ಪೂರ್ಣವಾಗದಂತೆ ನೋಡಿಕೊಳ್ಳುವರು. ಲೆಕ್ಕಾಚಾರವನ್ನು ಸರಿಯಾಗಿ ಇಟ್ಟುಕೊಳ್ಳದೇ ಎಲ್ಲರಿಗೂ ಗೊಂದಲವನ್ನು ಉಂಟುಮಾಡುವಿರಿ. ಬಹಳ ಹುಡುಕಿದರೂ ನಿಮಗೆ ಬೇಕಾದ ಉದ್ಯೋಗವು ಸಿಗದೇ ಜೀವನವು ನಿರುತ್ಸಾಹದಂತೆ ಆಗುವುದು. ಸಾಮಾಜಿಕ ಕಾರ್ಯಗಳತ್ತ ಒಲವು ಮೂಡಬಹುದು. ಯಾವುದಕ್ಕೂ ಆರೋಗ್ಯವನ್ನು ಸುಧಾರಿಸಿಕೊಂಡು ಮುನ್ನಡೆಯುವುದು ಉತ್ತಮ.‌ ಗೊತ್ತಿರುವ ಕೆಲಸವನ್ನಷ್ಟೇ ಮಾಡಿ. ಮಕ್ಕಳ ಭವಿಷ್ಯಕ್ಕೆ ನೀವು ಸ್ವಲ್ಪ ಹಣವನ್ನು ಇಡುವ ಅವಕಾಶ ಸಿಗಲಿದೆ. ನಿಮ್ಮ ಓಡಾಟಕ್ಕೆ ಸ್ವಂತ ವಾಹನವು ಬೇಕು ಎನಿಸಬಹುದು. ದಾಂಪತ್ಯದಲ್ಲಿ ಮೌನವೇ ಸಂಭಾಷಣೆ ಆಗಬಹುದು.

ಕುಂಭ ರಾಶಿ: ಹಿರಿಯರಿಗೆ ಕೊಡಬೇಕಾದ ಗೌರವವನ್ನು ಕೊಡಿ. ಮಕ್ಕಳ ಕಾರಣದಿಂದ ನೀವು ವಿದೇಶ ಪ್ರಯಾಣ ಮಾಡಬೇಕಾಗಬಹುದು. ಸಂಗಾತಿಯು ನಿಮ್ಮ ನಡವಳಿಕೆಯ ಬಗ್ಗೆ ಏನಾದರೂ ಹೇಳಬಹುದು. ಕೇಳಿ ಸುಮ್ಮನಾಗಿ. ಉತ್ತರದಿಂದ ಮತ್ತೇನಾದರೂ ಆದೀತು. ಸುಲಭವಾಗಿ ಸಿಗುವ ಸಂಪತ್ತಿಗೆ ಆಸೆಪಡುವುದು ಬೇಡ. ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ತೋರುವಿರಿ. ನಿಮ್ಮ ಅಪರೂಪದ ವ್ಯಕ್ತಿಗಳು ಆಕಸ್ಮಾತ್ತಾಗಿ ಭೇಟಿಯಾಗುವರು. ನಿಮಗೆ ಕೊಟ್ಟ ಕಾರ್ಯವನ್ನು ಮರೆತು ಅನ್ಯರ ಕಾರ್ಯದಲ್ಲಿ ಮಗ್ನರಾಗುವಿರಿ. ಹಣವನ್ನೂ ಕೊಟ್ಟು ವಸ್ತುವನ್ನೂ ಕಳೆದುಕೊಳ್ಳಬೇಕಾಗಬಹುದು ಎಚ್ಚರ. ಕಛೇರಿಗೆ ವಿರಾಮವಿದ್ದರೂ ಅದರ ಕಾರ್ಯವನ್ನೇ ನೀವು ಮಾಡಬೇಕಾಗುವುದು.

ಮೀನ ರಾಶಿ: ಸಣ್ಣ ವ್ಯಾಪಾರದವರು ಅಧಿಕ ಲಾಭವನ್ನು ನಿರೀಕ್ಷಿಸಬಹುದು. ವಿವಾಹದ ವಾತಾವರಣವು ಮನೆಯಲ್ಲಿ ಇದ್ದು, ನೀವೂ ನೆಮ್ಮದಿಯಿಂದ ಓಡಾಡುವಿರಿ. ಚಲಿಸುವ ವಾಹನದಿಂದ ಬೀಳುವ ಸಾಧ್ಯತೆ ಇದೆ. ಮನಸ್ಸನ್ನು ಪ್ರಶಾಂತವಾಗಿ ಇಟ್ಟುಕೊಳ್ಳಲು ನಿಮಗೆ ಆಗದು. ಒಂದಿಲ್ಲೊಂದು ಆಲೋಚನೆಗಳು ಬರುತ್ತಲೇ ಇರುತ್ತವೆ. ನಿಮ್ಮ ವಸ್ತುವು ಕಳ್ಳತನವಾಗಬಹುದು ಎಂಬ ಭೀತಿಯು ಉಂಟಾಗಬಹುದು. ಇಂದು ನೀವು ನೆಮ್ಮದಿಯಿಂದ ಇರಲು ಹಿತಶತ್ರುಗಳು ಬಿಡರು. ಸ್ವಂತ ಉದ್ಯೋಗದ ಮೇಲೆ ಕಾಳಜಿಯು ಅನ್ಯ ಕಾರ್ಯದ ನಿಮಿತ್ತ ಕಡಿಮೆಯಾಗುವುದು. ಇದರಿಂದ ನಿಮ್ಮ ಆದಾಯಕ್ಕೆ ಹೊಡೆತ ಬೀಳಬಹುದು. ವೃತ್ತಿಪರರಾದ ನಿಮಗೆ ಕಛೇರಿಯಿಂದ ಶುಭ ಸುದ್ದಿಯನ್ನು ನಿರೀಕ್ಷಿಸುವುದು ಬೇಡ. ಹಳೆಯ ಸಂಗಾತಿಯ ನೆನಪು ಮತ್ತೆ ನೆನಪಾಗಬಹುದು.‌ ಮನೆಯಲ್ಲಿ ಧಾರ್ಮಿಕ ಕಾರ್ಯವನ್ನು ಮಾಡಲು ಯೋಚಿಸುವಿರಿ.