Horoscope: ದಿನಭವಿಷ್ಯ, ಊಹಿಸದೇ ಇರುವ ಕಡೆಯಿಂದ ಈ ರಾಶಿಯವರು ಬೇಕು ಎನಿಸಿದ ಸಂಪತ್ತು ದೊರೆಯುವುದು
ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದು, ಬೆಳಗ್ಗೆ ಎದ್ದು ಕೂಡಲೇ ನಿಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವ ಅಭ್ಯಾಸ ಇದೆಯೇ? ಹಾಗಿದ್ದರೆ ಇಂದಿನ (2023 ಸೆಪ್ಟೆಂಬರ್ 26) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿ ತಿಳಿದುಕೊಳ್ಳಿ.
ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಸೆಪ್ಟೆಂಬರ್ 26 ಮಂಗಳವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಉತ್ತರಾಫಲ್ಗುಣೀ, ಮಾಸ: ಭಾದ್ರಪದ, ಪಕ್ಷ: ಶುಕ್ಲ, ವಾರ: ಮಂಗಳ, ತಿಥಿ: ಏಕಾದಶೀ, ನಿತ್ಯನಕ್ಷತ್ರ: ಶ್ರವಣಾ, ಯೋಗ: ಸುಕರ್ಮ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 22 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 25 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 07:53 ರಿಂದ 09:24ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 10:54 ರಿಂದ ಮಧ್ಯಾಹ್ನ 12:24ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 01:55 ರಿಂದ 03:25ರ ವರೆಗೆ.
ಸಿಂಹ ರಾಶಿ: ಊಹಿಸದೇ ಇರುವ ಕಡೆಯಿಂದ ನಿಮಗೆ ಬೇಕು ಎನಿಸಿದ ಸಂಪತ್ತು ದೊರೆಯುವುದು. ಇದು ನಿಮಗೆ ಇಂದಿನ ಅಚ್ಚರಿಯ ವಿಚಾರವೇ ಆಗಲಿದೆ. ಉದ್ಯೋಗದಲ್ಲಿ ಹೆಚ್ಚುಗಾರಿಕೆ ಇರುವುದು. ತಾಳ್ಮೆಯಿಂದ ಕಾರ್ಯವನ್ನು ಮಾಡಿ. ಒತ್ತಡಕ್ಕೆ ಮಣಿದು ನಿಮ್ಮ ಕೆಲಸ ಹಾಗೂ ನಿರ್ಧಾರವನ್ನು ಬದಲಿಸುವಿರಿ. ವಿದೇಶದ ಪ್ರಯಾಣಕ್ಕೆ ಆಯಾಸವು ಆಯಾಸವು ಅಡ್ಡಿಬರಬಹುದು. ದೇಹವನ್ನು ದಂಡಿಸುವ ಅನಿವಾರ್ಯತೆ ಇರಲಿದೆ. ಆಕರ್ಷಕ ಮಾತಿಗೆ ಮನಸೋತು ಪ್ರೀತಿಯಲ್ಲಿ ಬೀಳುವಿರಿ. ಕಷ್ಟವೆಂದು ಸಿಕ್ಕ ಕೆಲಸವನ್ನು ಬಿಡುವಿರಿ. ಏನಾದರೂ ಹೇಳಬೇಕೆಂದು ಇದ್ದರೆ ನೇರವಾಗಿ ಹೇಳಿ.
ಕನ್ಯಾ ರಾಶಿ: ಮುಖವನ್ನು ಗಂಟು ಹಾಕಿಕೊಂಡು ಇರುವುದು ನಿಮ್ಮಿಂದ ಜನರನ್ನು ದೂರವಿರಿಸುತ್ತದೆ. ನಿಮ್ಮಲ್ಲಿರುವ ಅಲ್ಪ ಸ್ವಲ್ಪ ಹಣವನ್ನು ಸೇರಿಸಿ ಕೊಡಬೇಕಾದವರಿಗೆ ಹಣವನ್ನು ಕೊಡುವಿರಿ. ಇಂದಿನ ನಿಮ್ಮ ಮಾರಾಟದಿಂದ ಬೆಲೆಯು ಸಿಗದು. ನಿಮ್ಮ ವ್ಯಕ್ತಿತ್ವಕ್ಕೆ ಕಳಂಕವನ್ನು ಬಳಿಯಬಹುದು. ಬೆನ್ನಿನ ವಿಪರೀತ ನೋವು ನಿಮ್ಮ ಯಾವ ಕೆಲಸಕ್ಕೂ ಅನುಕೂಲ ಮಾಡಿ ಕೊಡದು. ಉದ್ಯೋಗಕ್ಕೆ ವಿರಾಮ ಹೇಳಿ ಹೊರಗೆ ಸುತ್ತಾಟವನ್ನು ಮಾಡುವಿರಿ. ಎಲ್ಲ ಕಾರ್ಯವನ್ನೂ ನೀವೇ ಮಾಡಬೇಕು ಎಂಬ ಹೆಬ್ಬಯಕೆ ಬೇಡ. ಮೋಜಿಗಾಗಿ ಹಣವನ್ನು ಖರ್ಚು ಮಾಡಬೇಕಾದೀತು. ಕೂಡಿಟ್ಟ ಹಣವನ್ನು ನೀವು ಬಿಡಿಸಿಕೊಳ್ಳುವ ಅನಿವಾರ್ಯತೆ ಎದುರಾಗಬಹುದು. ಸಂಗಾತಿಯ ಜೊತೆ ಹಳೆಯ ವಿಚಾರಗಳನ್ನು ತೆಗೆಯುವುದು ಬೇಡ.
ತುಲಾ ರಾಶಿ: ಇಂದು ನೀವು ಮೇಲ್ನೋಟಕ್ಕೆ ಬಹಳ ಶಾಂತ ಸರೋವರದಂತೆ ಕಂಡರೂ ಒಳಗೇ ಜ್ವಾಲಗ್ನಿಯಂತೆ ಉರಿಯುವಿರಿ. ಎಲ್ಲ ವಿಚಾರದಲ್ಲಿಯೂ ಅಸಮಾಧನವು ಇರಲಿದೆ. ಅತಿಯಾದ ಒತ್ತಡವು ನಿಮ್ಮ ದಕ್ಷತೆಯನ್ನು ಕಡಿಮೆ ಮಾಡುವುದು. ಒಂದೇ ಕೆಲಸದಲ್ಲಿ ಮಗ್ನರಾಗಿ ಮಾಡಬೇಕಾದ ಕೆಲವು ಕೆಲಸವನ್ನು ಮರೆಯುವಿರಿ. ಸ್ನೇಹಿತರ ಜೊತೆ ಪ್ರವಾಸಕ್ಕೆ ಹೋಗಬೇಕು ಎಂದು ಅನ್ನಿಸುವುದು. ಇಂದು ಖರೀದಿಸಿದ ಹೊಸ ವಸ್ತುಗಳು ನಿಮಗೆ ಬಹಳ ಖುಷಿಯನ್ನು ಕೊಡುವುದು. ವೃತ್ತಿಯಲ್ಲಿ ನಿಮ್ಮನ್ನು ಗುರುತಿಸಿರುವುದು ಮನಸ್ಸನ್ನು ಹಿಗ್ಗಿಸಿರುವುದು. ದಾಂಪತ್ಯದಲ್ಲಿ ಅಸಹಜ ಮಾತುಕತೆಗಳು ಕಿರಿಕಿರಿಯನ್ನು ಉಂಟುಮಾಡೀತು. ಶುಭ ಸುದ್ದಿಯ ನಿರೀಕ್ಷೆಯಲ್ಲಿ ನೀವು ಇರುವಿರಿ. ಇಂದಿನ ಕರ್ತವ್ಯದಲ್ಲಿ ನೀವು ನಿರತರು.
ವೃಶ್ಚಿಕ ರಾಶಿ: ಮೇಲಿಂದ ಮೇಲೆ ಬೀಳವ ಘಾತದಿಂದ ಬಲವಾದ ಘಾಸಿಯಾಗಲಿದೆ. ಯಾವ ಹೊಸತನ್ನೂ ಸ್ವೀಕರಿಸುವ ಮಾನಸಿಕತೆ ಇಂದು ಇರದು. ಎಲ್ಲ ವಿಚಾರಕ್ಕೂ ನಿಮ್ಮ ಮೌನಮುದ್ರೆಯು ಒತ್ತಿರುವುದು. ಹೂಡಿಕೆಯನ್ನು ಹಿಂಪಡೆಯುವ ಸಾಧಿಸುವಿರಿ ಇದೆ. ವೈಯಕ್ತಿಕ ವಿಚಾರಕ್ಕೆ ಯಾರನ್ನೂ ಸೇರಿಸಿಕೊಳ್ಳಲು ಬಯಸುವುದಿಲ್ಲ. ವಿವಾಹಕ್ಕೆ ಸಂಬಂಧಿಸಿದಂತೆ ಮಾತುಕತೆ ಸ್ಪಂದನ ಇರದು. ಅಶುಭವಾದ ಕೆಲಸಕ್ಕೆ ಗೊತ್ತಿಲ್ಲದೇ ನೀವು ಹಣವನ್ನು ನೀಡುವಿರಿ. ಬಂಧುಗಳ ಮಾತಿಂದ ಸಿಟ್ಟಾಗುವಿರಿ. ಆದರೆ ತೋರಿಸಲು ಹೋಗುವುದಿಲ್ಲ. ಕೃಷಿ ಚಟುವಟಿಕೆಯಲ್ಲಿ ಉತ್ಸಾಹವು ಸ್ವಲ್ಪ ಇರುವುದು. ಸಂತಾನಕ್ಕೆ ಸಂಬಂಧಿಸಿದಂತೆ ವೈದ್ಯರನ್ನು ಭೇಟಿ ಮಾಡಿ. ನಿಮ್ಮ ಸ್ಥಾನವನ್ನು ನೀವು ಬಿಟ್ಟಕೊಡುವಿರಿ.
ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ